ರಾಮನಾಥಿಯ (ಗೋವಾ) ಸನಾತನ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಂಗಲಹಸ್ತದಿಂದ ಗುರುಪೂಜೆ !

‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಗುರುಚರಣಗಳಲ್ಲಿ ಭಾವಪೂರ್ಣ ನಿವೇದನೆ ಸಪ್ತರ್ಷಿಗಳ ಆಜ್ಞೆಗನುಸಾರ ಶ್ರೀಕೃಷ್ಣ, ಶ್ರೀರಾಮ ಮತ್ತು ಸನಾತನದ ಗುರುಗಳ ಒಂದೆಡೆ ಇರುವ ಚಿತ್ರದ ಪೂಜೆ (ಶ್ರೀಗುರುಪೂಜೆ) ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ರಾಮನಾಥಿ (ಗೋವಾ) – ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರ ಮಂಗಲಹಸ್ತದಿಂದ ಗುರುಪೂಜೆ ನೆರವೇರಿತು. ಈ ಸಂದರ್ಭದಲ್ಲಿ ತಮಿಳುನಾಡಿನ ಚೆನ್ನೈಯ ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ‘ಭಗವಾನ ಶ್ರೀಕೃಷ್ಣ, ಪ್ರಭು ಶ್ರೀರಾಮ ಹಾಗೂ  ಪರಾತ್ಪರ ಗುರು ಡಾ. ಆಠವಲೆ ಮತ್ತು  ಇವರಿಗೆ ನಮಸ್ಕರಿಸುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಹೀಗೆ ಇವರೆಲ್ಲರೂ ಒಟ್ಟಿಗೆ ಇರುವ ವೈಶಿಷ್ಟ್ಯಪೂರ್ಣ ಚಿತ್ರಕ್ಕೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಷೋಡಶೋಪಚಾರ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ‘ಶೀಘ್ರಾತಿಶೀಘ್ರವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ‘ಎಲ್ಲ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಬೇಕು ಮತ್ತು ‘ಎಲ್ಲ ಸಂಕಟಗಳ ನಿವಾರಣೆಯಾಗಬೇಕು ಎಂದು ನಿವೇದನೆ ಮಾಡಲಾಯಿತು. ಸನಾತನ ಪುರೋಹಿತ ಪಾಠಶಾಲೆಯ ಶ್ರೀ. ಮಂದಾರ ಮಣೇರಿಕರ ಇವರು ಗುರುಪೂಜೆಯನ್ನು ವಿವರಿಸುವ ಸೇವೆಯನ್ನು ಮಾಡಿದರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಮನ್ವಯಕಿ ಕು. ತೇಜಲ ಪಾತ್ರೀಕರ ಇವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸನಾತನದ ಎಲ್ಲೆಡೆಯ ಸಾಧಕರು ಗಣಕಯಂತ್ರದ ತಂತ್ರಾಂಶದ ಮೂಲಕ ಗುರುಪೂಜೆಯ ಲಾಭವನ್ನು ಪಡೆದುಕೊಂಡರು. ಸಾಧಕರು ಈ ಪೂಜೆಯ ಮಾಧ್ಯಮದಿಂದ ಪ್ರತ್ಯಕ್ಷ ಗುರುದೇವ ಪರಾತ್ಪರ ಗುರು ಡಾ. ಆಠವಲೆಯವರನ್ನು ಪೂಜಿಸುತ್ತಿರುವ ಚೈತನ್ಯದಾಯಕ ಅನುಭೂತಿಯನ್ನು ಪಡೆದರು. ಆಪತ್ಕಾಲದಲ್ಲಿ ಮೊದಲಿನಂತೆ ಸಾಮೂಹಿಕ ಗುರುಪೂರ್ಣಿಮೆ ಉತ್ಸವವನ್ನು ಆಚರಿಸಲು ಸಾಧ್ಯವಾಗದಿದ್ದರೂ, ಶ್ರೀಗುರುಗಳ ಅನನ್ಯ ಕೃಪೆಯ ಬಗ್ಗೆ ಸಾಧಕರು ಈ ಮಂಗಲಪ್ರಸಂಗದಲ್ಲಿ ಮನಸ್ಸಿನಲ್ಲಿ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ತದನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಂಗಲಹಸ್ತದಿಂದ ‘ಧರ್ಮಕಾರ್ಯ ಹೇತು ವಿಜ್ಞಾಪನ ಆದಿ ಅರ್ಪಣೆ ಪ್ರಾಪ್ತ ಕರನಾ ಸಮಷ್ಟಿ ಸಾಧನಾ ಹೈ ! ಎಂಬ ಹಿಂದಿ ಭಾಷೆಯ ಸನಾತನದ ಗ್ರಂಥವನ್ನು ಪ್ರಕಾಶನಗೊಳಿಸಲಾಯಿತು. ತದನಂತರ ಧರ್ಮಪ್ರಚಾರಕರು ಆನ್‌ಲೈನ್ ಮಾಧ್ಯಮದಿಂದ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.

(ಈ ಸಂದರ್ಭದ ಇನ್ನಿತರ ವೈಶಿಷ್ಟ್ಯಪೂರ್ಣ ಮಾಹಿತಿಯನ್ನು ಆದಷ್ಟು ಬೇಗನೆ ಪ್ರಕಟಿಸಲಾಗುವುದು.)