ಪೂರ್ವಜರಿಂದಾಗುವ ತೊಂದರೆಯನ್ನು ದೂರಗೊಳಿಸಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

ಸಾಧಕರಿಗೆ ಸೂಚನೆ

೧. ದತ್ತನ ನಾಮಜಪ ಮಾಡುವುದು : ‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಸೆಪ್ಟೆಂಬರ್ ೧೮ ರಿಂದ ಅಕ್ಟೋಬರ್ ೨, ೨೦೨೪) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ | ಈ ನಾಮಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

ಈ ನಾಮಜಪ sanatan.org ಈ ಜಾಲತಾಣದಲ್ಲಿದೆ. ಯಾವ ಸಾಧಕರು ತಮಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಲು ಆಧ್ಯಾತ್ಮಿಕ ಉಪಾಯ ಮಾಡುತ್ತಾರೋ, ಅವರು ತಮ್ಮ ಉಪಾಯದ ನಾಮಜಪಗಳನ್ನು ಮಾಡಿ ಹೆಚ್ಚುವರಿ ೧ ಗಂಟೆ ದತ್ತನ ನಾಮಜಪವನ್ನು ಮಾಡಬೇಕು. ದತ್ತನ ನಾಮಜಪವನ್ನು ಮಾಡುವಾಗ ಕೈಯ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ; ಆದರೆ ಅದರಲ್ಲಿ ಸ್ವಲ್ಪ ಅಂತರವನ್ನಿಟ್ಟು ಅನಾಹತಚಕ್ರ ಮತ್ತು ಮಣಿಪುರಚಕ್ರಗಳ ಸ್ಥಾನದಲ್ಲಿ ನ್ಯಾಸ ಮಾಡಬೇಕು.

ಯಾವ ಸಾಧಕರು ಉಪಾಯ ಮಾಡುವುದಿಲ್ಲ ಅವರು ವೈಯಕ್ತಿಕ ತಯಾರಿ ವೇಳೆ, ಸ್ನಾನ, ಸ್ವಚ್ಛತೆ-ಸೇವೆ ಮುಂತಾದ ವೇಳೆ ದತ್ತನ ಜಪವನ್ನು ಕಡಿಮೆಪಕ್ಷ ೧ ಗಂಟೆ ಆಗುವಂತೆ ನೋಡಬೇಕು; ಆದರೆ ತೊಂದರೆಯ ಅರಿವಾದರೆ ಅವರೂ ಕುಳಿತು ಮತ್ತು ಮುದ್ರೆ ಮಾಡಿ ದತ್ತನ ನಾಮಜಪ ಮಾಡಬೇಕು.

೨. ಪಿತೃಪಕ್ಷದ ಕಾಲಾವಧಿಯಲ್ಲಿ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು ದತ್ತನಿಗೆ ದಿನದಲ್ಲಿ ನಡುನಡುವೆ ಪ್ರಾರ್ಥನೆ ಮಾಡಬೇಕು.

೩. ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು. ಹೀಗೆ ಮಾಡುವುದರಿಂದ ಪೂರ್ವಜರ ತೊಂದರೆ ದೂರವಾಗಿ ಸಾಧನೆಗಾಗಿ ಅವರ ಆಶೀರ್ವಾದವೂ ಲಭಿಸುವುದು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೭.೨೦೨೪)