ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಹಿಂದೂಗಳೇ ಸಾಧನೆ ಆರಂಭಿಸಿ

ನಮಗೇಕೆ ದೇವರ ಸಹಾಯ ಸಿಗುವುದಿಲ್ಲ ?, ಎಂಬುದನ್ನು ಹಿಂದೂಗಳು ವಿಚಾರ ಮಾಡಬೇಕಾಗಿದೆ ಹಾಗೂ ಸಹಾಯ ಸಿಗುವುದ್ದಕ್ಕಾಗಿ ಸಾಧನೆಯನ್ನು ಆರಂಭಿಸಬೇಕು.

ಕೀರ್ತನಕಾರರು ಹಾಗೂ ಗುರುಗಳಲ್ಲಿಯ ಭೇದ

ಕೀರ್ತನೆ ಹೇಳುವವರು ಹಾಗೂ ಪ್ರವಚನ ನೀಡುವವರು ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಾರೆ. ನಿಜವಾದ ಗುರುಗಳು ಪ್ರಾಯೋಗಿಕ ಕೃತಿಯನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿಯನ್ನು ಮಾಡುತ್ತಾರೆ.

ಅತಿಬುದ್ಧಿವಂತ ಬುದ್ಧಿಜೀವಿಗಳು

ಸಾಧನೆಯನ್ನು ಮಾಡಿ ಸೂಕ್ಷ್ಮದಲ್ಲಿಯ ತಿಳಿಯಲಾರಂಭಿಸಿದಾಗ ಯಜ್ಞದ ಮಹತ್ವ ತಿಳಿಯುತ್ತದೆ. ಅದು ತಿಳಿಯದಿರುವುದರಿಂದ ಅತಿಬುದ್ಧಿವಂತರಾದ ಬುದ್ದಿಜೀವಿಗಳು ಯಜ್ಞದಲ್ಲಿ ವಸ್ತುಗಳನ್ನು ಸುಡುವುದಕ್ಕಿಂತ ಅದನ್ನು ಬಡವರಿಗೆ ನೀಡಿ, ಎಂದು ಗೊಣಗುತ್ತಾರೆ.

ಬುದ್ಧಿಜೀವಿಗಳು ಹಾಗೂ ಸಂತರು

ಎಲ್ಲಿ ಸ್ವೇಚ್ಛೆಯಿಂದ ನಡೆದುಕೊಳ್ಳಲು ಉತ್ತೇಜನವನ್ನು ನೀಡಿ ಮನುಷ್ಯನನ್ನು ಅಧೋಗತಿಗೆ ಕೊಂಡುಹೋಗುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯನ್ನು ತ್ಯಾಗ ಮಾಡಲು ಕಲಿಸಿ ಈಶ್ವರಪ್ರಾಪ್ತಿಯನ್ನು ಮಾಡಿಕೊಡುವ ಸಂತರು, ವಿಜ್ಞಾನವು ಅಧ್ಯಾತ್ಮದಲ್ಲಿನ ಸಿದ್ಧಾಂತಗಳ ಬಗ್ಗೆ ಏನಾದರೂ ಹೇಳುವುದೆಂದರೆ ಮಕ್ಕಳು ದೊಡ್ಡವರ ವಿಷಯದಲ್ಲಿ ಹೇಳಿದಂತಿದೆ.

– (ಪರಾತ್ಪರ ಗುರು) ಡಾ. ಆಠವಲೆ