ವೇದನೆಯ ಲಾಭ !

ಪರಾತ್ಪರ ಗುರು ಡಾ. ಆಠವಲೆ

‘ವೇದನೆಯಾದರೆ, ಪ್ರತಿಯೊಬ್ಬರಿಗೆ ತೊಂದರೆಯಾಗುತ್ತದೆ ಮತ್ತು ‘ಅದು ಯಾವಾಗ ಕಡಿಮೆಯಾಗುವುದು, ಎಂದೆನಿಸುತ್ತದೆ. ವಾಸ್ತವದಲ್ಲಿ ವೇದನೆಯಿಂದ ತುಂಬಾ ಲಾಭವೂ ಆಗುತ್ತದೆ. ಇದರ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ.

೧. ಯಾರಿಗಾದರೂ ಕಾಲಿನ ಮೂಳೆ ಮುರಿತವಾಗಿದ್ದರೆ ಮತ್ತು ಅದನ್ನು ಮರೆತು ಅವನು ನಡೆಯತೊಡಗಿದರೆ ಅವನಿಗೆ ಬಹಳ ವೇದನೆಯಾಗುತ್ತದೆ. ವಾಸ್ತವದಲ್ಲಿ ವೇದನೆಯು ಅವನಿಗೆ ಮೂಳೆ ಮುರಿತದ ಅರಿವು ಮಾಡಿಕೊಡುತ್ತದೆ. ಇದರಿಂದ ಅವನು ನಡೆಯುವುದನ್ನು ನಿಲ್ಲಿಸುತ್ತಾನೆ.

. ಯಾರಿಗಾದರೂ ‘ಅಲ್ಸರ್ ಆಗಿದ್ದರೆ ಮತ್ತು ‘ಅವನು ತಿನ್ನಬಾರದು, ಎಂಬಂತಹ ಹುಳಿ ಪದಾರ್ಥವನ್ನು ಅವನು ತಿನ್ನತೊಡಗಿದರೆ, ಅವನ ಹೊಟ್ಟೆಯಲ್ಲಿ ತುಂಬಾ ನೋವಾಗುತ್ತದೆ. ಆಗಲೂ ವೇದನೆ ಅವನಿಗೆ ‘ಅಲ್ಸರ್ ಆಗಿರುವ ಬಗ್ಗೆ ಅರಿವು ಮಾಡಿಕೊಡುತ್ತದೆ. ಇದರಿಂದ ಅವನು ಹುಳಿ ಪದಾರ್ಥ ತಿನ್ನುವುದನ್ನು ನಿಲ್ಲಿಸುತ್ತಾನೆ.

ಇಂತಹ ಉದಾಹರಣೆಗಳಿಂದ, ವೇದನೆಯಿಂದ ತೊಂದರೆಯಾಗುವಂತೆ ವೇದನೆಯಾಗಬಾರದೆಂದು ಮಾಡಬೇಕಾದ ಕೃತಿ, ತೆಗೆದುಕೊಳ್ಳಬೇಕಾದ ಔಷಧಿಗಳು ಇತ್ಯಾದಿಗಳ ನೆನಪಾಗುತ್ತದೆ, ಅಂದರೆ ನಮಗೆ ಒಂದು ರೀತಿಯಲ್ಲಿ ಲಾಭವೇ ಆಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ‘ದೇವರು ಘಟಿಸಿದ ಪ್ರತಿಯೊಂದು ವಿಷಯವು ಎಷ್ಟು ಲಾಭದಾಯಕವಾಗಿದೆ, ಎಂದು ಗಮನಕ್ಕೆ ಬರುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ

ವೇದನೆ, ಅನಾರೋಗ್ಯ ಮತ್ತು ವ್ಯಾವಹಾರಿಕ ಅಡಚಣೆಗಳಿಂದಾಗುವ ಲಾಭ

ಸಾಮಾನ್ಯವಾಗಿ ಎಂದಿಗೂ ದೇವರ ನೆನಪಾಗದವರಿಗೆ ಇಂತಹ ಸಮಯದಲ್ಲಿ ದೇವರ ನೆನಪಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ