ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಆಠವಲೆ

ರಾಜಕಾರಣಿ ಹಾಗೂ ಸಂಪ್ರದಾಯದಲ್ಲಿರುವವರ ಭೇದ

ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನು ಬದಲಿಸುವವರು ಸಾವಿರಾರು ಜನರಿದ್ದಾರೆ ಆದರೆ ಸ್ವಾರ್ಥ ತ್ಯಾಗಿ ಸಾಂಪ್ರದಾಯಿಕರ ಮನಸ್ಸಿನಲ್ಲಿ ಒಮ್ಮೆಯೂ ಸಂಪ್ರದಾಯ ಬದಲಿಸುವ ವಿಚಾರವು ಬರುವುದಿಲ್ಲ.

ಧರ್ಮದ ಮಹತ್ವ

ಧರ್ಮವು ಪಾಪ-ಪುಣ್ಯ, ಧರ್ಮಾಚರಣೆ ಮುಂತಾದವುಗಳನ್ನು ಕಲಿಸುತ್ತದೆ. ಅದುದರಿಂದ ಮೂಲದಿಂದಲೇ ವ್ಯಕ್ತಿಯು ಸಾತ್ತ್ವಿಕ ನಾಗುತ್ತಾನೆ. ಅವನ ಮನಸ್ಸಿನಲ್ಲಿ ತಪ್ಪಿನ ವಿಚಾರವು ಬರುವುದಿಲ್ಲ ಅವನು ಪಾಪಭೀರು ಆಗುತ್ತಾನೆ ಅಂದರೆ ಪಾಪ ಮಾಡುವ, ತಪ್ಪಿನ ವಿಷಯಗಳು ಆಗದಂತೆ ನೋಡಿಕೊಳ್ಳುತ್ತಾನೆ. ಅದುದರಿಂದ ಕಾನೂನಿನ ಆವಶ್ಯಕತೆಯು ಇರುವುದಿಲ್ಲ. ಸತ್ಯಯುಗದಲ್ಲಿ ರಾಜನು ಇರಲಿಲ್ಲ ಹಾಗೂ ಕಾನೂನು ಸಹ ಇರಲಿಲ್ಲ. ಏಕೆಂದರೆ  ಎಲ್ಲರೂ ಸಾತ್ತ್ವಿಕರಾಗಿದ್ದರಿಂದ ರಾಜನ ಹಾಗೂ ಕಾನೂನಿನ ಆವಶ್ಯಕತೆ ಇರಲಿಲ್ಲ. ನಾವು ಎಲ್ಲರಿಗೂ ಧರ್ಮವನ್ನು ಕಲಿಸುವುದರಿಂದ ಕಾನೂನಿನ ಆವಶ್ಯಕತೆಯು ಇರಲಿಕ್ಕಿಲ್ಲ.

ಹಿಂದೂ ರಾಷ್ಟ್ರದ ಸ್ಥಾಪನೆಯು ಈಶ್ವರನಿಯೋಜಿತ ಪ್ರಕ್ರಿಯೆಯಾಗಿದೆ

ಹಿಂದುತ್ವನಿಷ್ಠ ಸಂಘಟನೆಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶಾರೀರಿಕ ಹಾಗೂ ಮಾನಸಿಕ ಸ್ತರದಲ್ಲಿ ಕ್ಷಾತ್ರತೇಜ ಸಂವರ್ಧನೆಯ ಕಾರ್ಯವನ್ನು ಮಾಡುತ್ತಿದ್ದರೆ. ಸಂತರು ಹಾಗೂ ಸನಾತನ ಸಂಸ್ಥೆಯಂತಹ ಇತರ ಸಂಘಟನೆಗಳು ಬ್ರಾಹ್ಮತೇಜದ ಸಂವರ್ಧನೆಯ ಕಾರ್ಯವನ್ನು ಮಾಡುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯು ಈಶ್ವರ ನಿಯೋಜಿತ ಪ್ರಕ್ರಿಯೆಯಾಗಿದೆ. ಅದು ಕಾಲಾನುಸಾರ ಪೂರ್ಣವಾಗುವುದು. ನಾವು ನಮ್ಮ ಸಾಧನೆ ಹಾಗೂ ಹಿಂದೂ  ಧರ್ಮ ವಿಷಯದಲ್ಲಿ ಕರ್ತವ್ಯವೆಂದು ಈ ಪ್ರಕ್ರಿಯೆಯಲ್ಲಿ ಸಹಭಾಗಿಯಾಗಬೇಕು. ಹಾಗೆ ಮಾಡಿದರೆ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುವುದು, ಎಂಬುದು ಖಚಿತ.

– (ಪರಾತ್ಪರ ಗುರು) ಡಾ. ಆಠವಲೆ