‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐ.ಎಮ್.ಎ.) ಮತ್ತು ಯೋಗಋಷಿ ರಾಮದೇವಬಾಬಾ ಇವರ ನಡುವಿನ ಸಂಘರ್ಷದಿಂದ ದೇಶಕ್ಕೆ ಬಹುದೊಡ್ಡ ಲಾಭವಾಗುತ್ತಿದೆ. ಅದೆಂದರೆ ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಎಂದರೆ ಸರಕಾರಿ ಸಂಸ್ಥೆಯಾಗಿದೆ, ಎಂದು ತಿಳಿದುಕೊಂಡಿದ್ದ ಭಾರತೀಯರಿಗೆ ಅದರ ಸತ್ಯಾ ಸತ್ಯತೆ ಈಗ ಅರಿವಾಗುತ್ತಿದೆ. ಇಷ್ಟೇ ಅಲ್ಲ, ವಿವಿಧ ಮಾಧ್ಯಮಗಳಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ) ಇದರ ಕೃತ್ಯಗಳು ಹೊರಬರುತ್ತಿವೆ. ಅದರ ಅಧ್ಯಕ್ಷರಾಗಿರುವ ಡಾ. ಜೆ.ಎ. ಜಯಲಾಲ ಇವರ ವಿವಾದಿತ ಹೇಳಿಕೆಯೂ ಜಗತ್ತಿನೆದುರು ಬಹಿರಂಗಗೊಳ್ಳುತ್ತಿದೆ. ಸಮಸ್ತ ಆಯುರ್ವೇದಪ್ರೇಮಿಗಳು ಇಂತಹ ಘಟನೆ ಘಟಿಸುವ ನಿರೀಕ್ಷೆಯಲ್ಲಿಯೇ ಇದ್ದರು. ಇದರಿಂದಲೇ ಐ.ಎಮ್.ಎ.ನ ಸರ್ವಾಧಿಕಾರಿ ನಿಲುವಿನ ವಿರುದ್ಧ ಹೋರಾಡಲು ‘ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಶನ್ (‘ನಿಮಾ) ಇದರ ೭ ಕೋಟಿ ೭೦ ಲಕ್ಷ ಆಯುರ್ವೇದ ವೈದ್ಯರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇವರಲ್ಲಿ ಐ.ಎಂ.ಎ. ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಈ ಪ್ರಕರಣ ತಮ್ಮನ್ನೇ ಆವರಿಸಿಕೊಳ್ಳುವ ಲಕ್ಷಣಗಳು ಕಾಣಿಸತೊಡಗಿದ್ದರಿಂದ ಈಗ ಐ.ಎಮ್.ಎ. ಜಾಗೃತಗೊಂಡು ಯೋಗಋಷಿ ರಾಮದೇವ ಬಾಬಾ ಇವರಿಗೆ ಅವರ ಹೇಳಿಕೆಯನ್ನು ಹಿಂಪಡೆಯುವಂತೆ ಕರೆ ನೀಡಿದ್ದಾರೆ.
ಆಯುರ್ವೇದದ್ವೇಷಿ ಐ.ಎಂ.ಎ.!
ಯೋಗಋಷಿ ರಾಮದೇವಬಾಬಾರವರ ಮೇಲೆ ೧ ಸಾವಿರ ಕೋಟಿ ರೂಪಾಯಿಗಳ ಮಾನಹಾನಿ ಮೊಕದ್ದಮೆ ಹೂಡುವ ಇದೇ ಐ.ಎಂ.ಎ. ಪತಂಜಲಿಯ ‘ಕೊರೊನೀಲ ಔಷಧಿಯ ಮೇಲೆ ಆಕ್ಷೇಪ ವ್ಯಕ್ತಪಡಿಸಿತ್ತು. ನಂತರದ ಕಾಲಾವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯೆಂದು ಕೊರೊನಿಲ್ ಮಾರಾಟ ಪ್ರಾರಂಭವಾಗಿದ್ದರೂ, ಇದು ಕೊರೊನಾ ನಿಯಂತ್ರಿಸುವ ಆಯುರ್ವೇದದ ಪ್ರಭಾವಶಾಲಿ ಔಷಧಿಯಾಗಿರುತ್ತಿತ್ತು. ಕೊರೊನಿಲ್ ಮತ್ತು ಆಯುರ್ವೇದದ ಇನ್ನಿತರ ಔಷಧಗಳನ್ನು ವಿರೋಧಿಸುವ ಐ.ಎಂ.ಎ. ಅದು ಮಾತ್ರ ಗೋಡೆಗೆ ಹಚ್ಚುವ ಬಣ್ಣವೂ ‘ಆಂಟಿ ಬ್ಯಾಕ್ಟೀರಿಯಲ್ (ಜೀವಾಣುರೋಧಕ) ಇರುವ ಪ್ರಮಾಣಪತ್ರವನ್ನು ವಿತರಿಸುತ್ತಿದೆ. ಮೈ ಸೋಪು, ಎಲ್.ಇ.ಡಿ. ದೀಪ, ನೀರು ಶುದ್ಧೀಕರಣ ಯಂತ್ರ (ವಾಟರ ಪ್ಯೂರಿಫೈಯರ್) ಇವುಗಳ ಉಪಯೋಗದಿಂದ ಕೀಟಾಣು ಮತ್ತು ವಿಷಾಣು ಶೇ. ೯೯.೯೯ ನಷ್ಟಗೊಳ್ಳುತ್ತವೆಯೆಂದು ಪ್ರಮಾಣೀಕರಿಸಿ ಹೇಳುವ ಅನೇಕ ವಿದೇಶಿ ಕಂಪನಿಗಳು ‘ ಐ.ಎಮ್.ಎ. ಹೆಸರನ್ನು ಹೇಳುತ್ತವೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಇಂತಹ ಮೌಢ್ಯವನ್ನು ಹರಡಿ ಜನರ ಆರೋಗ್ಯವನ್ನು ಅಪಾಯಕ್ಕೆ ದೂಡುವುದು ಯಾವ ವೈದ್ಯಕೀಯ ಶಾಸ್ತ್ರದ ನೀತಿನಿಯಮಗಳಡಿಯಲ್ಲಿ ಬರುತ್ತವೆ ? ಈ ಕಂಪನಿಗಳಿಗೆ ಈ ರೀತಿ ಪ್ರಮಾಣಪತ್ರವನ್ನು ನೀಡಲು ಐ.ಎಮ್.ಎ. ಯಾವ ಸಾಕ್ಷಿ-ಪುರಾವೆಗಳನ್ನು ಕ್ರೋಢೀಕರಿಸಿದೆ ? ನಿರ್ದಿಷ್ಟ ಮೊತ್ತವನ್ನು ಪಡೆದು ಇಂತಹ ಪ್ರಮಾಣಪತ್ರವನ್ನು ವಿತರಿಸಲಾಗುತ್ತಿದೆಯೆಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಸತ್ಯವಾಗಿದ್ದರೆ, ‘ಇಂತಹ ಕೃತಕ ಉಪಕರಣಗಳ ಆವಶ್ಯಕತೆ ಬೀಳಬಾರದು, ಎನ್ನುವಂತಹ ಜೀವನಶೈಲಿಯನ್ನು ವಿಕಸಿತ ಗೊಳಿಸುವ ಆಯುರ್ವೇದವನ್ನು ಐ.ಎಂ.ಎ. ಏಕೆ ವಿರೋಧಿಸುತ್ತಿದೆ ? ಎನ್ನುವುದು ಗಮನಕ್ಕೆ ಬರುವುದು. ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡಲು ಸರಕಾರ ನಿರ್ಧರಿಸಿದಾಗ ಅದನ್ನು ಐ.ಎಂ.ಎ. ಕಟುವಾಗಿ ವಿರೋಧಿಸಿತ್ತು. ಐ.ಎಂ.ಎ. ಈ ರೀತಿ ಅಭಿಪ್ರಾಯ ಕೊಟ್ಟಾಗ ಅದನ್ನು ಸಂಪೂರ್ಣ ವೈದ್ಯಕೀಯ ಶಾಸ್ತ್ರದ ಅಭಿಪ್ರಾಯವೆನ್ನುವಂತೆ ಗಂಭೀರವಾಗಿ ಪರಿಗಣಿಸಲಾಗಿತ್ತು.
ಜಾನ್‌ರೋಜ್ ಇವರ ರೋಗಿಗಳ ಮೇಲಿನ ನಾಟಕೀಯ ಪ್ರೇಮ !
ಆಧುನಿಕ ವೈದ್ಯರ ಜೀವದ ಕಾಳಜಿ ಮಾಡುವ ಮತ್ತು ಅವರ ಬಲಿದಾನವನ್ನು ಸ್ಮರಿಸುವಂತೆ ಕೋರುವ ಜಾನ್‌ರೋಜ್ ಕೊರೊನಾಕಾಲದಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸರಕಾರಕ್ಕೆ ಬೆದರಿಕೆಯೊಡ್ಡಿದ್ದರು ಎನ್ನುವುದನ್ನು ಜನರು ಇಂದಿಗೂ ಮರೆತಿಲ್ಲ. ಜಾಗತಿಕ ಮಹಾಮಾರಿಯ ಕಾಲದಲ್ಲಿ ಸರಕಾರದ ನಿರ್ಣಯಗಳನ್ನು ಜನರ ವರೆಗೆ ತಲುಪಿಸಬೇಕಾಗಿದ್ದ ಜಾನ್‌ರೋಜ್ ಇವರು ಟ್ವಿಟರ್ ಹ್ಯಾಂಡಲ್‌ನಿಂದ ಸರಕಾರವನ್ನು ಅಪಹಾಸ್ಯ ಮಾಡುತ್ತಿರುವುದು ಕಂಡು ಬಂದಿತು. ಹಿಂಸಾತ್ಮಕ ಮತ್ತು ದೇಶವಿರೋಧಿ ಮಾರ್ಗದೆಡೆಗೆ ಹೊರಳಿದ್ದ ರೈತರ ಆಂದೋಲನ ವನ್ನು ಬೆಂಬಲಿಸಿದ್ದ ವಿದೇಶಿ ಪರಿಸರವಾದಿ ಗ್ರೇಟಾ ಥನ್‌ಬರ್ಗ ಇವರನ್ನು ಡಾ. ಜಾನ್‌ರೋಜ್ ಜಯಲಾಲ್ ಬೆಂಬಲಿಸಿದ್ದರು. ಬ್ರಿಟಿಷರು ೧೯೨೦ ರಲ್ಲಿ ಐ.ಎಂ.ಎ. ಸ್ಥಾಪಿಸಿದ್ದರು. ಆಗಿನ ಅವರ ಉದ್ದೇಶದಂತೆ ಅದು ಇಂದಿಗೂ ಭಾರತೀಯರನ್ನು ಕ್ರೈಸ್ತೀಕರಣಗೊಳಿಸುತ್ತಿದೆ. ಜಯಲಾಲ್ ಹೆಸರು ಹಿಂದೂ ಎನಿಸುತ್ತಿದ್ದರೂ, ಅವರ ಮೊದಲ ಹೆಸರು ಜಾನ್‌ರೋಜ್ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಡಾ. ಜಾನ್‌ರೋಜ್ ಅವರು ತಮ್ಮ ಒಂದು ಸಂದರ್ಶನದಲ್ಲಿ ‘ಏಸು ತನ್ನೆಲ್ಲ ಗಮನವನ್ನು ಭಾರತದ ಮೇಲೆ ಕೇಂದ್ರೀಕರಿಸಿರುವುದರಿಂದ ಎಲ್ಲವೂ ಒಳ್ಳೆಯದಾಗುತ್ತಿದೆ, ಎಂದು ಹೇಳಿದ್ದರು. ‘ಜಾತ್ಯತೀತ ಸಂಸ್ಥೆ, ಮಿಶನರಿ ಸಂಸ್ಥೆ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಲು ಅತ್ಯಧಿಕ ಕ್ರಿಶ್ಚಿಯನ್ ಆಧುನಿಕ ವೈದ್ಯರ ಆವಶ್ಯಕತೆಯಿದೆ; ಇದರಿಂದ ರೋಗಿಗಳ ಮೇಲೆ ಕ್ರಿಶ್ಚಿಯನ್ ಪದ್ಧತಿಯಿಂದ ಉಪಚರಿಸಲು ಸಾಧ್ಯವಾಗುವುದು, ಎನ್ನುವ ಜಾನ್‌ರೋಜ್ ಇವರ ಹೇಳಿಕೆ ಯಿಂದ ಅವರ ಉದ್ದೇಶವು ಸ್ಪಷ್ಟವಾಗುತ್ತದೆ. ಜಾನ್‌ರೋಜ್ ಇವರ ಮತಾಂತರದ ಉದ್ದೇಶ ಉದ್ದೇಶವು ಎಲ್ಲರಿಗೆ ಗೊತ್ತಾಗಿದೆ. ಕಳೆದ ವರ್ಷವಿಡಿ ದೇಶ ಕೊರೊನಾದೊಂದಿಗೆ ಹೋರಾಡುತ್ತಿರುವಾಗ ಜಾನ್‌ರೋಜ್ ಇವರ ಒಳಸಂಚು ಏನಿತ್ತು ? ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಬ್ರಿಟಿಷರು ಬಿಟ್ಟು ಹೋಗಿರುವ ಸಂಘಟನೆಗಳು, ವ್ಯವಸ್ಥೆಯು ಸ್ವಾತಂತ್ರ್ಯದ ಬಳಿಕವೂ ಯಾವತ್ತೂ ಭಾರತೀಯತ್ವವನ್ನು ಗೌರವಿಸಿಲ್ಲ. ಇಂದಿಗೂ ಜಾನ್‌ರೋಜ್ ಆಯುರ್ವೇದ, ಹೋಮಿಯೋಪಥಿ, ಯುನಾನಿ ಇತ್ಯಾದಿ ವೈದ್ಯಕೀಯ ಶಾಖೆಗಳನ್ನು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಿದ್ದಾರೆ. ಅರ್ಥಾತ್ ಅವರ ಶಾಪದಿಂದ ಈ ವೈದ್ಯಕೀಯ ಶಾಖೆಗಳೇನೂ ಕುಂಠಿತಗೊಂಡಿಲ್ಲ. ಅಲೋಪಥಿಯ ದುಷ್ಪರಿಣಾಮಗಳನ್ನು ಗಮನಿಸಿ ಬಹುತೇಕ ಜನರು ಈಗ ಈ ವೈದ್ಯಕೀಯ ಶಾಖೆಗಳಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ.
ಪ್ರತಿಯೊಂದು ವೈದ್ಯಕೀಯ ಶಾಖೆಗೆ ಒಂದು ಮಿತಿ ಇದ್ದೇ ಇರುತ್ತದೆ. ಅದಾಗ್ಯೂ ಕಳೆದ ವರ್ಷವಿಡೀ ಆಯುರ್ವೇದವನ್ನು ಉದ್ದೇಶಪೂರ್ವಕವಾಗಿ ಬದಿಗೊತ್ತಿ ಕೇವಲ ಅಲೋಪಥಿಯ ಔಷಧಿಗಳ ಮೂಲಕ ಕೊರೊನಾ ಮೇಲೆ ಉಪಚಾರ ಮಾಡುವ ಅಟ್ಟಹಾಸ ಪ್ರಾರಂಭವಾಗಿರುವುದನ್ನು ನೋಡಿದರೆ ಈ ಸಮಯ ಬಂದೇ ಬರಲಿದೆ ಎಂಬ ಖಾತ್ರಿ ಇತ್ತು. ಅಲೋಪಥಿಯ ಚಿಕಿತ್ಸೆಯಿಂದಲೂ ಈಗ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲಾಗಿದೆ. ರೆಮ್‌ಡೆಸಿವರ್ ಇಂಜೆಕ್ಷನ್‌ನಿಂದ ಅಧಿಕ ದುಷ್ಪರಿಣಾಮ ಆಗುತ್ತಿರುವುದನ್ನು ನೋಡಿ ಆಧುನಿಕ ವೈದ್ಯರು ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆ ಕ್ಷೇತ್ರದಲ್ಲಿಯೂ ಪ್ರಯೋಗಗಳು ಮುಂದುವರಿದಿವೆ. ಅದೇ ಪ್ರಯೋಗಗಳನ್ನು ಮಾಡಲು ಆಯುರ್ವೇದಕ್ಕೆ ಅವಕಾಶ ನೀಡದಿರಲು ಸಾವಿರಾರು ಕೋಟಿ ರೂಪಾಯಿಗಳ ಅಲೋಪಥಿ ಔಷಧಿಗಳ ಮಾರುಕಟ್ಟೆಯೇ ಕಾರಣ ವಾಗಿದೆ ಎಂದು ಭಾರತಾದ್ಯಂತವಿರುವ ವೈದ್ಯರ ಬೇಸರವಾಗಿದೆ. ಜಾನ್‌ರೋಜ್ ಇವರಿಂದ ಆಯುರ್ವೇದಕ್ಕೆ ವ್ಯಕ್ತವಾಗುವ ವಿರೋಧವು ಹಿಂದೂದ್ವೇಷದ ದರ್ಪವಾಗಿದೆ. ದೇಶ ಎಷ್ಟು ಕಠಿಣ ಪರಿಸ್ಥಿತಿಯಲ್ಲಿದೆ ಎನ್ನುವುದು ಗಮನಿಸಿ, ಎಲ್ಲ ವೈದ್ಯಕೀಯ ಶಾಖೆಗಳನ್ನು ಒಂದುಗೂಡಿಸಿ ಭಾರತೀಯರ ಆರೋಗ್ಯ ಚೆನ್ನಾಗಿರಲು ಒಂದು ಮಾರ್ಗವನ್ನು ಕಂಡು ಹಿಡಿಯಬೇಕಾಗಿರುವ ಸಮಯದಲ್ಲಿ ಈ ದ್ವೇಷದ ಭಾಷೆ ದೇಶವಿರೋಧಿಯಾಗಿದೆ. ಹಾಗಾಗಿ ಜಾನ್‌ರೋಜ್ ಇವರೇ ಮೊದಲು ದೇಶದ ಕ್ಷಮೆ ಕೋರಬೇಕಾಗಿದೆ.