ಚರ್ಚ್‌ಗೆ ಪೂರೈಕೆಯಾಗುವ ಹಣದ ಬಗ್ಗೆ ತನಿಖೆ ನಡೆಸಿ !

ಸಾಯರೋ ಮಲಬಾರ್ ಚರ್ಚ್

೧. ತಮಿಳುನಾಡಿನ ಡಿಎಂಕೆ ರಾಜ್ಯದಲ್ಲಿ ಹಿಂದೂ ದೇವಸ್ಥಾನಗಳು ಅಸುರಕ್ಷಿತ !

ತಮಿಳುನಾಡಿನ ಕೊಂಡಾಪುರಮ್ ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿರುವ ಶ್ರೀ ದುರ್ಗಾದೇವತೆಯ ಮೂರ್ತಿಯನ್ನು ಅಜ್ಞಾತರು ಧ್ವಂಸಗೊಳಿಸಿದ್ದು, ಮೂರ್ತಿಯ ಮೇಲಿನ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

೨. ಚರ್ಚ್‌ಗೆ ಪೂರೈಕೆಯಾಗುವ ಹಣದ ಬಗ್ಗೆ ತನಿಖೆ ನಡೆಸಿ !

೫ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ದಂಪತಿಗಳಿಗೆ ತಿರುವನಂತಪುರಂನ (ಕೇರಳ) ಸಾಯರೋ ಮಲಬಾರ್ ಚರ್ಚ್ ಆರ್ಥಿಕ ಸಹಾಯವನ್ನು ಘೋಷಿಸಿದೆ.

೩. ಭಾರತದಲ್ಲಿ ಜಾತ್ಯತೀತವಾದಿಗಳು ಏಕೆ ಮೌನವಾಗಿದ್ದಾರೆ ?

ಪಾಕಿಸ್ತಾನದಲ್ಲಿ ಅಬ್ದುಲ್ ಸಲಾಮ್ ದಾವೂದ್ ಎಂಬಾತನು ಹಿಂದೂ ಯುವಕನಿಗೆ ‘ಅಲ್ಲಾ ಹು ಅಕ್ಬರ್ ಎಂದು ಹೇಳುವಂತೆ ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಂತರ ಪೊಲೀಸರು ಅಬ್ದುಲ್‌ನನ್ನು ಬಂಧಿಸಿದರು.

೪. ಹಿಂದೂ ಹಬ್ಬಗಳನ್ನು ಟೀಕಿಸುವವರು ಈಗೆಲ್ಲಿದ್ದಾರೆ ?

ಕೇರಳದಲ್ಲಿ, ‘ಬಕರಿ ಈದ್ ಸಮಯದಲ್ಲಿ ಕಮ್ಯುನಿಸ್ಟ್ ಸರಕಾರವು ಸಾರಿಗೆ ನಿಷೇಧದ ಅನೇಕ ನಿಯಮಗಳನ್ನು ಸಡಿಲಗೊಳಿಸಿತು ಮತ್ತು ಜುಲೈ ೨೮ ರ ಒಂದೇ ದಿನದಂದು ೨೨ ಸಾವಿರಕ್ಕೂ ಹೆಚ್ಚು ಜನರು ಕೊರೊನಾ ಮಹಾಮಾರಿ ಸೋಂಕಿಗೆ ಒಳಗಾಗಿದ್ದರೆ ೧೫೬ ಜನರು ಸಾವನ್ನಪ್ಪಿದ್ದಾರೆ.

೫. ದೇವಸ್ಥಾನಗಳ ರಕ್ಷಣೆಗೆ ಹಿಂದೂ ರಾಷ್ಟ್ರವೇ ಬೇಕು !

ಜಮ್ಮು- ಕಾಶ್ಮೀರಕ್ಕೆ ೩೭೦ ನೇ ವಿಧಿಯನ್ನು ರದ್ದುಗೊಳಿಸಿದ ಘಟನೆಗೆ ಆಗಸ್ಟ್ ೫ ರಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಮತ್ತು ಆಗಸ್ಟ್ ೧೫ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುವ ಹೊಂಚು ಹಾಕಿರುವ ಮಾಹಿತಿಯು ಪೊಲೀಸರಿಗೆ ಸಿಕ್ಕಿದೆ.

೬. ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರುವವರೆಗೆ ಹಿಂದೂಗಳ ಮತಾಂತರವನ್ನು ತಡೆಯಲು ಸಾಧ್ಯವಿಲ್ಲ !

ಗುಜರಾತದ ವಾಪಿ ಎಂಬಲ್ಲಿನ ಧರ್ಮಪುರ ಮತ್ತು ಕಪರಾಡಾದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ೨೧ ಕುಟುಂಬಗಳು ಪುನಃ ಹಿಂದೂ ಧರ್ಮಕ್ಕೆ ಮರಳಿವೆ. ಅವರನ್ನೆಲ್ಲ ೫ ವರ್ಷಗಳ ಹಿಂದೆ ಮತಾಂತರಿಸಲಾಗಿತ್ತು.

೭. ಸಾಮ್ಯವಾದಿ ಸರಕಾರ ಈದ್ ಸಮಯದಲ್ಲಿ ಇಂತಹ ಸಲಹೆಯನ್ನು ಏಕೆ ನೀಡಲಿಲ್ಲ ?

ಓಣಂ ಸಮಯದಲ್ಲಿ ಜನದಟ್ಟಣೆ ಮಾಡಬೇಡಿ, ಕಾರ್ಯಕ್ರಮಗಳ ಆಯೋಜನೆ ಮಾಡಬೇಡಿ. ಸಾಧ್ಯವಿದ್ದರೆ ಕುಟುಂಬದವರನ್ನು ಭೇಟಿಯಾಗಬೇಡಿ, ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ ಇವರು ಕೊರೋನಾದ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡಿದ್ದಾರೆ.