ಸಪ್ತರ್ಷಿಯವರು ೨೦೨೧ ರ ಗುರುಪೂರ್ಣಿಮೆಯ ಗುರುಪೂಜೆಗಾಗಿ ಇಡಲು ಹೇಳಿದ ಚಿತ್ರದ ವೈಶಿಷ್ಟ್ಯಗಳು

೧. ಗುರುಪೂಜೆಯ ವೈಶಿಷ್ಟ್ಯಪೂರ್ಣ ಚಿತ್ರ ನಿರ್ಮಿಸುವುದರ ಹಿಂದಿನ ಉದ್ದೇಶ

೧ ಅ. ಗುರುಪೂರ್ಣಿಮೆಯ ಗುರುಪೂಜೆಗಾಗಿ ಇಡಲಾಗಿದ್ದ ಚಿತ್ರದಲ್ಲಿ ಶ್ರೀರಾಮ, ಶ್ರೀಕೃಷ್ಣ ಇವರ ಚಿತ್ರ ಹಾಗೂ ಸನಾತನದ ಮೂರೂ ಗುರು ‘ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರಗಳಿಂದ ವೈಶಿಷ್ಟ್ಯಪೂರ್ಣ ಚಿತ್ರ ತಯಾರಿಸಬೇಕೆಂದು ಸಪ್ತರ್ಷಿಗಳು ಹೇಳುವುದು : ‘೧೩.೨..೨೦೨೧ ಈ ದಿನದಂದು ನಡೆದ ೧೭೦ ನೇ ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನದಲ್ಲಿ ಸಪ್ತರ್ಷಿ ಗಳು, ‘೨೦೨೧ರ ಗುರುಪೂರ್ಣಿಮೆಯ ಗುರುಪೂಜೆಗಾಗಿ ಶ್ರೀರಾಮ, ಶ್ರೀಕೃಷ್ಣ ಇವರ ಚಿತ್ರ ಹಾಗೂ ಸನಾತನದ ಮೂರೂ ಗುರು ‘ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರವನ್ನು ತೆಗೆದುಕೊಂಡು ಒಂದು ವೈಶಿಷ್ಟ್ಯಪೂರ್ಣ ಚಿತ್ರವನ್ನು ತಯಾರಿಸಬೇಕು. (ಚಿತ್ರವನ್ನು ಪಕ್ಕದಲ್ಲಿ ನೀಡಲಾಗಿದೆ.)

ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆ ಇವರ ಚಿತ್ರ ತೆಗೆದುಕೊಳ್ಳಬೇಕು. ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಪರಾತ್ಪರ ಗುರು ಡಾ. ಆಠವಲೆ ಇವರಲ್ಲಿ ಶ್ರೀರಾಮ ಹಾಗೂ ಶ್ರೀಕೃಷ್ಣ ಈ ಇಬ್ಬರ ತತ್ತ್ವವು ಒಟ್ಟಿಗೆ ಇದೆ; ಆದ್ದರಿಂದ ಗುರುದೇವರ ಛಾಯಾಚಿತ್ರದ ಮೇಲಿನ ಭಾಗದಲ್ಲಿ ಅವರ ಬಲಬದಿಯಲ್ಲಿ ಶ್ರೀಕೃಷ್ಣ ಹಾಗೂ ಎಡಬದಿಯಲ್ಲಿ ಶ್ರೀರಾಮನ ಚಿತ್ರವನ್ನು ತೆಗೆದುಕೊಳ್ಳಬೇಕು. ಶ್ರೀಕೃಷ್ಣನ ಚಿತ್ರದ ಕೆಳಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀರಾಮನ ಚಿತ್ರದ ಕೆಳಗೆ ಶ್ರೀಚಿತ್‌ಶಕ್ತಿ  (ಸೌ.) ಅಂಜಲಿ ಗಾಡಗೀಳರ ಛಾಯಾಚಿತ್ರ ತೆಗೆದುಕೊಳ್ಳಬೇಕು. ‘ಅವರಿಬ್ಬರು ಕೈ ಮುಗಿದು ಕುಳಿತಿದ್ದು ಗುರುದೇವರನ್ನೇ ನೋಡುತ್ತಿದ್ದಾರೆ, ಎಂದು ಆ ಚಿತ್ರದಲ್ಲಿ ಕಾಣಬೇಕು, ಎಂದಿದ್ದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧ ಆ. ಗುರುಪೂಜೆಗಾಗಿ ವೈಶಿಷ್ಟ್ಯಪೂರ್ಣ ಚಿತ್ರ ತಯಾರಿಸುವುದರ ಹಿಂದಿನ ಉದ್ದೇಶವನ್ನು ಸಪ್ತರ್ಷಿಗಳು ಹೇಳುವುದು : ಶ್ರೀರಾಮ ಹಾಗೂ ಶ್ರೀಕೃಷ್ಣರ ತತ್ತ್ವ ಇರುವ ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯ ಶ್ರೀರಾಮ ಹಾಗೂ ಶ್ರೀಕೃಷ್ಣ ಇವರಿಬ್ಬರ ಅವತಾರಿ ಕಾರ್ಯದಂತೆಯೇ ಇದೆ. ಪರಾತ್ಪರ ಗುರು ಡಾ. ಆಠವಲೆ ಇವರ ಕಾರ್ಯವು ಅಧಿಕಾಧಿಕ ನಿರ್ಗುಣ ಸ್ತರದಲ್ಲಿ ನಡೆಯುತ್ತಿದೆ, ಹಾಗಾಗಿ ಗುರುದೇವರ ಚಿತ್ರವನ್ನು ಗೋಲಾಕಾರದಲ್ಲಿ ತೆಗೆದುಕೊಳ್ಳಬೇಕು. ಶ್ರೀರಾಮನು ಸೂರ್ಯವಂಶದಲ್ಲಿ ಜನಿಸಿದ್ದರು. ಪರಾತ್ಪರ ಗುರು ಡಾ. ಆಠವಲೆ ಇವರು ಸಹ ಸೂರ್ಯದಶೆಯಲ್ಲಿ ಜನಿಸಿರುವುದರಿಂದ ಅವರ ಸುತ್ತಲೂ ಸೂರ್ಯನ ಪ್ರಭಾವಳಿ ಇರಬೇಕು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶ್ರೀಕೃಷ್ಣನಂತೆ ಒಂದೇ ಸ್ಥಳದಲ್ಲಿ ಇದ್ದು ಕಾರ್ಯ ಮಾಡುತ್ತಿದ್ದಾರೆ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀರಾಮನಂತೆ ಭಾರತಾದ್ಯಂತ ಪ್ರವಾಸ ಮಾಡಿ ಕಾರ್ಯ ಮಾಡುತ್ತಿದ್ದಾರೆ. ಆದ್ದರಿಂದಲೇ ನಾವು ಸಪ್ತರ್ಷಿಗಳು ಈ ಚಿತ್ರದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚಿತ್ರ ಶ್ರೀಕೃಷ್ಣನ ಚಿತ್ರದ ಕೆಳಗೆ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚಿತ್ರ ಶ್ರೀರಾಮನ ಚಿತ್ರದ ಕೆಳಗೆ ತೆಗೆದುಕೊಳ್ಳಲು ಹೇಳಿದ್ದೇವೆ.

೨. ಷೋಡಶೋಪಚಾರ ಗುರುಪೂಜೆ 

೨೩.೭.೨೦೨೧ ರಂದು ಬೆಳಿಗ್ಗೆ ಎಲ್ಲಾ ಸಾಧಕರು ಸಮಯಕ್ಕೆ ಸರಿಯಾಗಿ ಗುರುಪೂಜೆಯ ಕಾರ್ಯಕ್ರಮವನ್ನು ಮಾಡಬೇಕು. ಈ ಕಾರ್ಯಕ್ರಮದಲ್ಲಿ ಮೊದಲು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶ್ರೀರಾಮ, ಶ್ರೀಕೃಷ್ಣ ಹಾಗೂ ಸನಾತನದ ಮೂರೂ ಗುರುಗಳು ಇರುವ ವೈಶಿಷ್ಟ್ಯ ಪೂರ್ಣ ಚಿತ್ರಕ್ಕೆ ಷೋಡಶೋಪಚಾರ ಗುರುಪೂಜೆ ಮಾಡಬೇಕು. ಗುರುಪೂಜೆಯ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಶ್ವೇತವರ್ಣದ ರೇಷ್ಮೆ ಸೀರೆಯನ್ನು ಉಟ್ಟುಕೊಳ್ಳಬೇಕು.

– ಶ್ರೀ. ವಿನಾಯಕ ಶಾನಭಾಗ, ದೆಹಲಿ (೭.೭.೨೦೨೧)