ತಾಲಿಬಾನ್ ಎದುರು ಅಫ್ಘಾನಿಸ್ತಾನ ಸರಕಾರದ ಶರಣಾಗತಿ !

ಅಧಿಕಾರ ಹಸ್ತಾಂತರವಾಗಲಿದೆ

(ಎಡದಿಂದ ) ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ್ ಗನಿ ಮತ್ತು ತಾಲಿಬಾನ್ ಭಯೋದ್ಪಾದಕರು

ಕಾಬುಲ್ (ಅಫ್ಘಾನಿಸ್ತಾನ) – ತಾಲಿಬಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ನುಸುಳಲು ಆರಂಭಿಸಿದ ನಂತರ ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ್ ಗನಿ ಇವರು ರಾಜೀನಾಮೆಯನ್ನು (ತ್ಯಾಗಪತ್ರವನ್ನು) ಕೊಟ್ಟಿರುವ ವಾರ್ತೆಯನ್ನು ಕೆಲವು ವಾರ್ತಾ ಸಂಸ್ಥೆಗಳು ನೀಡಿವೆ. ತಾಲಿಬಾನದ ಒಂದು ಶಿಷ್ಟ ಮಂಡಳಿಯು ರಾಷ್ಟ್ರಪತಿ ಭವನದ ಕಡೆ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ಪೂರ್ಣ ಮಾಡಲು ಹೋಗುತ್ತಿರುವುದಾಗಿ ವಾರ್ತೆ ಇದೆ. ತಾಲಿಬಾನನ ಎರಡನೆಯ ಸ್ಥಾನದ ನಾಯಕ ಮುಲ್ಲಾ ಬರಾದರ ಇವರು ರಾಷ್ಟ್ರಪತಿ ಅಶ್ರಫ ಗನಿ ಇವರ ಜೊತೆ ಚರ್ಚಿಸುತ್ತಿದ್ದಾರೆ, ಈ ಚರ್ಚೆಯ ನಂತರ ಅಲಿ ಅಹಮದ್ ಜಲಾಲಿ ಇವರಿಗೆ ರಾಷ್ಟ್ರಪತಿ ಗನಿ ಅಧಿಕಾರವನ್ನು ಒಪ್ಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.