ಟ್ವೀಟರ್ ನಲ್ಲಿ ದೇವತೆಗಳ ಮೂರ್ತಿಯೊಂದಿಗಿರುವ ಹಿಂದೂ ಹುಡುಗಿಯ ಛಾಯಾಚಿತ್ರದ ಬಗ್ಗೆ ಹಿಂದೂದ್ವೇಷಿಗಳಿಂದ ಟೀಕೆ !

‘ನಾಸಾ’ದಿಂದ ಇಂಟರ್ನ್‍ಶಿಪ್‍ಗೆ ಅರ್ಜಿ ಸಲ್ಲಿಸಲು ಟ್ವಿಟರ್ ಮೂಲಕ ಮನವಿ

* ‘ನಾಸಾ’ಗೆ ಈ ದೇವತೆಗಳ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ, ಆದರೆ ತಥಾಕಥಿತ ವಿಜ್ಞಾನಿಗಳಿಗೆ ಏಕೆ ಇಷ್ಟು ತೊಂದರೆ ಆಗುತ್ತಿದೆ ? ಅಥವಾ ಅವರಿಗೆ ಕೇವಲ ಹಿಂದುದ್ವೇಷವನ್ನು ತಣಿಸುವುದಿದೆಯೇ ?

* ಛಾಯಾಚಿತ್ರದಲ್ಲಿ ಓರ್ವ ಮುಸಲ್ಮಾನ ಅಥವಾ ಕ್ರೈಸ್ತ ತರುಣಿಯ ಛಾಯಾಚಿತ್ರವನ್ನು ಅವರ ಧಾರ್ಮಿಕ ಶ್ರದ್ಧೆಯೊಂದಿಗೆ ಪ್ರಕಟಿಸಿದ್ದರೆ, ವಿರೋಧಿಸುತ್ತಿದ್ದ ಜಾತ್ಯತೀತವಾದಿಗಳು ‘ಚ’ಕಾರವನ್ನೂ ತೆಗೆಯುತ್ತಿರಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಇದರಿಂದ ಇವರ ಹಿಂದುದ್ವೇಷ ದ್ವಿಮುಖ ನೀತಿಯೇ ಕಂಡುಬರುತ್ತದೆ !

ಪ್ರತಿಮಾ ರಾಯ್ ಮತ್ತು ಪೂಜಾ ರಾಯ್

ನವ ದೆಹಲಿ : ಅಮೇರಿಕಾದ ವಿಶ್ವವಿಖ್ಯಾತ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದಿಂದ ‘ಇಂಟರ್ನ್‍ಶಿಪ್’ಗೆ ಅರ್ಜಿ ಸಲ್ಲಿಸುವ ಬಗ್ಗೆ ಒಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್‍ನಲ್ಲಿ ೪ ‘ಇಂಟರ್ನಿ’ಗಳ ಛಾಯಾಚಿತ್ರಗಳನ್ನು ಸೇರಿಸಲಾಗಿದೆ. ಇದರಲ್ಲಿ ಪ್ರತಿಮಾ ರಾಯ್ ಎಂಬ ಹಿಂದೂ ಹುಡುಗಿಯ ಚಿತ್ರವೂ ಇದೆ. ಈ ಛಾಯಾಚಿತ್ರದಲ್ಲಿ, ರಾಯ್ ಅವರ ಹಿಂಭಾಗದಲ್ಲಿ ಹಿಂದೂ ದೇವತೆಗಳ ಮೂರ್ತಿ ಮತ್ತು ಚಿತ್ರಗಳನ್ನು ಕಾಣಬಹುದು. ಇದರಲ್ಲಿ ಶ್ರೀ ಸರಸ್ವತಿ ದೇವಿ, ಶ್ರೀ ದುರ್ಗಾದೇವಿ, ಭಗವಾನ್ ಶ್ರೀರಾಮ ಮತ್ತು ಸೀತಾಮಾತಾ ಅವರ ವಿಗ್ರಹಗಳು ಮತ್ತು ಛಾಯಾಚಿತ್ರಗಳಿವೆ, ಜೊತೆಗೆ ಶಿವಲಿಂಗ ಕೂಡ ಕಂಡುಬರುತ್ತದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಾಗುತ್ತಿವೆ. ಕೆಲವರು ನಾಸಾದ ವಿಜ್ಞಾನವನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರೆ, ಮತ್ತೊಂದೆಡೆ ಇತರರು ಪ್ರತಿಮಾ ರಾಯ್ ಅವರಿಗೆ ‘ಹಿಂದೂ ದೇವತೆಗಳೊಂದಿಗೆ ಇರುವುದರ ಅವಶ್ಯಕತೆ ಏನಿದೆ ?’ ಎಂದು ಪ್ರಶ್ನಿಸಿದ್ದಾರೆ, ಮತ್ತೊಂದೆಡೆ, ರಾಯ್ ಅವರನ್ನು ಪ್ರಶಂಸಿಸಲಾಗುತ್ತಿದೆ.

೨೦೧೪ ರಲ್ಲಿ, ಭಾರತದ ‘ಮಾರ್ಸ್ ಆರ್ಬಿಟರ್ ಮಿಶನ್’ನ ಯಶಸ್ಸಿನ ಮೇಲೆ ಬೆಳಕು ಚೆಲ್ಲುವ ‘ಸ್ಪೇಸ್ ಮೊಮ್ಸ್’ ಎಂಬ ಹೆಸರಿನ ಚಲನಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ನಿರ್ಮಾಪಕ ಡೇವಿಡ್ ಕೋಹೆನ್ ನಾಸಾದ ಈ ಮೇಲಿನ ಟ್ವೀಟ್ ಬಗ್ಗೆ ಪ್ರತಿಮಾ ಮತ್ತು ಪೂಜಾ ರಾಯ್ ಸಹೋದರಿಯರನ್ನು ಹೊಗಳಿದ್ದಾರೆ. ಅವರು ಈ ಸಮಯದಲ್ಲಿ, ‘ಬಾಹ್ಯಾಕಾಶ ಪ್ರಯಾಣವು ಭಾರತೀಯರ ‘ಡಿಎನ್‍ಎ’ಯಲ್ಲಿದೆ; ಆ ನಿಮಿತ್ತ ಪ್ರತಿಮಾ ಮತ್ತು ಪೂಜಾ ಅವರನ್ನು ನಾನು ಅಭಿನಂದಿಸುತ್ತೇನೆ.’ ಎಂದು ಬರೆದಿದ್ದಾರೆ. ‘ಈ ಟ್ವೀಟ್‍ಗೆ ಸಾಕಷ್ಟು ಪ್ರಚಾರ ಸಿಗುತ್ತಿದೆ.

ನಾವು ಏನೆಲ್ಲ ಮಾಡುತ್ತೇವೆಯೋ ಅದೆಲ್ಲವನ್ನು ದೇವರು ನೋಡುತ್ತಾನೆ ! – ಪ್ರತಿಮಾ ರಾಯ್

ಭಾರತೀಯ ಮೂಲದ ಸಹೋದರಿಯರಾದ ಪ್ರತಿಮಾ ರಾಯ್ ಮತ್ತು ಪೂಜಾ ರಾಯ್ ಇಬ್ಬರೂ ‘ನಾಸಾ ಗ್ಲೆನ್ ರೀಸರ್ಚ್ ಸೆಂಟರ್’ನಲ್ಲಿ ‘ಸಾಫ್ಟ್‍ವೇರ್ ಎಂಜಿನಿಯರ್ ಕೋ-ಆಪ್ ಇಂಟರ್ನ್‍ಶಿಪ್’ ಮಾಡುತ್ತಿದ್ದಾರೆ. ನಾಸಾ ಅವರ ಅನುಭವಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿತ್ತು. ಅದಕ್ಕೆ ಪ್ರತಿಮಾ ಹೇಳಿದ್ದು, ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ. ನಾವು ಏನೆಲ್ಲಾ ಮಾಡುತ್ತೇವೆಯೋ ಅವೆಲ್ಲವನ್ನು ದೇವರು ನೋಡುತ್ತಾನೆ ಎಂದು ಹೇಳಿದರು.