ಗುಜರಾತಿನಲ್ಲಿ ನಡೆದ ಪರೀಕ್ಷಣೆಯ ವರದಿ ಬಹಿರಂಗ !
ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆ ಆಗಿರುವ ಮಾಹಿತಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನೀಡಿದ ನಂತರ ಆ ಲಡ್ಡುಗಳನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿರುವ ವರದಿ ಬೆಳಕಿಗೆ ಬಂದಿದೆ. ನಾಯ್ಡು ಅವರ ತೆಲುಗು ದೇಶಂ ಪಕ್ಷವು ಈ ಪರೀಕ್ಷೆಯ ವರದಿಯನ್ನು ಬಹಿರಂಗಗೊಳಿಸಿತ್ತು. ಈ ವರದಿಯ ಪ್ರಕಾರ, ಲಡ್ಡುವಿನಲ್ಲಿ ಮೀನಿನ ಎಣ್ಣೆ, ಹಂದಿ ಮತ್ತು ಗೋಮಾಂಸದ ಕೊಬ್ಬು ಉಪಯೋಗಿಸಿರುವುದು ಕಂಡು ಬಂದಿದೆ. ಈ ಬಗ್ಗೆ ದೇವಸ್ಥಾನ ಆಡಳಿತದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ತಿರುಪತಿ ದೇವಸ್ಥಾನದ ೩೦೦ ವರ್ಷಗಳ ಪ್ರಾಚೀನ ಅಡುಗೆ ಮನೆಯಲ್ಲಿ ಪ್ರತಿದಿನ ೩ ಲಕ್ಷ ೫೦ ಸಾವಿರ ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅದು ದೇವಸ್ಥಾನದ ಮುಖ್ಯ ಪ್ರಸಾದವಾಗಿದ್ದು ಸುಮಾರು ೨೦೦ ಬ್ರಾಹ್ಮಣರು ತಯಾರಿಸುತ್ತಾರೆ. ಅದನ್ನು ತಯಾರಿಸಲು ಶುದ್ಧ ಬೇಸನ, ಬೂಂದಿ, ಸಕ್ಕರೆ, ಗೋಡಂಬಿ ಮತ್ತು ಶುದ್ಧ ತುಪ್ಪವನ್ನು ಇದರಲ್ಲಿ ಉಪಯೋಗಿಸುತ್ತಾರೆ.
#TirupatiLadduCase : Gujarat Lab report shows ‘beef pig, fish oil’ in #TirupatiLaddu prasadam
The Chandra Babu Govt should register a case against those who are responsible and arrest them immediately and try them in fast track court and see to it that they are given death… pic.twitter.com/vH4fovYEb6
— Sanatan Prabhat (@SanatanPrabhat) September 20, 2024
೧. ಕಳೆದ ೫೦ ವರ್ಷಗಳಿಂದ ಕರ್ನಾಟಕ ಸಹಕಾರಿ ಹಾಲು ಒಕ್ಕೂಟದ ಮಹಾಸಂಘ ದೇವಸ್ಥಾನಕ್ಕೆ ರಿಯಾಯಿತಿ ದರದಲ್ಲಿ ತುಪ್ಪ ಪೂರೈಸುತ್ತಿತ್ತು. ಪ್ರತಿ ೬ ತಿಂಗಳಲ್ಲಿ ದೇವಸ್ಥಾನದಲ್ಲಿ ೧,೪೦೦ ಟನ್ ತುಪ್ಪವನ್ನು ಬಳಸಲಾಗುತ್ತದೆ. ಜುಲೈ ೨೦೨೩ ರಲ್ಲಿ ಕಂಪನಿಯು ಕಡಿಮೆ ಬೆಲೆಯಲ್ಲಿ ತುಪ್ಪ ಪೂರೈಕೆ ಮಾಡಲು ನಿರಾಕರಿಸಿತು. ಆಗ ಜಗನ್ಮೋಹನ ರೆಡ್ಡಿ ಸರಕಾರವು ಜುಲೈ ೨೦೨೩ ರಂದು ೫ ಕಂಪನಿಗಳಿಗೆ ತುಪ್ಪ ಪೂರೈಸುವ ಕೆಲಸ ಒಪ್ಪಿಸಿತು.
೨. ಈ ವರ್ಷ ಜುಲೈ ೧೬ ರಂದು ಗುಜರಾತಿನ ನ್ಯಾಷನಲ್ ಡೇರಿ ದೆವಲಪ್ಮೆಂಟ್ ಬೋರ್ಡಿನ ಫುಡ್ ಲ್ಯಾಬ್ ಕಾಲ್ಫ್(CALF) ನೀಡಿದ ವರದಿ ಪ್ರಕಾರ, ತಿರುಮಲದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆಯಿಂದ ತಯಾರಿಸಿರುವ ತುಪ್ಪವನ್ನು ಬಳಸಲಾಗಿದೆ. ಪರಿಶೀಲನೆಯ ಸಮಯದಲ್ಲಿ ಒಂದು ಕಂಪನಿಯ ತುಪ್ಪದಲ್ಲಿ ಕಲಬೆರಕೆ ಕಂಡು ಬಂದಿದೆ. ಜುಲೈನಲ್ಲಿ ತಿರುಮಲ ಟ್ರಸ್ಟಿನ ಅಧಿಕಾರಿ ಜೆ.ಶ್ಯಾಮಲ ರಾವ್ ಅವರು ಸಭೆ ನಡೆಸಿ ಲಡ್ಡುವಿನ ಸ್ಯಾಂಪಲ್ ಅನ್ನು ಪ್ರಯೋಗ ಶಾಲೆಗೆ ಕಳುಹಿಸಿದರು. ತೆಲುಗು ದೇಶಂ ಪಕ್ಷವು ಆ ವರದಿಯನ್ನು ಬಹಿರಂಗಪಡಿಸಿದೆ. ತುಪ್ಪದಲ್ಲಿ ಗೋಮಾಂಸ, ಮೀನಿನ ಎಣ್ಣೆ ಮತ್ತು ಹಂದಿಯ ಕೊಬ್ಬು ಬೆರೆಸಿರುವುದು ಕಂಡು ಬಂದಿದೆ.
೩. ಆಂಧ್ರಪ್ರದೇಶ ಸರಕಾರವು ಆಗಸ್ಟ್ ೨೯ ರಿಂದ ಮತ್ತೆ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ ಸಂಘಕ್ಕೆ ತುಪ್ಪ ಪೂರೈಸುವ ಕೆಲಸ ನೀಡಿದೆ. ಈ ಮಹಾಸಂಘ ನಂದಿನಿ ಬ್ರಾಂಡಿನ ದೇಶೀ ತುಪ್ಪ ಪೂರೈಸುತ್ತದೆ. ಇನ್ನೊಂದು ಕಡೆ ತುಪ್ಪದ ಗುಣಮಟ್ಟದ ಮೇಲೆ ಗಮನ ಇರಿಸಲು ದೇವಸ್ಥಾನ ಆಡಳಿತದಿಂದ ೪ ಸದಸ್ಯರ ವಿಶೇಷ ಸಮಿತಿಯನ್ನು ಸ್ಥಾಪಿಸಿದೆ.
೪. ಕಪ್ಪು ಪಟ್ಟಿಯಲ್ಲಿರುವ ಕಾಂಟ್ರಾಕ್ಟರ್ ಗಳಿಂದ ತುಪ್ವವನ್ನು ಏಕೆ ತರಿಸಲಾಗಿತ್ತು? ಎಂಬುದು ದೊಡ್ಡ ಯಕ್ಷಪ್ರಶ್ನೆಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ಈ ಬಗ್ಗೆ ಮಾಹಿತಿ ನೀಡಿದ್ದು, ಕಪ್ಪು ಪಟ್ಟಿಯಲ್ಲಿರುವ ಕಾಂಟ್ರಾಕ್ಟರ್ ರಿಂದ ೩೨೦ ರೂಪಾಯಿ ಪ್ರತಿ ಕಿಲೋ ಬೆಲೆಗೆ ಹಸುವಿನ ತುಪ್ಪ ಖರೀದಿಸಲಾಗುತ್ತಿತ್ತು. ಈಗ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ ಸಂಘದಿಂದ ೪೭೫ ರೂಪಾಯಿ ಪ್ರತಿ ಕಿಲೋ ಬೆಲೆಗೆ ತುಪ್ಪ ಖರೀದಿಸಲಾಗುತ್ತಿದೆ.
ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿ ! – ಕೇಂದ್ರ ಸಚಿವ ಗಿರಿರಾಜ ಸಿಂಹ
ಕೇಂದ್ರ ಸಚಿವ ಗಿರಿರಾಜ ಸಿಂಹ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಿರುಪತಿ ಪ್ರಸಾದದ ಪ್ರಕರಣದಲ್ಲಿ ಸಿಬಿಐ ಇಂದ ತನಿಖೆ ನಡೆಸುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿದೆ. ಹಿಂದೂ ಧರ್ಮ ನಷ್ಟ ಮಾಡುವುದಕ್ಕಾಗಿ ಈ ಷಡ್ಯಂತ್ರ ರಚಿಸಲಾಗಿತ್ತೆ? ಇದರ ತನಿಖೆ ಕೂಡ ನಡೆಯಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು. ಈ ಪ್ರಕರಣ ಕೇವಲ ಒಂದು ಹಗರಣವಲ್ಲ. ಆಂಧ್ರದ ವೈಎಸ್ಆರ್ ಸರಕಾರವು ಹಿಂದುಗಳನ್ನು ಬೃಹತ್ ಪ್ರಮಾಣದಲ್ಲಿ ಮತಾಂತರ ಮಾಡುವ ಕಾರ್ಯ ಕೂಡ ಈ ಹಿಂದೆ ಮಾಡಿತ್ತು ಎಂದು ಅವರು ಆರೋಪಿಸಿದರು.
ಸಂಪಾದಕೀಯ ನಿಲುವುಇದಕ್ಕೆ ಜವಾಬ್ದಾರರಾದವರ ವಿರುದ್ಧ ದೂರು ದಾಖಲಿಸಿ ತಕ್ಷಣ ಅವರನ್ನು ಬಂಧಿಸಿ ತ್ವರಿತ ನ್ಯಾಯಾಲಯದಲ್ಲಿ ಅವರ ಮೇಲೆ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ನೀಡಲು ಆಂಧ್ರಪ್ರದೇಶ ಸರಕಾರ ಪ್ರಯತ್ನಿಸಬೇಕು. |