Court Order To Sadhvi Pragya Singh : ಸಾಧ್ವಿ ಪ್ರಜ್ಞಾ ಸಿಂಗ ಅವರಿಗೆ ಏಪ್ರಿಲ್ 25 ರಂದು ನ್ಯಾಯಾಲಯದಲ್ಲಿ ಹಾಜರಾಗಲು ಆದೇಶ !

  • ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ

  • ಹಾಜರಾಗದಿದ್ದರೆ ಕ್ರಮ !

ಮುಂಬಯಿ – 2008 ರ ಮಾಲೆಗಾಂವ ಬಾಂಬ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 25 ರವರೆಗೆ ಉತ್ತರಿಸಲು ಹಾಜರಾಗಬೇಕು ಎಂದು ಮುಂಬಯಿ ವಿಶೇಷ ನ್ಯಾಯಾಲಯವು ಭಾಜಪ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ ಅವರಿಗೆ ಏಪ್ರಿಲ್ 20 ರಂದು ಆದೇಶವನ್ನು ನೀಡಿದೆ. ಇದಕ್ಕೂ ಮೊದಲು ವೈದ್ಯಕೀಯ ಕಾರಣಗಳಿಂದ ಪ್ರಜ್ಞಾ ಸಿಂಗ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗದಿರಲು ನ್ಯಾಯಾಲಯವು ವಿನಾಯಿತಿ ನೀಡಿತ್ತು.

ಇದಕ್ಕೂ ಮೊದಲು, ಏಪ್ರಿಲ್ 8 ರಂದು ನಡೆದ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಸಾಧ್ವಿ ಪ್ರಜ್ಞಾ ಸಿಂಗ ಅವರನ್ನು ಏಪ್ರಿಲ್ 20 ರವರೆಗೆ ನ್ಯಾಯಾಲಯದಲ್ಲಿ ಹಾಜರಿರಲು ಆದೇಶಿಸಿತ್ತು; ಆದರೆ ಅಂದು ಅವರು ಹಾಜರಾಗದ ಕಾರಣ ನ್ಯಾಯಾಲಯವು ಮೇಲಿನಂತೆ ಆದೇಶ ನೀಡಿದೆ. ಏಪ್ರಿಲ್ 25 ರಂದು ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಕಳೆದ ತಿಂಗಳು ನ್ಯಾಯಾಲಯವು ಪ್ರಜ್ಞಾ ಠಾಕೂರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿತ್ತು; ಆದರೆ ನ್ಯಾಯವಾದಿಗಳು ಸಾಧ್ವಿ ಪ್ರಜ್ಞಾ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನಂತರ ನ್ಯಾಯಾಲಯವು ಆದೇಶವನ್ನು ಸ್ಥಗಿತಗೊಳಿಸಿತ್ತು. ಈ ಹಿಂದೆ ಸಾಧಿ ಪ್ರಜ್ಞಾ ಸಿಂಗ್ ಅವರು ಆರೋಗ್ಯ ಸಮಸ್ಯೆಯ ಕಾರಣದಿಂದ ವಿಚಾರಣೆಗೆ ಹಾಜರಾಗದಿರಲು ನ್ಯಾಯಾಲಯದಿಂದ ವಿನಾಯತಿ ಕೋರಿದ್ದರು. ಅದರಂತೆ ನ್ಯಾಯಾಲಯ ಅವರಿಗೆ ಅನುಮತಿ ನೀಡಿತ್ತು. ತದನಂತರ, ರಾಷ್ಟ್ರೀಯ ತನಿಖಾ ದಳವು ಸಾಧ್ವಿ ಪ್ರಜ್ಞಾ ಸಿಂಗ್ ಅವರ ಆರೋಗ್ಯ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಅವರಿಗೆ ಮಧ್ಯಪ್ರದೇಶದಿಂದ ಮುಂಬಯಿಗೆ ಪ್ರವಾಸ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಇದರಿಂದ ನ್ಯಾಯಾಲಯವು ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು.

ಸೆಪ್ಟೆಂಬರ್ 29, 2008 ರಂದು ಮಾಲೆಗಾಂವ್‌ನ ಮಸೀದಿಯ ಹೊರಗೆ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ 6 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.