ಒಂದು ತಿಂಗಳ ಮಟ್ಟಿಗೆ ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನ ಅಧ್ಯಕ್ಷ ಪದವಿಯಲ್ಲಿ ಭಾರತ!

ವಿಶ್ವಸಂಸ್ಥೆಯಲ್ಲಿ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ

ನ್ಯೂಯಾರ್ಕ್(ಅಮೇರಿಕಾ) – ಭಾರತವು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿಗೆ ಒಂದು ತಿಂಗಳ ಕಾಲ ಅಧ್ಯಕ್ಷನಾಗಿದೆ. ಈ ವಿಷಯವಾಗಿ ಪಾಕ್ ವಿದೇಶಾಂಗ ಸಚಿವಾಲಯದ ಪ್ರವಕ್ತಾರ ಜಾಹಿದ್ ಆಫೀಜ ಚೌಧರಿ ಇವರು, ಭಾರತವು ಅದರ ಕಾರ್ಯಕಾಲದಲ್ಲಿ ನಿಷ್ಪಕ್ಷವಾಗಿ ಯೋಗ್ಯ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಅಪೇಕ್ಷೆಯಿದೆ. ಹಾಗೆ ಭಾರತವು ಅಧ್ಯಕ್ಷವಾಗಿರುವುದರಿಂದ ಪಾಕಗೆ ಈ ವೇದಿಕೆಯಿಂದ ಜಮ್ಮು-ಕಾಶ್ಮೀರದ ಬಗ್ಗೆ ಯಾವುದೇ ಅಂಶಗಳನ್ನು ಮಂಡಿಸಲಾಗದು ಎಂದು ಹೇಳಿದ್ದಾರೆ. (ಯಾವ ಅಂಶವು ತಪ್ಪಾಗಿದೆಯೋ, ಅದು ಎಲ್ಲಿ ಮಂಡಿಸಿದರೂ ಅದಕ್ಕೆ ಭಾರತವು ಯಾವಾಗಲೂ ವಿರೋಧ ಪಡಿಸುತ್ತಾ ಬಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ಅದು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ಈ ಅಂಶವನ್ನು ಹೇಗೆ ಮಂಡಿಸಲು ಬಿಡುವುದು? – ಸಂಪಾದಕರು)

ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ ಇವರು, ಭಾರತವು ಸಾಗರ ಸಂರಕ್ಷಣೆ, ಶಾಂತಿಯ ರಕ್ಷಣೆ ಮತ್ತು ಆತಂಕವಾದವನ್ನು ತಡೆಗಟ್ಟುವುದು ಈ ಮೂರು ಪ್ರಮುಖ ವಿಷಯಗಳಗ ಬಗ್ಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.