
೧. ಭೌತಿಕ ವಿಕಾಸವನ್ನು ಸಾಧಿಸುವುದೆಂದರೆ ಶಾಂತಿಯಲ್ಲ !
ಅಮೇರಿಕಾ ಅಥವಾ ಪಾಶ್ಚಾತ್ಯ ದೇಶಗಳು ಅರ್ಥಿಕ ದೃಷ್ಟಿಯಿಂದ ಎಷ್ಟೇ ಸಮೃದ್ಧವಾಗಿದ್ದರೂ, ಆ ದೇಶದ ಜನರಲ್ಲಿ ಶಾಂತಿ ಇದೆಯೇ ? ಆ ದೇಶಗಳಲ್ಲಿ ಕಳ್ಳತನ, ಹೊಡೆದಾಟ, ಸುಲಿಗೆ, ಪರಸ್ಪರರನ್ನು ಮೋಸಗೊಳಿಸುವುದು ನಿಂತಿದೆಯೇ ? ಶ್ರೀಮಂತಿಕೆ ಎಂದರೆ ಶಾಂತಿ ಅಲ್ಲ. ಶ್ರೀಮಂತ ಮನುಷ್ಯನು ಸಮಾಧಾನದಿಂದ ಮಲಗಬಹುದೇ ? ಅದೇ ರೀತಿ ಶಸ್ತ್ರಾಸ್ತ್ರಗಳಿಂದ ಶಕ್ತಿಶಾಲಿಯಾಗಿರುವುದೆಂದರೆ ಶಾಂತಿಯನ್ನು ಸಾಧಿಸುವುದಲ್ಲ; ಏಕೆಂದರೆ ಇಂತಹ ದೇಶಗಳ ಮೇಲೆ ಇತರ ದೇಶಗಳು ಆಕ್ರಮಣವನ್ನು ಮಾಡುವ ತೂಗುಗತ್ತಿಯು ಯಾವಾಗಲೂ ಅವರ ತಲೆಯ ಮೇಲೆ ತೂಗುತ್ತಿರುತ್ತದೆ .
೨. ಸಮಾನತೆಯ ನಿಲುವಿನಿಂದಲೂ ಶಾಂತಿ ಸಿಗಲಾರದು !
ಕೆಲವರಿಗೆ, ‘ಸಮಾಜದಲ್ಲಿ ಎಲ್ಲ ಜನರೊಂದಿಗೆ ಸಮಾನವಾಗಿ ನಡುವಳಿಕೆಯನ್ನು ನೀಡಿದರೆ, ಎಲ್ಲರಿಗೂ ಸಮಾನ ಅಧಿಕಾರವನ್ನು ನೀಡಿದರೆ, ಆಹಾರಧಾನ್ಯವನ್ನು ನೀಡಿದರೆ, ಜನರಲ್ಲಿ ಶಾಂತಿ ಅನಿಸುತ್ತದೆ ಸಮಾನತಾವಾದಿ, ಸಾಮ್ಯವಾದಿ (ಕಮ್ಯೂನಿಸ್ಟ್) ಜನರ ಧೋರಣೆಯು ಇದುವೇ ಆಗಿದೆ. ಎಲ್ಲ ಜನರು ಹೇಗೆ ಸಮಾನರಾಗಬಲ್ಲರು ? ಸೃಷ್ಟಿಯಲ್ಲಿ ವೈವಿಧ್ಯತೆ ಇದೆ, ಒಂದೇ ರೀತಿಯಲ್ಲಿ ಯಾವುದೂ ಇರುವುದಿಲ್ಲ. ನಮ್ಮ ಶರೀರದ ಅವಯವಗಳು ಮತ್ತು ಅವುಗಳ ಕಾರ್ಯ ಸಮಾನವಾಗಿಲ್ಲ. ಕೈಗಳು ಕೈಗಳ ಕೆಲಸವನ್ನೇ ಮಾಡುತ್ತವೆ ಮತ್ತು ಕಾಲುಗಳು ಕಾಲುಗಳ ಕೆಲಸವನ್ನೇ ಮಾಡುತ್ತವೆ. ಎಷ್ಟೇ ಹೇಳಿದರೂ, ಕಾಲುಗಳ ಕೆಲಸವನ್ನು ಕೈಗಳು ಮಾಡಲಾರವು. ಆದುದರಿಂದ ಸಮಾನತೆಯ ನಿಲುವಿನಿಂದಲೂ ಶಾಂತಿ ಸಿಗಲಾರದು. ಪ್ರತಿಯೊಬ್ಬರ ಅಧಿಕಾರವು ಅವರವರ ಅರ್ಹತೆ ಗನುಸಾರ, ಯೋಗ್ಯತೆಗನುಸಾರ ಇರುತ್ತದೆ.
೩. ಮನುಷ್ಯಜನ್ಮದ ಮಹತ್ವ
ಇಂದು ನಾವು, ಮನುಷ್ಯನ ಸೆಳೆತವು ಸಂಪೂರ್ಣ ಮಾಯೆಯ ಕಡೆಗಿರುವುದನ್ನು ನೋಡುತ್ತೇವೆ. ಹಣ, ವಾಹನ, ಬಂಗಲೆ, ಮೋಜಿನ ವಸ್ತುಗಳು, ಮಾನ-ಸನ್ಮಾನ ಇತ್ಯಾದಿಗಳನ್ನು ಪಡೆಯಲು ಮನುಷ್ಯನು ಶ್ರಮಪಡುತ್ತಿದ್ದಾನೆ. ಇದಕ್ಕಾಗಿ ಅವನು ಹೇಗೆ ಬೇಕಾದರೂ ಅಂದರೆ ಅನೈತಿಕತೆಯಿಂದಲೂ ನಡೆದುಕೊಳ್ಳುತ್ತಾನೆ ಮತ್ತು ಅವನು ತನ್ನ ಅಧೋಗತಿಯನ್ನು ಮಾಡಿಕೊಳ್ಳುತ್ತಾನೆ. ಮನುಷ್ಯಜನ್ಮವು ಇದೆಲ್ಲವನ್ನು ಪಡೆಯುವುದಕ್ಕಾಗಿ ಅಲ್ಲ, ಈಶ್ವರಪ್ರಾಪ್ತಿಗಾಗಿ, ಅಂದರೆ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡು ಈಶ್ವರನಲ್ಲಿ ವಿಲೀನವಾಗುವುದಕ್ಕಾಗಿ ಇದೆ. ಇದರಿಂದಲೇ ಅವನಿಗೆ ನಿಜವಾದ ಶಾಂತಿ ಸಿಗುವುದು. ಜೀವ, ಜಂತು, ಹುಳ, ಇರುವೆ, ಪಶು, ಪ್ರಾಣಿ, ಪಕ್ಷಿ ಇಂತಹ ೮೪ ಲಕ್ಷ ಯೋನಿಗಳಿಂದ ತಿರುಗಿದನಂತರ ಯಾವುದಾದರೊಂದು ಜೀವಕ್ಕೆ ಮನುಷ್ಯ ಜನ್ಮವು ದೊರಕುತ್ತದೆ. ಇದರ ಅರ್ಥವು ಲಕ್ಷಗಟ್ಟಲೆ ವರ್ಷಗಳು ಕಳೆದ ನಂತರ ಒಳ್ಳೆಯ ಕರ್ಮವನ್ನು ಮಾಡಲು, ಅಂದರೆ ಸತ್ಕರ್ಮಕ್ಕಾಗಿ ಮತ್ತು ಮೋಕ್ಷಪ್ರಾಪ್ತಿಗಾಗಿ ದುರ್ಲಭವಾಗಿರುವ ಮನುಷ್ಯಜನ್ಮವು ದೊರಕಿರುತ್ತದೆ. ಈ ಮನುಷ್ಯ ಜನ್ಮದ ಬೆಲೆಯು ಎಷ್ಟು ಜನರಿಗೆ ತಿಳಿದಿದೆ ?
– (ಸದ್ಗುರು) ಡಾ. ಮುಕುಲಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು