ಸನಾತನ ಸಂಸ್ಥೆಗಾಗಿ ಅರ್ಪಣೆ ನೀಡುವಾಗ ಅವರು ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ !

‘ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆ ಮಾಡುವ ದೊಡ್ಡ ಸಾಧಕವರ್ಗವಿರುವಂತೆಯೇ ಸನಾತನದ ರಾಷ್ಟ್ರ-ಧರ್ಮದ ವಿಚಾರವನ್ನು ನಂಬುವ ಹಿತಚಿಂತಕರದ್ದು ಸಹ ಒಂದು ವರ್ಗವಿದೆ. ಈ ವರ್ಗವು ಸನಾತನದ ಹಿತಚಿಂತಕರಾಗಿದ್ದರೂ ಸನಾತನದ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿಲ್ಲ. ಅವರ ಆಧ್ಯಾತ್ಮಿಕ ಶ್ರದ್ಧೆ ಅಥವಾ ಬಾಂಧವ್ಯವು ಇತರ ಆಧ್ಯಾತ್ಮಿಕ ಸಂಸ್ಥೆ, ಗುರು ಅಥವಾ ಸಂತರೊಂದಿಗೆ ಇರಬಹುದು. ಇಂತಹ ಹಿತಚಿಂತಕರು ಅರ್ಪಣೆಯನ್ನು ಸಂಗ್ರಹಿಸುವುದನ್ನು ನೋಡಿದಾಗ ‘ಈ ಅರ್ಪಣೆಯನ್ನು ಸನಾತನ ಸಂಸ್ಥೆಗಾಗಿ ಸಂಗ್ರಹಿಸಲಾಗುತ್ತಿದೆ, ಎಂದು ತಿಳಿದು ಅವರಲ್ಲಿ ಕೆಲವರು ಅರ್ಪಣೆ ನೀಡುತ್ತಿದ್ದಾರೆ, ಎಂಬುದು ಗಮನಕ್ಕೆ ಬಂದಿದೆ. ಇಂತಹ ತಪ್ಪುಗ್ರಹಿಕೆ ನಿರ್ಮಾಣವಾಗಬಾರದೆಂದು ಸನಾತನ ಸಂಸ್ಥೆಯ ಆಧ್ಯಾತ್ಮಿಕ ಕಾರ್ಯಕ್ಕಾಗಿ ಅಥವಾ ಆಶ್ರಮಕ್ಕಾಗಿ ಅರ್ಪಣೆ ನೀಡಲಿಕ್ಕಿದ್ದರೆ ‘ಸಂಸ್ಥೆಯ ಅಧಿಕೃತ ಟ್ರಸ್ಟ್‌ಗಾಗಿ ನೀಡುತ್ತಿದ್ದೇವೆಯಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತಾವು ಪಾವತಿಪುಸ್ತಕದಲ್ಲಿರುವ ಹೆಸರನ್ನು ನೋಡಿ ಅಥವಾ ಸ್ಥಳೀಯ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಇದನ್ನು ಖಚಿತಪಡಿಸಿಕೊಳ್ಳಬಹುದು.

ಅದೇ ರೀತಿ ‘ಸನಾತನ ಸಂಸ್ಥೆಯವರಾಗಿದ್ದೇವೆ, ಎಂದು ಬಿಂಬಿಸಿ ಬೇರೆ ಯಾರಾದರೂ ಇತರ ಆಧ್ಯಾತ್ಮಿಕ ಸಂಸ್ಥೆಗಾಗಿ ಧನ ಅಥವಾ ಭೂಮಿಯನ್ನು ಅರ್ಪಣೆಗಾಗಿ ಕೇಳುತ್ತಿದ್ದರೆ ಅವರಿಂದ ಎಚ್ಚರದಿಂದಿರಬೇಕು ಹಾಗೂ ಅದರ ಬಗ್ಗೆ ಕೂಡಲೇ ತಿಳಿಸಬೇಕೆಂದು ಸವಿನಯ ವಿನಂತಿ !

ಹೆಸರು ಮತ್ತು ಸಂಪರ್ಕ ಸಂಖ್ಯೆ: ಸೌ. ಭಾಗ್ಯಶ್ರೀ ಸಾವಂತ – ೭೦೫೮೮೮೫೬೧೦

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o  ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್- 403401