‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಗೌಡ

‘ಕರ್ನಾಟಕ ರಾಜ್ಯದ ಸಾಧಕರಿಗೆ ಸಾಧನೆಯ ಮಾರ್ಗದರ್ಶನ ಮತ್ತು ಸಾಧನೆಯ ಯೋಗ್ಯ ದೃಷ್ಟಿಕೋನವನ್ನು ನೀಡಿ ಸಾಧನೆಯಲ್ಲಿ ಮುಂದೆ ಕರೆದೊಯ್ಯಲು ಪೂ. ರಮಾನಂದ ಗೌಡ ಇವರು ಅನೇಕ ಶಿಬಿರಗಳನ್ನು ಆಯೋಜಿಸಿ ಸಾಧಕರಿಗೆ ಪ್ರೋತ್ಸಾಹವನ್ನು ನೀಡಿದರು ಮತ್ತು ‘ಸಾಧಕರ ಸಾಧನೆಯಾಗಬೇಕು, ಎಂದು ತೀವ್ರ ತಳಮಳದಿಂದ ಪ್ರಯತ್ನಿಸಿ ಅನೇಕ ಸಾಧಕರನ್ನು ತಯಾರಿಸಿದರು. ಅದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ಮತ್ತು ಅದರಿಂದ ಗಮನಕ್ಕೆ ಬಂದ ಅವರ ಗುರುಕಾರ್ಯದ ತಳಮಳ ಮತ್ತು ಸಾಧಕರ ಬಗ್ಗೆ ಅವರಲ್ಲಿರುವ ವಾತ್ಸಲ್ಯಭಾವ ಇತ್ಯಾದಿ ಅನೇಕ ಅಂಶಗಳು ಕಲಿಯಲು ಸಿಕ್ಕವು. ಜ್ಯೇಷ್ಠ ಶುಕ್ಲ ಪಕ್ಷ ನವಮಿ (೧೯.೬.೨೦೨೧) ರಂದು ಪೂ. ರಮಾನಂದ ಅಣ್ಣನವರ ೪೫ ನೇ ಹುಟ್ಟುಹಬ್ಬವಿತ್ತು. ತನ್ನಿಮಿತ್ತ ಅವರು ಸಾಧಕರನ್ನು ತಯಾರಿಸಲು ಮಾಡಿರುವ ಪ್ರಯತ್ನಗಳನ್ನು ಮುಂದೆ ನೀಡುತ್ತಿದ್ದೇವೆ. ೨೧ ಜೂನ್ ೨೦೨೧ ರಂದು ನಾವು ‘ಪೂ. ರಮಾನಂದ ಗೌಡ ಇವರು ವಿವಿಧ ವಿಷಯಗಳನ್ನು ಅನುಸರಿಸಿ ಆಯೋಜಿಸಿದ ಶಿಬಿರಗಳು ಈ ವಿಷಯದ ಲೇಖನವನ್ನು ನೋಡಿದೆವು. ಇಂದು ಈ ಲೇಖನ ಮಾಲಿಕೆಯ ಅಂತಿಮ ಭಾಗವನ್ನು ನೋಡೋಣ.  

(ಭಾಗ ೩)

ಪರಾತ್ಪರ ಗುರು ಡಾ. ಆಠವಲೆ

ದೇಶ-ವಿದೇಶಗಳಲ್ಲಿ ಎಲ್ಲ ಧರ್ಮಪ್ರಚಾರಕರು ಪೂ ರಮಾನಂದ ಗೌಡ ಇವರು ಹೇಳಿದ ಮಾರ್ಗದರ್ಶನದಂತೆ ಧರ್ಮಪ್ರಚಾರದ ಕಾರ್ಯ ಮಾಡಿದರೆ ಎಲ್ಲೆಡೆ ಅತ್ಯಂತ ವೇಗವಾಗಿ ಕಾರ್ಯವಾಗುವುದು !

– ಪರಾತ್ಪರ ಗುರು ಡಾ. ಆಠವಲೆ

೩ ಉ. ರಾಜ್ಯಮಟ್ಟದ ಯುವ ಸಾಧನಾ ಶಿಬಿರ

೩ ಉ ೧. ಮಂಗಳೂರು ಸೇವಾಕೇಂದ್ರದಲ್ಲಿನ ಚೈತನ್ಯದಿಂದ ಶಿಬಿರದಲ್ಲಿನ ಯುವ ಸಾಧಕರಲ್ಲಿ ಬಹಳಷ್ಟು ಬದಲಾವಣೆಗಳಾಗಿ ಅವರಿಗೆ ಸಾಧನೆಯ ಮಹತ್ವ ಮನದಟ್ಟಾಗುವುದು : ಕರ್ನಾಟಕದಲ್ಲಿನ ಜಿಲ್ಲೆಗಳಿಂದ ೧೫ ರಿಂದ ೨೫ ವರ್ಷ ವಯಸ್ಸಿನ ಯುವ ಸಾಧಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಮಂಗಳೂರು ಸೇವಾಕೇಂದ್ರದ ಚೈತನ್ಯ ಮತ್ತು ಸಂತರ ನಾಮಜಪಾದಿ ಉಪಾಯಗಳಿಂದ ಎಲ್ಲರಿಗೂ ಒಳ್ಳೆಯದೆನಿಸುತ್ತಿತ್ತು. ಸೇವಾಕೇಂದ್ರದ ಚೈತನ್ಯದಿಂದ ಅವರಲ್ಲಿ ಬಹಳಷ್ಟು ಬದಲಾವಣೆಯಾಯಿತು. ಶಿಬಿರದಲ್ಲಿ ‘ತಮ್ಮ ಜೀವನದಲ್ಲಿನ ಸಾಧನೆಯ ಮಹತ್ವ ಮತ್ತು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವವನ್ನು ಹೇಳಿದಾಗ, ಅವರೆಲ್ಲರಿಗೂ ಅದು ಬಹಳ ಇಷ್ಟವಾಯಿತು ಮತ್ತು ಅವರ ಉತ್ಸಾಹ ವೃದ್ಧಿಸಿತು.

೩ ಉ ೨. ಫಲಶೃತಿ

. ಕೇವಲ ೩ ದಿನಗಳ ಶಿಬಿರದಲ್ಲಿ ಎಲ್ಲರ ಮನಃಸ್ಥಿತಿಯಲ್ಲಿ ಬದಲಾವಣೆಯಾಗಿತ್ತು. ಅವರೆಲ್ಲರಿಗೂ ಶಿಬಿರದಿಂದ ತಮ್ಮಲ್ಲಿ ಬದಲಾವಣೆಯಾಗಿರುವುದರ ಅರಿವಾಯಿತು. ಪೂ. ಅಣ್ಣನವರು ಎಲ್ಲ ಯುವ ಶಿಬಿರಾರ್ಥಿಗಳೊಂದಿಗೆ ವೈಯಕ್ತಿಕ ಮಾತನಾಡಲು ಸಮಯವನ್ನು ನೀಡಿದರು. ಇದರಿಂದ ಎಲ್ಲ ಶಿಬಿರಾರ್ಥಿಗಳ ಮನಃಸ್ಥಿತಿ ಸಂಪೂರ್ಣ ಬದಲಾಯಿತು. ಆ ಸಮಯದಲ್ಲಿ ‘ಜೀವನದಲ್ಲಿ ಆದ್ಯತೆ ನೀಡಿ ಸಾಧನೆಯನ್ನು ಮಾಡುತ್ತೇವೆ ಎಂದು ಅವರೆಲ್ಲರೂ ಹೇಳಿದರು. ಶಿಬಿರದಿಂದ ಎಲ್ಲರಿಗೂ ಪ್ರೋತ್ಸಾಹ ಮತ್ತು ಪ್ರೇರಣೆ ದೊರಕಿತು.

. ಎಲ್ಲರೂ ಪೂ. ಅಣ್ಣನವರೊಂದಿಗೆ ಮಾತನಾಡುವಾಗ ‘ಎಷ್ಟು ಸಮಯ ಮಾತನಾಡಿದೆವು ? ಹೇಗೆ ಸಮಯ ಕಳೆಯಿತು ? ಎಂದು ಗೊತ್ತಾಗಲಿಲ್ಲ, ಎಂದು ಹೇಳಿದರು.

. ಕೆಲವು ಜನರು ಸಂರಚನೆಯ (ಡಿ.ಟಿ.ಪಿ.) ಶಿಬಿರಕ್ಕಾಗಿ ಬಂದರು ಮತ್ತು ಅವರು ಮುಂದಿನ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಕೆಲವು ಸಾಧಕರು ‘ಸೋಶಿಯಲ್ ಮೀಡಿಯಾದ ಸೇವೆಯನ್ನು ಪ್ರಾರಂಭಿಸಿದರು.

. ‘ಮನೆಯಲ್ಲಿ ಸಂಬಂಧಿಕರ ವಿರೋಧವಿದೆ, ಇದರಿಂದ ಪೂರ್ಣವೇಳೆ ಸಾಧನೆಯನ್ನು ಮಾಡುವ ಇಚ್ಛೆಯಿದ್ದರೂ ಮಾಡಲು ಸಾಧ್ಯವಾಗುವುದಿಲ್ಲ, ಎಂದು ಕೆಲವು ಜನರು ಹೇಳಿದರು. ಅವರು ಹೇಳುವಾಗ ಅವರಿಗೆ ಅಳು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಓರ್ವ ಸಾಧಕಿಯು ತನ್ನ ತಂದೆಯನ್ನು ಕರೆದುಕೊಂಡು ಬಂದು, ಅವರ ಎದುರಿಗೆ ಅವಳು ‘ಪೂರ್ಣ ವೇಳೆ ಸಾಧನೆ ಮಾಡುವ ಇಚ್ಛೆಯಿದೆ ಎಂದು ಹೇಳಿದಳು.

೩ ಊ. ವಿತರಕರ ಸಾಧನಾ ಶಿಬಿರ

೩ ಊ ೧. ವ್ಯಾವಹಾರಿಕ ದೃಷ್ಟಿಯಿಂದ ವಿತರಣೆಯನ್ನು ಮಾಡದೇ ‘ಸಾಧನೆಯ ದೃಷ್ಟಿಯಿಂದ ವಿತರಕ ಸಾಧಕರು ಹೇಗೆ ಪ್ರಯತ್ನಿಸಬೇಕು ?, ಎನ್ನುವ ವಿಷಯದಲ್ಲಿ ಯೋಗ್ಯ ಮಾರ್ಗದರ್ಶನವನ್ನು ಮಾಡಲು ಶಿಬಿರವನ್ನು ಆಯೋಜಿಸುವುದು : ವಿತರಕರೆಂದು ಸೇವೆಯನ್ನು ಮಾಡುವ ಸಾಧಕರಲ್ಲಿ ವ್ಯಾವಹಾರಿಕ ವಿಚಾರಗಳು ನಿರ್ಮಾಣ ವಾಗಿದ್ದವು. ಇದರಿಂದ ಅವರ ಸಾಧನೆಯ ಪ್ರಯತ್ನಗಳು ಕಡಿಮೆಯಾಗಿದ್ದವು. ಅವರೆಲ್ಲರಿಗೂ ‘ಸನಾತನ ಸಂಸ್ಥೆಯ ಕಾರ್ಯಪದ್ಧತಿಯ ಪಾಲನೆಯನ್ನು ಮಾಡಿದರೆ ಹೇಗೆ ಸಾಧನೆ ಆಗುತ್ತದೆ ? ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ? ನಾವು ಇನ್ನೂ ಏನು ಮಾಡಬಹುದು ? ಸಾಧನೆಯೇ ವಿತರಣೆ ಸೇವೆಯ ಉದ್ದೇಶವಾಗಿರಬೇಕು, ಎನ್ನುವ ಮಾರ್ಗದರ್ಶನವನ್ನು ನೀಡಲು ವಿತರಕರ ಸಾಧನಾ ಶಿಬಿರದ ಆಯೋಜನೆಯನ್ನು ಮಾಡಿದರು.

೩ ಊ ೨. ವಿತರಕರ ಅಡಚಣೆಗಳನ್ನು ಕೇಳಿಕೊಂಡು ಅವರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಮಹತ್ವವನ್ನು ಹೇಳುವುದು : ಈ ಶಿಬಿರದಲ್ಲಿ ಭಾಗವಹಿಸಿದ ವಿತರಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡು ಅವರಿಗೆ ಪೂ. ಅಣ್ಣನವರು ಮಾರ್ಗದರ್ಶನ ಮಾಡಿದರು. ‘ಜಿಲ್ಲೆಯಲ್ಲಿ ಅವರಿಂದ ಯಾವ ತಪ್ಪುಗಳು ಆಗುತ್ತಿವೆ ? ಯಾವ ಅಡಚಣೆಗಳು ಬರುತ್ತಿವೆ ? ಮುಖ್ಯ ಕಾರ್ಯಾಲಯದಿಂದ ಯಾವ ಅಡಚಣೆಗಳು ಬರುತ್ತಿವೆ ? ಮುಖ್ಯ ಕಾರ್ಯಾಲಯಕ್ಕೆ ಜಿಲ್ಲೆಯ ವಿತರಕರಿಂದ ಯಾವ ಅಡಚಣೆಗಳು ಬರುತ್ತವೆ ?, ಈ ವಿಷಯದಲ್ಲಿ ಪೂ. ಅಣ್ಣನವರು ವಿತರಕರನ್ನು ವಿಚಾರಿಸಿದರು ಮತ್ತು ‘ನಾವು ಇನ್ನೂ ಉತ್ತಮ ರೀತಿಯಲ್ಲಿ ಏನು ಮಾಡಬಹುದು ?, ಎನ್ನುವ ವಿಷಯವನ್ನು ಅವರಿಂದ ಕೇಳಿ ತಿಳಿದುಕೊಂಡರು.

ಈ ಶಿಬಿರದಲ್ಲಿ ಪೂ. ಅಣ್ಣನವರು ‘ವಿತರಣೆಯ ಸೇವೆಯನ್ನು ಸಾಧನೆಯೆಂದು ಹೇಗೆ ಮಾಡಬೇಕು ? ತಮ್ಮ ಸ್ವಭಾವದೋಷ ಮತ್ತು ಅಹಂನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ? ನಾವು ಈ ಸೇವೆಯಿಂದಲೂ ಯಾವ ರೀತಿ ಸಂಪೂರ್ಣ ಸಮರ್ಪಿತರಾಗಬಹುದು ? ಎನ್ನುವ ವಿಷಯದಲ್ಲಿ ಮಾರ್ಗದರ್ಶನ ಮಾಡಿದರು.

೩ ಊ ೩. ಫಲಶೃತಿ

ಅ. ‘ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?, ಎಂಬುದು ವಿತರಕರಿಗೆ ತಿಳಿಯಿತು. ಎಲ್ಲರೂ ‘ಈ ವಿತರಣೆ ಸೇವೆಯನ್ನು ಸಾಧನೆಯೆಂದು ಮಾಡಿ ಗುರುಕಾರ್ಯದಲ್ಲಿ ಸಹಭಾಗಿಗಳಾಗಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಆ. ಮೊದಲು ಕೆಲವು ವಿತರಕರು ಸಮಷ್ಟಿ ಸೇವೆಗಾಗಿ ಸಮಯ ವನ್ನು ನೀಡುತ್ತಿರಲಿಲ್ಲ. ಈಗ ಅವರಲ್ಲಿನ ಕೆಲವು ಜನರು ಸೇವೆಗಾಗಿ ಸಮಯವನ್ನು ನೀಡಲು ಸಿದ್ಧರಾದರು.

ಇ. ಇವರೆಲ್ಲರ ವ್ಯಷ್ಟಿ ಸಾಧನೆಯ ವರದಿಗಾಗಿ ಗುಂಪುಗಳನ್ನು ರಚಿಸಲಾಗಿದ್ದು, ಆ ಗುಂಪಿನಲ್ಲಿ ಅವರು ವರದಿಯನ್ನು ನೀಡಲು ಪ್ರಾರಂಭಿಸಿದ್ದಾರೆ.

೩ ಎ. ಜಾಹೀರಾತು ಸಂರಚನಾ ಶಿಬಿರ

೩ ಎ ೧. ಸಂರಚನೆಯನ್ನು ಮಾಡಲು ಒಂದು ಸಕ್ಷಮ ಗುಂಪನ್ನು ತಯಾರಿಸಲು ಶಿಬಿರದ ಆಯೋಜನೆಯನ್ನು ಮಾಡುವುದು : ಕರ್ನಾಟಕ ರಾಜ್ಯದಲ್ಲಿ ಜಾಹೀರಾತುಗಳ ಸಂರಚನೆಯನ್ನು ಮಾಡುವ ಸಾಧಕರು ಕಡಿಮೆಯಿದ್ದರು. ಸಂರಚನೆ ಮಾಡುವ ಸಾಧಕರಿಗೆ ಮುಂದಿನ ಹಂತದ ಮಾಹಿತಿ ಇರಲಿಲ್ಲ. ಸಂರಚನೆಯನ್ನು ಮಾಡಲು ಒಂದು ಸಕ್ಷಮ ಗುಂಪನ್ನು ತಯಾರಿಸಲು ಈ ಶಿಬಿರದ ಆಯೋಜನೆಯನ್ನು ಮಾಡಲಾಗಿತ್ತು. ಈ ಶಿಬಿರದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಅಂತಿಮ ಸಂರಚನೆ ಮಾಡುವ ಸಾಧಕರ ೩ ಗುಂಪುಗಳನ್ನು ಮಾಡಲಾಯಿತು ಮತ್ತು ಅವರಿಗೆ ಕಲಿಸಲು ಪ್ರಯತ್ನಿಸಲಾಯಿತು. ಅವರಿಗೆ ಕಲಿಸಲು ಮುಖ್ಯ ಕಾರ್ಯಾಲಯದಿಂದ ಸಂರಚನೆ ಮಾಡುವ ಒಬ್ಬ ಸಾಧಕರನ್ನು ಕರೆಸಲಾಗಿತ್ತು.

೩ ಎ ೨. ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡು ‘ಸೇವೆಯನ್ನು ಮಾಡುವಾಗ ಸಾಧನೆಯ ದೃಷ್ಟಿಯಿಂದ ಯಾವ ಪ್ರಯತ್ನಗಳನ್ನು ಮಾಡಬೇಕು ?, ಎಂಬುದನ್ನು ಹೇಳುವುದು : ಇದರೊಂದಿಗೆ ಸಂರಚನೆಯನ್ನು ಕಲಿಯಲು ಬಂದಂತಹ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಂಡು, ಅವರಿಗೆ ‘ಈ ಸೇವೆಯನ್ನು ಸಾಧನೆ ಎಂದು ಹೇಗೆ ಮಾಡಬೇಕು ? ಹೇಗೆ ಭಾವವನ್ನು ಇಟ್ಟುಕೊಳ್ಳಬೇಕು ? ತಪ್ಪುಗಳನ್ನು ಹೇಗೆ ಕಡಿಮೆ ಮಾಡಬೇಕು ? ಸಾಧನೆಯ ದೃಷ್ಟಿಯಿಂದ ಯಾವ ಪ್ರಯತ್ನಗಳನ್ನು ಮಾಡಬೇಕು ? ಎಂಬುದನ್ನು ಹೇಳಿದರು. ಇದರಿಂದ ಎಲ್ಲರಿಗೂ ಪ್ರೋತ್ಸಾಹ ಸಿಕ್ಕಿತು ಮತ್ತು ಗಾಂಭೀರ್ಯ ಹೆಚ್ಚಾಯಿತು.

೩ ಎ ೩ ಫಲಶೃತಿ

ಅ. ೩ ಸಾಧಕರು ಈ ಸೇವೆಯಲ್ಲಿ ಸಕ್ಷಮರಾದರು, ಈಗ ಅವರು ಇತರರಿಗೆ ಕಲಿಸಲು ತಯಾರಾಗಿದ್ದಾರೆ.

ಆ. ಈಗ ಜಾಹೀರಾತುಗಳ ಸಂರಚನೆ ಮಾಡುವ ಸಾಧಕರ ಸತ್ಸಂಗವುಪ್ರತಿ ವಾರ ನಡೆಯುತ್ತಿದೆ. ಅವರಲ್ಲಿ ಗಾಂಭೀರ್ಯ ಹೆಚ್ಚಾಗಿದ್ದು ಸಾಧನೆಯ ಒಳ್ಳೆಯ ಪ್ರಯತ್ನವೂ ಪ್ರಾರಂಭವಾಗಿದೆ.

೪. ಕೇವಲ ಶಿಬಿರಗಳನ್ನು ತೆಗೆದುಕೊಂಡು ಅಲ್ಲಿಗೆ ಮುಗಿಸದೆ ಆಗಾಗ ಎಲ್ಲ ಸಾಧಕರ ವರದಿಯನ್ನು ನೋಡಿ ಅವರಿಗೆ ಮಾರ್ಗದರ್ಶನ ಮಾಡುವುದು

ಸಾಧಕರ ಕಾರ್ಯದ ವರದಿ, ವ್ಯಷ್ಟಿ ಸಾಧನೆಯ ವರದಿ ಮತ್ತು ಸಮಷ್ಟಿ ಸೇವೆಯಲ್ಲಿ ಆಗುವ ತಪ್ಪುಗಳನ್ನು ಹಾಕಲು ಒಂದು ಕೋಷ್ಟಕವನ್ನು ತಯಾರಿಸಲಾಗಿದೆ. ಅದರಲ್ಲಿ ಬಹಳಷ್ಟು ಸಾಧಕರು ಪ್ರತಿದಿನ ಅವರಿಂದ ಆಗಿರುವ ತಪ್ಪುಗಳು ಮತ್ತು ಅವರ ಸಾಧನೆಯ ವರದಿಯನ್ನು ಹಾಕುತ್ತಿದ್ದಾರೆ. ಈ ಕೋಷ್ಟಕವನ್ನು ಪೂ. ಅಣ್ಣನವರು ಪ್ರತಿದಿನ ಪರಿಶೀಲಿಸುತ್ತಾರೆ ಮತ್ತು ‘ಸಾಧಕರು ಎಲ್ಲಿ ಕಡಿಮೆ ಬೀಳುತ್ತಿದ್ದಾರೆ ? ಇನ್ನೂ ಏನು ಮಾಡಬೇಕು ? ಎಂದು ಅಧ್ಯಯನ ಮಾಡಿ ಸಾಧಕರಿಗೆ ಅದರ ಅರಿವು ಮಾಡಿಕೊಡುತ್ತಾರೆ, ಹಾಗೆಯೇ ಯಾವ ಸಾಧಕರು ವ್ಯಷ್ಟಿ ಸಾಧನೆಯ ವರದಿಯನ್ನು ಹಾಕುವುದಿಲ್ಲವೋ, ಆ ಸಾಧಕರಿಗೆ ಅದರ ಅರಿವು ಮಾಡಿಕೊಡುತ್ತಾರೆ.

೫. ಸಾಧಕರ ಸಾಧನೆಯಲ್ಲಿ ಸಾತತ್ಯವಿರಲು ಮಾಡಿದ ಪ್ರಯತ್ನ

೫ ಅ.‘ಸಾಧನೆ ಮತ್ತು ಸೇವೆಯನ್ನು ಮಾಡುವಾಗ ಬರುವ ಅಡಚಣೆಗಳು, ಅವುಗಳ ಮೇಲಿನ ಉಪಾಯಗಳು ಮತ್ತು ಮುಂದಿನ ವಾರದ ಧ್ಯೇಯ, ಈ ರೀತಿ ವಾರಕ್ಕೊಮ್ಮೆ ಆಯೋಜಿದ ಸತ್ಸಂಗದಲ್ಲಿ ವಿಷಯ ಗಳನ್ನು ತೆಗೆದುಕೊಂಡಿದ್ದರಿಂದ ಸಾಧಕರ ಸಾಧನೆಯ ಪ್ರಯತ್ನದಲ್ಲಿ ಹೆಚ್ಚಳವಾಗುವುದು : ‘ಜವಾಬ್ದಾರ ಸಾಧಕರ ಸಾಧನೆಯಲ್ಲಿ ಸಾತತ್ಯ ಇರಬೇಕೆಂದು, ವಾರದಲ್ಲಿ ಒಂದು ಸಲ ೩ ಗಂಟೆಗಳ ಸತ್ಸಂಗವನ್ನು ಆಯೋಜಿಸಲಾಗುತ್ತದೆ. ಈ ಸತ್ಸಂಗಗಳಲ್ಲಿ ಎಲ್ಲರ ವ್ಯಷ್ಟಿ ಸಾಧನೆಯ ವರದಿ, ಕಾರ್ಯದ ವರದಿ, ‘ಸಾಧನೆ ಮತ್ತು ಸೇವೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ? ಸಾಧನೆ ಮತ್ತು ಸೇವೆಯಲ್ಲಿ ಯಾವ ಅಡಚಣೆಗಳು ಬರುತ್ತವೆ ?, ಈ ವಿಷಯಗಳ ಕುರಿತು ಚರ್ಚಿಸಿ ‘ಅವುಗಳಲ್ಲಿ ಎಲ್ಲಿ ಬದಲಾವಣೆ ಮಾಡಬೇಕು ?, ಅಲ್ಲದೇ ‘ಮುಂದಿನ ವಾರ ಏನು ಪ್ರಯತ್ನ ಮಾಡುವಿರಿ ?, ಈ ರೀತಿ ವಿಷಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಸಾಧನೆಯಲ್ಲಿ ಸಾತತ್ಯ ಉಳಿಯಲು ‘ಪ್ರತಿಯೊಬ್ಬರಿಗೂ ಮುಂದಿನ ವಾರದಲ್ಲಿ ಯಾವ ಧ್ಯೇಯವನ್ನು ಇಟ್ಟುಕೊಳ್ಳುವಿರಿ ?, ಎಂದು ಕೇಳಿ ಆ ರೀತಿ ಪ್ರಯತ್ನಿಸಲು ಹೇಳುತ್ತಾರೆ. ಸಾಧನೆಯಲ್ಲಿ ಸಾತತ್ಯವನ್ನಿಟ್ಟುಕೊಂಡು ಪ್ರಯತ್ನಿಸಿದ್ದರಿಂದ ಎಲ್ಲ ಸಾಧಕರ ಮನಸ್ಸಿನಲ್ಲಿ ‘ಪ್ರತಿಯೊಂದು ಸೇವೆಗೆ ನಾನೂ ಜವಾಬ್ದಾರನಾಗಿದ್ದೇನೆ, ಎಂಬ ವಿಚಾರ ನಿರ್ಮಾಣವಾಯಿತು ಮತ್ತು ಎಲ್ಲರ ಕೃತಜ್ಞತಾಭಾವ ಬಹಳ ಹೆಚ್ಚಾಯಿತು.

೫ ಆ.‘ಎಲ್ಲ ಸಾಧಕರ ವ್ಯಷ್ಟಿ ವರದಿಯನ್ನು ವಾರದಲ್ಲಿ ೨ ಸಲ ತೆಗೆದುಕೊಳ್ಳುವುದು ಮತ್ತು ಪ್ರತಿದಿನ ತಮ್ಮ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ಗುಂಪಿನಲ್ಲಿ ಕೊಡುವುದು, ಹೀಗೆ ಪ್ರಾರಂಭಿಸಿದ್ದರಿಂದ ಎಲ್ಲರ ವ್ಯಷ್ಟಿ ಸಾಧನೆ ನಿಯಮಿತವಾಗಿ ಆಗತೊಡಗಿತು : ಈಗ ಎಲ್ಲ ಜವಾಬ್ದಾರ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಸಾಮೂಹಿಕ ರೀತಿಯಲ್ಲಿ ವಾರದಲ್ಲಿ ೨ ಸಲ ಬೆಳಗ್ಗಿನ ಸಮಯ ದಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಎಲ್ಲ ಸಾಧಕರ ವ್ಯಷ್ಟಿ ಸಾಧನೆಯ ಪ್ರಯತ್ನ ಚೆನ್ನಾಗಿ ಆಗುತ್ತಿದೆ ಮತ್ತು ಎಲ್ಲರಲ್ಲಿಯೂ ಈ ಬಗ್ಗೆ ಗಾಂಭೀರ್ಯ ನಿರ್ಮಾಣವಾಗಿದೆ. ‘ಎಲ್ಲ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ವಾರದಲ್ಲಿ ೨ ಸಲ ತೆಗೆದುಕೊಳ್ಳುವುದು ಮತ್ತು ಪ್ರತಿದಿನ ತಮ್ಮ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ಗುಂಪಿನಲ್ಲಿ ನೀಡುವುದು, ಹೀಗೆ ಪ್ರಾರಂಭಿಸಿದ್ದರಿಂದ  ಎಲ್ಲರ ವ್ಯಷ್ಟಿ ಸಾಧನೆ ನಿಯಮಿತವಾಗಿ ಪ್ರಾರಂಭವಾಯಿತು. ಇದರಿಂದ ‘ವ್ಯಷ್ಟಿ ಸಾಧನೆ ಚೆನ್ನಾಗಿ ಆದರೆ ಮಾತ್ರ, ಸಮಷ್ಟಿಗೆ ಒಳ್ಳೆಯ ದಿಶೆಯನ್ನು ನೀಡಬಹುದು, ಎಂದು ಎಲ್ಲ ಸಾಧಕರ ಮನಸ್ಸಿನ ಮೇಲೆ ಮೂಡಿದ್ದರಿಂದ ಎಲ್ಲರಲ್ಲಿಯೂ ಈ ಬದಲಾವಣೆಯಾಯಿತು. ಎಲ್ಲ ಸಾಧಕರ ಸಕಾರಾತ್ಮಕತೆಯೂ ಹೆಚ್ಚಾಯಿತು.

೬. ಧರ್ಮಶಿಕ್ಷಣವರ್ಗಗಳು ಮತ್ತು ಸತ್ಸಂಗಗಳ ಫಲಶೃತಿಯನ್ನು ಹೆಚ್ಚಿಸಲು ಮಾಡಿದ ಪ್ರಯತ್ನ

೬ ಅ. ಧರ್ಮಶಿಕ್ಷಣವರ್ಗಗಳಲ್ಲಿ ತೆಗೆದುಕೊಳ್ಳಬೇಕಾದ ವಿಷಯವನ್ನು ತಯಾರಿಸಿ ಕೊಡುವುದು : ರಾಜ್ಯದಲ್ಲಿ ಧರ್ಮಶಿಕ್ಷಣವರ್ಗ ಮತ್ತು ಸತ್ಸಂಗಗಳು ವ್ಯವಸ್ಥಿತವಾಗಿ ನಡೆಯಲು ಮತ್ತು ಧರ್ಮಶಿಕ್ಷಣವರ್ಗ ಮತ್ತು ಸತ್ಸಂಗ ತೆಗೆದುಕೊಳ್ಳ್ಳುವ ಸಾಧಕರಿಗೆ ವಿಷಯವನ್ನು ಸಿದ್ಧಪಡಿಸಿಕೊಡಲು ೪ ಜನ ಸಾಧಕರ ಒಂದು ಗುಂಪನ್ನು ಮಾಡಲಾಯಿತು. ಈ ೪ ಜನ ಸಾಧಕರು ೧೫ ದಿನಗಳಿಗೊಮ್ಮೆ ಒಟ್ಟಿಗೆ ಬಂದು ಧರ್ಮಶಿಕ್ಷಣವರ್ಗ ಮತ್ತು ಸತ್ಸಂಗಗಳಲ್ಲಿ ತೆಗೆದುಕೊಳ್ಳ ಬೇಕಾದ ವಿಷಯಗಳ ಸಿದ್ಧತೆಯನ್ನು ಮಾಡಿ, ಆ ವಿಷಯಗಳ ಸಂಹಿತೆ (ಸ್ಕ್ರಿಪ್ಟ)ಯನ್ನು ಸಿದ್ಧ ಪಡಿಸಲು ಹೇಳಿದರು.

೬ ಆ. ಧರ್ಮಶಿಕ್ಷಣವರ್ಗ ಅಥವಾ ಸತ್ಸಂಗ ತೆಗೆದುಕೊಳ್ಳುವ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ನಿಯೋಜನೆಯನ್ನು ಮಾಡುವುದು : ಅಭ್ಯಾಸವರ್ಗ ತೆಗೆದುಕೊಳ್ಳುವ ಸಾಧಕರ ‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ನಿಯೋಜನೆಯನ್ನು ಹೇಗೆ ಮಾಡಬೇಕು ?, ಈ ವಿಷಯದ ಬಗ್ಗೆ ಅಧ್ಯಯನ ಮಾಡಿ ಪ್ರತಿವಾರ ಅವರ ಸತ್ಸಂಗವನ್ನು ತೆಗೆದುಕೊಳ್ಳುವುದನ್ನು ನಿರ್ಧರಿಸಲಾಯಿತು. ಇದರಿಂದ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ನಿಯೋಜನೆ ಸಮರ್ಪಕವಾಗಿ ಆಯಿತು. ಇದರಿಂದ ಸಾಧಕರಿಗೆ ದಿಶೆ ದೊರಕಿ ಅಭ್ಯಾಸವರ್ಗದ ಫಲಿತಾಂಶ ವೃದ್ಧಿಸಿತು. ಇದರಿಂದ ವರ್ಗಗಳೂ ನಿಯಮಿತವಾಗಿ ಆಗತೊಡಗಿದವು.

೬ ಇ. ಧರ್ಮಶಿಕ್ಷಣವ ವರ್ಗಗಳನ್ನು ತೆಗೆದುಕೊಳ್ಳುವ ಸಾಧಕರ ಸತ್ಸಂಗವನ್ನು ತೆಗೆದುಕೊಂಡು ಅವರಿಂದ ಆಗುವ ತಪ್ಪುಗಳ ಅರಿವು ಮಾಡಿಕೊಟ್ಟು ಯೋಗ್ಯ ದಿಶೆಯನ್ನು ನೀಡುವುದು : ಧರ್ಮಶಿಕ್ಷಣವರ್ಗಗಳನ್ನು ತೆಗೆದುಕೊಳ್ಳುವ ಸಾಧಕರ ಅವರು ವಿಷಯವನ್ನು ತೆಗೆದುಕೊಳ್ಳುವ ಗುಣಮಟ್ಟ ವೃದ್ಧಿಸಿ ಅದು ಪರಿಣಾಮಕಾರಿಯಾಗಲು ಈಗ ಧರ್ಮಶಿಕ್ಷಣವರ್ಗಗಳನ್ನು ತೆಗೆದುಕೊಳ್ಳುತ್ತಿರುವವರ ಮತ್ತು ಇನ್ನು ಮುಂದೆ ತೆಗೆದುಕೊಳ್ಳುವವರನ್ನು ಒಟ್ಟುಗೂಡಿಸಿ ರಾಜ್ಯ ಮಟ್ಟದಲ್ಲಿ ಒಂದು ಸತ್ಸಂಗವನ್ನು ತೆಗೆದುಕೊಳ್ಳುವ ಆಯೋಜನೆಯನ್ನು ಮಾಡಲಾಯಿತು. ಇದರಲ್ಲಿ ‘ಧರ್ಮಶಿಕ್ಷಣವರ್ಗಗಳಲ್ಲಿ ಆಗುವ ತಪ್ಪುಗಳು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಧರ್ಮಶಿಕ್ಷಣ ವರ್ಗಗಳನ್ನು ತೆಗೆದುಕೊಳ್ಳುವ ಸಾಧಕರಿಗೆ ತಪ್ಪುಗಳ ಅರಿವು ಮಾಡಿಕೊಡಲಾಯಿತು ಮತ್ತು ‘ಮುಂದೆ ಹೇಗೆ ಪ್ರಯತ್ನ ಮಾಡಬೇಕು ?, ಎಂಬುದನ್ನು ಹೇಳಲಾಯಿತು.

೬ ಈ. ಉತ್ತಮ ಪ್ರಯತ್ನಗಳನ್ನು ಮಾಡುವ ಸಾಧಕರಿಗೆ ಪ್ರೋತ್ಸಾಹವನ್ನು ನೀಡುವುದು : ಧರ್ಮಶಿಕ್ಷಣವರ್ಗಗಳಿಗಾಗಿ ಯಾವ ಸಾಧಕರು ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆಯೋ, ಅವರ ಪ್ರಯತ್ನಗಳ ಅನುಭವಗಳನ್ನು ಹೇಳಿ, ಸಾಧಕರಿಗೆ ಪ್ರೋತ್ಸಾಹವನ್ನು ನೀಡಲಾಯಿತು. ಇದರ ಪರಿಣಾಮದಿಂದ ಈಗ ಧರ್ಮಶಿಕ್ಷಣವರ್ಗದಲ್ಲಿನ ಜಿಜ್ಞಾಸುಗಳು ಕೂಡ ಸೇವೆಗೆ ಬರುತ್ತಿದ್ದಾರೆ ಮತ್ತು ಅವರು ಜವಾಬ್ದಾರಿ ವಹಿಸಿಕೊಂಡು ಸೇವೆಯನ್ನು ಕೂಡ ಮಾಡುತ್ತಿದ್ದಾರೆ.

೭. ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳ ಆಯೋಜನೆ ಚೆನ್ನಾಗಿ ಆಗಬೇಕು ಮತ್ತು ಒಳ್ಳೆಯ ಫಲಶೃತಿ ಸಿಗಬೇಕೆಂದು ಮಾಡಿದ ಪ್ರಯತ್ನಗಳು

೭ ಅ. ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳ ಆಯೋಜನೆಯಲ್ಲಿ ಬಹಳಷ್ಟು ತಪ್ಪುಗಳಾಗುತ್ತಿದ್ದುದರಿಂದ ಸಭೆಯ ಜವಾಬ್ದಾರಿ ವಹಿಸಿಕೊಂಡು ಸೇವೆಯನ್ನು ಮಾಡುವ ಸಾಧಕರ ಸತ್ಸಂಗವನ್ನು ತೆಗೆದುಕೊಳ್ಳುವುದು ಮತ್ತು ಅವರಿಗೆ ಯೋಗ್ಯ ದಿಶೆಯನ್ನು ನೀಡುವುದು : ಕರ್ನಾಟಕ ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಲ್ಲಿ ಬಹಳಷ್ಟು ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳನ್ನು ಆಯೋಜಿಸಲಾಗಿತ್ತು. ಆದರೆ ಆಯೋಜಿಸಿದಂತೆ ಸಭೆಗಳು ಆಗುತ್ತಿರಲಿಲ್ಲ ಮತ್ತು ಆಗಿರುವ ಸಭೆಗಳ ಆಯೋಜನೆಯಲ್ಲಿಯೂ ಬಹಳಷ್ಟು ತಪ್ಪುಗಳಾಗಿದ್ದವು. ಇದಕ್ಕಾಗಿ ಪೂ. ಅಣ್ಣನವರು ಒಂದು ದಿನದ ಸತ್ಸಂಗವನ್ನು ಆಯೋಜಿಸಿದರು. ಅದರಲ್ಲಿ ಸಭೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆಯನ್ನು ಮಾಡುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಎಲ್ಲ ಸಾಧಕರನ್ನು ಒಟ್ಟಿಗೆ ಕರೆದು ‘ಪ್ರಾರಂಭದಿಂದ ಕೊನೆಯವರೆಗೆ ಸಭೆಯ ಆಯೋಜನೆಯನ್ನು ಹೇಗೆ ಮಾಡಬೇಕು ?, ಎನ್ನುವುದನ್ನು ಹೇಳಲಾಯಿತು. ‘ಸಭೆಯ ಆಯೋಜನೆಯನ್ನು ಚೆನ್ನಾಗಿ ಮಾಡಿದರೆ, ಅದರಿಂದ ಸಮಷ್ಟಿಗೆ ಮತ್ತು ಸಾಧನೆಯ ದೃಷ್ಟಿಯಿಂದ ನಮಗೆ ಏನು ಲಾಭವಾಗುವುದು ? ಈ ಸೇವೆಯ ಮಾಧ್ಯಮದಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ದೃಷ್ಟಿಯಿಂದ ಹೇಗೆ ಪ್ರಯತ್ನ ಮಾಡಬೇಕು ? ಈ ವಿಷಯದಲ್ಲಿಯೂ ಅವರು ಸಾಧಕರಿಗೆ ಮಾರ್ಗದರ್ಶನ ಮಾಡಿದರು.

೭ ಆ. ‘ಸಭೆಯ ಶೇ. ೧೦೦ ರಷ್ಟು ಫಲಶೃತಿ ಬರಲು ಹೇಗೆ ಪ್ರಯತ್ನಿಸಬೇಕು ?, ಎನ್ನುವ ವಿಷಯದಲ್ಲಿ ಸಾಧಕರಿಗೆ ಮಾರ್ಗದರ್ಶನ  ಮಾಡುವುದು : ಸಭೆಯ ಆಯೋಜನೆಯನ್ನು ಮಾಡುವಾಗ ‘ಸಭೆಯ ಸ್ಥಳವನ್ನು ಹೇಗೆ ನಿರ್ಧರಿಸಬೇಕು ? ಸಂಪರ್ಕವನ್ನು ಹೇಗೆ ಮಾಡಬೇಕು ? ಆ ದಿನದ ಆಯೋಜನೆಯನ್ನು ಹೇಗೆ ಮಾಡಬೇಕು ? ಶೇ. ೧೦೦ ರಷ್ಟು ಫಲಿತಾಂಶಕ್ಕಾಗಿ ಹೇಗೆ ಪ್ರಯತ್ನಿಸಬೇಕು ?, ಹೀಗೆ ಅನೇಕ ವಿಷಯಗಳನ್ನು ತೆಗೆದುಕೊಂಡು ‘ಹೇಗೆ ಪ್ರಯತ್ನಿಸಬೇಕು ?, ಎಂದು ಅವರು ವಿವರಿಸಿ ಹೇಳಿದರು. ‘ಸಭೆಯ ಸೇವೆಯಲ್ಲಿ ಯಾವ ತಪ್ಪುಗಳಾಗುತ್ತಿವೆ ? ಅದರ ಪರಿಣಾಮವೇನಾಗುತ್ತದೆ?, ಎನ್ನುವುದನ್ನು ವಿವರಿಸಿದರು ಮತ್ತು ಅದಕ್ಕಾಗಿ ಸೇವೆಯ ಪರಿಶೀಲನೆಯ ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟರು. ಇದರ ಪರಿಣಾಮದಿಂದ ಸಾಧಕರು ಸಕ್ಷಮರಾಗಿ ಸ್ವತಂತ್ರ ರೀತಿಯಲ್ಲಿ ಸಭೆಗಳ ಸೇವೆಯನ್ನು ಮಾಡುತ್ತಿದ್ದಾರೆ. ಇದರಿಂದ ‘ಶಿಬಿರಗಳನ್ನು ಆಯೋಜಿಸಿದ ಬಳಿಕ ಸಾಧಕರಿಗೆ ಯಾವ ರೀತಿ ಒಳ್ಳೆಯ ಲಾಭವಾಗುತ್ತದೆ ?, ಎನ್ನುವುದನ್ನು ಅನುಭವಿಸಲು ಸಿಕ್ಕಿತು.

೮. ರಾಮನಾಥಿ ಆಶ್ರಮದಲ್ಲಿ ನಡೆದ ಕನ್ನಡ ಭಾಷೆಯ ಸಾಧನೆಯ ಶಿಬಿರಕ್ಕೆ ಧರ್ಮಪ್ರೇಮಿಗಳನ್ನು ಕಳುಹಿಸಲು ಮಾಡಿದ ಪ್ರಯತ್ನ

೮ ಅ. ‘ಸಾಧನೆಯ ಶಿಬಿರಕ್ಕೆ ಜಿಲ್ಲೆಗಳಿಂದ ಯಾರೂ ಹೋಗುವುದಿಲ್ಲ, ಎಂಬುದು ಜಿಲ್ಲೆಗಳಲ್ಲಿನ ಸಾಧಕರ ಮಾನಸಿಕತೆಯಾಗಿತ್ತು : ‘ನವೆಂಬರ ೨೦೧೯ ರ ಸಾಧನೆಯ ಶಿಬಿರಕ್ಕಾಗಿ ಬರುವ ಧರ್ಮಪ್ರೇಮಿಗಳ ಪಟ್ಟಿಯನ್ನು ಜಿಲ್ಲೆಯಲ್ಲಿ ಸಿದ್ಧಪಡಿಸಿರಲಿಲ್ಲ. ಸಾಧಕರಿಗೆ ‘ಯಾರೂ ಹೋಗುವವರಿಲ್ಲ, ಎಂದೆನಿಸುತ್ತಿತ್ತು. ಆದುದರಿಂದ ಶಿಬಿರ ನಡೆಯುವ ಕೆಲವು ದಿನ ಮೊದಲು ‘ಶಿಬಿರವನ್ನು ತೆಗೆದುಕೊಳ್ಳಬೇಕೋ ಅಥವಾ ಬೇಡವೋ ?, ಎಂಬಂತಹ ಸ್ಥಿತಿಯು ಉಂಟಾಗಿತ್ತು.

೮ ಆ. ‘ಧರ್ಮಪ್ರೇಮಿಗಳು ರಾಮನಾಥಿ ಆಶ್ರಮಕ್ಕೆ ಹೋದ ಬಳಿಕ, ಅವರಿಗೆ ಸಾಧನೆಯ ಯೋಗ್ಯ ಮಾರ್ಗದರ್ಶನ ಸಿಗುವುದು, ಇದರಿಂದ ಗುರುಕಾರ್ಯ ವೃದ್ಧಿಸುವುದು ಮತ್ತು ಅದರಿಂದ ಸಾಧಕರ ಸಾಧನೆಯೂ ಆಗುವುದು, ಎಂದು ಪೂ. ಅಣ್ಣನವರು ಸಾಧಕರಿಗೆ ಮನವರಿಕೆ ಮಾಡಿಕೊಡುವುದು : ಪೂ. ಅಣ್ಣನವರು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸತ್ಸಂಗವನ್ನು ತೆಗೆದುಕೊಂಡು ‘ಧರ್ಮಪ್ರೇಮಿಗಳನ್ನು ಸಾಧನೆಯ ಶಿಬಿರಕ್ಕೆ ಕಳುಹಿಸುವುದರಲ್ಲಿ ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?, ಎಂದು ವಿಚಾರಿಸಿ, ‘ನಮ್ಮ ರಾಜ್ಯದಲ್ಲಿನ ಧರ್ಮಪ್ರೇಮಿಗಳನ್ನು ರಾಮನಾಥಿಗೆ ಕಳುಹಿಸುವಾಗ ನಮ್ಮ ಭಾವ ಹೇಗಿರಬೇಕು ? ವರ್ಷವಿಡೀ ಪ್ರಯತ್ನಿಸಿದರೂ ನಾವು ಏನನ್ನು ಅವರಿಗೆ ಕೊಡಲು ಸಾಧ್ಯವಿಲ್ಲವೋ, ಅದು ರಾಮನಾಥಿ ಆಶ್ರಮದಲ್ಲಿ ಅವರಿಗೆ ೨-೩ ದಿನಗಳಲ್ಲಿ ಸಿಗುತ್ತದೆ. ಭೂ ವೈಕುಂಠದಲ್ಲಿ ಹೋದ ಬಳಿಕ ಅವರಿಗೆ ಆಧ್ಯಾತ್ಮಿಕ ಲಾಭವಾಗಿ ಅವರ ಸಾಧನೆಗೆ ಮಾರ್ಗದರ್ಶನ ಸಿಗುತ್ತದೆ. ಇದರಿಂದ ಮುಂದೆ ಗುರುಕಾರ್ಯದಲ್ಲಿಯೂ ವೃದ್ಧಿಯಾಗುವುದು ಮತ್ತು ಇದರಿಂದ ನಮ್ಮ ವೈಯಕ್ತಿಕ ಸಾಧನೆಯೂ ಆಗುವುದು, ಎಂದು ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ಪ್ರೋತ್ಸಾಹಿಸಿದರು. ತದನಂತರ ಅವರು ಎಲ್ಲರಿಗೂ ಧರ್ಮಪ್ರೇಮಿಗಳ ಹೆಸರಿನ ಒಂದು ಪಟ್ಟಿಯನ್ನು ಮಾಡಲು ತಿಳಿಸಿ ಅದನ್ನು ಒಂದು ದಿನದಲ್ಲಿ ಕಳುಹಿಸಲು ಹೇಳಿದರು.

೮ ಇ. ಪೂ. ಅಣ್ಣನವರು ಮಾಡಿದ ಪ್ರಯತ್ನದಿಂದ ಒಟ್ಟು ೩೫ ಜನ ಧರ್ಮಪ್ರೇಮಿಗಳು ರಾಮನಾಥಿ ಆಶ್ರಮದಲ್ಲಿನ ಕನ್ನಡ ಭಾಷೆಯ ಸಾಧನೆಯ ಶಿಬಿರಕ್ಕೆ ಹೋಗುವುದು : ಧರ್ಮಪ್ರೇಮಿಗಳ ಹೆಸರಿನ ಪಟ್ಟಿ ದೊರೆತ ಬಳಿಕ ಪೂ. ಅಣ್ಣನವರು ಸ್ವತಃ ಅದನ್ನು ಪರಿಶೀಲಿಸಿದರು. ಅವರು ಸಾಧಕರಿಗೆ ಈ ಎಲ್ಲ ಧರ್ಮಪ್ರೇಮಿಗಳನ್ನು ಭೇಟಿಯಾಗಿ ಅವರಿಗೆ ಶಿಬಿರಕ್ಕೆ ಹೋಗಲು ಪ್ರೋತ್ಸಾಹಿಸುವಂತೆ ಹೇಳಿದರು. ಪೂ. ಅಣ್ಣನವರು ಮಾಡಿದ ಪ್ರಯತ್ನದಿಂದ ರಾಮನಾಥಿ ಆಶ್ರಮದಲ್ಲಿ ಜರುಗಿದ ೩ ದಿನಗಳ ಕನ್ನಡ ಭಾಷೆಯ ಶಿಬಿರಕ್ಕೆ ೩೫ ಜನ ಧರ್ಮಪ್ರೇಮಿಗಳು ಹೋಗಿ ಬಂದರು. ಅವರೆಲ್ಲರಿಗೂ ಸಾಧನೆಯ ಮುಂದಿನ ಮಾರ್ಗದರ್ಶನ ದೊರಕಿತು. ಅದಕ್ಕನುಗುಣವಾಗಿ ಅವರು ಪ್ರಯತ್ನಗಳನ್ನು ಕೂಡ ಮಾಡುತ್ತಿದ್ದಾರೆ.

೮ ಈ. ರಾಜ್ಯದ ಧರ್ಮಪ್ರೇಮಿಗಳಿಗಾಗಿ ಮಂಗಳೂರು ಸೇವಾಕೇಂದ್ರದಲ್ಲಿ ಶಿಬಿರವನ್ನು ತೆಗೆದುಕೊಳ್ಳುವುದು : ಕರ್ನಾಟಕ ರಾಜ್ಯದಲ್ಲಿನ ಧರ್ಮಪ್ರೇಮಿಗಳಿಗೆ ಸಾಧನೆಯ ಮಾರ್ಗದರ್ಶನ ಸಿಗಬೇಕೆಂದು ರಾಜ್ಯಮಟ್ಟದ ಸಾಧನೆಯ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರವನ್ನು ಮಂಗಳೂರು ಸೇವಾಕೇಂದ್ರದಲ್ಲಿ ನಡೆಸಲಾಯಿತು. ‘ಸೇವಾಕೇಂದ್ರದಲ್ಲಿರುವ ಚೈತನ್ಯ, ಸಂತರ ನಾಮಜಪಾದಿ ಉಪಾಯ, ಸಂತರ ಮಾರ್ಗದರ್ಶನ ಮತ್ತು ಲಭಿಸಿದ ಸಾಧನೆಯ ಮಾರ್ಗದರ್ಶನ, ಇವುಗಳಿಂದ ಎಲ್ಲ ಧರ್ಮಪ್ರೇಮಿಗಳು ವ್ಯಷ್ಟಿ ಸಾಧನೆಯನ್ನು ಮಾಡಲು ಪ್ರಾರಂಭಿಸಿದರು ಮತ್ತು ಸಮಷ್ಟಿ ಸೇವೆಗಾಗಿಯೂ ಸಮಯವನ್ನು ನೀಡಲು ಪ್ರಾರಂಭಿಸಿದರು. ಎಲ್ಲ ಧರ್ಮಪ್ರೇಮಿಗಳಿಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಈ ವಿಷಯ ಇಷ್ಟವಾಯಿತು. ಈ ಶಿಬಿರದಲ್ಲಿ ಅಭಿಯಂತರು, ಉದ್ಯಮಿಗಳು, ಪ್ರಾಧ್ಯಾಪಕರು, ನ್ಯಾಯವಾದಿಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಈ ಶಿಬಿರದ ಬಳಿಕ ಪೂ. ಅಣ್ಣನವರು ಎಲ್ಲರೊಂದಿಗೆ ಅನೌಪಚಾರಿಕವಾಗಿ ಮಾತನಾಡಲು ಎಲ್ಲರಿಗೂ ವೈಯಕ್ತಿಕ ಸಮಯವನ್ನು ನೀಡಿದರು. ಆ ಸಮಯದಲ್ಲಿ ಎಲ್ಲರೂ ಪೂ. ಅಣ್ಣನವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿದರು. ಶಿಬಿರದಲ್ಲಿ ಬಂದಂತಹ ಅನೇಕ ಜನರು ಈಗ ಸಾಧಕರಾಗುತ್ತಿದ್ದಾರೆ.

೮ ಉ. ಫಲಶೃತಿ

೧. ಈ ಶಿಬಿರದಲ್ಲಿ ಭಾಗವಹಿಸಿದ್ದ ಧರ್ಮಪ್ರೇಮಿಯೊಬ್ಬರು ಪೂ. ಅಣ್ಣನವರೊಂದಿಗೆ ಪ್ರವಾಸದಲ್ಲಿ ವಾಹನ ಚಾಲಕರಾಗಿ ಸೇವೆಗೆ ಬಂದಿದ್ದರು.

೨. ಕೆಲವು ಧರ್ಮಪ್ರೇಮಿಗಳು ಮಹಾಶಿವರಾತ್ರಿಗಾಗಿ ಆಯೋಜಿಸಿದ ಸನಾತನ ಸಂಸ್ಥೆಯ ಗ್ರಂಥಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಸೇವೆಗಾಗಿ ಬಂದಿದ್ದರು.

೩. ಧರ್ಮಪ್ರೇಮಿಗಳು ಈಗ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ.

೪. ಶಿಬಿರದ ಬಳಿಕ ಧರ್ಮಪ್ರೇಮಿಗಳು ತಮ್ಮ ಕುಟುಂಬದವರಿಗೆ, ಸಂಬಂಧಿಕರಿಗೆ ಮತ್ತು ಸಮಾಜದಲ್ಲಿನ ಪರಿಚಿತರಿಗೆ ಸೇವಾಕೇಂದ್ರ ಮತ್ತು ಸಾಧನೆಯ ವಿಷಯದಲ್ಲಿ  ಹೇಳುತ್ತಿದ್ದಾರೆ.

೫. ಶಿಬಿರದಲ್ಲಿ ಸಹಭಾಗಿಯಾಗಿರುವ ಓರ್ವ ನ್ಯಾಯವಾದಿಗಳು ‘ನಮ್ಮ ಕ್ಷೇತ್ರದಲ್ಲಿನ ನ್ಯಾಯವಾದಿಗಳನ್ನು ಒಂದುಗೂಡಿಸಿ ಅವರ ಒಂದು ಅಧಿವೇಶನವನ್ನು ಆಯೋಜಿಸಲು ಪ್ರಯತ್ನಿಸುತ್ತೇನೆ, ಎಂದು ಹೇಳಿದರು.

೯. ಪೂ. ಅಣ್ಣನವರು ಸಾಧಕರಿಗೆ ಸಾಧನೆಗಾಗಿ ಮಾಡುತ್ತಿದ್ದ ಇನ್ನಿತರೆ ಸಹಾಯಗಳು !

೯ ಅ. ಪ್ರವಾಸದಲ್ಲಿರುವಾಗ ಅವರೊಂದಿಗಿದ್ದ ಸಾಧಕರಿಗೆ ಅವರ ಜವಾಬ್ದಾರಿಯ ಅರಿವು ಮಾಡಿಕೊಡುವುದು : ಪೂ. ಅಣ್ಣನವರು ಜಿಲ್ಲೆಗಳಿಗೆ ಧರ್ಮಪ್ರಚಾರಕ್ಕಾಗಿ ಹೋಗುವಾಗ, ಅವರೊಂದಿಗೆ ಕೆಲವು ಸಾಧಕರನ್ನು ಕಲಿಯಲು ಕರೆದುಕೊಂಡು ಹೋಗುತ್ತಾರೆ. ‘ಅವರೊಂದಿಗೆ  ಹೋಗುವ ಸಾಧಕರು ಹೇಗಿರಬೇಕು ? ಅವರ ಹಾವಭಾವ ಅಥವಾ ಉಡುಗೆತೊಡುಗೆಗಳು ಹೇಗಿರಬೇಕು ? ಅವರು ಹೇಗೆ ಕಲಿಯಬೇಕು ? ಪ್ರವಾಸದಲ್ಲಿರುವಾಗ ಅವರ ಜವಾಬ್ದಾರಿ ಯಾವುದು ?  ನಿಯೋಜಿಸಿದ ಸ್ಥಳಕ್ಕೆ ಹೋದ ಬಳಿಕ ಅಲ್ಲಿ ಜವಾಬ್ದಾರಿ ತೆಗೆದುಕೊಂಡು ಹೇಗೆ ಪ್ರಯತ್ನಿಸಬೇಕು ? ಅವರು ಎಲ್ಲಿ ಹಿಂದೆ ಬೀಳುತ್ತಿದ್ದಾರೆ ?, ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ತಿಳಿಸಿ ಹೇಳಿ ಪೂ. ಅಣ್ಣನವರು ಅವರಿಗೆ ಮುಂದೆ ಕರೆದುಕೊಂಡು ಹೋಗಲು ಅವರಿಂದ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಾರೆ. ಅವರು ಪ್ರವಾಸದಲ್ಲಿರುವ ಸಾಧಕರಿಂದ ಪ್ರತ್ಯಕ್ಷ ಕೃತಿಗಳನ್ನೂ ಮಾಡಿಸಿಕೊಳ್ಳುತ್ತಾರೆ.

೯ ಆ. ಪ್ರವಾಸದಲ್ಲಿರುವಾಗ ಜಿಲ್ಲೆಯಲ್ಲಿನ ಎಲ್ಲ ಸಾಧಕರಿಗೆ ಅವರ ಸೇವೆಗನುಸಾರ ಮಾರ್ಗದರ್ಶನ ಮಾಡುವುದು : ಪೂ. ಅಣ್ಣನವರು ಜಿಲ್ಲೆಗಳಿಗೆ ಹೋದಾಗ ‘ಅಲ್ಲಿಯ ಸಾಧಕರ ವರದಿಯನ್ನು ತೆಗೆದುಕೊಳ್ಳುವುದು, ಎಲ್ಲ ಸಾಧಕರಿಗೆ ಮಾರ್ಗದರ್ಶನ ಮಾಡುವುದು, ಧರ್ಮಶಿಕ್ಷಣವರ್ಗದಲ್ಲಿನ ಸಾಧಕರಿಗೆ ಮಾರ್ಗದರ್ಶನ ಮಾಡುವುದು, ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ ಮಾಡುವುದು, ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡುವುದು, ಹೀಗೆ ಸಾಧಕರ ಸೇವೆಯಂತೆ ಅವರಿಗೆ ಸಾಧನೆಯ ವಿಷಯದಲ್ಲಿ ಬೇರೆ ಬೇರೆ ಮಾರ್ಗದರ್ಶನವನ್ನು ಮಾಡುತ್ತಾರೆ. ಈ ಮಾರ್ಗದರ್ಶನದಲ್ಲಿ ಅವರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಆವಶ್ಯಕತೆಯಿರುವ ಸಾಧಕರಿಗೆ ವೈಯಕ್ತಿಕ ಸಮಯವನ್ನು ಕೊಟ್ಟು ಅವರೊಂದಿಗೆ ಮಾತನಾಡಿ ಅವರಿಗೆ ಆಧಾರ ಕೊಡುತ್ತಾರೆ.

೯ ಇ. ಸಾಧಕರ ಕುಟುಂಬದವರಿಗೆ ಭೇಟಿಯಾಗಲು ಬೇರೆ ಸಮಯವನ್ನು ನೀಡಿ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡುವುದು : ಪೂ. ಅಣ್ಣನವರು ಜಿಲ್ಲೆಗಳಿಗೆ ಹೋದಾಗ ಸಾಧಕರ ಕುಟುಂಬದವರನ್ನು ಭೇಟಿಯಾಗಲು ಬೇರೆ ಸಮಯದ ನಿಯೋಜನೆಯನ್ನು ಮಾಡುತ್ತಾರೆ. ಅವರು ಸಾಧಕರ ಕುಟುಂಬದವರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾರೆ. ಇದರಿಂದ ಕೆಲವು ಸಾಧಕರ ಯಜಮಾನರು ಕೂಡ ಈಗ ಸೇವೆಯಲ್ಲಿ ಮತ್ತು ಸಾಧನೆಯಲ್ಲಿ ಭಾಗವಹಿಸುತ್ತಿದ್ದಾರೆ.

೯ ಈ. ಜಿಲ್ಲೆಯ ಜವಾಬ್ದಾರ ಸಾಧಕರಿಗೆ ಅವರ ತಪ್ಪುಗಳನ್ನು ಗಮನಕ್ಕೆ ತಂದು ಕೊಡುವುದು, ಅವರ ವರದಿಯನ್ನು ಸ್ವತಃ ತಾವೇ ತೆಗೆದುಕೊಳ್ಳುವುದು ಮತ್ತು ಇದರಿಂದ ಜವಾಬ್ದಾರ ಸಾಧಕರಲ್ಲಿ ಜವಾಬ್ದಾರಿಯ ಗಾಂಭೀರ್ಯ ನಿರ್ಮಾಣವಾಗುವುದು : ಪೂ. ಅಣ್ಣನವರು ಜಿಲ್ಲೆಯಲ್ಲಿನ ಜವಾಬ್ದಾರ ಸಾಧಕರನ್ನು ಒಟ್ಟುಗೂಡಿಸಿ ಅವರಿಗೆ ‘ಅವರು ಎಲ್ಲಿ ಕಡಿಮೆ ಬೀಳುತ್ತಿದ್ದಾರೆ ?, ಎಂಬುದನ್ನು ಅರಿವು ಮಾಡಿ ಕೊಡುತ್ತಾರೆ. ಅವರ ಪ್ರಯತ್ನಗಳ ವರದಿಯನ್ನು ಸ್ವತಃ ಪೂ. ಅಣ್ಣನವರೇ ತೆಗೆದುಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಸಮನ್ವಯದ ಕೊರತೆಯಿಂದ ಏನಾದರು ತಪ್ಪುಗಳಾಗಿದ್ದರೆ ಪೂ. ಅಣ್ಣನವರು ಸಾಧಕರಿಗೆ ಅವುಗಳ ಅರಿವನ್ನು ಮಾಡಿಕೊಡುತ್ತಾರೆ. ಇದರಿಂದ ಜವಾಬ್ದಾರ ಸಾಧಕರಲ್ಲಿ ತಮ್ಮ ಜವಾಬ್ದಾರಿಯ ಗಾಂಭೀರ್ಯ ನಿರ್ಮಾಣವಾಗಿದೆ.

೯ ಉ. ಹಿಂದೂ ರಾಷ್ಟ್ರ- ಜಾಗೃತಿ ಸಭೆ, ಕಾರ್ಯಾಗಾರ ಅಥವಾ ಶಿಬಿರದ ಸ್ಥಳದಲ್ಲಿ  ಸೇವೆಯನ್ನು ಮಾಡುವ ಸಾಧಕರೊಂದಿಗೆ ಸಂಚಾರಿವಾಣಿಯಲ್ಲಿ ಮಾತನಾಡಿ ಅವರನ್ನು ಪ್ರೋತ್ಸಾಹಿಸುವುದು : ಹಿಂದೂ ರಾಷ್ಟ್ರ-ಜಾಗೃತಿ ಸಭೆ, ಕಾರ್ಯಾಗಾರ ಅಥವಾ ಶಿಬಿರಗಳ ಸ್ಥಳಗಳಲ್ಲಿ ಯಾರು ಉತ್ತಮ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆಯೋ, ಆ ಸಾಧಕರಿಗೆ ಆಧಾರ ಮತ್ತು ಪ್ರೋತ್ಸಾಹವನ್ನು ನೀಡಲು ಪೂ. ಅಣ್ಣನವರು ಅವರೊಂದಿಗೆ ಸಂಚಾರಿವಾಣಿಯಲ್ಲಿ ೧೫ ನಿಮಿಷಗಳವರೆಗೆ ಮಾತನಾಡುತ್ತಾರೆ ಮತ್ತು ಅವರಿಗೆ ಏನಾದರೂ ಅಡಚಣೆಗಳು ಬಂದಿದ್ದರೆ ಮತ್ತು ಅಲ್ಲಿ ಪ್ರತ್ಯಕ್ಷ ಹೋಗಿ ಬರಲು ಸಾಧ್ಯವಿದ್ದರೆ ಅಲ್ಲಿಗೆ ಸ್ವತಃ ಹೋಗಿ ಬರುತ್ತಾರೆ.

೧೦. ಕೃತಜ್ಞತೆ

ಪೂ. ರಮಾನಂದ ಅಣ್ಣನವರು ಎಲ್ಲ ಧರ್ಮಪ್ರೇಮಿಗಳು, ಸಾಧಕರು ಮತ್ತು ಸಾಧಕರ ಕುಟುಂಬದವರ ಸಾಧನೆಗೆ ಆಧಾರಸ್ತಂಭವಾಗಿದ್ದಾರೆ. ಅವರು ಯಾರೊಂದಿಗೆ ಮಾತನಾಡುತ್ತಾರೆಯೋ, ಅವರೆಲ್ಲರೂ ಸಾಧನೆ ಮಾಡಲು ಪ್ರಾರಂಭಿಸುತ್ತಾರೆ. ಪೂ. ಅಣ್ಣನವರ ಮಾತಿನಲ್ಲಿ ಯಾವುದೇ ಅಪೇಕ್ಷೆ ಇರುವುದಿಲ್ಲ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿನ ಬಹಳಷ್ಟು ಸಾಧಕರು, ಧರ್ಮಪ್ರೇಮಿಗಳು ಮತ್ತು ಸಾಧಕರ ಕುಟುಂಬದವರು ಸಾಧನೆಯಲ್ಲಿ ಮುಂದೆ ಹೋಗುತ್ತಿದ್ದಾರೆ. ‘ಪೂ. ಅಣ್ಣನವರ ಸಾಧಕರ ಮೇಲಿನ ಪ್ರೀತಿ ಮತ್ತು ಅವರು ಸಾಧಕರಿಗೆ ನೀಡುವ ಆಧ್ಯಾತ್ಮಿಕ ಆಧಾರ ಇದರಿಂದ ಸಾಧಕರಿಗೆ ‘ಪೂ. ಅಣ್ಣನವರು ನಿರಂತರವಾಗಿ ನಮ್ಮೊಂದಿಗೆ ಇದ್ದಾರೆ ಎಂದೆನಿಸುತ್ತದೆ. ‘ಕರ್ನಾಟಕ ರಾಜ್ಯದಲ್ಲಿ ಪ್ರಸಾರಕಾರ್ಯವನ್ನು ಹೆಚ್ಚಿಸಲು ಪೂ. ರಮಾನಂದ ಅಣ್ಣನವರು ಹೇಗೆ ಪ್ರಯತ್ನಿಸಿದರು ? ಎಂದು ಗುರುದೇವರ ಕೃಪೆಯಿಂದ ಬರೆಯುವ ಅವಕಾಶ ನಮಗೆ ಲಭಿಸಿತು, ಇದಕ್ಕಾಗಿ ನಾವು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ.

– ಶ್ರೀ. ಕಾಶಿನಾಥ ಪ್ರಭು, ಸೌ. ಮಂಜುಳಾ ರಮಾನಂದ ಗೌಡ ಮತ್ತು ಶ್ರೀ. ಗುರುಪ್ರಸಾದ ಗೌಡ, ಕರ್ನಾಟಕ (ಎಪ್ರಿಲ್ ೨೦೨೦)                                    (ಮುಕ್ತಾಯ)

ಅನಾವಶ್ಯಕ ವಿಚಾರಗಳು ಕಡಿಮೆಯಾಗಿ ನಾಮಜಪ ಪರಿಣಾಮಕಾರಿಯಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುವುದು ಉತ್ತಮ ಮತ್ತು ಒಂದು ಪ್ರಭಾವಶಾಲಿ ಉಪಾಯವಾಗಿದೆ

‘ಅನಾವಶ್ಯಕ ವಿಚಾರಗಳೊಂದಿಗೆ ನಾಮಜಪವನ್ನು ಮಾಡಿದರೆ, ಆ ನಾಮಜಪದಿಂದ ವಿಶೇಷ ಪ್ರಯೋಜನ ಆಗುವುದಿಲ್ಲ. ಈ ಸಮಸ್ಯೆಯ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುವ ಉತ್ತಮ ಮತ್ತು ಪ್ರಭಾವಶಾಲಿ ಉಪಾಯವನ್ನು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಸರಿಯಾಗಿ ಮಾಡಿದರೆ ನಮ್ಮ ಮನಸ್ಸಿನ ಮೇಲಿನ ಸಂಸ್ಕಾರಗಳು ಕಡಿಮೆಯಾಗುತ್ತವೆ ಮತ್ತು ಮುಂದೆ ಅನಾವಶ್ಯಕ ವಿಚಾರಗಳು ಕಡಿಮೆಯಾಗಿ ಮನಸ್ಸು ಅಂತರ್ಮುಖವಾಗುತ್ತದೆ. ಆಗ ನಮ್ಮ ನಾಮಜಪ ಪರಿಣಾಮಕಾರಿಯಾಗಿ ಆಗುತ್ತದೆ.

– ಪೂ. ರಮಾನಂದ ಗೌಡ, ಕರ್ನಾಟಕ.