ಸತ್‌ಶಿಷ್ಯನ ಕಲ್ಯಾಣಕ್ಕಾಗಿರುವ ಸದ್ಗುರುಗಳು !

೧. ಉದ್ಧಾರವಾಗುವುದು ಅಥವಾ ಸುಖ ಸಿಗುವುದು ಮತ್ತು ಕಲ್ಯಾಣ (ಶುಭ) ವಾಗುವುದು

‘ಉದ್ಧಾರವಾಗುವುದು ಅಥವಾ ಸುಖ ಸಿಗುವುದು, ಇದು ಬೇರೆ ಹಾಗೂ ‘ಕಲ್ಯಾಣವಾಗುವುದು, ಇದು ಬೇರೆ. ಸುಖ ತಾತ್ಕಾಲಿಕವಾಗಿರುತ್ತದೆ, ಆದರೆ ಕಲ್ಯಾಣವು ಶಾಶ್ವತವಾದ ಸುಖವಾಗಿರುತ್ತದೆ. ಶಾಶ್ವತ ಅಥವಾ ಚಿರಂತನ ಸುಖದಲ್ಲಿ ತಾತ್ಕಾಲಿಕ ಸುಖ ಸಮಾವೇಶವಾಗಿದ್ದರೂ ಅದು ಅದಕ್ಕೂ ಮೇಲಿನ ಹಂತದ ಸುಖವಾಗಿದೆ. ಶಾಶ್ವತ ಸುಖ ಎಷ್ಟು ಉಚ್ಚಸ್ತರದ್ದು ಹಾಗೂ ವ್ಯಾಪಕವಾಗಿದೆಯೆಂದರೆ, ತಾತ್ಕಾಲಿಕ ಸುಖದ ಬಗ್ಗೆ ಅದಕ್ಕೆ ಏನೂ ಅನಿಸುವುದಿಲ್ಲ. ತಾತ್ಕಾಲಿಕ ಸುಖಗಳು ನೆರಳಿನಂತೆ ಬರುತ್ತವೆ ಹಾಗೂ ಹೋಗುತ್ತವೆ, ಆದ್ದರಿಂದ ಶಾಶ್ವತ ಸುಖದಲ್ಲಿ ಸ್ಥಿರವಾಗಿರುವ ಮನುಷ್ಯ ನೆರಳಿನಂತೆಯೇ ಕ್ಷಣಿಕ ಸುಖವನ್ನು ಉಪೇಕ್ಷಿಸುತ್ತಾನೆ. ಇಷ್ಟು ಉಚ್ಚಾವಸ್ಥೆಯು ನಿಜವಾದ ಕಲ್ಯಾಣದಲ್ಲಿರುತ್ತದೆ.

೨. ಸತ್‌ಶಿಷ್ಯನ ಕಲ್ಯಾಣಕ್ಕಾಗಿ ಸದ್ಗುರುಗಳ ಅವತಾರ ಆಗಿರುತ್ತದೆ.

‘ಕಲ್ಯಾಣ ಎಂಬುದು ಶಾಶ್ವತ ಸೌಖ್ಯವಂತೂ ಆಗಿರುತ್ತದೆ; ಅದು ನಿರ್ಮಲ ಶಾಂತಿಯ ಅವಸ್ಥೆಯೂ ಆಗಿದೆ ಹಾಗೂ ಅದರ ಜೊತೆಗೆ ಶುದ್ಧವಾದ ಜ್ಞಾನದೃಷ್ಟಿಯೂ ಆಗಿದೆ. ಇಷ್ಟು ವ್ಯಾಪಕತೆ, ವಿಶಾಲತೆ ಲಭಿಸಿರುವ ಕಲ್ಯಾಣ, ಇದೇ ‘ಕೈವಲ್ಯ. ಸತ್‌ಶಿಷ್ಯನಿಗೆ ಇಂತಹ ಕೈವಲ್ಯದ ಸುಪ್ತವಾದ ಆಸೆ ಇರುತ್ತದೆ ಹಾಗೂ ಅದನ್ನು ಮುಕ್ತವಾಗಿ ಪ್ರದಾನಿಸಲಿಕ್ಕಾಗಿಯೇ ಸದ್ಗುರುಗಳ ಅವತಾರವಾಗುತ್ತದೆ. ನಿತ್ಯಚೈತನ್ಯದ ಸುಖದಾಯಕ ಸಂಗವನ್ನು ತೊರೆದು ಒಂದು ರೀತಿಯಲ್ಲಿ ದುಃಖವನ್ನು ಆಮಂತ್ರಿಸಿ ಸದ್ಗುರುಗಳು ಮನುಷ್ಯ ದೇಹದಲ್ಲಿ ಭೂಮಿಗೆ ಬರುತ್ತಾರೆ, ಅದು ಕೇವಲ ಶಿಷ್ಯನ ಕಲ್ಯಾಣಕ್ಕಾಗಿ, ಉದ್ಧಾರಕ್ಕಾಗಿ, ಕೈವಲ್ಯಕ್ಕಾಗಿ !

– ಸ್ವಾಮಿ ವಿದ್ಯಾನಂದ (ಆಧಾರ : ಗ್ರಂಥ ‘ಚಿಂತನಧಾರಾ)

ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !

ಮನುಷ್ಯನು ಒಂದು ವೇಳೆ ಸತ್ಪುರುಷರ ಬಳಿಯಲ್ಲಿದ್ದು ಆಜ್ಞಾಪಾಲನೆ ಮಾಡಲು ಕಲಿಯದಿದ್ದರೆ, ಅವನು ಏನೂ ಕಲಿಯಲಿಲ್ಲ. ಯಾರು ಆಜ್ಞಾಪಾಲನೆಯನ್ನು ಮಾಡುತ್ತಾನೋ, ಅವನೂ ಭೋಗವನ್ನು ಭೋಗಿಸಬೇಕಾಗುತ್ತದೆ. ಇದು ನಿಜವಾದರೂ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಭೋಗಿಸುವ ವ್ಯವಸ್ಥೆಯನ್ನು ಮಾಡಬಹುದು. ಪ್ರಾರಬ್ಧದ ತೀವ್ರತೆಯು ತುಂಬ ವಿಚಿತ್ರವಾಗಿದೆ. ಭೋಗವನ್ನು ತೀರಿಸುವ ಸಮಯ ಬಂತೆಂದರೆ ಅದು ಬುದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲಿ ನಾವು ಎಚ್ಚರಿಕೆಯಿಂದಿದ್ದು ಸತ್ಪುರುಷರು ಹೇಳಿದಂತೆಯೇ ನಡೆದುಕೊಂಡರೆ ಪ್ರಾರಬ್ಧದ ತೀವ್ರತೆಯು ಕಡಿಮೆಯಾಗದೇ ಇರುವುದಿಲ್ಲ. ಪ್ರಾರಬ್ಧದಿಂದ ಬುದ್ಧಿಯಲ್ಲಿ ಯಾವುದೇ ವಿಚಾರಗಳು ಹುಟ್ಟಿಕೊಂಡರೂ, ಅದರಂತೆ ನಡೆದುಕೊಳ್ಳುವುದು ಅಥವಾ ನಡೆದುಕೊಳ್ಳದಿರುವುದು, ಇದು ನಮ್ಮ ಕೈಯಲ್ಲಿದೆ ಮತ್ತು ಆದ್ದರಿಂದ ಮನುಷ್ಯನು ಶ್ರೇಷ್ಠನಾಗಿದ್ದಾನೆ. ಬುದ್ಧಿಯನ್ನು ನಿಯಂತ್ರದಲ್ಲಿಡುವ ಯುಕ್ತಿಯನ್ನು ಸಾಧಿಸಲು ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆಯಾಗಿದೆ.

– ಬ್ರಹ್ಮಚೈತನ್ಯ ಗೊಂದವಲೆಕರ ಮಹಾರಾಜರು (‘ಪೂ. (ಪ್ರಾ.) ಕೆ.ವಿ. ಬೆಲಸರೆ ಇವರ ಆಧ್ಯಾತ್ಮಿಕ ಸಾಹಿತ್ಯ ಈ ಫೇಸಬುಕ್‌ನ ಆಧಾರದಿಂದ)