ಕಾಂಗ್ರೆಸ್ ವಕ್ಫ್ ಬೋರ್ಡ್‌ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ ! – ಮುಫ್ತೀ ಶಾಮೂನ್ ಕಾಸಲಿ, ಅಧ್ಯಕ್ಷ, ಉತ್ತರಾಖಂಡ ಮದರಸಾ ಬೋರ್ಡ್

ನವ ದೆಹಲಿ – ದೇಶದಲ್ಲಿ ವಕ್ಫ್ ಆಸ್ತಿ ಮಸೂದೆಯ ಕುರಿತು ವಿವಾದ ನಡೆಯುತ್ತಿರುವಾಗ, ಉತ್ತರಾಖಂಡ ಮದರಸಾ ಬೋರ್ಡ್‌ನ ಅಧ್ಯಕ್ಷ ಮುಫ್ತೀ ಶಾಮೂನ್ ಕಾಸಲಿ ಇವರು, ವಕ್ಫ್ ಬೋರ್ಡ್ ಮತ್ತು ಕಾಂಗ್ರೆಸ್ ಇವರು ವಕ್ಫ್ ಆಸ್ತಿಯನ್ನು ಲೂಟಿ ಮತ್ತು ಧ್ವಂಸ ಮಾಡಿದರು. ‘ಮುಸಲ್ಮಾನ ಜನಾಂಗದಲ್ಲಿನ ಅನೇಕ ಜನರ ಅಭಿಪ್ರಾಯ ಏನೆಂದರೆ, ವಕ್ಫ್ ಆಸ್ತಿ ಮಸೂದೆ ಇದು ವಕ್ಪ್ ಆಸ್ತಿಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಆವಶ್ಯಕವಾಗಿದೆ’, ಎಂದು ಹೇಳಿದರು. ಒಂದು ವಾರ್ತ ವಾಹಿನಿಯೊಂದಿಗೆ ಮಾತನಾಡುವಾಗ ಶಾಮೂನ್ ಕಾಸಲಿ ಇವರು, ಕಾಂಗ್ರೆಸ್ ಅದರ ೬೦ ವರ್ಷದ ಕಾರ್ಯಕಾಲದಲ್ಲಿ ವಕ್ಫ್ ಆಸ್ತಿಯನ್ನು ಹಾಳು ಮಾಡಿದೆ ಮತ್ತು ವಕ್ಫ್ ಬೋರ್ಡ್‌ಗೆ ಲೂಟಿ ಮಾಡುವ ಸ್ವಾತಂತ್ರ್ಯ ನೀಡಿದೆ. ಕಾಂಗ್ರೆಸ್ ಸ್ಥಾಪಿಸಿರುವ ಮಂಡಳಿಗಳು ಮತ್ತು ಅದರ ಅಧ್ಯಕ್ಷರ ವಿಚಾರಣೆ ನಡೆದರೆ ಅವರು ಜೈಲಿಗೆ ಹೋಗುವರು ಎಂದು ಹೇಳಿದರು. ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕಿರಣ್ ರಿಜಿಜೂ ಇವರು ಈ ಅಂಶದ ಕುರಿತು ಮುಫ್ತಿ ಕಾಸಲಿ ಇವರ ಅಭಿಪ್ರಾಯವನ್ನು ಬೆಂಬಲಿಸಿದರು.