
‘ಕೃತಜ್ಞತೆಯು ಶಬ್ದಗಳ ಆಚೆಗಿರುವುದರಿಂದ ಸಾಧನೆಯಲ್ಲಿ ಕೃತಜ್ಞತೆಗೆ ಬಹಳ ಮಹತ್ವವಿದೆ !
‘ಒಮ್ಮೆ ನಾವು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿರುವ ಗುರುಸೇವೆಯ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದೆವು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಮುಂದಿನ ವಿಷಯ ಹೇಳಿದರು.
‘ಸಂತ ಭಕ್ತರಾಜ ಮಹಾರಾಜರ ದೇಹತ್ಯಾಗದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರು ಗುರುತತ್ತ್ವವನ್ನು ಅರಿತುಕೊಂಡು (ಗುರುತತ್ತ್ವದ ಅನುಸಂಧಾನದಲ್ಲಿದ್ದು) ವ್ಯಾಪಕ ಕಾರ್ಯವನ್ನು ಮಾಡಿದರು. ಪ್ರತ್ಯಕ್ಷದಲ್ಲಿ ಅವರಿಗೆ ಅವರ ಗುರುಗಳ ಒಡನಾಟ ಅತ್ಯಲ್ಪಕಾಲ ಲಭಿಸಿತು. ಅದರ ತುಲನೆಯಲ್ಲಿ ನಮ್ಮೆಲ್ಲರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಒಡನಾಟ ಬಹಳಷ್ಟು ಸಿಕ್ಕಿದೆ ಮತ್ತು ನಮಗೆ ಎಷ್ಟೋ ವಿಷಯಗಳು ಕಲಿಯಲೂ ಸಿಗುತ್ತಿವೆ. ಹಾಗಾಗಿ ನಾವೆಲ್ಲ ಸಾಧಕರು ಬಹಳ ಭಾಗ್ಯವಂತರಾಗಿದ್ದೇವೆ.

ಪರಾತ್ಪರ ಗುರು ಡಾ. ಆಠವಲೆಯವರು ಅಪಾರ ಪರಿಶ್ರಮಪಟ್ಟು ತಮ್ಮ ಶರೀರದ ಪರಿವೆ ಇಲ್ಲದೇ ಸಾಧಕರಿಗಾಗಿ ಎಲ್ಲವನ್ನೂ ಮಾಡಿದ್ದಾರೆ. ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನದ ಆಶ್ರಮಗಳನ್ನು ನಿರ್ಮಿಸಿದರು. ಎಲ್ಲ ಸಾಧಕರನ್ನು ಸಿದ್ಧಗೊಳಿಸಿದರು. ಅವರು ತೆಗೆದುಕೊಂಡ ಪರಿಶ್ರಮದಿಂದಲೇ ಇಂದು ‘ಸನಾತನ ಹೆಸರಿನ ಬೀಜವು ವಟವೃಕ್ಷದ ರೂಪವನ್ನು ಧರಿಸಿದೆ. ಇಂದು ನಾವು ಈ ವೃಕ್ಷದ ಫಲಗಳನ್ನು ಆನಂದದಿಂದ ಸೇವಿಸುತ್ತಿದ್ದೇವೆ. ನಮ್ಮ ಕೊನೆಯ ಶ್ವಾಸ ಇರುವವರೆಗೆ ನಾವು ಗುರುಗಳ ಚರಣಗಳಲ್ಲಿ ಕೃತಜ್ಞತೆಯಿಂದ ಇರಬೇಕು. ನಾವೆಲ್ಲ ಸಾಧಕರು ಇಷ್ಟೇ ಮಾಡಬಹುದು.
‘ಶಬ್ದಗಳ ಅಸ್ತಿತ್ವ ಮುಗಿಯುವುದೆಂದರೆ ‘ಕೃತಜ್ಞತೆ. ನಾವು ಭಾವವನ್ನು ಶಬ್ದಗಳಲ್ಲಿ ಮಂಡಿಸಬಹುದು, ನಾವು ಅದನ್ನು ವ್ಯಕ್ತಪಡಿಸಬಹುದು; ಆದರೆ ಕೃತಜ್ಞತೆಯು ಶಬ್ದಗಳ ಆಚೆಗಿರುವುದರಿಂದ ಅದು ಭಾವಕ್ಕಿಂತಲೂ ಮೇಲಿನದ್ದಾಗಿದೆ. ಶಬ್ದಗಳ ಆಚೆಗಿನ ಕೃತಜ್ಞತೆಯ ವಿಶ್ವವು ನಮ್ಮನ್ನು ದೇವರ ತನಕ ಕರೆದೊಯ್ಯುತ್ತದೆ. ಶಬ್ದಗಳ ಆಚೆಗಿರುವ ವಿಶ್ವವು ನಿರಾಕಾರವಾಗಿರುತ್ತದೆ. ಈಶ್ವರನೂ ನಿರಾಕಾರನಾಗಿದ್ದಾನೆ. ಆದ್ದರಿಂದ ಸಾಧನೆಯಲ್ಲಿ ಕೃತಜ್ಞತೆಗೆ ಬಹಳ ಮಹತ್ವವಿದೆ – ಶ್ರೀ. ವಿನಾಯಕ ಶಾನಭಾಗ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !