|

ವರ್ಧಾ – ಕಾಂಗ್ರೆಸ್ ಯಾವಾಗಲೂ ನಮ್ಮ ಶ್ರದ್ಧೆ ಮತ್ತು ಸಂಸ್ಕೃತಿಯ ಅವಮಾನ ಮಾಡಿದೆ. ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಗಣಪತಿಯನ್ನು ಕೂಡಾ ನೇರವಾಗಿ ಜೈಲಿಗೆ ಹಾಕಿದರು. ಕೆಲವು ಜನರಿಂದ ಪೂಜಿಸಲ್ಪಡುವ ಶ್ರೀ ಗಣೇಶ ಮೂರ್ತಿಯನ್ನು ಕಾಂಗ್ರೆಸ್ಸಿನ ಪೊಲೀಸರು ಆರೋಪಿಗಳನ್ನು ಸಾಗಿಸಲು ಬಳಸುತ್ತಿದ್ದ ವಾಹನದಲ್ಲೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕಾಂಗ್ರೆಸ್ ಯಾವಾಗಲೂ ‘ಅರ್ಬನ್’ ನಕ್ಸಲಿಸಂ ಅನ್ನು ಬೆಂಬಲಿಸುತ್ತದೆ. ಕಾಂಗ್ರೆಸ್ ಅಪ್ರಾಮಾಣಿಕ ಮತ್ತು ಭ್ರಷ್ಟರ ಪಕ್ಷವಾಗಿದೆ. ಒಂದು ಸಮಾಜವನ್ನು ಓಲೈಸಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಅವರು ಸೆಪ್ಟೆಂಬರ್ 20 ರಂದು ವರ್ಧಾದ ಪ್ರವಾಸದಲ್ಲಿದ್ದರು. ಇಲ್ಲಿ ಅವರ ಕೈಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಅವರು ತಮ್ಮ ಮಾತು ಮುಂದುವರಿಸಿ …
1. ‘ತುಕಡೆ-ತುಕಡೆ’ ಗ್ಯಾಂಗ್‌ನ ಸದಸ್ಯರು ಮತ್ತು ನಗರ ನಕ್ಸಲೀಯರು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಮನೆತನ ದೇಶದ ಅತ್ಯಂತ ಭ್ರಷ್ಟ ಕುಟುಂಬ ಎಂದು ಗುರುತಿಸಲಾಗುತ್ತದೆ.
2. ಗಣೇಶೋತ್ಸವವು ಭಾರತದ ಏಕತೆಯ ಹಬ್ಬವಾಗಿದೆ. ಅದಕ್ಕೆ ಮಹಾರಾಷ್ಟ್ರದ ಭೂಮಿ ಸಾಕ್ಷಿಯಾಗಿದೆ. ಸಾರ್ವಜನಿಕ ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಪ್ರಾರಂಭಿಸಿದರು; ಆದರೆ ಕಾಂಗ್ರೆಸ್ ಮಾತ್ರ ಈ ಗಣೇಶೋತ್ಸವವನ್ನು ತಿರಸ್ಕರಿಸಿದೆ. ಇತ್ತೀಚೆಗೆ ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅದನ್ನು ನೋಡಿ ಕಾಂಗ್ರೆಸ್ ಕಿಡಿಕಾರಿದ್ದರು. ಅವರಲ್ಲಿನ ಓಲೈಸುವ ಭೂತ ಜಾಗೃತವಾಯಿತು. ಅವರು ಗಣೇಶ ಪೂಜೆ ಕಾರ್ಯಕ್ರಮವನ್ನು ವಿರೋಧಿಸಿದರು ಎಂದು ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ