ಭಾರತದ ಸ್ಥಿತಿಯನ್ನು ಹಾಳುಗೆಡವಿದವರಿಗೆ ಪ್ರಕೃತಿಯು (ಈಶ್ವರನು) ನೀಡಿದ ಕಠಿಣ ಶಿಕ್ಷೆ !

ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನ ನಿಮಿತ್ತ ಲೇಖನ

ದೆಹಲಿ – ನೀವು ಯಾರಿಗಾದರೂ ಕೆಡುಕನ್ನುಂಟು ಮಾಡಿದರೆ ನಿಮಗೂ ಕೆಡುಕೇ ಆಗುತ್ತದೆ. ಈಶ್ವರನು ನಮ್ಮ ಕರ್ಮಗಳ ಫಲವನ್ನು ಈ ಜನ್ಮದಲ್ಲಿ, ಇಲ್ಲದಿದ್ದರೆ ಮುಂದಿನ ಜನ್ಮದಲ್ಲಿ ಕೊಟ್ಟೇ ಕೊಡುತ್ತಾನೆ. ಈ ಸಿದ್ಧಾಂತದ ಮೇಲೆ ಭಾರತೀಯರಿಗೆ ಪೂರ್ಣ ಶ್ರದ್ಧೆಯಿದೆ. ಭಾರತದ ಮೇಲೆ ವಿವಿಧ ಕಾಲಖಂಡಗಳಲ್ಲಿ ಆಕ್ರಮಣ ಮಾಡಿದ ಅಥವಾ ಭಾರತೀಯರೊಂದಿಗೆ ಕ್ರೂರವಾಗಿ ವರ್ತಿಸಿರುವ ವಿದೇಶಿಗರ ಕೊನೆಗಾಲವು ಅತ್ಯಂತ ಕೆಟ್ಟದಾಗಿದೆ. ಆಂಗ್ಲರನ್ನು ಭಾರತದಲ್ಲಿ ನೆಲೆಗೊಳಿಸಿದ ಲಾರ್ಡ್ ಕ್ಲೈವ್, ಭಾರತದ ವಿಭಜನೆಯನ್ನು ಮಾಡಿದ ಲಾರ್ಡ್ ಮೌಂಟ್ ಬ್ಯಾಟನ್, ಪಾಕಿಸ್ತಾನದ ನಾಮಕರಣ ಮಾಡಿದ ಚೌಧರಿ ರಹಮತ ಅಲೀ, ಭಾರತದಿಂದ ಅನೇಕ ಮೌಲ್ಯಯುತ ರತ್ನಗಳನ್ನು ಕದ್ದುಕೊಂಡು ಹೋಗಿರುವ ಫ್ರೆಂಚ್ ಪ್ರವಾಸಿ ಮತ್ತು ರತ್ನಗಳ ವ್ಯಾಪಾರಿ ಟೇವರ್ನಿಅರ್ ಅಥವಾ ಜಾಲಿಯನ್‌ವಾಲಾಬಾಗ್ ಹತ್ಯಾಕಾಂಡ ನಡೆಸಿದ ಜನರಲ್ ರೆನಿನಾಲ್ಡ್ ಡಾಯರ್ ಮತ್ತು ಲೆಫ್ಟನೆಂಟ್ ಗವರ್ನರ್ ಮೈಕಲ್ ಓ ಡಾಯರ್, ಯಾರೇ ಇರಲಿ, ಈಶ್ವರನು ಅವರಿಗೆ ಅವರ ಕರ್ಮಗಳಿಗನುಸಾರ ಕಠೋರ ಶಿಕ್ಷೆಯನ್ನು ನೀಡಿದನು. ಅಂತ್ಯಕಾಲದಲ್ಲಿ ಅವರ ಸ್ಥಿತಿಯು ಅತ್ಯಂತ ದಯನೀಯವಾಗಿತ್ತು.

೧. ಭಾರತವನ್ನು ವಶ ಪಡಿಸಿಕೊಂಡ ಲಾರ್ಡ್ ಕ್ಲೈವ್ ಅಮಲಿನಲ್ಲಿ ತನ್ನ ಕುತ್ತಿಗೆಯನ್ನು ತಾನೇ ಕೊಯ್ದುಕೊಳ್ಳುವುದು

ಲಾರ್ಡ್ ಕ್ಲೈವ್

ಲಾರ್ಡ್ ಕ್ಲೈವ್ ಭಾರತಕ್ಕೆ ಬರದೇ ಇದ್ದಿದ್ದರೆ, ಆಂಗ್ಲರಿಗೆ ಭಾರತ ಭೂಮಿಯಲ್ಲಿ ಬೇರೂರಲು ಆಗುತ್ತಿರಲಿಲ್ಲ. ಲಾರ್ಡ್ ಕ್ಲೈವ್‌ನ ಕ್ಷಮತೆಯನ್ನು ನೋಡಿ ಭಾರತವನ್ನು ವಶಪಡಿಸಿಕೊಳ್ಳಲು ಆಂಗ್ಲರು ಅವನನ್ನು ೩ ಬಾರಿ ಭಾರತಕ್ಕೆ ಕಳುಹಿಸಿದರು. ಈಸ್ಟ್ ಇಂಡಿಯಾ ಕಂಪನಿಯು ಲಾರ್ಡ್ ಕ್ಲೈವ್‌ನನ್ನು ಬಂಗಾಲದ ಮೊದಲ ಗವರ್ನರ್ ಜನರಲ್ ಮಾಡಿತು ಹಾಗೂ ಅಲ್ಲಿಂದ ಬ್ರಿಟಿಷರು ಆಡಳಿತದ ಅಡಿಪಾಯವನ್ನು ಹಾಕಿದರು. ಆ ಕ್ಲೈವ್‌ನ ಕೊನೆಗಾಲವು ಅತ್ಯಂತ ಕೆಟ್ಟದ್ದಾಗಿತ್ತು. ಕಂಪನಿಯ ಹಣವನ್ನು ವಂಚಿಸಿದ ಆರೋಪದಲ್ಲಿ ಬ್ರಿಟನ್‌ನ ಸಂಸತ್ತಿನಲ್ಲಿ ಅವನ ವಿರುದ್ಧ ವಿಚಾರಣೆ ನಡೆಸಲಾಯಿತು. ಅನಂತರ ಅವನಿಗೆ ಅಫೀಮಿನ ವ್ಯಸನ ತಗಲಿತು ಹಾಗೂ ೧೭೭೪ ರಲ್ಲಿ ಒಂದು ದಿನ ಅವನು ಅಫೀಮಿನ ಅಮಲಿನಲ್ಲಿರುವಾಗ ತಾನೇ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡನು. ಯಾವನು ಭಾರತದ ಆಡಳಿತವನ್ನು ಆಂಗ್ಲರ ಕೈಯಲ್ಲಿ ಕೊಟ್ಟನೋ, ಅವನು ಕೊನೆಗೆ ಒಂದು ದಿನ ಹುಚ್ಚನ ಹಾಗೆ ತನ್ನ ಕುತ್ತಿಗೆಯನ್ನು ತಾನೇ ಕೊಯ್ದುಕೊಂಡನು.

೨. ಪಾಕಿಸ್ತಾನದ ನಿರ್ಮಾಣಕ್ಕೆ ಜವಾಬ್ದಾರನಾಗಿದ್ದ ಮೌಂಟ್ ಬ್ಯಾಟನ್‌ನ ಹೃದಯವಿದ್ರಾವಕ ಮೃತ್ಯು

ಮೌಂಟ್ ಬ್ಯಾಟನ್‌

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಇವರ ಬಗ್ಗೆ ಅನೇಕರಿಗೆ ಮೆಚ್ಚುಗೆ ಅನಿಸುತ್ತಿತ್ತು ಮತ್ತು ಜನರು ಅವರ ಪ್ರಶಂಸೆಯನ್ನು ಮಾಡುತ್ತಿದ್ದರು. ‘ಚರ್ಚಿಲ್‌ರವರ ನಿರ್ಧಾರಕ್ಕನುಸಾರ ಆಗಿನ ಸೋವಿಯತ್ ಸಂಘ ಮತ್ತು ಭಾರತ ಇವುಗಳ ನಡುವೆ ಒಂದು ‘ಬಫರ್ ಸ್ಟೇಟ್ (ಅಂತಸ್ಥ ರಾಜ್ಯ) ಇರಬೇಕು; ಎಂದು ಪಾಕಿಸ್ತಾನವನ್ನು ನಿರ್ಮಾಣ ಮಾಡಲಾಯಿತು. ಈ ರಹಸ್ಯಮಯ ಯೋಜನೆಗೆ ಮೌಂಟ್ ಬ್ಯಾಟನ್ ಬೆಂಬಲಿಸಿದರು, ಎಂಬುದು ನಂತರ ಬೆಳಕಿಗೆ ಬಂದಿತು. ಪಾಕಿಸ್ತಾನವನ್ನು ನಿರ್ಮಾಣ ಮಾಡಲು ಮೌಂಟ್ ಬ್ಯಾಟನ್ ಇವರೇ ಸಂಪೂರ್ಣ ಕಾರಣರಾಗಿದ್ದರು. ೨೭ ಆಗಸ್ಟ್ ೧೯೭೯ ರಂದು ಮೌಂಟ್ ಬ್ಯಾಟನ್ ಬೇಸಿಗೆಯ ರಜೆಯನ್ನು ಕಳೆಯಲು ಐರ್ಲ್ಯಾಂಡ್‌ನಲ್ಲಿದ್ದರು. ಆಗ ಐರ್ಲ್ಯಾಂಡ್‌ನ ‘ಐರಿಶ್ ರಿಪಬ್ಲಿಕ್ ಆರ್ಮೀ ಬ್ರಿಟೀಷ ಸಾಮ್ರಾಜ್ಯದ ವಿರುದ್ಧವಿತ್ತು. ಮೌಂಟ್ ಬ್ಯಾಟನ್ ಇವರ ಬೋಟ್ ದಡವನ್ನು ತಲಪುವಷ್ಟರಲ್ಲಿಯೇ ಒಂದು ಭಯಂಕರ ಸ್ಫೋಟವಾಗಿ ಮೌಂಟ್ ಬ್ಯಾಟನ್‌ರವರ ಜೊತೆಗೆ ಅವರ ಇಬ್ಬರ ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳು, ಅಳಿಯ ಮತ್ತು ಇತರ ಅನೇಕ ಜನರು ಮೃತಪಟ್ಟರು.

೩. ಪಾಕಿಸ್ತಾನದ ನಾಮಕರಣ ಮಾಡಿದ ಚೌಧರಿ ರಹಮತ್ ಅಲೀ ಇವರ ಕೆಟ್ಟ ಅಂತ್ಯ

ಚೌಧರಿ ರಹಮತ್ ಅಲೀ

ಪಾಕಿಸ್ತಾನಕ್ಕೆ ‘ಪಾಕಿಸ್ತಾನ ಎಂಬ ಹೆಸರು ನೀಡಿದ ಚೌಧರಿ ರಹಮತ್ ಅಲೀ ಇವರನ್ನು ಪಾಕಿಸ್ತಾನ ಅತೀ ಹೀನಾಯವಾಗಿ ನಡೆಸಿಕೊಂಡಿತು ಹಾಗೂ ಕೊನೆಗೆ ಅವರ ಜೀವನ ಬಹಳ ಹದಗೆಟ್ಟಿತು. ೧೯೩೩ ರಲ್ಲಿ ಅಂತಿಮ ದುಂಡುಮೇಜಿನ ಪರಿಷತ್ತಿನಲ್ಲಿ ಅವರು ಬ್ರಿಟಿಷ್ ಸರಕಾರ ಮತ್ತು ಭಾರತೀಯ ಪ್ರತಿನಿಧಿಗಳಿಗೆ ಒಂದು ಪತ್ರವನ್ನು ಬರೆದಿದ್ದರು. ಆ ಪತ್ರದಲ್ಲಿ ಅಲೀ ಇವರು ಮೊದಲು ‘ಪಾಕಿಸ್ತಾನ ಈ ಶಬ್ದವನ್ನು ಉಪಯೋಗಿಸಿದ್ದರು. ಬ್ಯಾ. ಜಿನ್ನಾರವರು ೬ ವರ್ಷಗಳ ನಂತರ ಆ ಹೆಸರನ್ನು ಸ್ವೀಕರಿಸಿದರು. ವಿಭಜನೆಯ ನಂತರ ಪಾಕಿಸ್ತಾನದ ತುಂಡುಗಳನ್ನು ನೋಡಿ ಅಲೀಯವರಿಗೆ ಬಹಳ ಕೆಡುಕೆನಿಸಿತು. ಅವರು ಲಂಡನ್‌ನಿಂದ ಅದನ್ನು ಟೀಕಿಸಿದರು. ಅಲೀ ಎಪ್ರಿಲ್ ೧೯೪೮ ರಲ್ಲಿ ಪಾಕಿಸ್ತಾನಕ್ಕೆ ಹೋದರು. ಅವರಿಗೆ ತಾವು ಪಾಕಿಸ್ತಾನಕ್ಕೆ ಹೆಸರನ್ನು ನೀಡಿರುವುದರಿಂದ ಅಲ್ಲಿನ ಜನರು ತಮಗೆ ಒಳ್ಳೆಯ ಮಾನ-ಸನ್ಮಾನ ನೀಡುವರು ಎಂದು ಅನಿಸಿತ್ತು; ಆದರೆ ಪಾಕಿಸ್ತಾನದ ಅಂದಿನ ಪ್ರಧಾನಮಂತ್ರಿ ಲಿಯಾಕತ ಅಲೀ ಇವರು ಅವರನ್ನು ತುಂಬಾ ಅವಮಾನ ಮಾಡಿದರು. ಅವರ ಎಲ್ಲ ಸನ್ಮಾನಗಳನ್ನು ಕಸಿದುಕೊಂಡರು. ಅವರು ಅವಮಾನಗೊಂಡು ಲಂಡನ್‌ಗೆ ಹಿಂತಿರುಗಿ ಹೋದರು. ಅಲ್ಲಿಗೆ ಹೋದ ನಂತರ ಜನರು ಅವರ ಚೇಷ್ಟೆಯನ್ನು ಮಾಡಿದರು. ಅದರಿಂದ ಅವರಿಗೆ ದೊಡ್ಡ ಆಘಾತವಾಯಿತು. ಹಣ ಕೂಡ ಮುಗಿದಿತ್ತು. ಕೊನೆಗೆ ೧೯೫೧ ರಲ್ಲಿ ಅವರು ಮೃತರಾದರು. ಸಂಪೂರ್ಣ ಜೀವನವನ್ನು ಪಾಕಿಸ್ತಾನದ ನಿರ್ಮಾಣಕ್ಕಾಗಿ ಸವೆಸಿದ ಅಲೀ ಇವರ ಅಂತ್ಯ ಹೀಗಾಯಿತು.

೪. ಭಾರತೀಯ ರತ್ನಗಳ ‘ಶಾಪದಿಂದ ಟೆವರ್ನಿಯರ್‌ನ ಭಯಾನಕ ಮೃತ್ಯು ?

ಟೆವರ್ನಿಯರ್‌

ಫ್ರೆಂಚ್ ಪ್ರವಾಸಿ ಟೆವರ್ನಿಯರ್ ರತ್ನಗಳ ವ್ಯಾಪಾರಿಯಾಗಿದ್ದನು. ಅವನು ಜಹಾಂಗೀರನ ಆಡಳಿತಕಾಲದಲ್ಲಿ ಭಾರತಕ್ಕೆ ಬಂದಿದ್ದನು. ಈ ಟೆವರ್ನರ್‌ನನ್ನು ಆಧರಿಸಿ ಹಾಲಿವುಡ್‌ನಲ್ಲಿ ‘ದ ಡೈಮಂಡ್ ಕ್ವೀನ್ ಎಂಬ ಚಲನಚಿತ್ರ ತಯಾರಾಗಿತ್ತು. ಈ ಚಲನಚಿತ್ರದಲ್ಲಿ ಒಂದು ಶಾಪಗ್ರಸ್ತ ರತ್ನದಿಂದ ಜಗತ್ತಿನಾದ್ಯಂತ ಎಷ್ಟೋ ಪ್ರಖ್ಯಾತ ವ್ಯಕ್ತಿಗಳು ದುರ್ಮರಣಕ್ಕೀಡಾಗಿರುವುದನ್ನು ತೋರಿಸಲಾಗಿತ್ತು. ಇದರಲ್ಲಿ ಟೆವರ್ನಿಯರ್ ಕೂಡ ಇದ್ದನು. ಅವನು ಭಾರತದಲ್ಲಿನ ಅನೇಕ ಪ್ರಸಿದ್ಧ ರತ್ನಗಳನ್ನು ಖರೀದಿಸಿದ್ದನು, ಅದರೊಂದಿಗೆ ಅವನು ‘ಅನೇಕ ಅಮೂಲ್ಯ ರತ್ನಗಳನ್ನು ಭಾರತದಿಂದ ಕದ್ದುಕೊಂಡು ಹೋಗಿದ್ದನು, ಎಂದು ಅವನ ಮೇಲೆ ಆರೋಪವಿತ್ತು. ಹೆಚ್ಚಿನ ಪ್ರಸಿದ್ಧ ರತ್ನಗಳು ಗೋಲ್‌ಕುಂಡಾಗಣಿಯಲ್ಲಿ ಸಿಕ್ಕಿದ್ದವು. ಫ್ರಾನ್ಸ್‌ನ ರಾಜನಿಂದ ಆ ರತ್ನಗಳ ಬದಲಿಗೆ ಅವನಿಗೆ ಅಪಾರ ಸಂಪತ್ತು ದೊರಕಿತ್ತು. ೮೪ ನೇ ವಯಸ್ಸಿನಲ್ಲಿ ‘ಟೆವರ್ನಿಯರ್ ನನ್ನು ಕಾಡುನಾಯಿಗಳು ದಾಳಿ ಮಾಡಿ ಸಾಯಿಸಿದವು.

೫. ಜಲಿಯನ್‌ವಾಲಾ ಹತ್ಯಾಕಾಂಡದ ಇಬ್ಬರು ಡಾಯರ್‌ಗಳ ಅಪಮೃತ್ಯು !

ಸ್ವಾತಂತ್ರ್ಯಪೂರ್ವಕಾಲದಲ್ಲಿ ಆಂಗ್ಲರು ನಡೆಸಿದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಯಾರೂ ಮರೆಯಲಾರರು. ಇದರಲ್ಲಿ ಜನರಲ್ ರೆಗಿನಾಲ್ಡ್ ಡಾಯರ್ ಕ್ರೂರವಾಗಿ ಸಾವಿರಾರು ಭಾರತೀಯರನ್ನು ಸಾಯಿಸಿದ್ದನು. ಈ ಹತ್ಯಾಕಾಂಡದ ಮುಂದಿನ ವರ್ಷವೇ ಅವನು ಲಂಡನ್‌ಗೆ ಹೋಗಿ ಅಲ್ಲಿ ನಿವೃತ್ತಿಯ ಜೀವನ ನಡೆಸುತ್ತಿದ್ದನು. ಲಂಡನ್‌ನಲ್ಲಿ ಅವನ ವಿರುದ್ಧ ವಿಚಾರಣೆಯನ್ನು ಆರಂಭಿಸಲಾಯಿತು. ಅವನಿಗೆ ಅನೇಕ ರೀತಿಯ ‘ಬ್ರೇನ್ ಸ್ಟ್ರೋಕ್ಗಳ ಆಘಾತಗಳಾಗಲು ಪ್ರಾರಂಭವಾಯಿತು. ಅವನ ಶರೀರದ ಒಂದು ಭಾಗ ನಿಷ್ಕ್ರಿಯವಾಯಿತು (ಪ್ಯಾರಾಲಿಸಿಸ).

ಪಾರ್ಶ್ವವಾಯುವಿನ ಆಘಾತದಲ್ಲಿ ಅವನ ಮಾತುಗಳು ನಿಂತು ಹೋದವು. ಒಂದು ಕೋಣೆಯಲ್ಲಿ ಅನೇಕ ತಿಂಗಳು ನರಕಯಾತನೆಯನ್ನು ಭೋಗಿಸುತ್ತಿರುವಾಗ ೨೩ ಜುಲೈ ೧೯೨೭ ರಂದು ಅವನು ಮೃತನಾದನು. ಜಲಿಯನ್‌ವಾಲಾ ಹತ್ಯಾಕಾಂಡಕ್ಕೆ ಆದೇಶ ನೀಡಿದ ಈ ಡಾಯರ್‌ನಿಗೆ ಈಶ್ವರನು ಕಠೋರ ಶಿಕ್ಷೆಯನ್ನು ನೀಡಿದ್ದನು.

ಜಲಿಯನ್‌ವಾಲಾ ಘಟನೆಯ ಎರಡನೆಯ ಅಪರಾಧಿ ಲೆಫ್ಟನೆಂಟ್ ಗವರ್ನರ್ ಮೈಕಲ್ ಓ ಡಾಯರ್ ಎಂಬವನಾಗಿದ್ದನು. ಅವನು ಜನರಲ್ ಡಾಯರ್‌ನನ್ನು ರಕ್ಷಿಸುವುದರಲ್ಲಿ ದೊಡ್ಡ ಪಾತ್ರ ವಹಿಸಿದ್ದನು. ಹಿರಿಯ ಕ್ರಾಂತಿಕಾರಿ ಉಧಮಸಿಂಹ ಇವರು ೧೩ ಮಾರ್ಚ್ ೧೯೪೦ ರಲ್ಲಿ ಲಂಡನ್‌ನಲ್ಲಿ ಅವನನ್ನು ಗುಂಡಿಕ್ಕಿ ಕೊಂದರು. ಜಾಲಿಯನ್‌ವಾಲಾ ಬಾಗ್‌ನ ಇಬ್ಬರೂ ಅಪರಾಧಿಗಳಿಗೆ ಅಪಮೃತ್ಯು ಬಂದಿತು, ಅವರ ಅಂತ್ಯ ಬಹಳ ಕೆಟ್ಟದಾಗಿ ಆಯಿತು.  (ಆಧಾರ : ‘ಝೀ ನ್ಯೂಸ್ ಹಿಂದಿ ಜಾಲತಾಣ)