AP Govt Abolishes State WaqfBoard : ಆಂಧ್ರಪ್ರದೇಶ ಸರಕಾರದಿಂದ ರಾಜ್ಯ ವಕ್ಫ ಬೋರ್ಡ್ ರದ್ದು !

ಅಮರವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ರಾಜ್ಯ ವಕ್ಫ ಮಂಡಳಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಕಾನೂನು ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಎನ್. ಮಹಮ್ಮದ ಫಾರುಕ ಅವರು ನವೆಂಬರ್ 30 ರಂದು ಈ ಸಂದರ್ಭದಲ್ಲಿ ಆದೇಶವನ್ನು ಪ್ರಸಾರ ಮಾಡಿದ್ದಾರೆ. ಸರಕಾರವು ಆದೇಶದಲ್ಲಿ, ಮಂಡಳಿಯ ಅಧ್ಯಕ್ಷರ ನೇಮಕಾತಿಗೆ ಸ್ಥಗಿತ ನೀಡಿದ ನಂತರ, ದೀರ್ಘಕಾಲದಿಂದ ನಡೆಯುತ್ತಿರುವ ಮಂಡಳಿಯ ಅಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಈ ಮಂಡಳಿಯನ್ನು ರದ್ದುಗೊಳಿಸುವ ನಿರ್ಣಯಿಸಲಾಗಿದೆಯೆಂದು, ಹೇಳಿದ್ದಾರೆ.

1. ಸಚಿವ ಫಾರುಕ್ ಮಾತನಾಡಿ, ವಕ್ಫ ಮಂಡಳಿಯ ಹಿಂದಿನ ನೇಮಕಾತಿಗಳ ಬಗ್ಗೆ ಅಕ್ಟೋಬರ್ 21, 2023ರಂದು ಅರ್ಜಿ ದಾಖಲಿಸಲಾಗಿತ್ತು. ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ನೀಡಿತ್ತು ಮತ್ತು ವಕ್ಫ ಮಂಡಳಿಯ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಗೆ ಸ್ಥಗಿತ ನೀಡಿತ್ತು. ಇದರಿಂದಾಗಿ ಮಂಡಳಿಗೆ ಆಡಳಿತ ಮತ್ತು ಕಾನೂನು ಸಮಸ್ಯೆಗಳು ಸೃಷ್ಟಿಯಾಗಿದ್ದವು. ಆದಕಾರಣ, ಈ ಮಂಡಳಿಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

2. ಸರಕಾರವು ವಕ್ಫ ಮಂಡಳಿಯ ಕಾರ್ಯಚಟುವಟಿಕೆಗಳನ್ನು ಸುಧಾರಿಸಲು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಪ್ರಾಮುಖ್ಯತೆಯನ್ನು ನೀಡುವ ಭರವಸೆ ನೀಡಿದೆ. ವಕ್ಫ ಆಸ್ತಿ ರಕ್ಷಣೆಗಾಗಿ ಮತ್ತು ಆಡಳಿತ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಸರಕಾರವು ಹೊಸ ಆದೇಶವನ್ನು ಜಾರಿ ಮಾಡಿದೆ. ವಕ್ಫ ಆಸ್ತಿಗಳನ್ನು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಈ ಹೆಜ್ಜೆ ಮಹತ್ವಪೂರ್ಣವೆಂದು ಪರಿಗಣಿಸಲಾಗುತ್ತಿದೆ. ಈ ಆಸ್ತಿಗಳ ಪಾರದರ್ಶಕ ಮತ್ತು ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಲು ಸರಕಾರದ ಉದ್ದೇಶವನ್ನು ಈ ಹೊಸ ಆದೇಶ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಒಂದು ವೇಳೆ ಆಂಧ್ರಪ್ರದೇಶದಲ್ಲಿನ ತೆಲುಗು ದೇಶಂ ಸರಕಾರ ಇದನ್ನು ಮಾಡಬಹುದಾದರೆ, ದೇಶದಲ್ಲಿನ ಪ್ರತಿಯೊಂದು ಸರಕಾರವೂ ಮಾಡುವುದು ಆವಶ್ಯಕವಿದೆಯೆಂದು ಹೇಳಬೇಕಾಗುತ್ತದೆ !