ಈಶ್ವರನು ಮಾನವನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಅನುಭವವನ್ನು ನೀಡುವ ಕೊರೊನದ ಎರಡೆನೆಯ ಅಲೆ !

ಕೊರೊನಾದ ಕುರಿತು ಮಾರ್ಗದರ್ಶಕ ಅಂಕಣ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಕೊರೋನದ ಮೊದಲನೆಯ ಅಲೆಯ ಸಮಯದಲ್ಲಿ ಮಾಸ್ಕ್‌ನ್ನು ಧರಿಸುವುದು, ಸಾಮಾಜಿಕ ಅಂತರವನ್ನು ಪಾಲಿಸುವುದು ಇವುಗಳ ಬಗ್ಗೆ ಸಮಾಜದಲ್ಲಿ ಬಹಳಷ್ಟು ಜನರಿಗೆ ಗಾಂಭೀರ್ಯ ಇರಲಿಲ್ಲ. ‘ನನಗೇನೂ ಆಗುವುದಿಲ್ಲ, ಎಂಬ ಮನುಷ್ಯನ ಅಹಂಕಾರವು ನಿಷ್ಕಾಳಜಿತನಕ್ಕೆ ಕಾರಣವಾಗಿದೆ. ಈಗ ಎರಡನೇಯ ಅಲೆಯಲ್ಲಿ ಮಾತ್ರ ರೋಗಿಗಳು ಮತ್ತು ಮೃತರ ಸಂಖ್ಯೆಯು ವೇಗವಾಗಿ ಹೆಚ್ಚ್ಚಾದಾಗ ಮಾತ್ರ ‘ನನಗೇನೂ ಆಗುವುದಿಲ್ಲ, ಎಂಬ ಮನುಷ್ಯನ ಅಹಂಕಾರವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಾಣಿಸುತ್ತದೆ. ಮೊದಲನೇಯ ಅಲೆಯ ಸಮಯದಲ್ಲಿ ಬಹುತೇಕ ಜನರು ಮಾಸ್ಕ್‌ಅನ್ನು ಧರಿಸದೇ ತಿರುಗಾಡುತ್ತಿದ್ದರು; ಆದರೆ ಈಗ ಎರಡನೇಯ ಅಲೆಯ ಸಮಯದಲ್ಲಿ ಹೆಚ್ಚಿನ ಜನರಿಗೆ ಒಂದರ ಮೇಲೆ ಇನ್ನೊಂದು ಹೀಗೆ ೨ ಮಾಸ್ಕ್‌ಗಳನ್ನು ಧರಿಸಬೇಕಾಗಿ ಬಂದಿದೆ ಮತ್ತು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಪಾಲಿಸಬೇಕಾಗುತ್ತಿದೆ.

ಕಲಿಯುಗದಲ್ಲಿ ಹೆಚ್ಚಿನ ಮನುಷ್ಯರಲ್ಲಿ ‘ನಾನು ಸರ್ವಶ್ರೇಷ್ಠನಿರುವೆನೆಂಬ ಅಹಂಕಾರವು ನಿರ್ಮಾಣವಾಗಿದೆ. ಆದುದರಿಂದ ಕೊರೊನಾ ಮಹಾಮಾರಿಯು ಬರುವ ಮೊದಲು ಮನುಷ್ಯನು ನಿಶ್ಚಿಂತನಾಗಿ ತಿರುಗಾಡುತ್ತಿದ್ದನು. ಮನುಷ್ಯನಿಗೆ ಈಶ್ವರನ ಕುರಿತಾಗಿ ಭಯವಿರಲಿಲ್ಲ ಮತ್ತು ಧರ್ಮಾಚರಣೆಯ ಆವಶ್ಯಕತೆಯೂ ಅನಿಸುತ್ತಿರಲಿಲ್ಲ. ಈಶ್ವರನು ಮನುಷ್ಯನಲ್ಲಿನ ಅಹಂಕಾರವನ್ನು ನಾಶ ಮಾಡಲು ನಿಸರ್ಗದ ಬೆತ್ತವನ್ನು ಹೇಗೆ ಉಪಯೋಗಿಸುತ್ತಾನೆ ಎಂದು ಗಮನದಲ್ಲಿಟ್ಟು ಮತ್ತು ಮುಂದೆ ಬರುವ ದೊಡ್ಡ ಆಪತ್ಕಾಲದ ಜಾಡನ್ನು ಗುರುತಿಸಿ ಮನುಷ್ಯನು ಇನ್ನಾದರೂ ಜಾಣನಾಗಿ ಸ್ವರಕ್ಷಣೆಗಾಗಿ ಧರ್ಮಾಚರಣೆ ಮಾಡಬೇಕು ಮತ್ತು ಸಾಧನೆಯನ್ನು ಮಾಡಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೬.೨೦೨೧)

ಕೊರೊನಾದ ಕಾಲದಲ್ಲಿ ಬಂದ ಒಳ್ಳೆಯ ಅನುಭವಗಳನ್ನು ಕೂಡಲೇ ತಿಳಿಸಿ

ಆರೋಗ್ಯ ಸಹಾಯ ಸಮಿತಿ

ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಆರೋಗ್ಯ ಸಹಾಯ ಸಮಿತಿ, ‘ಮಧು ಸ್ಮೃತಿ, ಸತ್ಯನಾರಾಯಣ ದೇವಸ್ಥಾನದ ಸಮೀಪ, ಫೋಂಡಾ, ಗೋವಾ – 403401

ಸಂಚಾರವಾಣಿ ಕ್ರ. : 7058885610,

ಗಣಿಕೀಯ ವಿಳಾಸ :  [email protected]