ಆದರ್ಶ ದಿನಚರಿ : ಆರೋಗ್ಯಶಾಲಿ ಕಣ್ಣುಗಳಿಗಾಗಿ !

ಡಾ. ನಿಖಿಲ್ ಮಾಳಿ

ಕಣ್ಣುಗಳನ್ನು ಆರೋಗ್ಯವಂತವಾಗಿಡಲು ದಿನವಿಡೀ ಕಣ್ಣುಗಳನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಮಾಡುವುದು ಮಹತ್ವದ್ದಾಗಿದೆ. ಕಣ್ಣುಗಳು ಆರೋಗ್ಯವಂತವಾಗಿರಲು ಆದರ್ಶ ದಿನಚರಿ ಹೇಗಿರಬೇಕು ? ಎನ್ನುವ ವಿಷಯವನ್ನು ತಿಳಿದುಕೊಳ್ಳಬೇಕು ಆಯುರ್ವೇದವು ಮೊದಲು ಇದೇ ವಿಷಯಗಳಿಗೆ ಮಹತ್ವ ನೀಡಿದೆ. ಆಧುನಿಕ ವೈದ್ಯಕೀಯ ಶಾಸ್ತ್ರದ ಜನಕ ವಿಲಿಯಮ್ ಓಸಲರ್ ಇವರು ಕೂಡ ಅದನ್ನೇ ಹೇಳುತ್ತಾರೆ – One of the first duties of the physician is to educate the masses not to take medicine. (ಅರ್ಥ : ರೋಗಿಗಳಿಗೆ ನೇರವಾಗಿ ಔಷಧಗಳನ್ನು ನೀಡುವ ಬದಲು ಅವರಿಗೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಬಗ್ಗೆ ಶಿಕ್ಷಣ ನೀಡಬೇಕು, ಇದು ಡಾಕ್ಟರರ ಮೊದಲ ಕರ್ತವ್ಯವಾಗಿದೆ.) ನಮ್ಮ ದಿನಚರಿಯಲ್ಲಿ ಈ ಮುಂದಿನಂತೆ ಬದಲಾವಣೆ ಮಾಡಿದರೆ ಕಣ್ಣುಗಳ ಆರೋಗ್ಯ ಚೆನ್ನಾಗಿರುವುದು ಎಂಬುದರಲ್ಲಿ ಸಂಶಯವಿಲ್ಲ ಹಾಗೂ ಭವಿಷ್ಯದಲ್ಲಿ ಕಾಯಿಲೆಗಳ ತೀವ್ರತೆಯೂ ಕಡಿಮೆಯಾಗುವುದು.

. ಬೆಳಿಗ್ಗೆ ಆದಷ್ಟು ಬೇಗ ಏಳಲು ಪ್ರಯತ್ನಿಸಬೇಕು. ಅದಕ್ಕಾಗಿ ಸಹಜವಾಗಿಯೇ ರಾತ್ರಿ ಬೇಗನೆ ಮಲಗಬೇಕು. ರಾತ್ರಿ ಜಾಗರಣೆ ಮಾಡಬಾರದು ಅಥವಾ ಹಗಲಿನಲ್ಲಿಯೂ ಮಲಗಬಾರದು. ಮಧ್ಯಾಹ್ನ ಊಟದ ನಂತರ ತಕ್ಷಣ ಮಲಗುವುದನ್ನು ತಡೆಯಬೇಕು.

೨. ಹಲ್ಲುಜ್ಜಿದ ನಂತರ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು ಸಿಂಪಡಿಸಬೇಕು. ಆ ಮೇಲೆ ಬಾಯಿಯಲ್ಲಿನ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತದೆ.

೩. ಸ್ನಾನ ಮಾಡುವ ಮೊದಲು ಅಭ್ಯಂಗ ಅಂದರೆ ಮೈಗೆ ಮತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು.

೪. ತಲೆಗೆ ಸ್ನಾನ ಮಾಡುವಾಗ ಸಾಧ್ಯವಿದ್ದರೆ, ತಣ್ಣೀರಿನಿಂದ ಮಾಡಬೇಕು. ತಲೆಗೆ ಬಿಸಿನೀರಿನಿಂದ ಸ್ನಾನ ಮಾಡಿದರೆ ಕಣ್ಣುಗಳಿಗೆ ಮತ್ತು ಕೂದಲಿಗೆ ಹಾನಿಯಾಗಬಹುದು.

. ವೈದ್ಯಕೀಯ ಸಲಹೆಯಲ್ಲಿ ಕಣ್ಣುಗಳಿಗೆ ಅಂಜನ ಹಚ್ಚಿಕೊಳ್ಳಬೇಕು. ಅದರಿಂದ ಕಣ್ಣುಗಳ ರಕ್ಷಣೆಯಾಗುತ್ತದೆ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಯನ್ನು ಸರಿಯಾಗಿ ಮುಚ್ಚಿಕೊಳ್ಳಬೇಕು, ಕಣ್ಣುಗಳಿಗೆ ಗೋಗಲ್ ಉಪಯೋಗಿಸಬೇಕು.

. ಕಾಲುಗಳಿಗೆ ಚಪ್ಪಲಿಗಳನ್ನು ಹಾಕಿಕೊಳ್ಳಬೇಕು. ಆದಷ್ಟು  ಪ್ಲಾಸ್ಟಿಕಿನ ಚಪ್ಪಲಿ ಅಥವಾ ಸ್ಯಾಂಡಲ್ ಉಪಯೋಗಿಸಬಾರದು.

. ದಿನದಲ್ಲಿ ೩ – ೪ ಸಲ ಸ್ವಚ್ಛನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು.

. ಹೊರಗಿನಿಂದ ಬಂದಾಗ ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

೧೦. ರಾತ್ರಿ ಮಲಗುವಾಗ ಅಂಗಾಲಿಗೆ ಎಣ್ಣೆಯನ್ನು ಹಚ್ಚಿಕೊಳ್ಳಲು ಮರೆಯಬೇಡಿ. ಅದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

ಈ ಮೇಲಿನ ಎಲ್ಲ ವಿಷಯಗಳನ್ನು ತಪ್ಪದೆ ಮಾಡಬೇಕು. ಇವುಗಳಲ್ಲಿನ ಹೆಚ್ಚುಕಡಿಮೆ ಎಲ್ಲ ವಿಷಯವೂ ಆಯುರ್ವೇದೋಕ್ತ ದಿನಚರಿಯಲ್ಲಿ ಬಂದಿವೆ. ಅವುಗಳ ಆಚರಣೆ ಮಾಡಿದರೆ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ. – ಡಾ. ನಿಖಿಲ್ ಮಾಳಿ, ಆಯುರ್ವೇದ ನೇತ್ರರೋಗ ತಜ್ಞ, ಚಿಪಳೂಣ, ರತ್ನಗಿರಿ ಜಿಲ್ಲೆ, ಮಹಾರಾಷ್ಟ್ರ.