ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಕೊರೋನಾ ಬಂದಿಲ್ಲ ! – ಸಂಸದೆ ಸಾಧ್ವಿ ಪ್ರಜ್ಞಾಸಿಂಗ್

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್

ಭೋಪಾಲ್ – ಗೋಮೂತ್ರ ಅರ್ಕವನ್ನು ಕುಡಿಯುವುದರಿಂದ ಶ್ವಾಸಕೋಶದ ಸೋಂಕುಗಳು ದೂರವಾಗುತ್ತವೆ. ನಾನು ಪ್ರತಿದಿನ ಗೋಮೂತ್ರ ಅರ್ಕವನ್ನು ಕುಡಿಯುತ್ತೇನೆ. ಆದ್ದರಿಂದ ನನಗೆ ಕೊರೋನಾ ಬಂದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದೇಶಿ ಹಸುಗಳನ್ನು ಸಾಕಬೇಕು ಮತ್ತು ಗೋಮೂತ್ರ ಅರ್ಕವನ್ನು ಕುಡಿಯಬೇಕು ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು. ಇಲ್ಲಿಯ ಡಾ. ಹೆಡಗೆವಾರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕಾನ್ಸಟ್ರೇಟರ್ ಕೊಡುಗೆ ನೀಡಲು ಬಂದಿದ್ದರು. ಈ ಸಮಯದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.