ಪರಾತ್ಪರ ಗುರು ಡಾ. ಆಠವಲೆಯವರ ದೇಹ ಹಾಗೂ ಅವರು ಉಪಯೋಗಿಸುವ ವಸ್ತುಗಳ ಮೇಲೆ ತಿಳಿಗುಲಾಬಿ ಬಣ್ಣ ಬರುವುದು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಪ.ಪೂ. ಡಾಕ್ಟರರ ಅಂಗೈ, ಅಂಗಾಲು, ನಾಲಿಗೆ ಮತ್ತು ತುಟಿಗಳು ಗುಲಾಬಿಯಾಗುವುದು, ಅಂದರೆ ಅದು ಅವರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಚಮತ್ಕಾರವಾಗಿರುವುದು 

‘ಪ.ಪೂ. ಡಾಕ್ಟರರ ಚರ್ಮ, ಉಗುರು, ಕೂದಲು ಹೇಗೆ ಹಳದಿ, ಚಿನ್ನದಂತೆ ಆಗುತ್ತಿವೆಯೋ, ಹಾಗೆಯೇ ಅವರ ಕಣ್ಣುಗಳ ಒಳಗಿನ ಭಾಗ, ಅಂಗೈ- ಅಂಗಾಲುಗಳು, ನಾಲಿಗೆ ಮತ್ತು ತುಟಿಗಳೂ ಗುಲಾಬಿಯಾಗುತ್ತಿವೆ. ಇದು ಪ.ಪೂ. ಡಾಕ್ಟರರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಅವಿಷ್ಕಾರವಾಗಿದೆ. 

೨. ಬೆರಳುಗಳ ತುದಿಯ ಭಾಗಗಳು ಹೆಚ್ಚು ಗುಲಾಬಿಯಾಗುವುದು

ಪ.ಪೂ. ಡಾಕ್ಟರರ ಕೈಬೆರಳುಗಳ ತುದಿಯ ಭಾಗಗಳು ಹೆಚ್ಚು ಗುಲಾಬಿಯಾಗಿ ಕಾಣಿಸುತ್ತವೆ; ಏಕೆಂದರೆ ಬೆರಳುಗಳ ಮುಂದಿನ ಭಾಗಗಳು ಕಾರ್ಯದಲ್ಲಿ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಈ ಭಾಗಗಳಿಂದ ಪ್ರೀತಿದರ್ಶಕ ಗುಲಾಬಿ ಬಣ್ಣವು ಹೆಚ್ಚು ಪ್ರಮಾಣದಲ್ಲಿ ಹೊರಬೀಳುತ್ತಿರುವುದು ಕಂಡುಬರುತ್ತದೆ. 

೩. ಪ.ಪೂ. ಡಾಕ್ಟರರು ಮಾತನಾಡುತ್ತಿರುವಾಗ ತುಟಿಗಳ, ಹಾಗೆಯೇ ನಾಲಿಗೆಯ ಬಣ್ಣವು ಹೆಚ್ಚು ಗುಲಾಬಿ ಆಗುತ್ತಿರುವುದರ ಅರಿವಾಗುವುದು

ಪ.ಪೂ. ಡಾಕ್ಟರರು ಮಾತನಾಡುವಾಗ, ಅವರ ತುಟಿಗಳ, ಬಾಯಿಯ ಒಳಗಿನ ಪೊಳ್ಳಿನ, ಹಾಗೆಯೇ ನಾಲಿಗೆಯ ಬಣ್ಣವು ಹೆಚ್ಚು ಗುಲಾಬಿಯಾಗುತ್ತದೆ. ಇದು ಅವರ ವಾಣಿಯಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ಹೊರಬೀಳುವ ಪ್ರೀತಿದರ್ಶಕ ಲಹರಿಗಳ ಸ್ಪರ್ಶದಿಂದ ಅವರ ಬಾಯಿಯ ಪೊಳ್ಳಿನಲ್ಲಿನ ಪ್ರೀತಿದರ್ಶಕ ಗುಲಾಬಿ ಬಣ್ಣಕ್ಕೆ ಜಾಗೃತಿ ಬರುವುದರ ಲಕ್ಷಣವಾಗಿದೆ.  – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ,  ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೬.೨೦೧೧)  

ಪರಾತ್ಪರ ಗುರು ಡಾ. ಆಠವ ಲೆಯವರಲ್ಲಿನ ಪ್ರೀತಿಯ ದೃಶ್ಯ ಪರಿಣಾಮ !

ಪ.ಪೂ. ಡಾಕ್ಟರರಲ್ಲಿರುವ ಈಶ್ವರನ ಸರ್ಮವ್ಯಾಪಿ ಪ್ರೀತಿಯಿಂದ ಗುಲಾಬಿ ಆಗಿರುವ ಅವರ ನಾಲಿಗೆ (ವರ್ಷ ೨೦೧೧)

 

ಪರಾತ್ಪರ ಗುರು ಡಾಕ್ಟರರ ಕಣ್ಣುಗಳ ಒಳಗಿನ ಭಾಗಗಳು ಗುಲಾಬಿ ಆಗಿರುವುದು (ವರ್ಷ ೨೦೧೧)
ತಿಳಿಗುಲಾಬಿ ಬಣ್ಣ ಬಂದಿರುವ ಬೆರಳುಗಳ ತುದಿಯ ಭಾಗಗಳು ಮತ್ತು ಚೈತನ್ಯಮಯ ಹಳದಿ ಉಗುರುಗಳು