‘ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸಿದರೆ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು!'(ಅಂತೆ)

ಮೇಘಾಲಯದಲ್ಲಿ ನ ಭಾಜಪ ಸರಕಾರದ ಪಶುಸಂವರ್ಧನ ಮಂತ್ರಿ ಸಾನಬೊರ ಶುಲಾಯಿಯವರ ಗೋ ವಿರೋಧಿ ಹೇಳಿಕೆ!

ಶಿಲ್ಲಾಂಗ್ (ಮೇಘಾಲಯ) – ನಾನು ಜನರಿಗೆ ಚಿಕನ್, ಮಟನ್ ಅಥವಾ ಮಾಂಸದ ಬದಲು ಗೋ ಮಾಂಸವನ್ನು ಹೆಚ್ಚು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸುವುದರಿಂದ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು. ಪ್ರಜಾಪ್ರಭುತ್ವವಿರುವ ದೇಶದಲ್ಲಿ ಪ್ರತಿಯೊಬ್ಬರಿಗೂ ಬೇಕಾದುದನ್ನು ತಿನ್ನುವ ಸ್ವಾತಂತ್ರ್ಯವಿದೆ. ಪ್ರತಿಯೊಬ್ಬರು ಮನಸ್ಸಿಗೆ ಬಂದಿದ್ದನ್ನು ತಿನ್ನಬಹುದು ಎಂಬ ಹೇಳಿಕೆಯನ್ನು ಮೇಘಾಲಯದಲ್ಲಿ ಅಧಿಕಾರದಲ್ಲಿರುವ ಭಾಜಪ ಸರಕಾರದ ಪಶು ಸಂವರ್ಧನ ಹಾಗೂ ಪಶು ವೈದ್ಯಕೀಯ ಮಂತ್ರಿ ಸೋನಬೊರ ಶುಲಾಯಿ ಯವರು ಹೇಳಿದ್ದಾರೆ. ಶುಲಾಯಿಯವರು ಕಳೆದವಾರವೇ ಕ್ಯಾಬಿನೆಟ್ ಮಂತ್ರಿ ಎಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಶುಲಾಯಿಯವರು ‘ನಾನು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ರವರೊಂದಿಗೆ ಅಸ್ಸಾಂನಲ್ಲಿ ಜಾರಿಯಾಗಲಿರುವ ಗೋಹತ್ಯೆ ಕಾನೂನಿನ ಬಗ್ಗೆ ಮಾತನಾಡುತ್ತೇನೆ. ಇದರಿಂದ ಈ ಹೊಸ ಕಾನೂನಿನಿಂದ ಮೇಘಾಲಯದಲ್ಲಿ ನ ದನಕರುಗಳ ಸಾಗಾಣಿಕೆಯಲ್ಲಿ  ಯಾವುದೇ ಪರಿಣಾಮವಾಗಲಾರದು ‘ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ನಿರ್ದಿಷ್ಟ ಪ್ರದೇಶಗಳ ಹೊರತು ಇತರ ಪ್ರದೇಶಗಳಲ್ಲಿ ಗೋಮಾಂಸದ ಖರೀದಿ ಹಾಗೂ ಮಾರಾಟವನ್ನು ನಿರ್ಬಂಧಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ‘ಎಲ್ಲಿ ಹಿಂದೂ, ಜೈನ, ಸಿಕ್ಖ್ ಸಮಾಜದ ಜನರು ವಾಸಿಸುತ್ತಾರೆಯೋ ಅಲ್ಲಿ ಗೋಮಾಂಸದ ಮಾರಾಟವನ್ನು ನಿರ್ಬಂಧಿಸಲಾಗಿದೆ. ಹಾಗೆಯೇ ದೇವಸ್ಥಾನಗಳ 5 ಕಿಲೋಮೀಟರ್ ಪರಿಸರದ ಒಳಗೆ ಗೋಮಾಂಸ ಮಾರಾಟ ಮಾಡಲು ಸಾಧ್ಯವಿಲ್ಲ. ಕೆಲವು ಧಾರ್ಮಿಕ ಹಬ್ಬಗಳ ಸಮಯದಲ್ಲಿ ರಿಯಾಯಿತಿಯನ್ನು ನೀಡಲಾಗುವುದು’ಎಂದು ನಿರ್ಣಯದಲ್ಲಿ ಹೇಳಲಾಗಿದೆ.