ಸಾಧನೆಯಲ್ಲಿ ಫಲದ ಅಪೇಕ್ಷೆಯನ್ನು ಏಕೆ ಇಟ್ಟುಕೊಳ್ಳಬಾರದು ?

(ಪರಾತ್ಪರ ಗುರು) ಡಾ. ಆಠವಲೆ

‘ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವಾಗ, ಗುರುಗಳು ಶಿಷ್ಯನ ಎಲ್ಲ ಭಾರವನ್ನು ಹೊತ್ತುಕೊಳ್ಳುತ್ತಾರೆ. ಗುರುಗಳು ಅವನಿಗೆ ಅವನ ಹಿಂದಿನ ಜನ್ಮದ ಸಾಧನೆ, ಅವನ ಪ್ರಾರಬ್ಧ, ಕೊಡುಕೊಳ್ಳುವಿಕೆಯ ಲೆಕ್ಕಾಚಾರ, ಸಾಧನೆ ಮಾಡುವ ಕ್ಷಮತೆ, ಕೆಟ್ಟ ಶಕ್ತಿಗಳ ತೊಂದರೆ ಇವುಗಳಂತಹ ವಿವಿಧ ಘಟಕಗಳ ವಿಚಾರ ಮಾಡಿ ಸಾಧನೆಯನ್ನು ಕಲಿಸುತ್ತಾರೆ. ಇವೆಲ್ಲ ಘಟಕಗಳು ಆ ಸಾಧಕನಿಗೆ ಅವನ ವೈಯಕ್ತಿಕ ಸಾಲದಂತಿರುತ್ತದೆ. ಅವನು ಮಾಡುತ್ತಿರುವ ಸಾಧನೆ, ಅವನ ಈ ‘ಸಾಲವನ್ನು ತೀರಿಸಲು ಉಪಯೋಗಿಸಲಾಗುತ್ತದೆ. ಇದರಲ್ಲಿ ಮಹತ್ವದ್ದೆಂದರೆ, ಆ ಸಾಧಕನಿಗೆ ‘ಅವನ ಮೇಲೆ ಎಷ್ಟು ಸಾಲವಿದೆ ?, ಎಂದು ಗೊತ್ತಿರುವುದಿಲ್ಲ ಮತ್ತು ಅವನಿಗೆ ಅದು ತಿಳಿಯಲು ಸಾಧ್ಯವೂ ಇರುವುದಿಲ್ಲ. ಈ ಸಾಲವನ್ನು ತೀರಿಸಲು ಕೇವಲ ‘ಗುರುಗಳು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡುತ್ತಿರುವುದು, ಇದೇ ಅವನ ಕ್ರಿಯಮಾಣ ಕರ್ಮವಾಗಿರುತ್ತದೆ. ಆದುದರಿಂದ ‘ನಾನು ಸಾಧನೆಯನ್ನು ಮಾಡುತ್ತೇನೆ, ಆದರೂ ನನಗೆ ಸಾಧನೆಯಲ್ಲಿ ಇಂದಿಗೂ ಏಕೆ ಏನೂ ಪ್ರಾಪ್ತವಾಗಿಲ್ಲ ?, ಎಂಬ ವಿಚಾರವನ್ನು ಮಾಡಬಾರದು. – (ಪರಾತ್ಪರ ಗುರು) ಡಾ. ಆಠವಲೆ.