ಸ್ವಸಂಘಟನೆಯ ಪರಿಧಿಯನ್ನು ದಾಟಿ ಹಿಂದುತ್ವನಿಷ್ಠರಿಗೆ ಸಹಾಯ ಮಾಡುವ ಮತ್ತು ಹಿಂದೂಸಂಘಟನೆಗಾಗಿ ಪ್ರಯತ್ನಿಸುವ ಪರಾತ್ಪರ ಗುರು ಡಾ. ಆಠವಲೆ !

‘ಪರಾತ್ಪರ ಗುರು ಡಾಕ್ಟರ್‌ರು ತುಂಬಾ ವರ್ಷಗಳ ಹಿಂದೆ ಸಾಧಕರಿಗೆ ಪ್ರಭೋದನೆಗೆಂದು ೪ ಸಾಲುಗಳ ಒಂದು ಕಾವ್ಯವನ್ನು ರಚಿಸಿ ಅದರಲ್ಲಿ, ‘ನಾನು ಸ್ಥೂಲದೇಹದಿಂದ ಯಾವಾಗಲೂ ಎಲ್ಲೆಡೆಯಿರಲು ಮಿತಿಯಿದೆ, ಆದುದರಿಂದ ನಾನು ‘ಸನಾತನ ಧರ್ಮದ ರೂಪದಲ್ಲಿ ಎಲ್ಲೆಡೆಯಿದ್ದೇನೆ ಎಂಬ ಭಾವವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು. ಕಾಲಾಂತರದಲ್ಲಿ ಹಿಂದುತ್ವದ ಕಾರ್ಯವು ಹೆಚ್ಚಾಗುತ್ತಾ ಹೋದಂತೆ ಹಿಂದುತ್ವನಿಷ್ಠರೂ ಪರಾತ್ಪರ ಗುರು ಡಾಕ್ಟರರತ್ತ ಆಕರ್ಷಿಸಲ್ಪಟ್ಟರು ಮತ್ತು ಇಂದು ಎಷ್ಟೋ ಜನ ಹಿಂದುತ್ವನಿಷ್ಠರು ಪರಾತ್ಪರ ಗುರು ಡಾಕ್ಟರರನ್ನು ‘ಗುರುಸ್ಥಾನದಲ್ಲಿ ನೋಡುತ್ತಿದ್ದಾರೆ. ಇಂದು ನಮಗೆ ‘ಪರಾತ್ಪರ ಗುರು ಡಾಕ್ಟರರು ‘ಸನಾತನ ಧರ್ಮದ ದೇವರೇ ಆಗಿದ್ದಾರೆ ಎಂಬ ಅನುಭವವು ಸಹ ತುಂಬಾ ಸಲ ಬರುತ್ತದೆ.  ಪರಾತ್ಪರ ಗುರು ಡಾಕ್ಟರರು ಸಹ ಆಚಾರ-ವಿಚಾರಗಳಲ್ಲಿ ಸಾಧಕರು ಮತ್ತು ಹಿಂದುತ್ವನಿಷ್ಠರು, ತಮ್ಮ ಮತ್ತು ಇತರ ಸಂಘಟನೆಗಳು ಎಂಬ ಭೇದಭಾವವನ್ನು ಎಂದಿಗೂ ಮಾಡಲಿಲ್ಲ. ಆದ್ದರಿಂದ ಅವರಿಗೆ ಹಿಂದುತ್ವನಿಷ್ಠರಿಗೂ ಸಾಧಕರಿಗೆ ಮಾರ್ಗದರ್ಶನ ಮಾಡಿದಂತೆ ಮಾಡಲು ಸಾಧ್ಯವಾಯಿತು ಮತ್ತು ಈಗ ಎಷ್ಟೋ ಹಿಂದುತ್ವನಿಷ್ಠರು ಆ ಮಾರ್ಗವನ್ನು ಆಚರಿಸಿ ಹಿಂದುತ್ವದ ಕಾರ್ಯದಲ್ಲಿ ಮತ್ತು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದಾರೆ. ಇದರ ಬಗೆಗಿನ ಕೆಲವು ಉದಾಹರಣೆಗಳನ್ನು ಹೇಳುತ್ತೇನೆ.

– ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ ನಿಯತಕಾಲಿಕೆ.

ಅಡಚಣೆಯಲ್ಲಿರುವ ಹಿಂದುತ್ವನಿಷ್ಠರಿಗೆ ಹಾಗೂ ಸಂಘಟನೆಗಳಿಗೆ ಆಧಾರ ನೀಡುವುದು

ಧರ್ಮರಕ್ಷಣೆಯ ಕಾರ್ಯ  ಮಾಡುವಾಗ ಪೋಲೀಸರು ಮತ್ತು ಧರ್ಮವಿರೋಧಕರು ‘ಹಿಂದುತ್ವನಿಷ್ಠರಿಗೆ ಥಳಿಸುವುದು, ಅನ್ಯಾಯವಾಗಿ ಬಂಧಿಸುವುದು ಇತ್ಯಾದಿ ಘಟನೆಗಳು ಯಾವಾಗಲೂ ನಡೆಯುತ್ತಿರುತ್ತವೆ. ‘ಇಂತಹ ಪ್ರಸಂಗಗಳಲ್ಲಿ ಆ ಹಿಂದುತ್ವನಿಷ್ಠರನ್ನು ಅಥವಾ ಸಂಘಟನೆಯ ಇತರ ಕಾರ್ಯಕರ್ತರನ್ನು ಸಾಧಕರು ತಾವಾಗಿಯೇ ಕೂಡಲೇ ಹೋಗಿ ಭೇಟಿಯಾಗಬೇಕು, ಎಂಬ ಬೋಧನೆಯನ್ನು ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ನೀಡಿದರು. ‘ನಾವು ಅಡಚಣೆಯಲ್ಲಿರುವಾಗ ನಮ್ಮ ಸಹಾಯಕ್ಕೆ ಯಾರಾದರೂ ಬಂದರೆ, ನಮಗೆ ಅವರ ಬಗ್ಗೆ ಆಧಾರವೆನಿಸುತ್ತದೆ. ಹಾಗೆಯೇ ಇತರರಿಗೂ ನಾವು ಆಧಾರವೆನಿಸಬೇಕು, ಎಂಬುದು ಪರಾತ್ಪರ ಗುರು ಡಾಕ್ಟರರ ದೃಷ್ಟಿಕೋನವಿತ್ತು. ಆದ್ದರಿಂದ ಯಾರಾದರೂ ಹಿಂದುತ್ವನಿಷ್ಠರು ಅಥವಾ ಸಂಘಟನೆಯವರು ಅಡಚಣೆಯಲ್ಲಿರುವುದು ತಿಳಿದರೆ, ‘ಅವರನ್ನು ಯಾರಾದರೂ ಭೇಟಿಯಾಗಿದ್ದಾರೇ ?, ‘ಅವರಿಗೆ ಏನಾದರೂ ಸಹಾಯ ಬೇಕೇ? ಎಂದು ಪರಾತ್ಪರ ಗುರು ಡಾಕ್ಟರ್‌ರವರು ತಾವಾಗಿ ವಿಚಾರಿಸುತ್ತಾರೆ. ಅಡಚಣೆಯಲ್ಲಿದ್ದ ಹಿಂದುತ್ವನಿಷ್ಠ ಸಂಘಟನೆಗಳಿಗೆ ಆಧಾರ ನೀಡುವುದರ ಸಂದರ್ಭದಲ್ಲಿನ ೨ ಅನುಭವಗಳನ್ನು ಹೇಳುತ್ತೇನೆ.

ಓರ್ವ ಹಿಂದುತ್ವನಿಷ್ಠ ಮುಖಂಡರಿಗೆ ಕಷ್ಟದ ಕಾಲದಲ್ಲಿ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡುವುದು

ಒಂದು ಸಂಘಟನೆಯ ಕಾರ್ಯಕರ್ತರ ಆಂತರಿಕ ವಿವಾದ, ಸಂಘಟನೆಯ ಕಾರ್ಯಕರ್ತರ ಮೇಲಾಗುವ ಪೊಲೀಸರ ಅತ್ಯಾಚಾರ, ವಿವಿಧ ಪ್ರಕರಣಗಳಲ್ಲಿ ದಾವೆಗಳು ದಾಖಲಾಗುವುದು, ವಿವಿಧ ಪ್ರಾಂತ್ಯಗಳಲ್ಲಿ ಪ್ರವೇಶ ನಿಷೇಧ, ಆರ್ಥಿಕ ಅಡಚಣೆ ಇಂತಹ ವಿವಿಧ ಕಾರಣಗಳಿಂದ ಅವರ ಸಂಘಟನೆಯ ಕಾರ್ಯವು ಹೆಚ್ಚುಕಡಿಮೆ ನಿಂತು ಹೋಗಿತ್ತು. ಆದ್ದರಿಂದ ಆ ಸಂಘಟನೆಯ ಪ್ರಮುಖ ಮುಖಂಡರಿಗೆ ನಿರಾಶೆ ಬಂದಿತ್ತು. ಅವರಿಗೆ ಸಾಮಾಜಿಕ ಜೀವನದಿಂದ ನಿವೃತ್ತರಾಗುವ ವಿಚಾರ ಬರುತ್ತಿತ್ತು. ಪರಾತ್ಪರ ಗುರು ಡಾಕ್ಟರ್‌ರವರಿಗೆ ತಿಳಿದಾಗ ಅವರು ಅವರಿಗೆ ಮಾನಸಿಕ ಆಧಾರ ನೀಡಿದರು. ಅವರ ಮನಸ್ಸಿಗೆ ಉತ್ಸಾಹ ನೀಡಲು ಅವರಿಗೆ ಔಷಧೋಪಚಾರಗಳನ್ನು ಹೇಳಿದರು; ಅದೇ ರೀತಿ ‘ಸಂಘಟನೆಯ ಕಾರ್ಯಕ್ಕಾಗಿ ಎಲ್ಲ ರೀತಿಯಿಂದ ಸಹಾಯ ಮಾಡುವೆವು, ಎಂದು ಸಹ ಹೇಳಿದರು. ಅನಂತರವೂ ಅವರು ಆಗಾಗ ಅವರ ಮತ್ತು ಅವರ ಕಾರ್ಯದ ಮಾಹಿತಿಯನ್ನು ಪಡೆದುಕೊಂಡರು ಮತ್ತು ಅವರಿಗೆ ಎಲ್ಲ ರೀತಿಯಿಂದ ಸಹಾಯ ಮಾಡಲು ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ  ಹೇಳಿದರು.

ಓರ್ವ ಸಂತರ ಭಕ್ತರಿಗೆ ಆಧ್ಯಾತ್ಮಿಕ ದೃಷ್ಟಿಕೋನ ನೀಡಿ ಆಧಾರ ನೀಡುವುದು

ಓರ್ವ ಸಂತರನ್ನು ಒಂದು ಆರೋಪದಲ್ಲಿ ಬಂಧಿಸಿದಾಗ ಅವರ ಲಕ್ಷಗಟ್ಟಲೆ ಭಕ್ತರಿಗೆ ತಾವು ನಿರಾಧಾರರಾಗಿರುವ ಭಾವನೆ ಮೂಡಿತು. ಸಂತರ ಬಂಧನವನ್ನು ‘ಸನಾತನ ಸಂಸ್ಥೆ ಮತ್ತು ಪರಾತ್ಪರ ಗುರು ಡಾಕ್ಟರ್‌ರವರು ತೀವ್ರವಾಗಿ ವಿರೋಧಿಸಿದರು. ಇದರಿಂದ ಆ ಸಂತರ ಕೆಲವು ಭಕ್ತರಿಗೆ ಪರಾತ್ಪರ ಗುರು ಡಾಕ್ಟರ್‌ರವರ ಆಧಾರವೆನಿಸುತ್ತಿತ್ತು. ‘ಇಂತಹ ಕಠಿಣ ಪ್ರಸಂಗದಲ್ಲಿ ಭಕ್ತರ ಶ್ರದ್ಧೆಯನ್ನು ಉಳಿಸಲು ಮತ್ತು ಅವರ ಸಾಧನೆಯು ಮುಂದುವರಿಯು ತ್ತಿರಲು ಆಧಾರ ನೀಡುವುದು ಆವಶ್ಯಕವಾಗಿದೆ, ಈ ಕರ್ತವ್ಯದ ಭಾವನೆಯಿಂದ ಅವರು ಆ ಸಂತರ ಕೆಲವು ಭಕ್ತರಿಗೆ ಆಧ್ಯಾತ್ಮಿಕ ದೃಷ್ಟಿಕೋನ ನೀಡಿ ಆಧಾರ ನೀಡಿದರು. ಸನಾತನ ಪ್ರಭಾತ, ಸನಾತನ ಪಂಚಾಂಗದಲ್ಲಿ ಆ ಸಂತರ ವಿಷಯವನ್ನು ಮುದ್ರಿಸಲಾಗುತ್ತದೆ ಎಂದು ಬಹಳಷ್ಟು ಜನರು ನಮ್ಮ ಸನಾತನ ಪತ್ರಿಕೆ ತೆಗೆದು ಕೊಳ್ಳುವುದನ್ನು ನಿಲ್ಲಿಸಿದರು ಮತ್ತು ಪಂಚಾಂಗವನ್ನು ತೆಗೆದುಕೊಳ್ಳಲು ನಿರಾಕರಿಸಿದರು, ಆದರೂ ‘ಈ ಹಾನಿಗಿಂತ ಆ ಸಂತರ ಬೆಂಬಲಕ್ಕಿರುವುದು ಮತ್ತು ಅವರ ಭಕ್ತರಿಗೆ ಆಧಾರ ನೀಡುವುದು ಹೆಚ್ಚು ಮಹತ್ವದ್ದಾಗಿದೆ, ಎಂಬ ತತ್ತ್ವವನ್ನು ಪರಾತ್ಪರ ಗುರು ಡಾಕ್ಟರ್‌ರವರು ಅಂಗೀಕರಿಸಿದರು.

ಸಣ್ಣ ಸಂಘಟನೆಗಳ ಕಾರ್ಯವನ್ನು ಹೆಚ್ಚಿಸಲು ಅವರಿಗೆ ಮಾರ್ಗ ತೋರಿಸಿ ಸಹಾಯ ಮಾಡುವುದು

ಹಿಂದುತ್ವನಿಷ್ಠರನ್ನು ಸಂಘಟಿಸುವ ಕಾರ್ಯವನ್ನು ಮಾಡುವಾಗ ಕೆಲವು ಸಣ್ಣ ಸಂಘಟನೆಗಳು ಕೂಡ ಸಂಪರ್ಕಕ್ಕೆ ಬಂದವು. ಈ ಸಂಘಟನೆಗಳ ಪದಾಧಿಕಾರಿಗಳಲ್ಲಿ ಹಿಂದುತ್ವದ ಕಾರ್ಯವನ್ನು ಮಾಡುವ ತಳಮಳವಿತ್ತು; ಆದರೆ ‘ಕಾರ್ಯದ ದಿಶೆ ಹೇಗಿರಬೇಕು ಮತ್ತು ಸಂಘಟನೆಯನ್ನು ಹೇಗೆ ಹೆಚ್ಚಿಸಬೇಕು ?, ಎಂಬ ವಿಷಯದಲ್ಲಿ ಅವರಿಗೆ ಏನೂ ತಿಳಿದಿರಲಿಲ್ಲ. ಪರಾತ್ಪರ ಗುರು ಡಾಕ್ಟರ್‌ರವರು ಇಂತಹ ಸಂಘಟನೆಗಳ ಪದಾಧಿಕಾರಿಗಳಿಗೆ ಪ್ರೋತ್ಸಾಹ ನೀಡಲು ಕೆಲವು ಉಪಕ್ರಮಗಳನ್ನು ಆ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲು ಹೇಳಿದರು. ಹಾಗೆಯೇ ಈ ಪದಾಧಿಕಾರಿಗಳಿಗೆ ‘ಕಾರ್ಯವನ್ನು ಹೇಗೆ ಮಾಡಬೇಕು ? ಇದರ ಬಗ್ಗೆ ತರಬೇತಿ ನೀಡಲು ವಿವಿಧ ಉಪಾಯಗಳನ್ನು ಸೂಚಿಸಿದರು. ಕೆಲವು ಪದಾಧಿಕಾರಿಗಳಿಗೆ ಆಶ್ರಮದ ವ್ಯವಸ್ಥಾಪನೆಯನ್ನು ಕಲಿತುಕೊಳ್ಳಲು ಕೆಲವು ದಿನ ಸನಾತನದ ಆಶ್ರಮಕ್ಕೆ ಬರಲು ಹೇಳಿದರು ಮತ್ತು ಕೆಲವು ಹಿಂದುತ್ವನಿಷ್ಠರಿಗೆ ‘ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರೊಂದಿಗೆ ಕೆಲವು ದಿನಗಳವರೆಗೆ ವಿವಿಧ ಸ್ಥಳಗಳಿಗೆ ಹೋಗಿ ‘ಅವರು ಹಿಂದೂಸಂಘಟನೆಯನ್ನು ಹೇಗೆ ಮಾಡುತ್ತಾರೆ, ಎಂಬುದನ್ನು ಕಲಿಯಲು ಹೇಳಿದರು.

ಹಿಂದುತ್ವನಿಷ್ಠ ಸಂಘಟನೆಗಳಲ್ಲಿದ್ದ ವಿವಾದವನ್ನು ಬಗೆಹರಿಸಲು ಸಾಧಕರಿಗೆ ನೇತೃತ್ವ ವಹಿಸಲು ಹೇಳುವುದು

ಹಿಂದುತ್ವನಿಷ್ಠ ಸಂಘಟನೆಗಳಲ್ಲಿನ ಪರಸ್ಪರಲ್ಲಿನ ವಿವಾದಗಳು ಹಿಂದೂಸಂಘಟನೆಗಾಗಿ ಘಾತಕವಾಗಿವೆ. ಆದ್ದರಿಂದ ‘ಹಿಂದುತ್ವನಿಷ್ಠರು ಸಮವಿಚಾರಗಳ ವಿಷಯದಲ್ಲಿ ಒಟ್ಟಿಗೆ ಬಂದು ಧರ್ಮರಕ್ಷಣೆಯ ಕಾರ್ಯವನ್ನು ಮಾಡಬೇಕು, ಎಂದು ಪರಾತ್ಪರ ಗುರು ಡಾಕ್ಟರ್‌ರು ಮೇಲಿಂದ ಮೇಲೆ ಹೇಳುತ್ತಾರೆ. ಅದಕ್ಕಾಗಿ ಅವರು ಕೆಲವು ಪ್ರಕರಣಗಳಲ್ಲಿ ಹಿಂದುತ್ವನಿಷ್ಠರ ನಡುವಿನ ವಿವಾದವನ್ನು ಬಗೆಹರಿಸಲು ಸಾಧಕರಿಗೆ ನೇತೃತ್ವ ವಹಿಸಲು ಹೇಳಿದರು.

ಹಿಂದುತ್ವನಿಷ್ಠರನ್ನು ‘ಕುಟುಂಬದ ಒಬ್ಬ ಸದಸ್ಯರೆಂಬಂತೆ’ ವಿಚಾರಿಸಿಕೊಳ್ಳುವುದು

. ಪರಾತ್ಪರ ಗುರು ಡಾಕ್ಟರ್‌ರು ಹಿಂದುತ್ವನಿಷ್ಠರನ್ನು ‘ತಮ್ಮ ಕುಟುಂಬದ ಒಬ್ಬ ಸದಸ್ಯರೆಂಬಂತೆ ಅವರನ್ನು ವಿಚಾರಿಸಿಕೊಳ್ಳುತ್ತಾರೆ. ಇದರ ಅನೇಕ ಉದಾಹರಣೆಗಳನ್ನು ನೀಡಬಹುದು.

. ಯಾರಾದರೂ ಹಿಂದುತ್ವನಿಷ್ಠರು ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಏನಾದರೂ ಒಳ್ಳೆಯ ಕೃತಿಯನ್ನು ಮಾಡಿದರೆ ಅವರನ್ನು ಪ್ರಶಂಸಿಸಲು ಸಾಧಕರಿಗೆ ಹೇಳುತ್ತಾರೆ.

. ಯಾರಾದರೊಬ್ಬ ಸಾಧಕರು ಪ.ಪೂ. ಡಾಕ್ಟರರನ್ನು ಭೇಟಿಯಾದರೆ, ಆ ಸಾಧಕರಿರುವ ಭಾಗದಲ್ಲಿನ ಹಿಂದುತ್ವನಿಷ್ಠರ ಬಗ್ಗೆ ನೆನಪಿನಿಂದ ವಿಚಾರಿಸುತ್ತಾರೆ.

ಗುರುಚರಣಗಳಲ್ಲಿ ಸಾಧಕರ ಕೃತಜ್ಞತಾಪೂರ್ವಕ ಪುಷ್ಪಾಂಜಲಿ ಸಮರ್ಪಣೆ

ಹೇ ಗುರುದೇವಾ, ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಕಲಿಸಿ ನಮ್ಮ ಜೀವನವನ್ನು ಆನಂದಮಯವಾಗಿಸಿದ್ದೀರಿ. ಸುಖದುಃಖದ ಭವಸಾಗರದಲ್ಲಿ ನಾವು ಮುಳುಗುತ್ತಿದ್ದೆವು. ಅಂಧಃಕಾರದಲ್ಲಿ ಚಡಪಡಿಸುತ್ತಿದ್ದೆವು. ಆಗ ನೀವು ನಮಗೆ ಪ್ರೋತ್ಸಾಹ ನೀಡಿದ್ದೀರಿ. ಆದುದರಿಂದಲೇ ನಾವು ಇಲ್ಲಿಯವರೆಗೆ ಮಾರ್ಗಕ್ರಮಣ ಮಾಡಿದೆವು. ನಿಮ್ಮ ಕರುಣಮಯಿ ದೃಷ್ಟಿ ನಮ್ಮ ಮೇಲೆ ಬಿದ್ದ ತಕ್ಷಣವೇ ಜೀವನದಲ್ಲಿದ್ದ ಕೊರತೆ ನೀಗಿದಂತಾಯಿತು. ಅದು ಸಿಕ್ಕಿದೊಡನೆ ಆನಂದವಾಯಿತು. ಯಾವುದನ್ನು ನಾವು ಹುಡುಕುತ್ತಿದ್ದೇವೋ ಅದು ನಿಮ್ಮ ಚರಣಗಳಲ್ಲಿ ದೊರೆಯಿತು. ಗುರುದೇವಾ, ನೀವು ವಾತ್ಸಲ್ಯಮೂರ್ತಿಯಾಗಿದ್ದೀರಿ. ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.