‘ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಪಾಕಿಸ್ತಾನದ ಹೇಳಿಕೆ !

೧. ‘ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಪಾಕಿಸ್ತಾನದ ಹೇಳಿಕೆ !

ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್‌ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.

೨. ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

೨೦೧೫ ರಲ್ಲಿ ಕೇರಳ ವಿಧಾನಸಭೆಯಲ್ಲಿ ಲೆಫ್ಟ್ ಡೆಮೊಕ್ರೆಟಿಕ್ ಫ್ರಂಟ್‌ನ (ಎಲ್.ಡಿ.ಎಫ್‌ನ) ಶಾಸಕರು ಮಾಡಿದ ವಿಧ್ವಂಸಕ ಪ್ರಕರಣದ ಖಟ್ಲೆಯನ್ನು ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ‘ನೀವು (ಶಾಸಕರು) ಜನರ ಆಸ್ತಿಯನ್ನು ನಾಶ ಮಾಡಿದ್ದೀರಿ. ಇದರಿಂದ ನೀವು ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸಿದ್ದೀರಿ ?’ ಎಂದು ಪ್ರಶ್ನೆಯನ್ನೂ ಸಹ ಕೇಳಿದೆ.

೩. ಅಂತಹವರನ್ನು ಜೈಲಿಗೆ ಅಟ್ಟಬೇಕು !

ಕಡಕಡುಮಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯವಾದಿ ಇಕ್ಬಾಲ್ ಮಲಿಕ್ ಅವರ ಪರವಾನಗಿಯನ್ನು ದೆಹಲಿ ಬಾರ್ ಕೌನ್ಸಿಲ್ ತಾತ್ಕಾಲಿಕವಾಗಿ ರದ್ದುಪಡಿಸಿದೆ. ಇಕ್ಬಾಲ್ ತನ್ನ ಚೇಂಬರ್ ಅನ್ನು ಮತಾಂತರ ಮತ್ತು ಮದುವೆಗಾಗಿ ಬಳಸಿದ ಆರೋಪವಿದೆ.

೪. ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

ಆಮ್ ಆದಮಿ ಪಕ್ಷದ ಗುಜರಾತನ ಅಧ್ಯಕ್ಷ ಗೋಪಾಲ ಇಟಾಲಿಯಾ ಇವರು ‘ಶ್ರೀ ಸತ್ಯನಾರಾಯಣ ಕಥೆ ಮತ್ತು ಭಾಗವತ ಕಥೆ ಅವೈಜ್ಞಾನಿಕವಾಗಿದೆ’ ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಬಗ್ಗೆ ಅವರ ಮೇಲೆ ದೂರು ದಾಖಲಿಸಲಾಗಿದೆ.

೫. ಕೇಂದ್ರ ಸರಕಾರ ಆದಷ್ಟು ಬೇಗ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕು !

ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳ ಪ್ರಮಾಣ ಹೆಚ್ಚುತ್ತಿವೆ. ಇದರಿಂದಾಗಿ ದೇಶಕ್ಕೆ ಈಗ ನಿಜವಾದ ಅರ್ಥದಲ್ಲಿ ಸಮಾನ ನಾಗರಿಕ ಕಾನೂನಿನ ಆವಶ್ಯಕತೆ ಇದೆ. ದೆಹಲಿ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ, ಕೇಂದ್ರವು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದೆ.

೬. ಇಂತಹ ಕಾನೂನು ಇಡೀ ದೇಶಕ್ಕೆ ಅಗತ್ಯವಿದೆ !

ಉತ್ತರ ಪ್ರದೇಶ ಸರಕಾರವು ಜನಸಂಖ್ಯಾ ನಿಯಂತ್ರಣ ಕಾನೂನನ್ನು ರೂಪಿಸುತ್ತಿದೆ.  ಈ ಕಾನೂನಿನಿಂದ, ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಯ ಲಾಭ ದೊರೆಯುವುದಿಲ್ಲ. ಅದೇ ರೀತಿ ಅವರು ಸರಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಹ ಸಾಧ್ಯವಾಗುವುದಿಲ್ಲ.

೭. ಇಂತಹ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಿ !

ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಅಲ್ ಕೈದಾ ಈ ಉಗ್ರ ಸಂಘಟನೆಯ ಮಿನಾಜ್ ಮತ್ತು ಮಸರುದ್ದೀನ್ ಈ ಇಬ್ಬರು ಉಗ್ರರನ್ನು ಬಂಧಿಸಿದೆ. ಅವರಿಂದ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉಗ್ರರು ಭಾಜಪದ ಹಿರಿಯ ಮುಖಂಡರನ್ನು ಗುರಿಯಾಗಿಸಲಿದ್ದರು.