ಮಥುರಾ (ಉತ್ತರ ಪ್ರದೇಶ) – ಭಾರತದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ; ಆದರೆ ನಮ್ಮ ಧರ್ಮದ ಮೇಲೆ ಯಾರಾದರೂ ದಾಳಿ ನಡೆಸಿದರೇ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆಯೇ ಹೊರತು ಬೆನ್ನು ತೋರಿಸುವುದಿಲ್ಲವೆಂದು ಭೋಪಾಲ್ ಭಾರತೀಯ ಜನತಾ ಪಕ್ಷದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಹ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಇವರು ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸುವಂತೆ ಆಗ್ರಹಿಸಿರುವ ಬಗ್ಗೆ ಅವರು ಮಾತನಾಡುತ್ತಿದ್ದರು.
साध्वी प्रज्ञा बोलीं-बागेश्वर वाले बाबा की शक्तियां सबको नहीं मिलतीं: धर्म पर आक्रमण किया तो ऐसा जवाब देंगे कि न जमीन मिलेगी न आसमानhttps://t.co/48xBZnXfC2#Pragyathankur #bagheshwardham #Prayagraj pic.twitter.com/AaR1qWvpUR
— Dainik Bhaskar (@DainikBhaskar) February 3, 2023
ಸಂಸದೆ ಸಾಧ್ವಿ ಪ್ರಜ್ಞಾ ಸಿಂಹ ಇವರು ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಕುರಿತು ಮಾತನಾಡುತ್ತಾ, ಧರ್ಮ ವಿರೋಧಿ ಜನರು ಸನಾತನ ಧರ್ಮದ ಮೇಲೆ ದಾಳಿ ನಡೆಸುತ್ತಾರೆ. ಅದರಿಂದ ಸನಾತನ ಧರ್ಮದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಪಂಡಿತ ಧೀರೆಂದ್ರಕೃಷ್ಣ ಶಾಸ್ತ್ರಿಯವರ ಮಾಧ್ಯಮದಿಂದ ಹಿಂದು ಮತ್ತು ಹಿಂದುತ್ವ ವೃದ್ಧಿಗೊಳ್ಳುತ್ತಿದೆ. ಭಾರತ ವಿಶ್ವ ಗುರು ಆಗಿತ್ತು ಭವಿಷ್ಯದಲ್ಲಿಯೂ ಭಾರತಮಾತೆಯನ್ನು ಪರಮವೈಭವದವರೆಗೆ ತಲುಪಿ ಭಾರತ ವಿಶ್ವ ಗುರುವಾಗುವುದು. ಈ ಹಿನ್ನೆಲೆಯಲ್ಲಿ ಧೀರೆಂದ್ರಕೃಷ್ಣ ಶಾಸ್ತ್ರಿಯವರು ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.