ಇಂದು ಆಂಗ್ಲರ ‘ಕ್ರಿಕೆಟ್’ ಆಟವು ಸಂಪೂರ್ಣ ದೇಶವನ್ನು ಹುಚ್ಚರನ್ನಾಗಿಸಿದೆ. ಚಾಪೆಕರ ಬಂಧುಗಳಿಗೆ ಈ ಪರಕೀಯ ಆಟದ ಬಗ್ಗೆ ಭಯಂಕರ ತಿರಸ್ಕಾರವಿತ್ತು. ತರುಣ ಮಕ್ಕಳು ಈ ಆಂಗ್ಲ ಕ್ರಿಕೆಟ್ ಆಟದ ಕಡೆಗೆ ಹೊರಳಬಾರದೆಂದು ಅವರು ಪ್ರಯತ್ನ ಮಾಡಿದರು. ಎಲ್ಲಿ ಕ್ರಿಕೆಟಿನ ಆಟವು ನಡೆಯುತ್ತಿತ್ತೋ, ಅಲ್ಲಿಗೆ ಹೋಗಿ ಆಟವನ್ನು ನಿಲ್ಲಿಸುತ್ತಿದ್ದರು ಕೆಲವೊಮ್ಮೆ ಕೈಕೈ ಮಿಲಾಯಿಸುತ್ತಿದ್ದರು. ಅದರಿಂದ ಅನೇಕ ಸ್ಥಳಗಳಲ್ಲಿ ಕ್ರಿಕೆಟ್ ಆಟವು ನಿಂತಿತು.
ಗುಲಾಮಗಿರಿ ಇದು ಆಟದಲ್ಲಿಯಾದರೂ ಇರಲಿ ಅದಕ್ಕೆ ಅವರ ವಿರೋಧವು ಇರುತ್ತಿತ್ತು. ಆಟದಲ್ಲಿ ರಾಜಕಾರಣ ಏಕೆ ? ಎಂಬ ಸಣ್ಣ ವಿಚಾರವು ಯಾರ ಮನಸ್ಸಿನಲ್ಲಿಯೂ ಬರುತ್ತಿರಲಿಲ್ಲ. ಏಕೆಂದರೆ ರಾಷ್ಟ್ರನಿಷ್ಠೆ, ಸ್ವದೇಶಪ್ರೇಮ ಹಾಗೂ ಸ್ವಧರ್ಮಾಭಿಮಾನ ಇದು ೧೦೦ ಅಂಕಿ ಬಂಗಾರದಂತೆ ಶುದ್ಧವಾಗಿತ್ತು. – ಶ್ರೀ. ದುರ್ಗೇಶ ಜಯಂತ ಪರುಳೆಕರ, ಡೊಂಬಿವಲೀ ಠಾಣೆ (ಆಧಾರ : ಮಾಸಿಕ ‘ಧರ್ಮಾಭಾಸ್ಕರ’, ಆಗಸ್ಟ್ ೨೦೦೭)