ಹೊಟ್ಟೆಯ ಸಮಸ್ಯೆಗಳು, ದೋಷ ಲಕ್ಷಣಗಳು ಮತ್ತು ಋತುಗಳಿಗನುಸಾರ ಪಥ್ಯದ ಪದಾರ್ಥಗಳು !

ಜೀರ್ಣದ ಸಮಸ್ಯೆಗಳು, ಆಮ್ಲಪಿತ್ತವಿರುವ ರೋಗಿಗಳಿಗೆ ’ನೀವು ನಮಗೆ ಏನೂ ತಿನ್ನಬೇಡಿ ಎನ್ನುತ್ತೀರಿ. ಹಸಿಮೆಣಸಿನಕಾಯಿ ಬೇಡ, ಪನೀರ್, ಮೈದಾ, ರವೆ, ಅವಲಕ್ಕಿ, ಬೇಕರಿ, ಬ್ರೆಡ್, ಆಲುಗಡ್ಡೆ ಬೇಡ. ಹಾಗಾದರೆ ತಿನ್ನುವುದಾದರೂ ಏನು ?’, ಎಂಬ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗುತ್ತದೆ. ಕೆಳಗೆ ಕೆಲವು ಪಥ್ಯದ ಮತ್ತು ತಿನ್ನುವಂತಹ ಪದಾರ್ಥಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಈ ಎಲ್ಲ ಪದಾರ್ಥಗಳನ್ನು ಹಸಿಮೆಣಸಿನಕಾಯಿ, ಈರುಳ್ಳಿ-ಬೆಳ್ಳುಳ್ಳಿಯಿಲ್ಲದೇ ತಯಾರಿಸಬಹುದು ಮತ್ತು ಹಬ್ಬದ ದಿನಗಳಲ್ಲಿಯೂ ಮನೆಯಲ್ಲಿ ಅನಾರೋಗ್ಯವಿರುವವರಿಗೂ ಕೊಡಬಹುದು. ಆದರೂ ಪ್ರತಿಯೊಬ್ಬರ ಹೊಟ್ಟೆಯ ಸಮಸ್ಯೆಗನುಸಾರ ದೋಷ ಲಕ್ಷಣಗಳು ಮತ್ತು ಋತುವಿಗನುಸಾರ ಹೆಚ್ಚುಕಡಿಮೆ ಬದಲಾವಣೆ ಮಾಡಿ ಕೆಳಗಿನ ಕೆಲವು ಪದಾರ್ಥಗಳನ್ನು ಬಳಸಬಹುದು.

೧. ತಿಂಡಿಯ ಪದಾರ್ಥಗಳು

ಶೀರಾ, ಗೋದಿರವೆ ಉಪ್ಪಿಟ್ಟು, ಅಕ್ಕಿಯನ್ನು ನೆನೆಸಿ ರವೆ ತಯಾರಿಸಿ ಅದರ ಉಪ್ಪಿಟ್ಟು, ಅಕ್ಕಿಯ ಶ್ಯಾವಿಗೆಯ ಉಪ್ಪಿಟ್ಟು, ಹೆಸರುಬೇಳೆ ಮತ್ತು ಅಕ್ಕಿಯನ್ನು ನೆನೆಸಿ ಮಿಕ್ಸಿಯಿಂದ ತೆಗೆದು ಅದರ ದೋಸೆ, ಅಕ್ಕಿ-ಕೊಬ್ಬರಿಯನ್ನು ಬಳಸಿ ನೀರುದೋಸೆ, ಅಕ್ಕಿಹಿಟ್ಟಿನ ದೋಸೆ, ಥಾಲಿಪಿಟ್ಟು; ಗೆಣಸು, ಈರುಳ್ಳಿ, ಗಜ್ಜರಿಗಳ ಕಟಲೆಟ್, ತರಕಾರಿಗಳ ಪರಾಠಾಗಳು, ತಾಜಾ ಮಸಾಲೆಅನ್ನ, ರಾಗಿ
ಅಂಬಲಿ, ರಾಗಿ ದೋಸೆ, ಬೇಯಿಸಿದ ಹಿಟ್ಟಿನಿಂದ ರೊಟ್ಟಿ, ಚಟ್ನಿ.

(ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ

೨. ಒಣ ತಿನಿಸುಗಳು

ಜೋಳ/ಭತ್ತದ ಅರಳಿನ ಚಿವಡಾ, ಖಾಕರಾ, ಮಖಾನೆ, ಉಂಡೆ, ರಾಜಗೀರಾ ಅರಳುಗಳನ್ನು ಹುರಿದು, ಅರಳಿನ ಹಿಟ್ಟು ಹಾಲು, ದ್ರಾಕ್ಷಿ, ದಾಳಿಂಬೆಹಣ್ಣು, ಅಂಜೂರದ ಹಣ್ಣುಗಳು.

೩. ಊಟದಲ್ಲಿನ ಖಾದ್ಯಗಳು

ಹಾಲುಗುಂಬಳಕಾಯಿಯ ಪಲ್ಯ (ಹೆಸರುಬೇಳೆ/ ಕೊಬ್ಬರಿ/ ಕೇವಲ ಕೊತ್ತಂಬರಿಸೊಪ್ಪನ್ನು ಹಾಕಿ), ಮಜ್ಜಿಗೆಯಲ್ಲಿನ ತರಕಾರಿಸೊಪ್ಪು, ಪಡವಳಕಾಯಿ (ಬೇಳೆಯನ್ನು ಹಾಕಿ / ಹೆಸರು ಬೇಳೆ ಮತ್ತು ಹಿಟ್ಟು ಹಾಕಿ, ಕೊಬ್ಬರಿಯನ್ನು ಮಿಕ್ಸಿ ಮಾಡಿ), ಬೆಂಡೆಕಾಯಿ, ಹೀರೆಕಾಯಿ, ಹೆಸರುಕಾಳು, ಚನ್ನಂಗಿಕಾಳು, ಮೂಲಂಗಿ, ಗಜ್ಜರಿ, ಕೆಂಪು ಕುಂಬಳಕಾಯಿ, ಕೆಂಪುಪಲ್ಯ, ಅನ್ನ-ತೊವ್ವೆ, ಪಲಾವ್ ತುಪ್ಪ, ಬೆಣ್ಣೆ, ಎಣ್ಣೆಯನ್ನು ಹಚ್ಚದೇ ಗ್ಯಾಸಿನ ಮೇಲೆ (ಒಲೆಯ ಮೇಲೆ) ಹುರಿದ ಚಿಕ್ಕ ಚಿಕ್ಕ ಚಪಾತಿ(ಪುಲ್ಕಾ), ರೊಟ್ಟಿ.

೪. ಕುಡಿಯಲು

ಶುಂಠಿಯ ನೀರು, ಅಜ್ವಾನದ ನೀರು, ಅರಳಿನ ನೀರು, ದ್ರಾಕ್ಷಿಯ ನೀರು, ಮಜ್ಜಿಗೆಯಲ್ಲಿ ಜೀರಿಗೆ ಮತ್ತು ಸೈಂಧವ ಲವಣವನ್ನು ಹಾಕಿದ ನೀರು, ತರಕಾರಿಗಳ ಸೂಪ್, ಹೆಸರುಕಾಳಿನ ಸಾರು, ರಸಂ, ಹುರುಳಿಯ ಝುಣಕಾ (ವ್ಯಕ್ತಿಯ ಸ್ಥಿತಿಗನುಸಾರ), ಹೆಸರು ಬೇಳೆಯ ಹಿಟ್ಟು ಅಥವಾ ಜೋಳದ ಹಿಟ್ಟು ಹಾಕಿ ಮಜ್ಜಿಗೆ ಸಾರು.

೫. ಮಸಾಲೆ

ಹಸಿಶುಂಠಿ, ಬೆಳ್ಳ್ಳುಳ್ಳಿ, ಜೀರಿಗೆ / ಮೆಣಸಿನಕಾಳು/ ಕೊತ್ತಂಬರಿ ಬೀಜಗಳ ಪುಡಿ; ಎಳ್ಳು ಈ ಮಸಾಲೆಗಳು; ನಿಂಬೆಹಣ್ಣು, ಕೊತ್ತಂಬರಿ, ಹಸಿಶುಂಠಿಯನ್ನು ಮಿಕ್ಸಿ ಮಾಡಿದ ಮಸಾಲೆ.

೬. ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುವುದರ ಕಾರಣ

ಅ. ಅದನ್ನು ಅನೇಕ ದಿನಗಳಿಂದ ನಾವೇ ನಮ್ಮ ಮೇಲೆ ಎಳೆದುಕೊಂಡಿರುತ್ತೇವೆ

ಆ. ಎಲ್ಲವನ್ನು ಸಂಭಾಳಿಸಿ ಆಹಾರ ನಿಯಮಗಳ ಕಡೆಗೆ ಸ್ವಲ್ಪ ದುರ್ಲಕ್ಷವಾಗಿರುತ್ತದೆ.

ಇ. ಮಾನಸಿಕ ಒತ್ತಡದಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ವಾಗುವುದು ಸಹ ಇದರ ಹಿಂದಿನ ಒಂದುದೊಡ್ಡ ಕಾರಣವಾಗಿದೆ.

ಈ. ವಾಸಿಯಾಗಲು ಹೊಟ್ಟೆಯನ್ನು ಸಂಪೂರ್ಣ ಖಾಲಿ ಇಡಲು ಆಗುವುದಿಲ್ಲ; ಅದು ಸತತವಾಗಿ ನಡೆದಿರುತ್ತದೆ.

ಸ್ವಲ್ಪ ತಾಳ್ಮೆ ಮತ್ತು ನಾಲಿಗೆಯ ಮೇಲೆ ನಿಯಂತ್ರಣ, ವಿಶೇಷವಾಗಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಶಾಶ್ವತವಾಗಿ ದೂರಗೊಳಿಸುವುದು ತುಂಬಾ ಆವಶ್ಯಕವಾಗಿದೆ. ಅದರಲ್ಲಿಯೂ ಸ್ವಲ್ಪ ಜಾಣ್ಮೆಯನ್ನು ಉಪಯೋಗಿಸಿ ನಮ್ಮ ನಮ್ಮ ಲಕ್ಷಣಗಳಿಗನುಸಾರ ಹಾಗೆಯೇ ಹಳೆಯ ನೋವುಗಳಿರುವಾಗ ವೈದ್ಯಕೀಯ ಸಲಹೆಗನುಸಾರ ಮೇಲಿನ ಪದಾರ್ಥಗಳ ವಿಚಾರ ಮಾಡುವುದು ಮಹತ್ವದ್ದಾಗಿದೆ ! (೫.೯.೨೦೨೪)

– (ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ ಇವರ ’ಫೆಸಬುಕ್’ನ ಆಧಾರ)