ಸಾಧಕರನ್ನು ನಿರ್ಗುಣ ಸ್ಥಿತಿಗೆ ಕರೆದೊಯ್ಯಲು ಸಹಾಯ ಮಾಡುವ ‘ನಿರ್ವಿಚಾರ’ ಈ ಜಪವನ್ನು ಕೇಳಿ ಏನೆನಿಸುತ್ತದೆ ? ಎಂದು ತಿಳಿಸಿ !

‘ಸಾಪ್ತಾಹಿಕ ‘ಸನಾತನ ಪ್ರಭಾತ’ದ https://sanatanprabhat.org/kannada/42979.html ಈ ಲಿಂಕ್ ನಲ್ಲಿ ‘ನಿರ್ವಿಚಾರ’ ಈ ನಾಮಜಪದ ಬಗ್ಗೆ ಚೌಕಟ್ಟನ್ನು ಪ್ರಕಾಶಿಸಿ ಅದರ ಮೊದಲ ಪರಿಚಯವನ್ನು ಮಾಡಿಕೊಡಲಾಗಿತ್ತು. ಈ ಚೌಕಟ್ಟಿನಲ್ಲಿ ಈ ಜಪದ ಮಹತ್ವ ಮತ್ತು ಅದನ್ನು ಯಾರು ಮಾಡಬೇಕು, ಈ ಬಗ್ಗೆಯೂ ಮಾರ್ಗದರ್ಶನವನ್ನು ಮಾಡಲಾಗಿತ್ತು. ‘ನಿರ್ವಿಚಾರ’ ಇದು ಗುರುಕೃಪಾಯೋಗದಲ್ಲಿ ಎಲ್ಲಕ್ಕಿಂತ ಕೊನೆಯ ನಾಮಜಪವೆಂದು ಹೇಳಲಾಗಿದೆ. ಈ ಜಪವನ್ನು ಮಾಡುವುದರಿಂದ ಸಾಧಕನಿಗೆ ಕೊನೆಯ ಸ್ತರದ ನಾಮಜಪದ ಮುಖ ಪರಿಚಯವಾಗಬೇಕೆಂದು ಈ ಜಪವನ್ನು ಹೇಳಲಾಗಿದೆ.

‘ನಿರ್ವಿಚಾರ’ ಜಪವನ್ನು ಹೇಗೆ ಹೇಳಬೇಕು ?’ ಈ ಕುರಿತಾದ ಯೋಗ್ಯ ಪದ್ಧತಿಯು ತಿಳಿಯಲೆಂದು ‘ನಿರ್ವಿಚಾರ’, ‘ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಇವುಗಳ ಧ್ವನಿಮುದ್ರಿತ ಜಪದ (‘ಆಡಿಯೋ’ದ) ‘ಲಿಂಕ್’ನ್ನು ಕೆಳಗೆ ನೀಡಲಾದ ಚೌಕಟ್ಟಿನಲ್ಲಿ ಕೊಡಲಾಗಿದೆ. ಈ ಜಪವನ್ನು ಕೇಳಿ ಏನೆನಿಸುತ್ತದೆ ? ಇದರಲ್ಲಿ ಶಕ್ತಿ, ಭಾವ, ಆನಂದ, ಚೈತನ್ಯ ಮತ್ತು ಶಾಂತಿ ಇವುಗಳ ಪೈಕಿ ಯಾವ ಹಂತದಲ್ಲಿ ಅರಿವಾಗುತ್ತದೆ, ಎಂದು ಅನುಭವಿಸಿ ಮತ್ತು ಬಂದ ಅನುಭೂತಿಯನ್ನು ಕೆಳಗೆ ಚೌಕಟ್ಟಿನಲ್ಲಿ ನೀಡಲಾದ ವಿ-ಅಂಚೆ ವಿಳಾಸಕ್ಕೆ ತಿಳಿಸಿರಿ.’

ವಿ-ಅಂಚೆ : [email protected]

‘ನಿರ್ವಿಚಾರ’ ನಾಮಜಪವು ಸನಾತನ ಸಂಸ್ಥೆಯ ಜಾಲತಾಣದಲ್ಲಿ ಮತ್ತು ‘ಚೈತನ್ಯ ಆಪ್’ (ಸನಾತನ ಚೈತನ್ಯವಾಣಿ)ನಲ್ಲಿ ಲಭ್ಯ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗವು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಕಾಲಾನುಸಾರ ತಯಾರಿಸಿದ ನಾಮಜಪ

‘ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ. ‘ಸದ್ಯದ ಕಾಲಕ್ಕನುಸಾರ ಯಾವ ರೀತಿಯ ನಾಮಜಪವನ್ನು ಮಾಡಬೇಕು ?’, ಎಂಬ ಕುರಿತು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ವಿವಿಧ ನಾಮಜಪಗಳನ್ನು ಧ್ವನಿಮುದ್ರಣ ಮಾಡಲಾಗಿದೆ. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಮನ್ವಯಕರಾದ ಕು. ತೇಜಲ ಪಾತ್ರೀಕರ ಇವರು ಧ್ವನಿಯಲ್ಲಿ ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪವನ್ನು ಧ್ವನಿಮುದ್ರಣ ಮಾಡಿ ಎಲ್ಲರಿಗೆ ಲಭ್ಯ ಮಾಡಿಕೊಡಲಾಗಿದೆ. ಈ ನಾಮಜಪವು ಸನಾತನ ಸಂಸ್ಥೆಯ ಜಾಲತಾಣದಲ್ಲಿ ಮತ್ತು ‘ಚೈತನ್ಯ ಆಪ್’ (ಸನಾತನ ಚೈತನ್ಯವಾಣಿ) ಈ ಎರಡೂ ಸ್ಥಳಗಳಲ್ಲಿ ಲಭ್ಯವಿವೆ.

ಈ ನಾಮಜಪವು ಕೆಳಗೆ ನೀಡಲಾದ ಲಿಂಕ್‌ನಲ್ಲಿ ಲಭ್ಯವಿದೆ.

https://www.sanatan.org/mr/a/79145.html

‘ಸನಾತನ ಚೈತನ್ಯವಾಣಿ’ ಆಪ್‌ನ್ನು ಡೌನಲೋಡ್ ಮಾಡಿ ನಾಮಜಪವನ್ನು ಕೇಳಿರಿ :

https://www.sanatan.org/Chaitanyavani

ಚೌಕಟ್ಟಿನಲ್ಲಿ ನೀಡಲಾದ ‘ಕ್ಯುಆರ್ ಕೊಡ್ ಸ್ಕ್ಯಾನ್’ ಮಾಡಿ ಚೈತನ್ಯವಾಣಿ ಆಪ್‌ನ್ನು ಡೌನಲೋಡ್ ಮಾಡಬೇಕು. ಈ ನಾಮಜಪವನ್ನು ಕೇಳುವಾಗ ತಮಗೆ ಏನಾದರೂ ವೈಶಿಷ್ಟ್ಯ ಪೂರ್ಣ ಅನುಭೂತಿಗಳು ಬಂದರೆ ನಮಗೆ [email protected] ಈ ವಿ-ಅಂಚೆ ವಿಳಾಸಕ್ಕೆ ಅವಶ್ಯ ತಿಳಿಸಿರಿ.

‘ಕ್ಯುಆರ್ ಕೊಡ್’ (QR code) ಎಂದರೇನು ?

‘ಕ್ಯುಆರ್ ಕೊಡ್’ (QR code ಅಂದರೆ Quick Response Code) ಇದು ‘ಬಾರಕೊಡ್’ನಂತೆ ಒಂದು ಸಾಂಕೇತಿಕ ಚಿಹ್ನೆಯಾಗಿದೆ. ಈ ಕೊಡ್ ಯಾವುದೇ ಜಾಲತಾಣದ ಸಂಪರ್ಕ ಕೊಂಡಿಯ ಅಂದರೆ ‘ವೆಬ್‌ಸೈಟ್ ಲಿಂಕ್’ನಲ್ಲಿ ತಯಾರಿಸಬಹುದು. ಈ ಕೊಡ್‌ಅನ್ನು ಒಮ್ಮೆ ಒಂದು ‘ಲಿಂಕ್’ಗಾಗಿ ತಯಾರಿಸಿದರೆ, ಅದು ಅದೇ ಲಿಂಕ್‌ಗಾಗಿ ಉಪಯೋಗಿಸಲು ಬರುತ್ತದೆ, ಅಂದರೆ ಪ್ರತಿಯೊಂದು ‘ಲಿಂಕ್’ಗಾಗಿ ಬೇರೆ ಅಥವಾ ಒಂದೇ ಆಗಿರುತ್ತದೆ. ಈ ಕೊಡ್‌ಅನ್ನು ತಮ್ಮ ಸಂಚಾವಾಣಿಯ ಮೂಲಕ ಓದಲು ಸಂಚಾರವಾಣಿಯಲ್ಲಿನ ಕ್ಯಾಮೆರಾವನ್ನು ಬಳಸಲಾಗುತ್ತದೆ. ಹೊಸದಾಗಿ ಲಭ್ಯವಾಗುವ ಸಂಚಾರವಾಣಿ ಯಲ್ಲಿ ಇದರ ಸೌಲಭ್ಯವನ್ನು ಅಳವಡಿಸ(ಬೈ ಡಿಫಾಲ್ಟ್)ಲಾಗಿರುತ್ತದೆ. ಯಾವ ಸಂಚಾರವಾಣಿಯಲ್ಲಿ ಇಂತಹ ಸೌಲಭ್ಯವನ್ನು ಅಳವಡಿಸಲಾಗಿಲ್ಲವೋ, ಅವುಗಳಿಗಾಗಿ ‘ಕ್ಯೂಆರ್ ಕೊಡ್ ಸ್ಕ್ಯಾನರ್’ ಹೆಸರಿನಿಂದ ಅನೇಕ ‘ಅಪ್ಲಿಕೆಶನ್’ಗಳು ಆನ್‌ಲೈನ್ ಲಭ್ಯವಾಗಿರುತ್ತವೆ. ಅದನ್ನು ‘ಗುಗಲ್ ಪ್ಲೆ ಸ್ಟೋರ್’ ಮೂಲಕ ಸಹಜವಾಗಿ ಡೌನಲೋಡ್ ಮಾಡಿಕೊಂಡು ಉಪಯೋಗಿಸಬಹುದು.

ಟಿಪ್ಪಣಿ : ‘ಗುಗಲ್ ಪ್ಲೇ ಸ್ಟೋರ್’ನಲ್ಲಿ ಲಭ್ಯವಾದ ‘ಆಪ್ಸ್’ಪೈಕಿ bit.ly/2PaaflX  ಸಂಪರ್ಕ ಕೊಂಡಿ (ಲಿಂಕ್)ಯಲ್ಲಿರುವ ‘Kaspersky QR Code’ ಈ ಆಪ್‌ನ ವಿಚಾರವನ್ನು ಪ್ರಾಧಾನ್ಯವಾಗಿ ಮಾಡಲು ಸಾಧ್ಯವಾಗುತ್ತದೆ.