ಭಾಗ್ಯನಗರ – ರಾಜ್ಯದ ಹಿಂದೂ ದ್ವೇಷಿ ಕಾಂಗ್ರೆಸ್ ಸರಕಾರವು ತೆಲಂಗಾಣದ ಭಾಜಪ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಅವರಿಗೆ 3 ತಿಂಗಳ ಕಾಲ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಅವರು ಬಾಗಲಕೋಟೆಯ ಮುಧೋಳದ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುವವರಿದ್ದರು; ಅವರು ಬರುವ ಮೊದಲೇ ಕಾನೂನು ಸುವ್ಯವಸ್ಥೆಯ ಕಾರಣವನ್ನು ನೀಡುತ್ತಾ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದಾರೆ.
1. ಶಾಸಕ ಟಿ. ರಾಜಾಸಿಂಹ ಅವರನ್ನು ಬಾಗಲಕೋಟೆಯ ಮುಧೋಳದ ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು.
2. ಬಾಗಲಕೋಟೆ ಜಿಲ್ಲಾಧಿಕಾರಿಗಳು ನೀಡಿರುವ ಆದೇಶದಂತೆ, ಕರ್ನಾಟಕ ಪೊಲೀಸರು ಭಾಗ್ಯನಗರ (ತೆಲಂಗಾಣ) ಅವರ ನಿವಾಸಕ್ಕೆ ತೆರಳಿ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ನೋಟೀಸನ್ನು ನೀಡಿದರು. ಈ ನೋಟಿಸ್‌ನಲ್ಲಿ ರಾಜ್ಯದಲ್ಲಿ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗಿತ್ತು.
3. ಈ ನೋಟಿಸ್‌ನಲ್ಲಿ, ಅವರ ಭಾಷಣಗಳಿಂದ ಎರಡು ಸಮುದಾಯಗಳ ನಡುವೆ ದ್ವೇಷ ಹರಡುತ್ತವೆ. 2015 ರಲ್ಲಿ ಕೂಡ ರಾಜ್ಯದಲ್ಲಿ ಧಾರ್ಮಿಕ ಹಿಂಸಾಚಾರ ಹರಡಿದ ವಿಷಯದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುಧೋಳದಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೊಳ್ಳಲಿರುವ ಸ್ಥಾನ ಅತ್ಯಂತ ಸೂಕ್ಷ್ಮವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
4. ಇದಾದ ನಂತರ ಶಾಸಕ ಟಿ. ರಾಜಾ ಸಿಂಹ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿ, ”ನನ್ನಿಂದಾಗಿ ಎಲ್ಲಿಯೂ ಧಾರ್ಮಿಕ ಹಿಂಸಾಚಾರ ನಡೆದಿಲ್ಲ. ನನ್ನ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ನಾನು ಉಚ್ಚನ್ಯಾಯಾಲಯದಲ್ಲಿ ಗೆದ್ದಿದ್ದೇನೆ’, ಎಂದು ಅವರು ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ! – ಟಿ. ರಾಜ ಸಿಂಹ
ಕರ್ನಾಟಕ ಸರಕಾರ ವಿಧಿಸಿರುವ ನಿರ್ಬಂಧದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಶಾಸಕ ಟಿ. ರಾಜಾ ಸಿಂಹ ಇವರು ಕರ್ನಾಟಕ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.