ಭೋಪಾಳದಲ್ಲಿನ ‘ಹಲಾಲಪುರ’ ಎಂಬ ಹೆಸರು ಬದಲಾಯಿಸುವ ಪ್ರಸ್ತಾಪಕ್ಕೆ ಅನುಮೋದನೆ

ಪುರಸಭೆಯ ಸಭೆಯಲ್ಲಿ ಪಾಲ್ಗೊಂಡು ಸಾಧ್ವಿ ಪ್ರಜ್ಞ ಸಿಂಹ ಇವರ ಆಗ್ರಹ

ಸಾಧ್ವಿ ಪ್ರಜ್ಞ ಸಿಂಹ

ಭೋಪಾಲ (ಮಧ್ಯಪ್ರದೇಶ) – ಭೋಪಾಲ ಪುರಸಭೆಯ ಸಭೆಯಲ್ಲಿ ಇಲ್ಲಿಯ ಭಾಜಪದ ಶಾಸಕಿ ಸಾಧ್ವಿ ಪ್ರಜ್ಞಾ ಸಿಂಹ ಠಾಕೂರ ಇವರು ಪಾಲ್ಗೊಂಡು ನಗರದ ಲಾಲಘಾಟಿ ಮತ್ತು ಹಲಾಲಪುರ ಪ್ರದೇಶದ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ. ಅದರ ನಂತರ ಪರೀಕ್ಷಣೆಯ ಒಪ್ಪಂದದ ಆಧಾರವಾಗಿ ಪುರಸಭೆಯು ಈ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್‌ನ ಕಾರ್ಪೊರೇಟರ್, ಯಾವ ಸ್ಥಳದಲ್ಲಿ ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸಲಾಗಿದೆ, ಆ ಸ್ಥಳಗಳ ಹೆಸರು ಕೂಡ ಬದಲಾಯಿಸಬೇಕು ಎಂದು ಹೇಳಿದರು.

೧. ಪುರಸಭೆಯ ಸಭೆಯಲ್ಲಿ ಶಾಸಕರಿಗೆ ಪಾಲ್ಗೊಳ್ಳಲು ಅನುಮತಿ ಇಲ್ಲದಿರುವಾಗ ಸಾದ್ವಿಪ್ರಜ್ಞ ಸಿಂಹ ಅಲ್ಲಿಗೆ ಬಂದರು. ಸಭೆಯಲ್ಲಿ ಅವರು ಪಾಲ್ಗೊಂಡು ಕಾರ್ಪೊರೇಟರ್‌ಗೆ ಉದ್ದೇಶಿಸಿ, ‘ನಾವು ಇತಿಹಾಸ ಬದಲಿಸುವೆವು ಮತ್ತು ಹೆಸರು ಕೂಡ ಬದಲಿಸುವೆವು.’ ಅವರು ಲಾಲಘಾಟಿ ಮತ್ತು ಹಲಾಲಪುರ ಈ ಹೆಸರು ಬದಲಿಸಲು ಒತ್ತಾಯಿಸಿದರು. ಹಲಾಲಪುರದ ಹೆಸರು ಬದಲಿಸಿ ‘ಹನುಮಾನಗಢಿ’ ಹಾಗೂ ಲಾಲಘಾಟಿಯ ಹೆಸರು ‘ಮಹೇಂದ್ರ ನಾರಾಯಣದಾಸ’ ಎಂದು ಬದಲಾಯಿಸುವಂತೆ ಒತ್ತಾಯಿಸಿದರು.

೨. ವಿಶೇಷವೆಂದರೆ ಸಾಧ್ವಿ ಪ್ರಜ್ಞ ಸಿಂಹ ಇವರು ಯಾವ ಹಲಾಲಪುರದ ಹೆಸರು ಬದಲಿಸಲು ಹೇಳಿದ್ದಾರೆ, ಅದನ್ನು ಈ ಮೊದಲೇ ‘ಮಹಾಂತ ನರಹರಿದಾಸ’ ಎಂದು ಬದಲಾಯಿಸಲಾಗಿದೆ. ಕಾಂಗ್ರೆಸ್ಸಿನವರು, ನಗರದ ಶಾಸಕಿ ಮತ್ತು ಮಹಾಪೌರರಿಗೆ ಈ ವಿಷಯವಾಗಿ ಏನು ತಿಳಿದಿಲ್ಲ, ಇಂತಹ ಸಮಯದಲ್ಲಿ ಅವರು ವಿಕಾಸ ಹೇಗೆ ಮಾಡುವರು ? ಎಂದು ಹೇಳಿದರು.