‘ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿ ಔದುಂಬರದ ಅನೇಕ ಸಸಿಗಳು ತಾವಾಗಿಯೇ ಚಿಗುರಿರುವುದರ ಕಾರಣಮೀಮಾಂಸೆ

ಮನುಷ್ಯ, ಪ್ರಾಣಿ, ಪಕ್ಷಿ ಮತ್ತು ಗಿಡ-ಬಳ್ಳಿಗಳಲ್ಲಿ ಪರಸ್ಪರ ಹತ್ತಿರದ ಸಂಬಂಧವಿರುತ್ತದೆ. ಪ್ರಾಚೀನ ಕಾಲದಲ್ಲಿನ ಋಷಿಮುನಿಗಳು ವನಗಳಲ್ಲಿ ವಾಸಿಸುತ್ತಿದ್ದರು. ವನದಲ್ಲಿನ ವನಸ್ಪತಿಗಳ, ಪುಷ್ಪಗಳ ಮತ್ತು ಗಿಡ-ಬಳ್ಳಿಗಳ ಮಹತ್ವವನ್ನು ಅವರು ತಿಳಿದುಕೊಂಡಿದ್ದರು. ಮಾನವನ ಆರೋಗ್ಯ ಸುಧಾರಿಸಲು ಮತ್ತು ರೋಗ-ರುಜಿನಗಳು ದೂರವಾಗಲು ಅವರು ಅನೇಕ ರೀತಿಯ ವನೌಷಧಿಗಳನ್ನು ಕಂಡು ಹಿಡಿದರು. ಭಾರತೀಯ ಸಂಸ್ಕೃತಿಯಲ್ಲಿ ಈ ವನೌಷಧಿಗಳಲ್ಲಿನ ಕೆಲವು ವೃಕ್ಷಗಳನ್ನು ‘ದೇವವೃಕ್ಷ ಎಂದು ಕರೆಯಲಾಗುತ್ತದೆ.  ಅದರಲ್ಲಿನ ಒಂದೆಂದರೆ ‘ಔದುಂಬರ!

ಅನೇಕ ಪ್ರಾಚೀನ ಗ್ರಂಥಗಳಲ್ಲಿ ‘ಈ ವೃಕ್ಷದ ಬೇರುಗಳಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಮತ್ತು ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಶಿವನ ಅಸ್ತಿತ್ವ ಇರುತ್ತದೆ ಎಂದು ಹೇಳಲಾಗಿದೆ. ‘ಔದುಂಬರ ವೃಕ್ಷಗಳು ಅಧಿಕ ಪ್ರಮಾಣದಲ್ಲಿ ಪ್ರಾಣವಾಯುವನ್ನು ಹೊರಹಾಕುತ್ತವೆ. ಇದರಿಂದ ಪರಿಸರದ ಸಮತೋಲನ ಸ್ಥಿರವಾಗಿ ಉಳಿಯುತ್ತದೆ. ಆಯುರ್ವೇದದಲ್ಲಿ ಔಷಧಿಯ ದೃಷ್ಟಿಯಿಂದಲೂ ಔದುಂಬರವು ಬಹಳ ಉಪಯುಕ್ತ ಮತ್ತು ಮಹತ್ವದ ವೃಕ್ಷವಾಗಿದೆ.

ಕಳೆದ ಒಂದು-ಒಂದೂವರೆ ತಿಂಗಳಿನ (ಎಪ್ರಿಲ್ ೨೦೨೧ ರಿಂದ ಇಲ್ಲಿಯವರೆಗೆ) ಕಾಲಾವಧಿಯಲ್ಲಿ ಸನಾತನದ ರಾಮನಾಥಿ (ಗೋವಾ) ಆಶ್ರಮದ ಪರಿಸರದಲ್ಲಿ ಔದುಂಬರದ ಅನೇಕ ಸಸಿಗಳು ತಾನಾಗಿಯೇ ಅಂಕುರಿಸಿವೆ. ಇವುಗಳಲ್ಲಿ ಧ್ಯಾನಮಂದಿರದ ಹೊರಗಿನ ಪ್ರಾಂಗಣದಲ್ಲಿ ೧೬ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ವಾಸ್ತವ್ಯವಿರುವ ಕೋಣೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ೩೧, ಹೀಗೆ ಒಟ್ಟು ೪೭ ಹೊಸ ಸಸಿಗಳು ಚಿಗುರಿವೆ. ಇದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.

೧. ಆಲ, ಅಶ್ವತ್ಥ, ಸಂಪಿಗೆ, ತುಳಸಿ, ಬಿಲ್ವ, ಬನ್ನಿ, ಹುಣಸೆ, ಪಾರಿಜಾತ ಮತ್ತು ಔದುಂಬರ ಈ ಗಿಡಗಳು ೨೪ ಗಂಟೆಗಳ ಕಾಲ ವಾತಾವರಣದಲ್ಲಿ ಪ್ರಾಣವಾಯುವನ್ನು  ಹೊರಹಾಕುವುದರಿಂದ ಅವುಗಳಿಗೆ ‘ದೇವವೃಕ್ಷಗಳು ಎಂದು ಹೇಳಲಾಗುತ್ತದೆ.

‘ಆಲ, ಅಶ್ವತ್ಥ, ಸಂಪಿಗೆ, ತುಳಸಿ, ಬಿಲ್ವ, ಬನ್ನಿ, ಹುಣಸೆ, ಪಾರಿಜಾತ ಮತ್ತು ಔದುಂಬರ ಈ ಗಿಡಗಳು ವಾತಾವರಣದಲ್ಲಿ  ೨೪ ಗಂಟೆಗಳ ಕಾಲ  ಪ್ರಾಣವಾಯುವನ್ನು ಹೊರ ಹಾಕುತ್ತವೆ.  ಪ್ರಾಣಿಮಾತ್ರರಿಗೆ ಜೀವಿಸಲು ಪ್ರಾಣವಾಯುವಿನ ಆವಶ್ಯಕತೆಯಿರುತ್ತದೆ.  ಆದುದರಿಂದ ‘ಆಲ, ಅಶ್ವತ್ಥ, ಸಂಪಿಗೆ, ತುಳಸಿ, ಬಿಲ್ವ, ಬನ್ನಿ, ಹುಣಸೆ, ಪಾರಿಜಾತ ಮತ್ತು ಔದುಂಬರ ಈ ಗಿಡಗಳನ್ನು  ಪ್ರಾಚೀನ ಕಾಲದಿಂದಲೂ ‘ದೇವವೃಕ್ಷಗಳೆಂದು ಕರೆಯಲಾಗುತ್ತದೆ. ಇತರ ಗಿಡಗಳು ವಾಯು ಮಾಲಿನ್ಯವನ್ನು ಹೆಚ್ಚಿಸುವ ಕಾರ್ಬನ್ ಡೈ-ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಇತ್ಯಾದಿ ವಾಯುಗಳನ್ನು ಬಿಡುತ್ತವೆ. ಇನ್ನುಳಿದ ಎಲ್ಲ ಗಿಡಗಳಿಗೆ ವೃಕ್ಷ ಅಥವಾ ವನಸ್ಪತಿ ಎನ್ನುತ್ತಾರೆ,  ಇದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. (ಆಧಾರ: ವಿಶ್ವ ಚೈತನ್ಯ ವಿಜ್ಞಾನ)

೧ ಅ. ‘ಕೊರೊನಾ ಮಹಾಮಾರಿಯ ಹೆಚ್ಚುತ್ತಿರುವ ಸೋಂಕಿನಿಂದ ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ‘ಸಾಧಕರ ರಕ್ಷಣೆಯಾಗಬೇಕು, ಎಂದು ಸನಾತನ ಆಶ್ರಮದ ಪರಿಸರದಲ್ಲಿ ಔದುಂಬರದ ಸಸಿಗಳು ತನ್ನಿಂತಾನೆ ಹುಟ್ಟಿವೆ ಎಂಬುದು ಗಮನಕ್ಕೆ ಬರುವುದು: ಸದ್ಯದ ‘ಕೊರೊನಾ ಮಹಾಮಾರಿಯ ಸೋಂಕು ಸಹ ಹೆಚ್ಚುತ್ತಿರುವುದರಿಂದ ವಾತಾವರಣವು ಕಲುಷಿತಗೊಳ್ಳುತ್ತಾ ಹೋಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಉದ್ಭವಿಸಿದೆ. ಅನೇಕ ಜನರು  ಆವಶ್ಯಕವಿರುವ ಸಮಯದಲ್ಲಿ ಪ್ರಾಣವಾಯು ದೊರೆಯದ ಕಾರಣ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸ್ಥಿತಿಯಿಂದ ಸಾಧಕರ ರಕ್ಷಣೆಯಾಗಬೇಕು ಮತ್ತು ಸಾಧಕರಿಗೆ ನೈಸರ್ಗಿಕ ರೀತಿಯಲ್ಲಿ ಪ್ರಾಣವಾಯು ದೊರಕಬೇಕೆಂದು ಸನಾತನದ ಆಶ್ರಮ ಪರಿಸರದಲ್ಲಿ ಔದುಂಬರದ ಒಟ್ಟು ೪೭ ಹೊಸ ಸಸಿಗಳು ತನ್ನಿಂತಾನೇ ಚಿಗುರೊಡೆದಿರುವುದು ಅರಿವಾಯಿತು.

ಕು. ಮಧುರಾ ಭೋಸಲೆ

೨. ಸಾಧಕರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಬೇಕೆಂದು ಆಶ್ರಮದಲ್ಲಿ ಅಪಾರ ಸಂಖೆಯಲ್ಲಿ ಔದುಂಬರದ ಸಸಿಗಳು ಹುಟ್ಟಿವೆ ಎಂಬುದು ಗಮನಕ್ಕೆ ಬರುವುದು.

‘ವಿಜ್ಞಾನಿ ಬೊವಿಸನ್ ವನಸ್ಪತಿಗಳಿಂದ ಪ್ರಕ್ಷೇಪಿತಗೊಳ್ಳುವ ಕಿರಣೋತ್ಸರ್ಗದ ತರಂಗಗಳ ಅಧ್ಯಯನವನ್ನು ಮಾಡಿದನು. ಈ ಅಧ್ಯಯನದ ಆಧಾರದಲ್ಲಿ ಮುಂದೆ ವಿಜ್ಞಾನಿ ಸಾಯಮನಟನ್ ವಿವಿಧ ಸ್ಥಿತಿಯಲ್ಲಿರುವ ಖಾದ್ಯಪದಾರ್ಥಗಳಿಂದ ಪ್ರಕ್ಷೇಪಿತಗೊಳ್ಳುವ ತರಂಗಗಳನ್ನು ಅಳೆದನು. ಈ ಸಂಶೋಧನೆಯಿಂದ ಅವನು ‘ವನಸ್ಪತಿಜನ್ಯ ಆಹಾರ ಮನುಷ್ಯನ ಊರ್ಜೆಯನ್ನು ಹೆಚ್ಚಿಸಬಲ್ಲದು ಮತ್ತು ಇದರಿಂದ ಶರೀರ ಮತ್ತು ಮನಸ್ಸಿನ ಆರೋಗ್ಯ ಸುಧಾರಿಸಬಹುದು ಎಂದು ನಿಷ್ಕರ್ಷಕ್ಕೆ ಬಂದನು (ಆಧಾರ : ಮನಃಶಕ್ತಿ ಜೂನ ೨೦೦೦)

ಆಶ್ರಮದಲ್ಲಿರುವ ಸಾಧಕರಿಗೆ ಆಗುತ್ತಿರುವ ಆಯಾಸ, ಮೈಕೈ ನೋವುಗಳಂತಹ ತೊಂದರೆಗಳಿಗೆ ಶಾರೀರಿಕ, ಹಾಗೆಯೇ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಲು ಅಂದಾಜು ೧ ತಿಂಗಳಿನಲ್ಲಿ ಯಜ್ಞಕುಂಡದ ಪರಿಸರದಲ್ಲಿ ಔದುಂಬರದ ಸಸಿಗಳು ತನ್ನಿಂತಾನೇ ಹುಟ್ಟಿರುವುದು ಅರಿವಾಗುವುದು.

೩. ಕು. ಮಧುರಾ ಭೋಸಲೆ ಇವರಿಗೆ ಸೂಕ್ಷ್ಮ ಪರೀಕ್ಷಣೆಯ ಮಾಧ್ಯಮದಿಂದ ದೊರೆತ ಜ್ಞಾನ

೩ ಅ. ಔದುಂಬರದ ಸಸಿಗಳು ಚಿಗುರೊಡೆದಿರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ: ‘ಭೂಮಿಯಲ್ಲಿ ಚೈತನ್ಯ ಕಾರ್ಯನಿರತವಾಗಿರುವುದರಿಂದ ಸಾತ್ತ್ವಿಕ ಭೂಮಿಯಲ್ಲಿ ಔದುಂಬರದ ಸಸಿಗಳು ಚಿಗುರುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯಮಯ ಅಸ್ತಿತ್ವದಿಂದ ಸನಾತನದ ಆಶ್ರಮದಿಂದ ವಾತಾವರಣದಲ್ಲಿ ಚೈತನ್ಯ ಹರಡುತ್ತದೆ. ಜಗತ್ತಿನಾದ್ಯಂತವಿರುವ ಸಾಧಕರಿಗೆ ಸಾಧನೆ ಮತ್ತು ಧರ್ಮಾಚರಣೆಯ ವಿಷಯದಲ್ಲಿ ಮಾರ್ಗದರ್ಶನ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ದತ್ತತತ್ತ್ವವು ಕಾರ್ಯನಿರತವಾಗಿ ಅದು ಸಂಪೂರ್ಣ ವಿಶ್ವದಲ್ಲಿ ಹರಡುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಕ್ಷೇಪಿತಗೊಂಡ ದತ್ತತತ್ತ್ವವು ಸನಾತನ ಸಂಸ್ಥೆಯ ರಾಮನಾಥಿ ಆಶ್ರಮದ ಭೂಮಿಯಲ್ಲಿ ಆಕರ್ಷಿಸಲ್ಪಟ್ಟಿರುವುದರಿಂದ ಈ ಭೂಮಿಯಲ್ಲಿ ಔದುಂಬರದ ಹೊಸ ಸಸಿಗಳು ಚಿಗುರಿವೆ. ಪರಾತ್ಪರ ಗುರುದೇವರಿಂದ ಪ್ರಕ್ಷೇಪಿಸಲ್ಪಡುವ ದತ್ತ ತತ್ತ್ವವು ನಿರ್ಗುಣ-ಸಗುಣ ಸ್ತರದಲ್ಲಿರುವುದರಿಂದ ಸಾಧಕರಿಗೆ ಈ ತತ್ತ್ವವನ್ನು ಗ್ರಹಿಸಲು ಕಠಿಣವಾಗುತ್ತವೆ. ತದ್ವಿರುದ್ಧ ಆಶ್ರಮದ ಪರಿಸರದಲ್ಲಿ ಹುಟ್ಟಿರುವ ಔದುಂಬರದ ಸಸಿಗಳಿಂದ ವಾತಾವರಣದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವ ಪ್ರಕ್ಷೇಪಿಸಲ್ಪಟ್ಟಿರುವುದರಿಂದ ಸಾಧಕರಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆಶ್ರಮದ ಪರಿಸರದಲ್ಲಿ ವಿವಿಧ ಸ್ಥಳಗಳಲ್ಲಿ ಔದುಂಬರದ ಸಸಿಗಳು ಹುಟ್ಟಿರುವುದರಿಂದ ಈ ಸಸಿಗಳು ವಾತಾವರಣದಲ್ಲಿ ಚೈತನ್ಯವನ್ನು ಪ್ರಕ್ಷೇಪಿಸುತ್ತವೆ. ಇದರಿಂದ ಆಶ್ರಮದ ಸುತ್ತಲೂ ತೇಜತತ್ತ್ವ ಮತ್ತು ವಾಯುತತ್ತ್ವದ ಸ್ತರದಲ್ಲಿ ಚೈತನ್ಯಮಯ ವಾಯುಮಂಡಲ ನಿರ್ಮಾಣವಾಗುತ್ತದೆ ಮತ್ತು ಸೂಕ್ಷ್ಮದಲ್ಲಿರುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಆಶ್ರಮದ ರಕ್ಷಣೆಯಾಗುತ್ತದೆ.

೩ ಆ. ಔದುಂಬರದ ಸಸಿಗಳಿಂದ ಸಾಧಕರ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಪರಿಣಾಮವಾಗುವುದು : ಔದುಂಬರದ ಸಸಿಗಳಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವವು ಕಾರ್ಯನಿರತವಾಗಿದೆ. ಇದರಿಂದ ಸನಾತನದ ಸಾಧಕರ ಮೇಲೆ ಮತ್ತು ಸನಾತನದ ಆಶ್ರಮದ ಮೇಲೆ ಸೂಕ್ಷ್ಮದಲ್ಲಿನ ದೊಡ್ಡ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಕಲುಷಿತಗೊಳಿಸಿರುವ ಅಲ್ಲಿಯ ವಾಯುಮಂಡಲ ದಲ್ಲಿರುವ ತೊಂದರೆದಾಯಕ ಲಹರಿಗಳು ಔದುಂಬರ ವೃಕ್ಷದಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯ ಲಹರಿಗಳ ಮೂಲಕ ನಾಶವಾಗುತ್ತವೆ. ಔದುಂಬರ ವೃಕ್ಷದಿಂದ ಪ್ರಕ್ಷೇಪಿತಗೊಂಡಿರುವ ದತ್ತತತ್ತ್ವಮಯ ಪ್ರಾಣಶಕ್ತಿಯಿಂದ ಸಾಧಕರ ಪ್ರಾಣಶಕ್ತಿವಹನದ ಶೇ. ೪೦ ರಷ್ಟು ಅಡೆತಡೆಗಳು ದೂರವಾಗಿ ಅವರ ಶ್ವಾಸೋಚ್ಛಾಸದ ಅಡಚಣೆಗಳು ದೂರವಾಗುತ್ತದೆ. ಈ ಪರಿಣಾಮವು ಆಶ್ರಮದಿಂದ ೫ ಕಿ.ಮೀ. ವ್ಯಾಪ್ತಿಯವರೆಗೆ ಆಗುತ್ತಿರುವುದು ಗಮನಕ್ಕೆ ಬಂದಿತು.

೩ಇ.  ಆಶ್ರಮದ ಪರಿಸರದಲ್ಲಿ ಔದುಂಬರದ ಸಸಿಗಳು ಚಿಗುರಿದ್ದರಿಂದ ಕರೊನಾ ಸಂಕಟದಿಂದ ಸಾಧಕರ ರಕ್ಷಣೆಯಾಗುವುದು : ಕೊರೊನಾ ವಿಷಾಣುಗಳಲ್ಲಿ ಕಾರ್ಯನಿರತವಾಗಿರುವ ಕೆಟ್ಟ ಶಕ್ತಿಗಳ ಶಕ್ತಿಯನ್ನು ನಾಶ ಮಾಡಲು ‘ಶ್ರೀದುರ್ಗಾ, ದತ್ತ ಮತ್ತು ಶಿವ ಈ ನಾಮಜಪದಲ್ಲಿ ಮೂರು ದೇವತೆಗಳ ತತ್ತ್ವ ಕಾರ್ಯನಿರತವಾಗಿದೆ. ಈ ಮೂರು ತತ್ತ್ವಗಳಿಂದ ಕೊರೊನಾದ ಮಾಧ್ಯಮದಿಂದ ಕಾರ್ಯನಿರತವಾಗಿರುವ ವಿಷಾಣುಗಳಲ್ಲಿರುವ ತೊಂದರೆದಾಯಕ ಶಕ್ತಿಯು ನಾಶವಾಗುತ್ತದೆ. ಔದುಂಬರ ವೃಕ್ಷದಲ್ಲಿ ದತ್ತತತ್ತ್ವ ಕಾರ್ಯ ನಿರತವಾಗಿರುವುದರಿಂದ ಸನಾತನದ ರಾಮನಾಥಿ ಆಶ್ರಮದ ಪರಿಸರದಲ್ಲಿನ ಔದುಂಬರದ ವೃಕ್ಷಗಳಿಂದ ಪ್ರಕ್ಷೇಪಿತಗೊಂಡ ದತ್ತಾತ್ರೇಯನ ಮಾರಕ ಶಕ್ತಿಯಿಂದ ಕೊರೊನಾ ವಿಷಾಣುಗಳಲ್ಲಿರುವ ತೊಂದರೆದಾಯಕ ಶಕ್ತಿಯು ನಾಶವಾಗುತ್ತಿದೆ. ಅದರಂತೆಯೇ ಸಾಧಕರ ಸುತ್ತಲೂ ದತ್ತತತ್ತ್ವಮಯ ಚೈತನ್ಯ ಲಹರಿಗಳು ಕಾರ್ಯನಿರತವಾಗಿರುವುದರಿಂದ ಅತೃಪ್ತ ಪಿತೃ (ಪೂರ್ವಜರ) ಮತ್ತು ಇತರ ಕೆಟ್ಟ ಶಕ್ತಿಗಳೊಂದಿಗೆ ಕೊರೊನಾ ವಿಷಾಣುಗಳಿಂದ ಸಾಧಕರ ರಕ್ಷಣೆಯಾಗುತ್ತಿದೆ. ಇದರಿಂದ ಕೊರೊನಾ ಮಹಾಮಾರಿಯ ಸೋಂಕು ತಗಲುವುದರಿಂದ ಅನೇಕ ಸಾಧಕರ ರಕ್ಷಣೆಯಾಗುತ್ತಿದೆ.

೪. ಔದುಂಬರದ ಬೇರುಗಳು, ಕಾಂಡ, ಕೊಂಬೆ ಮತ್ತು ಎಲೆಗಳಿಂದ ಆಗುವ ಆಧ್ಯಾತ್ಮಿಕ ಸ್ತರದಲ್ಲಿನ ಕಾರ್ಯ

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ , ಗೋವಾ (೩೦.೪.೨೦೨೧)

‘ಋಷಿಮುನಿಗಳು ತಪಶ್ಚರ್ಯ ಅಥವಾ ಅನುಷ್ಠಾನಗಳನ್ನು ಮಾಡುವಾಗ ‘ಒಣಗಿದ ಕಟ್ಟಿಗೆಗೆ (ಬಿದರಿಗೆ) ಚಿಗರೊಡೆಯುವುದು ಇತ್ಯಾದಿ ಬುದ್ಧಿಗೆ ನಿಲುಕದ ಘಟನೆಗಳು ನಡೆದಿರುವುದು ಅನೇಕ ಪುರಾಣಗಳಲ್ಲಿ ಓದಲು ಸಿಗುತ್ತವೆ. ಅಧ್ಯಾತ್ಮವು ಒಂದು ಶಾಸ್ತ್ರವಾಗಿದೆ, ಆದುದರಿಂದ ಅಧ್ಯಾತ್ಮಶಾಸ್ತ್ರದಲ್ಲಿನ ‘ಭಾವವಿದ್ದಲ್ಲಿ ದೇವರು, ‘ಪಂಚಮಹಾಭೂತಗಳಿಂದ ಸಜೀವ-ನಿರ್ಜಿವಗಳ ಉತ್ಪತ್ತಿಯಾಗುವುದು ಇತ್ಯಾದಿ ಸಿದ್ಧಾಂತಗಳಿಗನುಸಾರ ಪುರಾಣಕಾಲದಲ್ಲಿ ಬಂದಂತಹ ಅನುಭೂತಿಗಳು ಈಗಿನ ಕಲಿಯುಗದಲ್ಲಿಯೂ ಬರುತ್ತವೆ; ಆದರೆ ಅದಕ್ಕಾಗಿ ಈಶ್ವರಪ್ರಾಪ್ತಿಯ ಉದ್ದೇಶದಿಂದ ಭಕ್ತಿಭಾವದಿಂದ ಸಾಧನೆಯನ್ನು ಮಾಡಬೇಕಾಗುತ್ತದೆ.

– ಕು. ಪ್ರಿಯಾಂಕಾ ಲೋಟಲೀಕರ, ಸಂಶೋಧನೆಯ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೨.೫.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.