Tirupati Laddu Row : ಹಿಂದೂ ಧರ್ಮದ ರಕ್ಷಣೆಗಾಗಿ ‘ಸನಾತನ ಧರ್ಮರಕ್ಷಣಾ ಮಂಡಳಿ’ ಸ್ಥಾಪಿಸಿ!

  • ತಿರುಪತಿ ಪ್ರಸಾದದ ಲಡ್ಡುನಲ್ಲಿ ಕೊಬ್ಬು ಮಿಶ್ರಣ ಮಾಡಿರುವ ಪ್ರಕರಣ

  • ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ ಕಲ್ಯಾಣರ ಬೇಡಿಕೆ !

ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ ಕಲ್ಯಾಣ

ಅಮರಾವತಿ (ಆಂಧ್ರ ಪ್ರದೇಶ) – ತಿರುಪತಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಮೀನಿನ ಎಣ್ಣೆ, ದನದ ಮಾಂಸ ಮತ್ತು ಹಂದಿಯ ಕೊಬ್ಬನ್ನು ಬಳಸಿರುವುದು ಬಹಿರಂಗವಾದ ನಂತರ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹಿಂದೂ ಧರ್ಮದ ರಕ್ಷಣೆಗಾಗಿ ‘ಸನಾತನ ಧರ್ಮರಕ್ಷಣಾ ಬೋರ್ಡ್’ (ಮಂಡಳಿ) ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.

ಉಪ ಮುಖ್ಯಮಂತ್ರಿ ಪವನ ಕಲ್ಯಾಣ್ ಹೇಳಿದ್ದು:

1. ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿಮಾಂಸ ಮತ್ತು ಗೋಮಾಂಸ) ಮಿಶ್ರಣ ಮಾಡುತ್ತಿದ್ದರೆಂದು ತಿಳಿದು ನಮಗೆಲ್ಲರಿಗೂ ಬಹಳ ಆಘಾತವಾಗಿದೆ. ಅಂದಿನ ವೈ.ಎಸ್.ಆರ್. ಕಾಂಗ್ರೆಸ್ ಸರಕಾರ ಸ್ಥಾಪಿಸಿದ್ದ ‘ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ’ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ನಮ್ಮ ಸರಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಈ ಘಟನೆಯು ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಇತರ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಬೀರುತ್ತದೆ.

2. ಈಗ ಭಾರತದಲ್ಲಿನ ದೇವಸ್ಥಾನಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ವಿಚಾರ ಮಾಡಲು ರಾಷ್ಟ್ರಮಟ್ಟದಲ್ಲಿ ‘ಸನಾತನ ಧರ್ಮರಕ್ಷಣಾ ಬೋರ್ಡ’ಅನ್ನು ಸ್ಥಾಪಿಸುವ ಸಮಯ ಬಂದಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಎಲ್ಲಾ ನೀತಿ ನಿರೂಪಕರು, ಧಾರ್ಮಿಕ ಮುಖಂಡರು, ನ್ಯಾಯಾಂಗ ವ್ಯವಸ್ಥೆ, ನಾಗರಿಕರು, ಪ್ರಸಾರ ಮಾಧ್ಯಮಗಳು ಮತ್ತು ಆಯಾ ಕ್ಷೇತ್ರಗಳಲ್ಲಿನ ಎಲ್ಲರೂ ಚರ್ಚಿಸಬೇಕು. ಸನಾತನ ಧರ್ಮಕ್ಕೆ ಆಗುತ್ತಿರುವ ಅಪಮಾನವನ್ನು ತಡೆಯಲು ನಾವೆಲ್ಲರೂ ಒಗ್ಗೂಡಬೇಕು ಎಂದು ಅವರು ಕರೆ ನೀಡಿದರು.