ಕಲಬುರ್ಗಿ (ಕರ್ನಾಟಕ) – ಪ್ಯಾಲಿಸ್ಟೈನ್ ಗೆ ಕೇಂದ್ರ ಸರಕಾರವು ಬೆಂಬಲ ನೀಡಿದೆ. ಹೀಗಿರುವಾಗ ನಾವು ಪ್ಯಾಲಿಸ್ಟೈನ್ ನ ಧ್ವಜ ಹಿಡಿದರೆ ಅದರಲ್ಲಿ ತಪ್ಪೇನಿದೆ ? ಸರಕಾರವು ಬೆಂಬಲ ನೀಡಿರುವುದರಿಂದ ನಾವು ಆ ದೇಶದ ಧ್ವಜ ಕೈಗೆತ್ತಿಕೊಂಡೆವು, ಇಲ್ಲವಾದರೆ ಆ ಧ್ವಜ ಹಿಡಿಯುತ್ತಿರಲಿಲ್ಲ. ಅನ್ಯ ದೇಶದ ಘೋಷಣೆ ನೀಡುವುದು ತಪ್ಪಾಗಿದೆ. ಹಾಗೆ ಮಾಡುವವರು ದೇಶದ್ರೋಹಿಗಳಾಗಿದ್ದಾರೆ. ಅಂತವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಆದರೆ ಪ್ಯಾಲಿಸ್ಟೈನ್ ಧ್ವಜ ಹಿಡಿಯುವುದರಲ್ಲಿ ತಪ್ಪೇನಿಲ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಸಲ್ಮಾನರು ಪ್ಯಾಲಿಸ್ಟೈನ್ ಧ್ವಜ ಹಾರಿಸಿರುವ ಘಟನೆಯನ್ನು ಸಮರ್ಪಿಸಿದ್ದಾರೆ.
ಮಂಡ್ಯದ ನಾಗಮಂಗಲ ಪ್ರದೇಶದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಭಾಜಪ ಅಲ್ಲಿನ ವಾತಾವರಣವನ್ನು ಬಿಸಿಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕೂಡ ಜಮೀರ್ ಅಹ್ಮದ್ ಆರೋಪಿಸಿದರು. ಯಾರೇ ಗಲಭೆ ಪ್ರಚೋದಿಸುವ ಕೆಲಸ ಮಾಡಿದರೂ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಇಂತಹ ಕೆಲಸ ಮಾಡಬಾರದು. ಜಾತಿ ಧರ್ಮ ಬಿಟ್ಟು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆಂದು ಅವರು ಹೇಳಿದರು.