ಸೂಕ್ಷ್ಮದ ಸ್ಪಂದನಗಳ ಅಧ್ಯಯನವು ಆಧ್ಯಾತ್ಮಿಕ ಪ್ರಗತಿಗಾಗಿ ಮೂಲಭೂತ ಘಟಕ
ಯಾವುದೇ ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಂಶೋಧನೆಯಾಗಿರಲಿ, ತರಬೇತಿಯಾಗಿರಲಿ ಅವುಗಳಲ್ಲಿ ಸೂಕ್ಷ್ಮದ ಸ್ಪಂದನಗಳ ಅಧ್ಯಯನವು ಅತ್ಯಂತ ಮಹತ್ವದ್ದಾಗಿರುತ್ತದೆ. (ಸೂಕ್ಷ್ಮವನ್ನು ತಿಳಿಯುವುದು ಎಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಅರಿವಿನ ಆಚೆಗಿರುವ ಜ್ಞಾನ ಅಥವಾ ಸ್ಪಂದನಗಳನ್ನು ಗುರುತಿಸುವುದು) ಯಾವುದಾದರೊಂದು ಜೀವಕ್ಕೆ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವುದಿದ್ದರೆ ಅದು ಸೂಕ್ಷ್ಮದಲ್ಲಿನ ಸ್ಪಂದನಗಳ ಅಧ್ಯಯನ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಅಧ್ಯಾತ್ಮದಲ್ಲಿ ಈ ಆಯಾಮಗಳ ಅಧ್ಯಯವು ಎಷ್ಟು ಹೆಚ್ಚೋ, ಅಷ್ಟು ಸಾಧನೆಯಲ್ಲಿ ಅಯೋಗ್ಯ ಮಾರ್ಗದಲ್ಲಿ ಹೋಗಿ ಮನುಷ್ಯ ಜನ್ಮವು ವ್ಯರ್ಥ ಹೋಗುವ ಸಾಧ್ಯತೆಯು ಕಡಿಮೆ ಇರುತ್ತದೆ. ಇದಕ್ಕೆ ಹೊರತಾಗಿ ಅಧ್ಯಾತ್ಮದಲ್ಲಿ ಈ ಆಯಾಮಗಳನ್ನು ತಿಳಿದುಕೊಂಡರೆ ವ್ಯಕ್ತಿಯು ತನ್ನ ಸಾಧನಾ ಪ್ರವಾಸದಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯ ನಿರ್ಣಯವನ್ನು ತೆಗೆದುಕೊಳ್ಳಬಹುದು, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ಶ್ರೀ. ಶಾನ್ ಕ್ಲಾರ್ಕ್ ಇವರು ಹೇಳಿದರು. ಅವರು ‘ಸೂಕ್ಷ್ಮ ಸ್ಪಂದನಗಳ ಅಧ್ಯಯನ – ಧಾರ್ಮಿಕ ಶಿಕ್ಷಣ ಮತ್ತು ಸಂಶೋಧನೆ ಇವುಗಳ ಮೂಲಭೂತ ಘಟಕ’ ಈ ಕುರಿತಾದ ಸಂಶೋಧನಾ ಪ್ರಬಂಧವನ್ನು ಮಂಡಿಸುತ್ತಿರುವಾಗ ಮಾತನಾಡುತ್ತಿದ್ದರು.
ಕೊರ್ದಾಬಾ, ಸ್ಪೇನ್‌ನಲ್ಲಿ ‘ರಿಲಿಜನ್ ಇನ್ ಸೊಸೈಟಿ ರಿಸರ್ಚ ನೆಟ್‌ವರ್ಕ ಆಂಡ್ ಕಾಮನ್ ಗ್ರೌಂಡ್ ರಿಸರ್ಚ ನೆಟ್‌ವರ್ಕ್ಸ್’ ಈ ಸಂಸ್ಥೆಯು ಒಂದು ಅಂತರರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಿತ್ತು. ಅದು ಧರ್ಮ ಮತ್ತು ಅಧ್ಯಾತ್ಮ ಈ ಕುರಿತು ಆಯೋಜಿಸಿದ್ದ ಈ ೧೧ ನೇ ಪರಿಷತ್ತಿನಲ್ಲಿ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಲಾಯಿತು. ಈ ಸಂಶೋಧನಾ ಪ್ರಬಂಧದ ಲೇಖಕರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಜ್ಞಾನಿಕ ಪರಿಷತ್ತಿನಲ್ಲಿ ಮಾಡಿದ ಇದು ೭೨ ನೇ ಪ್ರಸ್ತುತೀಕರಣವಾಗಿತ್ತು. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಇದಕ್ಕೂ ಮೊದಲು ರಾಷ್ಟ್ರೀಯ ಸ್ತರದಲ್ಲಿ ೧೫ ಮತ್ತು ಅಂತರರಾಷ್ಟ್ರೀಯ ಸ್ತರದಲ್ಲಿ ೫೬ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದೆ ಮತ್ತು ಅದಕ್ಕೆ ೪ ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಉತ್ತಮ ಸಂಶೋಧನಾ ಪ್ರಬಂಧ’ದ ಪ್ರಶಸ್ತಿಯೂ ಸಿಕ್ಕಿದೆ.
ಶ್ರೀ. ಶಾನ್ ಕ್ಲಾರ್ಕ್ ಇವರು ಸೂಕ್ಷ್ಮದಲ್ಲಿನ ಸ್ಪಂದನಗಳ ಹೆಚ್ಚು ಅಧ್ಯಯನ ಮಾಡಲು ‘ಪಿಪ್’ ಮತ್ತು ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣಗಳನ್ನು ಬಳಸಿ ಮಾಡಿದ ವಿವಿಧ ಪ್ರಯೋಗ ಮತ್ತು ಅವುಗಳ ಪರಿಣಾಮಗಳ ಮಾಹಿತಿಯನ್ನು ನೀಡಿದರು.
ಪ್ರಯೋಗ ೧ : ‘ಪಿಪ್’ ಮತ್ತು ‘ಯು.ಎ.ಎಸ್.’ ಈ ಉಪಕರಣಗಳನ್ನು ಬಳಸಿ ಈ ಪ್ರಯೋಗವನ್ನು ಅಧ್ಯಾತ್ಮದ ಕುರಿತಾದ ೩ ಗ್ರಂಥಗಳ ಮೇಲೆ ಮಾಡಲಾಯಿತು. ಇವುಗಳ ಪೈಕಿ ಒಂದು ಗ್ರಂಥವನ್ನು ಜಗತ್ತಿನ ಜನಪ್ರಿಯ ಅಧ್ಯಾತ್ಮದ ಕುರಿತಾದ ಮಾರ್ಗದರ್ಶಕರು ಬರೆದಿದ್ದಾರೆ. ಈ ಗ್ರಂಥದ ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗಿದ್ದು ಅದು ‘ನ್ಯೂಯಾರ್ಕ ಬೆಸ್ಟ್ ಸೆಲರ್’ ಪಟ್ಟಿಯಲ್ಲಿಯೂ ಸಮಾವೇಶಗೊಂಡಿದೆ. ಎರಡನೆಯ ಗ್ರಂಥವು ತನ್ನನ್ನು ಅಧ್ಯಾತ್ಮದ ಕುರಿತಾದ ಮಾರ್ಗದರ್ಶಕನೆಂದು ಸಂಬೋಧಿಸಿಕೊಳ್ಳದಿರುವ ಆದರೆ ಅಧ್ಯಾತ್ಮದ ಕುರಿತಾದ ಪುಸ್ತಕಗಳನ್ನು ಬರೆಯುವ ಲೇಖಕನು ಬರೆದಿದ್ದು ಅದರ ಅತ್ಯಧಿಕ ಮಾರಾಟವಾಗಿದೆ. ಇದರ ಸಮಾವೇಶವನ್ನೂ ‘ನ್ಯೂಯಾರ್ಕ ಬೆಸ್ಟ್ ಸೆಲರ್’ ಪಟ್ಟಿಯಲ್ಲಿ ಮಾಡಲಾಗಿದೆ.
ಮೂರನೇಯ ಗ್ರಂಥವನ್ನು ಭಾರತದ ಪರಾತ್ಪರ ಗುರುಗಳು ಬರೆದಿದ್ದಾರೆ. ಪರಾತ್ಪರ ಗುರು ಎಂದರೆ ಯಾರ ಆಧ್ಯಾತ್ಮಿಕ ಮಟ್ಟವು ಶೇ. ೯೦ ಕ್ಕಿಂತ ಹೆಚ್ಚೆದೆ, ಅಂತಹ ಉಚ್ಚ ಮಟ್ಟದ ಗುರುಗಳು. ಸಂತರು ಬರೆದ ಗ್ರಂಥದಿಂದ ಅತ್ಯಧಿಕ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿವೆ, ಎಂದು ಪರೀಕ್ಷಣೆಯ ಮೂಲಕ ಸಿದ್ಧವಾಯಿತು. ಇತರ ಎರಡು ಲೇಖಕರ ಗ್ರಂಥಗಳಿಂದ ವಿವಿಧ ಮಟ್ಟಗಳಲ್ಲಿ ನಕಾರಾತ್ಮಕ ಸ್ಪಂದನಗಳು ನಿರ್ಮಾಣವಾಗುತ್ತಿವೆ, ಎಂದೂ ಗಮನಕ್ಕೆ ಬಂದಿತು.
ಪ್ರಯೋಗ ೨ : ಮೇಲಿನ ಗ್ರಂಥವನ್ನು ಇಬ್ಬರು ವ್ಯಕ್ತಿಗಳಿಗೆ ಪ್ರತಿಯೊಬ್ಬರಿಗೂ ೨೦ ನಿಮಿಷಗಳ ಕಾಲ ಓದಲು ಹೇಳಲಾಯಿತು. ‘ಯು.ಎ.ಎಸ್.’ ಈ ತಂತ್ರಾಂಶದ ಮೂಲಕ ಈ ವ್ಯಕ್ತಿಗಳು ಓದುವ ಮೊದಲು ಮತ್ತು ನಂತರದ ಪ್ರಭಾವಲಯವನ್ನು ಅಳೆಯಲಾಯಿತು. ಆ ಸಮಯದಲ್ಲಿ ಮೊದಲ ಎರಡು ಪುಸ್ತಕಗಳನ್ನು ಓದಿ ‘ಆ ವ್ಯಕ್ತಿಗಳ ಪ್ರಭಾವಲಯದಲ್ಲಿ ನಕಾರಾತ್ಮಕತೆಯು ಹೆಚ್ಚಾಗಿದೆ’, ಎಂದು ಗಮನಕ್ಕೆ ಬಂದಿತು. ಮೂರನೇಯ ಗ್ರಂಥವನ್ನು ಓದಿದಾಗ ಈ ಇಬ್ಬರು ವ್ಯಕ್ತಿಗಳಲ್ಲಿ ನಿರ್ಮಾಣವಾದ ನಕಾರಾತ್ಮಕತೆಯು ನಾಶವಾಯಿತು ಮತ್ತು ಅವರಲ್ಲಿ ಸಕಾರಾತ್ಮಕತೆಯು ನಿರ್ಮಾಣವಾಯಿತು.
ಪ್ರಯೋಗ ೩ : ಈ ಪ್ರಯೋಗದಲ್ಲಿ ೩ ಚಿತ್ರ ಬಿಡಿಸುವವರು ಬಿಡಿಸಿದ ಮಹಾಲಕ್ಷ್ಮೀ ದೇವಿಯ ಚಿತ್ರದಿಂದ ಪ್ರಕ್ಷೇಪಿತವಾಗುವ ಸ್ಪಂದನದ ಅಭ್ಯಾಸ ಮಾಡಲು ‘ಪಿಪ್’ ಈ ಉಪಕರಣವನ್ನು ಉಪಯೋಗಿಸಲಾಯಿತು. ಇವುಗಳ ಪೈಕಿ ಓರ್ವ ಪ್ರಸಿದ್ಧ ಚಿತ್ರಕಾರ ಇದ್ದರು, ಎರಡನೇ ಔದ್ಯೋಗಿಕ ಚಿತ್ರಕಾರರು ಇದ್ದರು. ಮೂರನೇಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಚಿತ್ರಕಾರ ಸಾಧಕರಿದ್ದರು, ಇವರು ಚಿತ್ರವನ್ನು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಬಿಡಿಸಿದ್ದರು. ಇವುಗಳ ಪೈಕಿ ಪ್ರಸಿದ್ಧ ಚಿತ್ರಕಾರನು ಬಿಡಿಸಿದ ಚಿತ್ರದಿಂದ ಸಕಾರಾತ್ಮಕ ಸ್ಪಂದನಕ್ಕಿಂತ ನಕಾರಾತ್ಮಕ ಸ್ಪಂದನವೇ ಹೆಚ್ಚು ಪ್ರಕ್ಷೇಪಿತವಾಗುತ್ತಿತ್ತು. ಉದ್ಯಮಿ ಚಿತ್ರಕಾರನು ಬಿಡಿಸಿದ ಚಿತ್ರದಿಂದ ಸಕಾರಾತ್ಮಕ ಸ್ಪಂದನ ಪ್ರಕ್ಷೇಪಿತಾಗುತ್ತಿತ್ತು ಹಾಗೂ ಸಾಧಕ ಚಿತ್ರಕಾರನು ಬಿಡಿಸಿದ ಚಿತ್ರದಿಂದ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನ ಪ್ರಕ್ಷೇಪಿತವಾಗುತ್ತಿತ್ತು.
ಪ್ರಯೋಗ ೪ : ಮುರೂ ಚಿತ್ರಕಾರರು ಬಿಡಿಸಿದ ಮಾಹಾಲಕ್ಷ್ಮೀ ದೇವಿಯ ಚಿತ್ರದಿಂದ ಪ್ರಕ್ಷೇಪಿತವಾಗುತ್ತಿರುವ ಸ್ಪಂದನದ ಅಭ್ಯಾಸವನ್ನು ‘ಯು.ಎ.ಎಸ್.’ ಉಪಕರಣದ ಸಹಾಯದಿಂದಲೂ ಮಾಡಲಾಯಿತು. ಆಗ ಪ್ರಸಿದ್ಧ ಚಿತ್ರಕಾರನು ಬಿಡಿಸಿದ ಚಿತ್ರದ ನಕಾರಾತ್ಮಕ ಪ್ರಭಾವಳಿ ೧.೩೫ ಮೀಟರನಷ್ಟಿತ್ತು. ಸಾಧಕ ಚಿತ್ರಕಾರನು ಬಿಡಿಸಿದ ಚಿತ್ರದಲ್ಲಿ ನಕಾರಾತ್ಮಕ ಸ್ಪಂದನ ಇರಲಿಲ್ಲ, ಬದಲಾಗಿ ಅವರ ಸಕಾರಾತ್ಮಕ ಪ್ರಭಾವಳಿ ೨.೫೬ ಮೀಟರ ಇತ್ತು.
ಪ್ರಯೋಗ ೫ : ಜಗತ್ತಿನಾದ್ಯಂತ ವಿವಿಧ ಧಾರ್ಮಿಕ ಸ್ಥಳದಿಂದ ತಂದಿದ್ದ ೨೪ ನೀರಿನ ಮಾದರಿಯ ಅಭ್ಯಾಸವನ್ನು ‘ಯು.ಎ.ಎಸ್.’ ಉಪಕರಣದ ಸಹಾಯದಿಂದ ಮಾಡಲಾಯಿತು. ಇವುಗಳ ಪೈಕಿ ಶೇ. ೪೦ ರಷ್ಟು ನೀರಿನ ಮಾದರಿಯಿಂದ ನಕಾರಾತ್ಮಕ ಸ್ಪಂದನ ಪ್ರಕ್ಷೇಪಿತವಾಗುತ್ತಿತ್ತು. ಇವುಗಳ ಪೈಕಿ ಒಂದು ನೀರಿನ ಮಾದರಿಯ ನಕಾರಾತ್ಮಕ ಪ್ರಭಾವಳಿ ಎಲ್ಲಕ್ಕಿಂತ ಹೆಚ್ಚು ಅಂದರೆ ೪.೬ಮೀಟರ ಇತ್ತು.
ಪ್ರಯೋಗ ೬ : ಈ ಪ್ರಯೋಗದಲ್ಲಿ ಮೂಲ ಸ್ವಸ್ತಿಕ, ಉಲ್ಟಾ ಸ್ವಸ್ತಿಕ, ೪೫ ಡಿಗ್ರಿಯಷ್ಟು ಬಾಗಿದ ಸ್ವಸ್ತಿಕ ಹಾಗೂ ನಾಜಿ ಸ್ವಸ್ತಿಕ ಇವುಗಳಿಂದ ಪ್ರಕ್ಷೇಪಿತವಾಗುವ ಸ್ಪಂದನದ ಅಭ್ಯಾಸವನ್ನು ‘ಯು.ಎ.ಎಸ್.’ ಉಪಕರಣದ ಸಹಾಯದಿಂದ ಮಾಡಲಾಯಿತು. ಇವುಗಳ ಪೈಕಿ ಕೇವಲ ಮೂಲ ಸ್ವಸ್ತಿಕ ಚಿಹ್ನೆಗೆ ಸಕಾರಾತ್ಮಕ ಪ್ರಭಾವಳಿ ಇತ್ತು, ಇತರ ಎಲ್ಲವುಗಳಲ್ಲಿ ನಕಾರಾತ್ಮಕ ಪ್ರಭಾವಳಿ ಇತ್ತು. ನಾಜಿ ಸ್ವಸ್ತಿಕದ ಸುತ್ತಲು ಇದ್ದ ನಕಾರಾತ್ಮಕ ಶಕ್ತಿಯ ಪ್ರಭಾವಳಿಯು ಇಲ್ಲಿಯವರೆಗೆ ಮಾಡಿದ ಆಧ್ಯಾತ್ಮಿಕ ಸಂಶೋಧನೆಯಲ್ಲಿ ಎಲ್ಲಕ್ಕಿಂತ ಹೆಚ್ಚಿದೆ ಎಂಬುದು ಗಮನಕ್ಕೆ ಬಂದಿತು, ಎಂದು ಶ್ರೀ. ಕ್ಲಾರ್ಕ್ ಹೇಳಿದರು.
ಪ್ರಯೋಗ ೭ : ಈ ಪ್ರಯೋಗದಲ್ಲಿ ೪ ರೀತಿಯ ಸಂಗೀತಶೈಲಿಯಿಂದ ವ್ಯಕ್ತಿಗಳ ಮೇಲಾಗುವಂತಹ ಪರಿಣಾಮವನ್ನು ‘ಯು.ಎ.ಎಸ್.’ ಈ ಉಪಕರಣದಿಂದ ಅಳೆಯಲಾಯಿತು. ಇವುಗಳ ಪೈಕಿ ‘ಹೆವಿ ಮೆಟಲ್’ ಸಂಗೀತವನ್ನು ಕೇಳಿ ನಕಾರಾತ್ಮಕತೆ ಹೆಚ್ಚಾಯಿತು, ಶಾಂತ ಸಂಗೀತದಿಂದ ಏನೂ ಪರಿಣಾಮ ಆಗಲಿಲ್ಲ, ಓರ್ವ ಪ್ರಸಿದ್ಧ ಗಾಯಕನ ಧ್ವನಿಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿದಾಗ ಕೆಲವು ಪ್ರಮಾಣದಲ್ಲಿ ಸಕಾರಾತ್ಮಕತೆ ಹೆಚ್ಚಾಯಿತು ಹಾಗೂ ಓರ್ವ ಸಂತರು ಹಾಡಿದ ಭಕ್ತಿಗೀತೆಯನ್ನು ಕೇಳಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕತೆ ಹೆಚ್ಚಾಯಿತು.
ಈ ಪ್ರಯೋಗದ ಸಾರಾಂಶವನ್ನು ಹೇಳಿದ ಶ್ರೀ. ಕ್ಲಾರ್ಕ್, ‘ಸಾಧನೆಯ ಮೂಲಭೂತ ಸಿದ್ಧಾಂಕ್ಕನುಸಾರ ನಿಯಮಿತವಾಗಿ ಸಾಧನೆ ಮಾಡಿದರೆ ಆಧ್ಯಾತ್ಮಿಕವಾಗಿ ಸಕಾರಾತ್ಮಕ ಶಕ್ತಿ ಸಿಗುತ್ತದೆ ಹಾಗೂ ನಕಾರಾತ್ಮಕ ಶಕ್ತಿ ಕಡಿಮೆ ಆಗುತ್ತದೆ. ಅದೇರೀತಿ ಸಾಧನೆಯಲ್ಲಿ ಸಾತತ್ಯವಿದ್ದರೆ ಕೆಲವು ಕಾಲಾವಧಿಯಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ಸ್ಪಂದನಗಳ ನಡುವಿನ ವ್ಯತ್ಯಾಸವೂ ತಿಳಿಯಲಾರಂಭಿಸುತ್ತದೆ, ಎಂದರು.’
ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಅನುಭೂತಿಜನ್ಯ ಸ್ಪಂದನಗಳು : ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಶಕ್ತಿ, ಭಾವ, ಚೈತನ್ಯ, ಆನಂದ, ಶಾಂತಿ ಇತ್ಯಾದಿ ಸ್ಪಂದನಗಳು ಸೂಕ್ಷ್ಮಜ್ಞಾನದ ಚಿತ್ರಗಳ ವಿಷಯಕ್ಕೆ ಸಂಬಂಧಿಸಿರುತ್ತವೆ. ಸೂಕ್ಷ್ಮಜ್ಞಾನದ ಚಿತ್ರದಲ್ಲಿನ ಘಟಕಗಳು ಈ ಸ್ಪಂದನಗಳಿಂದ ವ್ಯಕ್ತವಾಗುತ್ತವೆ. |