ಸಪ್ತರ್ಷಿಗಳು ಹೇಳಿದಂತೆ ೨೦೨೦ ಮತ್ತು ೨೦೨೧ ನೇ ಇಸವಿಯ ಗುರುಪೂರ್ಣಿಮೆಯಂದು ಪೂಜಿಸಿದ ಚಿತ್ರಗಳ ಸಂದರ್ಭದಲ್ಲಿ ಸದ್ಗುರು (ಡಾ.) ಮುಕುಲ ಗಾಡಗೀಳ ಇವರಿಗೆ ಬಂದ ಅನುಭೂತಿಗಳು

ಸೂಕ್ಷ್ಮ ಚಿತ್ರದ ಪ್ರಯೋಗ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ:  https://sanatanprabhat.org/kannada/46721.html

ಸೂಕ್ಷ್ಮ ಪ್ರಯೋಗದ ಉತ್ತರ

ಸದ್ಗುರು (ಡಾ.) ಮುಕುಲ ಗಾಡಗೀಳ

೧. ಸಪ್ತರ್ಷಿಗಳು ಹೇಳಿದಂತೆ ೨೦೨೧ ನೇ ಇಸವಿಯ ಗುರುಪೂರ್ಣಿಮೆಯಂದು ಪೂಜಿಸಿದ ಚಿತ್ರದ ಸಂದರ್ಭದಲ್ಲಿ ಸದ್ಗುರು (ಡಾ.) ಮುಕುಲ ಗಾಡಗೀಳರಿಗೆ ಬಂದ ಅನುಭೂತಿಗಳು

‘೨೦೨೧ರ ಗುರುಪೂರ್ಣಿಮೆಗೆ ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮದಿಂದ ಹೇಳಿದಂತೆ ಚಿತ್ರವನ್ನು ತಯಾರಿಸಿ, ಅದರ ಪೂಜೆಯನ್ನು ರಾಮನಾಥಿ ಆಶ್ರಮದಲ್ಲಿ  ಮಾಡಲಾಯಿತು. ಆ ಚಿತ್ರವನ್ನು ನೋಡಿ ನನಗೆ ಬಂದ ಅನುಭೂತಿಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧ ಅ. ಚಿತ್ರವನ್ನು ನೋಡಿದ ತಕ್ಷಣ ಶೀತಲತೆಯ, ಹಾಗೆಯೇ ಆನಂದದ ಅರಿವಾಯಿತು.

೧ ಆ. ಮೊದಲು ನನ್ನ ಚಂದ್ರನಾಡಿ ಕಾರ್ಯನಿರತವಾಗಿತ್ತು. ಚಿತ್ರವನ್ನು ನೋಡಿದ ಕೂಡಲೇ ನನ್ನ ಸುಷುಮ್ನಾ ನಾಡಿ ಕಾರ್ಯನಿರತವಾಯಿತು.

೧ ಇ. ನನ್ನ ಸಹಸ್ರಾರ ಚಕ್ರದ ಮೇಲೆ  ಸ್ಪಂದನಗಳು ಅರಿವಾಗ ತೊಡಗಿದವು.

೧ ಈ. ಚಿತ್ರದ ವರ್ಣನೆ ಮತ್ತು ಗಮನಕ್ಕೆ ಬಂದ ವೈಶಿಷ್ಟ್ಯಗಳು : ಚಿತ್ರದ ಮಧ್ಯಭಾಗದಲ್ಲಿ ಗೋಲದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರವಿದೆ. ಅದರ ಮೇಲ್ಭಾಗದಲ್ಲಿ ಎಡಗಡೆಗೆ ಶ್ರೀಕೃಷ್ಣ ಮತ್ತು ಬಲಗಡೆಗೆ ಶ್ರೀರಾಮನ ಚಿತ್ರವಿದೆ. ಭೂಮಿಯ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (ಎಡಗಡೆಗೆ) ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (ಬಲಗಡೆಗೆ) ಕೈಮುಗಿದು ಕುಳಿತಿದ್ದಾರೆ ಮತ್ತು ಅವರ ದೃಷ್ಟಿ ಪರಾತ್ಪರ ಗುರು ಡಾ. ಆಠವಲೆಯವರ ಮೇಲಿದ್ದು ಅವರಿಗೆ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.

೧. ಈ ೧. ಚಿತ್ರವನ್ನು ನೋಡುವುದು

. ಚಿತ್ರವನ್ನು ನೋಡಿದ ಕೂಡಲೇ ನನ್ನ ದೃಷ್ಟಿ ಕೇವಲ ಪರಾತ್ಪರ ಗುರು ಡಾ. ಆಠವಲೆಯವರ ಕಡೆಗೆ ಆಕರ್ಷಿಸಲ್ಪಟ್ಟಿತು.

. ‘ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ತಮ್ಮ ತತ್ತ್ವವನ್ನು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಸಂಪೂರ್ಣ ಕಾರ್ಯನಿರತಗೊಳಿಸಿದ್ದಾರೆ, ಎಂದು ಅನಿಸಿತು. ಇದರಿಂದ ಆ ದೇವತೆಗಳ ಕಡೆಗೆ ದೃಷ್ಟಿ ಹೋಗದೇ, ಪರಾತ್ಪರ ಗುರು ಡಾ. ಆಠವಲೆಯವರ ಮೇಲೆಯೇ ದೃಷ್ಟಿ ಆಕರ್ಷಿಸಲ್ಪಟ್ಟಿತು.

ಇ. ಚಿತ್ರದಿಂದ ತುಂಬಾ ಶಕ್ತಿಯು ಲಭಿಸಿತು. ‘ಈಶ್ವರಿ ರಾಜ್ಯವನ್ನು ಸ್ಥಾಪಿಸಲು ನಾವು ಶಕ್ತಿಯಿಂದ ಸಂಪೂರ್ಣ ತುಂಬಿಕೊಂಡಿದ್ದೇವೆ, ಎಂದು ಅನಿಸಿತು.

. ‘ಈಗ ಬೇಗನೆ ಈಶ್ವರಿ ರಾಜ್ಯ ನೋಡಲು ಸಿಗಲಿದೆ, ಎಂಬ ವಿಚಾರದಿಂದ ಮನಸ್ಸಿಗೆ ತುಂಬಾ ಆನಂದವಾಯಿತು.

. ಉತ್ಸಾಹವೆನಿಸಿತು. ಚಿತ್ರವನ್ನು ನೋಡುತ್ತಲೇ ಇರಬೇಕು ಎಂದು ಅನಿಸಿತು.

೧ ಈ ೨. ಚಿತ್ರವನ್ನು ಸ್ಪರ್ಶಿಸುವುದು

ಅ. ಚಿತ್ರದಲ್ಲಿನ ಶ್ರೀಕೃಷ್ಣ ಮತ್ತು ಶ್ರೀರಾಮನಿರುವ ಭಾಗವನ್ನು ಸ್ಪರ್ಶಿಸುವುದು : ಒಳ್ಳೆಯ ಶಕ್ತಿ ಅರಿವಾಯಿತು ಮತ್ತು ಸುಷುಮ್ನಾ ನಾಡಿ ಕಾರ್ಯನಿರತವಾಯಿತು. ದೇವತೆಗಳು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಆಧ್ಯಾತ್ಮಿಕ ಬಲವನ್ನು ಪೂರೈಸುತ್ತಿರುವುದರಿಂದ ಶಕ್ತಿಯ ಸ್ಪಂದನಗಳು ಅರಿವಾದವು.

ಆ. ಚಿತ್ರದಲ್ಲಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕುಳಿತಿರುವ ಭಾಗವನ್ನು ಸ್ಪರ್ಶಿಸುವುದು : ಒಳ್ಳೆಯ ಶಕ್ತಿ ಅರಿವಾಯಿತು ಮತ್ತು ಆ ಶಕ್ತಿ ಬಹಳಷ್ಟು ಪ್ರಮಾಣದಲ್ಲಿ ಅರಿವಾಯಿತು. ನನ್ನ ಸುಷುಮ್ನಾ ನಾಡಿ ಕಾರ್ಯನಿರತವಾಯಿತು. ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯನಿರತವಾಗಿರುವುದರಿಂದ ಅಧಿಕ ಪ್ರಮಾಣದಲ್ಲಿ ಶಕ್ತಿಯ ಅರಿವಾಯಿತು.

ಇ. ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರವಿರುವ ಜಾಗವನ್ನು ಸ್ಪರ್ಶಿಸುವುದು : ಬಹಳಷ್ಟು ಪ್ರಮಾಣದಲ್ಲಿ ಶೀತಲತೆಯ ಅರಿವಾಯಿತು. ಅವರ ಜಾಗದಲ್ಲಿ ಟೊಳ್ಳು ಅರಿವಾಯಿತು ಮತ್ತು ನನ್ನ ಸುಷುಮ್ನಾ ನಾಡಿ ಕಾರ್ಯನಿರತವಾಯಿತು. ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಪರಾತ್ಪರ ಗುರು ಡಾ. ಆಠವಲೆಯವರಲ್ಲಿರುವ ಗುರುತತ್ತ್ವ ಮಾರ್ಗದರ್ಶನದ ಸ್ತರದಲ್ಲಿ ಕಾರ್ಯನಿರತವಾಗಿರುವುದರಿಂದ ಮತ್ತು ಅದು ನಿರ್ಗುಣ ಸ್ತರದಲ್ಲಿ ಅಧಿಕವಿರುವುದರಿಂದ ಶೀತಲತೆ ಮತ್ತು ಟೊಳ್ಳು ಅರಿವಾಯಿತು. ಸಂಪೂರ್ಣ ಚಿತ್ರವು ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿರುವುದರಿಂದ, ಚಿತ್ರದ ಯಾವ ಭಾಗವನ್ನು ಸ್ಪರ್ಶಿಸಿದರೂ ಸುಷುಮ್ನಾ ನಾಡಿ ಕಾರ್ಯನಿರತವಾಗುತ್ತದೆ.

ಉ.  ಚಿತ್ರದಿಂದ  ಪ್ರಕ್ಷೇಪಿಸುವ ಸ್ಪಂದನಗಳು

೨. ೨೦೨೦ ಮತ್ತು ೨೦೨೧ ರ ರಲ್ಲಿ ಗುರುಪೂರ್ಣಿಮೆಯ ದಿನದಂದು ಪೂಜಿಸಿದ ಚಿತ್ರಗಳಲ್ಲಿ ಗಮನಕ್ಕೆ ಬಂದ ವ್ಯತ್ಯಾಸ

ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಪರಮಾತ್ಮನ ರೂಪದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಮತ್ತು ಅವರ ಚರಣಗಳಲ್ಲಿ ಅರ್ಜುನನಂತೆ ಶರಣಾಗತ ಭಾವದಿಂದ ಪ್ರಾರ್ಥನೆ ಮಾಡುತ್ತಿರುವ  1. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು 2. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೨೦೨೦ ನೇ ವರ್ಷದ ಗುರುಪೂರ್ಣಿಮೆಗಾಗಿ ಸಪ್ತರ್ಷಿಗಳು ಹೇಳಿದಂತೆ ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಕೃಷ್ಣನ ರೂಪದಲ್ಲಿ ಕುರುಕ್ಷೇತ್ರದಲ್ಲಿ ಇದ್ದು ಅವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಅರ್ಜುನನಂತೆ ಪ್ರಾರ್ಥನೆ ಮಾಡುತ್ತಿದ್ದಾರೆ ಹಾಗೂ ಶ್ರೀಕೃಷ್ಣನ ರೂಪದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರು ಅವರಿಗೆ ಆಶೀರ್ವಾದವನ್ನು ನೀಡುತ್ತಿರುವ, ಚಿತ್ರವನ್ನು ತಯಾರಿಸಲಾಗಿತ್ತು. ೨೦೨೦ ಮತ್ತು ೨೦೨೧ ನೇ ಇಸವಿಯ ಗುರುಪೂರ್ಣಿಮೆಯ ಚಿತ್ರಗಳಲ್ಲಿ ಮುಂದಿನ ವ್ಯತ್ಯಾಸ ಅರಿವಾಯಿತು.

ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !

– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೭.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮಜ್ಞಾನದ ಪ್ರಯೋಗ : ಕೆಲವು ಸಾಧಕರು ಸೂಕ್ಷ್ಮವನ್ನು ತಿಳಿಯುವ ಕ್ಷಮತೆಯ ಅಧ್ಯಯನವೆಂದು ‘ಯಾವುದಾದರೊಂದು ವಸ್ತು, ಕೃತಿ, ಧಾರ್ಮಿಕ ವಿಧಿ, ವ್ಯಕ್ತಿ ಮುಂತಾದವುಗಳ ಬಗ್ಗೆ ಮನಸ್ಸು ಮತ್ತು ಬುದ್ಧಿಯ ಆಚೆಗೆ ಏನು ಅರಿವಾಗುತ್ತದೆ, ಎಂಬುದರ ಅಧ್ಯಯನ ಮಾಡುತ್ತಾರೆ. ಇದಕ್ಕೆ ‘ಸೂಕ್ಷ್ಮಜ್ಞಾನದ ಪ್ರಯೋಗ ಎನ್ನುತ್ತಾರೆ.

ಅನುಭೂತಿ : ಇಲ್ಲಿ ನೀಡಿದ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಸದ್ಗುರುಗಳ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು