ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳನ್ನು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ !

ವಿವಿಧ ಭಾರತೀಯ ಭಾಷೆಗಳ ಮತ್ತು ಆಂಗ್ಲ ಭಾಷೆಯ ಜ್ಞಾನವಿರುವ ಸಾಧಕರು, ಓದುಗರು ಮತ್ತು ಹಿತಚಿಂತಕರಿಗೆ ಆಧ್ಯಾತ್ಮಿಕ ಜ್ಞಾನದಾನದ ಕಾರ್ಯದಲ್ಲಿ  ಪಾಲ್ಗೊಳ್ಳಲು ಅಮೂಲ್ಯ ಅವಕಾಶ !

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ಮೇ ೨೦೨೧ ರ ವರೆಗೆ ಕೇವಲ ೩೩೮ ಗ್ರಂಥ-ಕಿರುಗ್ರಂಥಗಳು ಮುದ್ರಣಗೊಂಡಿವೆ. ಇನ್ನುಳಿದ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಆಧ್ಯಾತ್ಮಿಕ ಗ್ರಂಥಗಳ ರಚನೆಯ ಕಾರ್ಯವು ಹೆಚ್ಚು ವೇಗವಾಗಿ ಆಗಲು ಅನೇಕ ಜನರ ಸಹಾಯದ ಆವಶ್ಯಕತೆಯಿದೆ. ತಮ್ಮ ಆಸಕ್ತಿ ಮತ್ತು ಕ್ಷಮತೆಗನುಸಾರ ಲೇಖನಗಳ ಸಂಕಲನ, ಸಂರಚನೆ ಮತ್ತು ವಿವಿಧ ಭಾಷೆಗಳಲ್ಲಿ ಭಾಷಾಂತರ ಮಾಡುವುದು ಮುಂತಾದ ಗ್ರಂಥಗಳ ರಚನೆಯ ಕಾರ್ಯದಲ್ಲಿ ತಾವು ಕೈಜೋಡಿಸಬಹುದು.

ಸನಾತನದ ಅಮೂಲ್ಯ ಗ್ರಂಥಸಂಪತ್ತು

ಅಧ್ಯಾತ್ಮದಲ್ಲಿ ಏಕೆ ಮತ್ತು ಹೇಗೆ ಇದರ ವೈಜ್ಞಾನಿಕ ಪರಿಭಾಷೆಯಲ್ಲಿ ಉತ್ತರ ನೀಡುವ ಗ್ರಂಥ !

೧. ಸನಾತನದ ಮುಂಬರುವ ಗ್ರಂಥಗಳ ಕೆಲವು ವಿಷಯಗಳು

ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳ ವಿಷಯ ಮತ್ತು ಸಂಭಾವ್ಯ ಗ್ರಂಥಗಳ ಸಂಖ್ಯೆ ಇವುಗಳ ಪಟ್ಟಿಯನ್ನು ಈ ಲೇಖನದ ಕೆಳಗಿನ ಭಾಗದಲ್ಲಿ ನೀಡಲಾಗಿದೆ. ಇಂದು ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ೫ ಸಾವಿರ ಗ್ರಂಥಗಳಲ್ಲಿ ಕೇವಲ ೪೯ ಗ್ರಂಥಮಾಲಿಕೆಗಳ ವಿಷಯಗಳ (ಒಟ್ಟು ೧ ಸಾವಿರ ೮೨೩ ಗ್ರಂಥಗಳ) ಪಟ್ಟಿಯನ್ನು ಪ್ರಕಟಿಸುತ್ತಿದ್ದೇವೆ. ಪ್ರಸ್ತುತ ಪಟ್ಟಿಯನ್ನು ಓದಿ ತಮ್ಮಲ್ಲಿನ ಯಾರಿಗಾದರೂ ಯಾವುದಾದರೊಂದು ಅಥವಾ ಕೆಲವು ವಿಷಯಗಳ ಸಂದರ್ಭದಲ್ಲಿ ಅಧ್ಯಯನ(ಜ್ಞಾನ)ವಿದ್ದರೆ ಇಂತಹ ಗ್ರಂಥಗಳ ಪ್ರಾಥಮಿಕ ಸಂಕಲನಕ್ಕಾಗಿ ತಾವು ಖಂಡಿತವಾಗಿಯೂ ಸಮಯವನ್ನು ಕೊಡಬಹುದು, ಹಾಗೆಯೇ ತಮ್ಮ ಪರಿಚಿತರಲ್ಲಿ ಈ ವಿಷಯಗಳ ಬಗ್ಗೆ ತಿಳಿದವರಿದ್ದರೆ, ಅವರನ್ನೂ ಈ ಗ್ರಂಥಗಳ ಸೇವೆಯಲ್ಲಿ ಸಹಭಾಗಿಯಾಗಲು ತಾವು ಕರೆ ನೀಡಬಹುದು. ಇದೇ ಉದ್ದೇಶವನ್ನು ಇಟ್ಟುಕೊಂಡು ನಾವು ಈ ಪಟ್ಟಿಯನ್ನು ಪ್ರಕಟಿಸುತ್ತಿದ್ದೇವೆ.

ಮುಂಬರುವ ಯುದ್ಧಕಾಲದ ಮೊದಲು ಈ ಎಲ್ಲ ಗ್ರಂಥಗಳ ಪ್ರಾಥಮಿಕ ಸಂಕಲನವಾದರೆ, ಯುದ್ಧಕಾಲದ ಬಳಿಕ ಭಾವಿ ಪೀಳಿಗೆಗೆ ಈ ಗ್ರಂಥಗಳಿಂದ ಪ್ರತ್ಯಕ್ಷ ಉಪಯೋಗವಾಗಬಹುದು.

೧ ಅ. ಸನಾತನದ ಗ್ರಂಥಗಳ ಮಹತ್ವ : ‘ವೇದ, ಉಪನಿಷತ್ತು, ಪುರಾಣ ಇತ್ಯಾದಿ ಧರ್ಮಗ್ರಂಥಗಳು ಕಳೆದ ಸಾವಿರಾರು ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಿವೆ. ಅದೇ ರೀತಿ ಸನಾತನದ ಗ್ರಂಥಗಳು ಮುಂದೆ ಸಾವಿರಾರು ವರ್ಷಗಳವರೆಗೆ ಮಾನವಜಾತಿಗೆ ಮಾರ್ಗದರ್ಶನ ಮಾಡುವವು, ಎಂದು ಓರ್ವ  ಸಂತರು ಆಶೀರ್ವಾದ ಮಾಡಿದ್ದಾರೆ.

೨. ಗ್ರಂಥಗಳ ರಚನೆಯ ಕಾರ್ಯದಲ್ಲಿ ಸಹಭಾಗಿಗಳಾಗಲು ಇಚ್ಛಿಸುವವರಿಗೆ ಉಪಲಬ್ಧವಿರುವ ವಿವಿಧ ಸೇವೆಗಳು

೨ ಅ. ಲೇಖನಗಳನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು, ಪರಿಶೀಲನೆ ಮಾಡುವುದು ಮತ್ತು ಸಂಕಲನ ಮಾಡುವುದು : ಲೇಖನಗಳನ್ನು  ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಬೆರಳಚ್ಚು ಮಾಡಿದ ಬಳಿಕ ‘ಆ ಬೆರಳಚ್ಚು ವ್ಯವಸ್ಥಿತವಾಗಿ ಆಗಿದೆಯೇ ಇಲ್ಲವೋ ?, ಎಂಬುದನ್ನು ಮೂಲ ಲೇಖನದೊಂದಿಗೆ ಪರಿಶೀಲನೆ ಮಾಡುವುದು ಮತ್ತು ಲೇಖನಗಳ ಸಂಕಲನ ಮಾಡುವುದು.

೨ ಅ ೧. ಆವಶ್ಯಕ ಕೌಶಲ್ಯ : ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಬರಬೇಕು, ಹಾಗೆಯೇ ಮರಾಠಿ, ಹಿಂದಿ ಅಥವಾ ಆಂಗ್ಲ ಭಾಷೆಗಳ ವ್ಯಾಕರಣ ಮತ್ತು ವಾಕ್ಯರಚನೆಗಳ ಜ್ಞಾನವಿರಬೇಕು.

೨ ಆ. ಲೇಖನಗಳಲ್ಲಿನ ಸಂಸ್ಕೃತ ವಚನ, ಶ್ಲೋಕ ಮುಂತಾದವುಗಳ ಪರಿಶೀಲನೆ ಮಾಡುವುದು : ಗ್ರಂಥಗಳ ಲೇಖನಗಳಲ್ಲಿ ಬರುವ ಸಂಸ್ಕೃತ ಶ್ಲೋಕಗಳು, ವಚನಗಳು ಮತ್ತು ಸುಭಾಷಿತಗಳನ್ನು ಪರಿಶೀಲಿಸುವುದು; ಅವುಗಳ ಮೂಲ ಸಂದರ್ಭವನ್ನು ಬರೆಯುವುದು; ಅವುಗಳ ಅರ್ಥವನ್ನು ಬರೆಯುವುದು ಇತ್ಯಾದಿ ಸೇವೆಗಳು ಇದರಲ್ಲಿ ಬರುತ್ತವೆ. ಇದಕ್ಕಾಗಿ ಸಾಧಕರಿಗೆ ಸಂಸ್ಕೃತ ಭಾಷೆಯ ಅಲ್ಪ-ಸ್ವಲ್ಪ ಜ್ಞಾನವಿರುವುದು ಆವಶ್ಯಕವಾಗಿದೆ. ಸಂಸ್ಕೃತಭಾಷೆಯ ಅಲ್ಪಸ್ವಲ್ಪ ಜ್ಞಾನವಿಲ್ಲದಿದ್ದರೆ ಅಷ್ಟು ಲೇಖನವನ್ನು ಬಿಟ್ಟು ಇತರ ಲೇಖನವನ್ನು ಅಂತಿಮಗೊಳಿಸಬಹುದು.

೨ ಇ. ಮರಾಠಿ, ಹಾಗೆಯೇ ಇತರ ಭಾಷೆಗಳಲ್ಲಿನ ಗ್ರಂಥಗಳ ಸಂಕಲನ ಮಾಡುವುದು

೨ ಇ ೧. ವಿವಿಧ ಸೇವೆಗಳು

ಅ. ಯಾವ ವಿಷಯದ ಗ್ರಂಥವನ್ನು ನೀವು ತಯಾರಿಸುವಿರೋ, ಆ ವಿಷಯದ ವಿವಿಧ ಅಂಶಗಳ ಶಿರೋನಾಮೆಗನುಸಾರ ಅನುಕ್ರಮಣಿಕೆಯನ್ನು ತಯಾರಿಸುವುದು.

ಆ. ಅನುಕ್ರಮಣಿಕೆಗನುಸಾರ ಲೇಖನವನ್ನು ಜೋಡಿಸಿ, ಆ ಲೇಖನದ ಅಂತಿಮ ಸಂಕಲನವನ್ನು ಮಾಡುವುದು.

ಇ. ಸಾಧಾರಣ ೧೦೦ ಪುಟಗಳ (೫೦೦ ಕೆ.ಬಿಯ) ಒಂದು ಗ್ರಂಥ ತಯಾರಾಗುತ್ತದೆ. ಆ ಲೇಖನದಿಂದ ‘ಗ್ರಂಥದ ಎಷ್ಟು ಪುಟಗಳಾಗುತ್ತವೆ ? ಎಂಬುದನ್ನು ನೋಡುವುದು ಮತ್ತು  ಪುಟ ಸಂಖ್ಯೆಗಳ ಅಂದಾಜು ನೋಡಿ ಗ್ರಂಥವನ್ನು ೨,೩,…   ಭಾಗಗಳಲ್ಲಿ ವಿಭಜನೆ ಮಾಡುವುದು.

ಈ. ಪ್ರತಿಯೊಂದು ಭಾಗದ ಅನುಕ್ರಮಣಿಕೆ ಮತ್ತು ಗ್ರಂಥದ ಕಿರುಪರಿಚಯವನ್ನು ಸಿದ್ಧಪಡಿಸುವುದು

ಉ. ಪ್ರತಿಯೊಂದು ಭಾಗದ ಮುಖಪುಟ ಮತ್ತು ಕೊನೆಯ ಪುಟದ ಲೇಖನವನ್ನು ಸಿದ್ಧಪಡಿಸುವುದು.

೨ ಈ. ವಿವಿಧ ಭಾಷೆಗಳಲ್ಲಿನ ಗ್ರಂಥ ಮತ್ತು ಕಿರುಗ್ರಂಥಗಳನ್ನು ಗಣಕಯಂತ್ರದಲ್ಲಿ ಸಂರಚನೆಯನ್ನು ಮಾಡುವುದು, ಹಾಗೆಯೇ ಗ್ರಂಥಗಳಲ್ಲಿ ಮುದ್ರಿಸಲು ಕೋಷ್ಟಕಗಳನ್ನು ಸಿದ್ಧ ಪಡಿಸುವುದು : ಇದಕ್ಕಾಗಿ ಗಣಕಯಂತ್ರದ ‘ಇನ್-ಡಿಸೈನ್ಮಾಹಿತಿಯ ಜ್ಞಾನವಿರಬೇಕು.

೨ ಉ. ಮರಾಠಿ, ಹಿಂದಿ, ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿನ ಗ್ರಂಥಗಳ ಇತರ ದೇಶ-ವಿದೇಶಗಳಲ್ಲಿನ ಭಾಷೆಗಳಲ್ಲಿ ಭಾಷಾಂತರ ಮಾಡುವುದು : ಮರಾಠಿ, ಹಿಂದಿ, ಕನ್ನಡ ಅಥವಾ ಆಂಗ್ಲ ಈ ಭಾಷೆಯ ಗ್ರಂಥಗಳು ಉಪಲಬ್ಧವಿವೆ. ಈ ಸೇವೆಯನ್ನು ಮಾಡಲು ‘ತಾವು ಯಾವ ಭಾಷೆಯಲ್ಲಿ ಭಾಷಾಂತರ ಮಾಡಲು ಇಚ್ಛಿಸುವಿರಿರೋ, ಆ ಭಾಷೆಯ ವ್ಯಾಕರಣದ ಸೂಕ್ತ ಜ್ಞಾನವಿರುವುದು ಆವಶ್ಯಕವಾಗಿದೆ. ಇಂತಹವರೂ ತಮ್ಮ ಹೆಸರನ್ನು ತಿಳಿಸಬೇಕು. ಭಾಷೆಯ ಜ್ಞಾನವಿದ್ದು, ವ್ಯಾಕರಣದ ವಿಶೇಷ ಜ್ಞಾನವಿಲ್ಲದಿದ್ದರೆ, ಅದನ್ನು ಕಲಿತುಕೊಳ್ಳಬಹುದು. ಗಣಕಯಂತ್ರದ ಜ್ಞಾನ (ಮರಾಠಿಯಲ್ಲಿರುವ ಲೇಖನಗಳನ್ನು ಆಂಗ್ಲ ಭಾಷೆಯಲ್ಲಿ ಭಾಷಾಂತರ ಮಾಡುವ ಸೇವೆಗಾಗಿ  MsWord  ಮತ್ತು  PDF ಇವುಗಳ ಜ್ಞಾನವಿರಬೇಕು)

೩. ಗ್ರಂಥಗಳ ರಚನೆಯ ಕಾರ್ಯದಲ್ಲಿ ಭಾಗವಹಿಸಲು ಸಂಪರ್ಕಿಸಿರಿ !

ಮೇಲಿನ ಎಲ್ಲ ಸೇವೆಗಳಿಗಾಗಿ ಗಣಕಯಂತ್ರದ ಅಲ್ಪಸ್ವಲ್ಪ ಜ್ಞಾನವಿರಬೇಕು, ಹಾಗೆಯೇ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಲು ಬರುವುದು ಆವಶ್ಯಕವಾಗಿದೆ. ಮೇಲೆ ಉಲ್ಲೇಖಿಸಿದ ಸೇವೆಗಳನ್ನು ಸನಾತನದ ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಮಾಡಬಹುದು. ಗ್ರಂಥಗಳ ನಿರ್ಮಾಣಕ್ಕೆ ಸಂಬಂಧಿಸಿದ ಸೇವೆಗಳನ್ನು ಕಲಿಯಲು ಆಸಕ್ತರಾಗಿರುವವರು ಸನಾತನದ ಆಶ್ರಮದಲ್ಲಿ ೨-೩ ವಾರಗಳವರೆಗೆ ಇದ್ದು ಸೇವೆಗಳನ್ನು ಕಲಿಯಬಹುದು. ಮುಂದೆ ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಸೇವೆಯನ್ನು ಮಾಡಬಹುದು.

ಈ ಸೇವೆಗಳನ್ನು ಮಾಡಲು ಇಚ್ಛಿಸುವವರು ಜಿಲ್ಲಾಸೇವಕರ ಮೂಲಕ ಮುಂದಿನ ಕೋಷ್ಟಕದಲ್ಲಿ ತಮ್ಮ ಮಾಹಿತಿಯನ್ನು ತುಂಬಿ, ಸೌ. ಭಾಗ್ಯಶ್ರೀ ಸಾವಂತ ಇವರ ಹೆಸರಿಗೆ [email protected] ಈ ಗಣಕೀಯ ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು.

ಅಂಚೆ ವಿಳಾಸ: ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ ಪಿನ್ – 403401.

 – (ಪೂ.) ಶ್ರೀ ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೬.೫.೨೦೨೧)


ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿದ ಧರ್ಮ, ಅಧ್ಯಾತ್ಮ ಮತ್ತು ಸಾಧನೆ ಇವುಗಳಿಗೆ ಸಂಬಂಧಿಸಿದ ೪೯ ವಿಷಯಗಳ ಗ್ರಂಥ ಮಾಲಿಕೆ !