ಅಗತ್ಯ ಕಾರಣಕ್ಕಾಗಿ ಪ್ರಯಾಣ ಮಾಡಲಿಕ್ಕಿದ್ದರೆ ಮುಂದಿನ ಕಾಳಜಿ ವಹಿಸಿರಿ !

ಸಾಧಕರಿಗೆ ಸೂಚನೆ

‘ಪ್ರಸ್ತುತ ಕೊರೋನಾ ೧೯ (ಕೋವಿಡ್ ೧೯) ವಿಷಾಣುಗಳ ಪ್ರತಿಬಂಧಾತ್ಮಕ ಉಪಾಯವೆಂದು ಪ್ರತಿಯೊಬ್ಬರೂ ಅನಗತ್ಯವಾದ ಪ್ರಯಾಣ ಮಾಡುವುದನ್ನು ತಡೆಗಟ್ಟಬೇಕು, ಆದರೂ ‘ಕೆಲವು ಆವಶ್ಯಕ ಕೆಲಸದ ನಿಮಿತ್ತದಿಂದ ಪ್ರಯಾಣವನ್ನು ಮಾಡಲೇಬೇಕಾಗಿದ್ದಲ್ಲಿ ಅಥವಾ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದಲ್ಲಿ ಏನೆಲ್ಲ ಕಾಳಜಿ ವಹಿಸಬೇಕು ?, ಎಂಬ ಪ್ರಶ್ನೆ ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ಸದ್ಯದ ಸ್ಥಿತಿಯಲ್ಲಿ ಮುಂದಿನ ಕಾಳಜಿ ವಹಿಸಬೇಕು.

೧. ವಾಹನದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆ

ಅ. ಸ್ವಂತ ವಾಹನದಿಂದ ಅಥವಾ ಅತ್ಯಂತ ಕಡಿಮೆ ವ್ಯಕ್ತಿಗಳು ಇರುವ ವಾಹನದಿಂದ ಪ್ರಯಾಣ ಮಾಡಬೇಕು.

. ವಾತಾನುಕೂಲ ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವುದನ್ನು ತಡೆಗಟ್ಟಿ. ತಮ್ಮ ವಾಹನದಲ್ಲಿಯೂ ವಾತಾನುಕೂಲ ಯಂತ್ರದ ಬಳಕೆಯನ್ನು ತಡೆಗಟ್ಟಬೇಕು.

. ರೈಲು ಅಥವಾ ಬಸ್ ಇವುಗಳಲ್ಲಿ ಪ್ರಯಾಣ ಮಾಡುವಾಗ ‘ತಮ್ಮ ಸುತ್ತಮುತ್ತ ನೆಗಡಿ, ಕೆಮ್ಮು ಅಥವಾ ಜ್ವರ ಈ ರೋಗಗಳ ಲಕ್ಷಣಗಳು ಇರುವ ವ್ಯಕ್ತಿ ಇದ್ದಾರೆ, ಎಂದು ಸಂದೇಹ ಬಂದರೆ, ಅವರಿಂದ ೧ ಮೀಟರ್‌ಗಿಂತ ಹೆಚ್ಚು ದೂರ ನಿಲ್ಲಬೇಕು. (ಸಾಮಾಜಿಕ ಅಂತರವನ್ನು ಪಾಲಿಸಬೇಕು) ಅಥವಾ ಸಾಧ್ಯವಿದ್ದರೆ ಪ್ರಯಾಣದ ಇತರ ಪರ್ಯಾಯಗಳನ್ನು ಆಯ್ಕೆ ಮಾಡಬೇಕು. ಉದಾ. ಇನ್ನೊಂದು ಬಸ್‌ನಿಂದ ಪ್ರಯಾಣ ಮಾಡಬೇಕು.

. ಜನಸಂದಣಿಯಲ್ಲಿ ಪ್ರಯಾಣ ಮಾಡುವಾಗ ಮುಖಕ್ಕೆ ಸತತವಾಗಿ ಮಾಸ್ಕ್ ಅಥವಾ ಸ್ವಚ್ಛ ತೊಳೆದ ಕರವಸ್ತ್ರವನ್ನು ಕಟ್ಟಬೇಕು.

. ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದ ನಂತರವೇ ಮುಖಕ್ಕೆ ಕೈಗಳನ್ನು ಸ್ಪರ್ಶಿಸಬೇಕು.

ಊ. ಪ್ರಯಾಣದಲ್ಲಿ ಕೈ ಸ್ವಚ್ಛವಾಗಿ ತೊಳೆಯಲು ಸಾಬೂನು ಅಥವಾ ‘ಸ್ಯಾನಿಟೈಜರನ್ನು ಸಾಧ್ಯವಿದ್ದರೆ ಆಗಾಗ ಬಳಕೆ ಮಾಡಬೇಕು.

೨. ಪ್ರಯಾಣದಲ್ಲಿ ಬಳಸಿದ ಬಟ್ಟೆಗಳ ಸಂದರ್ಭದಲ್ಲಿ ವಹಿಸಬೇಕಾದ ಕಾಳಜಿ

. ಪ್ರಯಾಣದಲ್ಲಿ ಬಳಸಿದ ಬಟ್ಟೆಗಳ ಮೇಲೆ ಸುಮಾರು ೧೨ ಗಂಟೆಗಳವರೆಗೆ ರೋಗ ಹಬ್ಬಿಸುವ ರೋಗಾಣುಗಳು ಜೀವಂತವಾಗಿರುವ ಸಾಧ್ಯತೆ ಇರುತ್ತದೆ. ಆದುದರಿಂದ ಪ್ರಯಾಣದಿಂದ ಮನೆಗೆ ಬಂದನಂತರ ಆ ಬಟ್ಟೆಗಳಲ್ಲಿ ಮನೆಯಲ್ಲಿ ಸುತ್ತಾಡದೇ ನೇರವಾಗಿ ಸ್ನಾನಗೃಹಕ್ಕೆ ಹೋಗಬೇಕು.

. ಮೈಮೇಲಿನ ಬಟ್ಟೆಗಳನ್ನು ತೆಗೆದು ಸಾಬೂನು ಹಚ್ಚಿ ಕೈಕಾಲು ಮತ್ತು ಮುಖ ಸ್ವಚ್ಛವಾಗಿ ತೊಳೆಯಬೇಕು.

. ಪ್ರಯಾಣದಲ್ಲಿ ಬಟ್ಟೆಗಳನ್ನು ಪುನಃ ತೊಳೆಯದೇ ಬಳಸಲಿಕ್ಕಿದ್ದರೆ ಅವುಗಳಿಗೆ ಬೇರೆ ವಸ್ತುಗಳು ಅಥವಾ ತೊಳೆದ ಬಟ್ಟೆಗಳೊಂದಿಗೆ ಸ್ಪರ್ಶವಾಗದಂತೆ ಹ್ಯಾಂಗರ್‌ಗೆ ಹಾಕಿ ಬೇರೆ ಇಡಬೇಕು.

. ಸಾಧ್ಯವಿದ್ದರೆ ಈ ಬಟ್ಟೆಗಳನ್ನು ಬಿಸಿಲಿನಲ್ಲಿಡಬೇಕು.

. ಪ್ರಯಾಣದಲ್ಲಿ ಬಳಸಿದ ಬಟ್ಟೆಗಳನ್ನು ಸ್ಪರ್ಶಿಸಿದರೆ ತಕ್ಷಣ ಕೈ ಸ್ವಚ್ಛವಾಗಿ ತೊಳೆಯಬೇಕು.

. ಪ್ರಯಾಣದಲ್ಲಿ ಬಳಸಿದ ಬಟ್ಟೆಯನ್ನು ತೊಳೆಯುವುದಾದರೆ ಅದು ಎಂದಿನಂತೆ ತೊಳೆದು ಸಾಧ್ಯವಿದ್ದರೆ ಬಿಸಿಲಿನಲ್ಲಿ ಒಣಗಿಸಬೇಕು.

– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೩.೨೦೨೦) ಆಧುನಿಕ ವೈದ್ಯ ಪಾಂಡುರಂಗ ಮರಾಠೆ