ಕೆನಡಾದಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಕೊರೊನಾ ವಿಷಾಣು ಮತ್ತು ಹವಾಮಾನದಲ್ಲಿನ ಬದಲಾವಣೆ’ ಎಂಬ ವಿಷಯದಲ್ಲಿ ಆಧ್ಯಾತ್ಮಿಕ ಸಂಶೋಧನೆಯ ಮಂಡನೆ !

ಸಾಧನೆ ಮಾಡುವುದರಿಂದ ಬರುವ ವಿವಿಧ ಸಂಕಟಗಳನ್ನು ಎದುರಿಸಲು ಬಲ ಸಿಗುತ್ತದೆ !

ಶ್ರೀ. ಶಾನ್ ಕ್ಲಾರ್ಕ್

ಹವಾಮಾನದಲ್ಲಾಗುತ್ತಿರುವ ಅತ್ಯಂತ ಪ್ರತಿಕೂಲ ಘಟನೆಗಳು ಮತ್ತು ನೈಸರ್ಗಿಕ ವಿಪತ್ತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹವಾಮಾನದಲ್ಲಿನ ಅನಿಷ್ಟ ಬದಲಾವಣೆಗಳ ಹಿಂದೆ ಮಾನವರ ಕೈವಾಡ ಇದೆ, ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ; ಹಾಗಿದ್ದರೆ ಪ್ರಶ್ನೆಯೆಂದರೆ ಕೋವಿಡ್‌-೧೯ ಮತ್ತು ಹವಾಮಾನದಲ್ಲಿನ ಬದಲಾವಣೆ ಇವುಗಳಲ್ಲಿ ಪರಸ್ಪರ ಸಂಬಂಧವಿದೆಯೇ ? ಮನುಷ್ಯನು ಸರಿಯಾದ ಸಾಧನೆಯನ್ನು ಪ್ರಾರಂಭಿಸಿ ಅದರಲ್ಲಿ ಸಾತತ್ಯವಿರಿಸಿ ಹೆಚ್ಚಿಸುತ್ತಿರಬೇಕು, ಹಾಗೆ ಮಾಡಿದ್ದಲ್ಲಿ ನಮ್ಮಲ್ಲಿ ಅದೇರೀತಿ ನಮ್ಮ ಸುತ್ತಲೂ ಸಾತ್ತ್ವಿಕತೆಯು ನಿರ್ಮಾಣವಾಗುತ್ತದೆ, ಆದ್ದರಿಂದ, ವಾತಾವರಣದಲ್ಲಿ ಅನಿಷ್ಟ ಬದಲಾವಣೆಯಾದರೂ ಸಾಧನೆ ಮಾಡುವವರಿಗೆ ಮುಂಬರುವ ಆಪತ್ಕಾಲದಲ್ಲಿ ದೇವರ ಸಹಾಯ ದೊರಕಿ ಅವರ ರಕ್ಷಣೆಯಾಗುತ್ತದೆ, ಅದೇ ರೀತಿ ಸಾಧನೆ ಮಾಡುವವರಿಗೆ ಬರುವ ವಿವಿಧ ಸಂಕಟಗಳನ್ನು ಎದುರಿಸಲು ಬಲ ಸಿಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಶೋಧ ಪ್ರಬಂಧವನ್ನು ಮಂಡಿಸುವಾಗ ಪ್ರತಿಪಾದಿಸಿದರು. ಅವರು ಮಾಂಟ್ರಿಯಲ್, ಕೆನಡಾ ಇಲ್ಲಿ ನೆರವೇರಿದ ೧೪ ನೇ ಗ್ಲೋಬಲ್‌ ಸ್ಟಡೀಸ್‌ ಕಾನ್ಫರೆನ್ಸ್‌ : ಲೈಫ್‌ ಆಫ್ಟರ್‌ ಪೆಂಡೆಮಿಕ್‌ : ಟುವರ್ಡ ಅ ನ್ಯೂ ಗ್ಲೋಬಲ್‌ ಬಯೋಪಾಲಿಟಿಕ್ಸ್‌ ?’ ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ‘ಕೊರೊನಾ ವಿಷಾಣು ಮತ್ತು ಹವಾಮಾನದಲ್ಲಿನ ಬದಲಾವಣೆ ಇವುಗಳ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನ – ಅವು ಪರಸ್ಪರ ಸಂಬಂಧಿಸಿವೆಯೇ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ?’, ಈ ಶೋಧಪ್ರಬಂಧವನ್ನು ಮಂಡಿಸಿದರು. ‘ಗ್ಲೋಬಲ್‌ ಸ್ಟಡೀಸ್‌ ರಿಸರ್ಚ ನೆಟ್ವರ್ಕ ಆಂಡ್ ಕಾಮನ್‌ ಗ್ರೌಂಡ್‌ ರಿಸರ್ಚ ನೆಟ್ವರ್ಕ’, ಈ ಪರಿಷತ್ತನ್ನು ಆಯೋಜಿಸಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಸಹ ಲೇಖಕರಾಗಿದ್ದಾರೆ.

ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಿಸಿದ ೭೩ ನೇ ಶೋಧಪ್ರಬಂಧದ ಮಂಡಣೆಯಾಗಿತ್ತು. ಈ ಹಿಂದೆ ವಿಶ್ವವಿದ್ಯಾಲಯವು ೧೫ ರಾಷ್ಟ್ರೀಯ ಮತ್ತು ೫೭ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಶೋಧಪ್ರಬಂಧಗಳನ್ನು ಮಂಡಿಸಿದೆ. ಇವುಗಳಲ್ಲಿ ೪ ಅಂತರರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಅತ್ಯುತ್ತಮ ಶೋಧಪ್ರಬಂಧ’ ಪ್ರಶಸ್ತಿಯನ್ನು ಪಡೆದಿದೆ.

ಹವಾಮಾನದಲ್ಲಿನ ಈ ಹಾನಿಕರ ಬದಲಾವಣೆ ಬಗ್ಗೆ ಏನು ಮಾಡಬಹುದು ? ಇದರ ಬಗ್ಗೆ ಮಾತನಾಡಿದ ಶ್ರೀ. ಶಾನ್ ಕ್ಲಾರ್ಕ್ ಇವರು ಈ ಸಮಸ್ಯೆಯ ಮೂಲಭೂತ ಕಾರಣವೂ ಆಧ್ಯಾತ್ಮಿಕವಾಗಿರುವುದರಿಂದ ಹವಾಮಾನದಲ್ಲಿನ ಸಕಾರಾತ್ಮಕ ಬದಲಾವಣೆ ಮತ್ತು ಅವುಗಳ ರಕ್ಷಣೆ ಇವುಗಳ ಬಗೆಗಿನ ಉಪಾಯಯೋಜನೆಯೂ ಮೂಲತಃ ಆಧ್ಯಾತ್ಮಿಕ ಸ್ತರದಲ್ಲಿರುವುದು ಆವಶ್ಯಕವಿರುತ್ತದೆ. ಸಂಪೂರ್ಣ ಸಮಾಜವು ಯೋಗ್ಯ ಸಾಧನೆಯನ್ನು ಮಾಡತೊಡಗಿದರೆ, ಹವಾಮಾನದಲ್ಲಿನ ಹಾನಿಕರ ಬದಲಾವಣೆ, ನೈಸರ್ಗಿಕ ವಿಪತ್ತು, ಮಹಾಮಾರಿ, ಮೂರನೇಯ ಮಹಾಯುದ್ಧ ಅಥವಾ ಇತರ ಸಂಕಟಗಳು ಇವುಗಳಿಂದ ಬರಲಿರುವ ಭೀಕರ ಆಪತ್ಕಾಲವನ್ನು ಎದುರಿಸಲು ಸಾಧ್ಯವಾಗುವುದು.