ಹಿಂದೂ ಯುವತಿಯರಿಗೆ ಲವ್ ಜಿಹಾದ್‌ನ ಅಪಾಯಗಳನ್ನು ಗಮನಕ್ಕೆ ತಂದುಕೊಡುವುದರೊಂದಿಗೆ, ಅವರಿಗೆ ಧರ್ಮಶಿಕ್ಷಣವನ್ನು ನೀಡಬೇಕು – ನ್ಯಾಯವಾದಿ ವೀರೇಂದ್ರ ಇಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ್

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹವಾದ ನಂತರ ಮತಾಂತರಗೊಂಡ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ. ತದ್ವಿರುದ್ಧ ಹಿಂದೂ ಕಾಯಿದೆಗನುಸಾರ ವಿವಾಹದ ನಂತರ ಹಿಂದೂ ಮಹಿಳೆಯರಿಗೆ ಅನೇಕ ಅಧಿಕಾರಗಳಿವೆ. ಇಂತಹ ವಿಷಯಗಳನ್ನು ಲವ್ ಜಿಹಾದ್ ಪ್ರಕರಣಗಳಲ್ಲಿನ ಹಿಂದೂ ಯುವತಿಯರಿಗೆ ತಿಳಿಸಿ ಹೇಳಬೇಕು. ಹಿಂದೂ ಯುವತಿಯರು ಇಂತಹ ಅನೇಕ ಅಪಾಯಗಳನ್ನು ಗಮನದಲ್ಲಿಡಬೇಕು ಮತ್ತು ಧರ್ಮಶಿಕ್ಷಣವನ್ನು ಪಡೆದುಕೊಂಡು ಧರ್ಮಾಚರಣೆಯನ್ನು ಮಾಡಬೇಕು.