ಗಣೇಶೋತ್ಸವದ ನಿಮಿತ್ತದಿಂದ ಊರಿಗೆ ಹೋಗುವಾಗ, ಹಾಗೆಯೇ ಇತರ ಸಮಯದಲ್ಲಿಯೂ ಪ್ರವಾಸ ಮಾಡುವಾಗ ಸಾಧ್ಯವಿದ್ದರೆ, ಸನಾತನ ಪ್ರಕಟಿಸಿರುವ ಗ್ರಂಥ, ಕಿರುಗ್ರಂಥ ಮುಂತಾದವುಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಅವುಗಳನ್ನು ಪ್ರಸಾರ ಮಾಡಿರಿ

ಸಾಧಕರಿಗೆ ಸೂಚನೆ

೧. ಪ್ರವಾಸದಲ್ಲಿ ನಿಮ್ಮ ಬಳಿ ಗ್ರಂಥ, ಕಿರುಗ್ರಂಥ ಹಾಗೆಯೇ ‘ಸನಾತನ ಪ್ರಭಾತ’ ಪತ್ರಿಕೆಗಳನ್ನು ಇಟ್ಟುಕೊಳ್ಳಿರಿ : ‘೭ ರಿಂದ ೧೭ ಸಪ್ಟೆಂಬರ ೨೦೨೪ ರ ಕಾಲದಲ್ಲಿ ಗಣೇಶೋತ್ಸವವಿದೆ. ಆ ನಿಮಿತ್ತದಿಂದ ಅನೇಕ ಸಾಧಕರು ತಮ್ಮ ತಮ್ಮ ಊರಿಗೆ ಹೋಗುತ್ತಾರೆ. ಪ್ರವಾಸದ ಸಮಯದಲ್ಲಿ ಸಾಧ್ಯವಿದ್ದರೆ ಸಾಧಕರು ತಮ್ಮ ಹತ್ತಿರ ಸನಾತನ ಪ್ರಕಾಶಿತ ಗ್ರಂಥ, ಕಿರುಗ್ರಂಥ, ಹಾಗೆಯೇ ಸಾತ್ತ್ವಿಕ ಉತ್ಪಾದನೆಗಳನ್ನು ಇಟ್ಟುಕೊಳ್ಳಬೇಕು. ಸಹಪ್ರಯಾಣಿಕರಿಗೆ ಅವುಗಳ ಮಹತ್ವವನ್ನು ತಿಳಿಸಿ ಪ್ರಸಾರ ಮಾಡಬೇಕು. ಅದೇ ರೀತಿ ‘ಸನಾತನ ಪ್ರಭಾತ’ ದಿನಪತ್ರಿಕೆಗಳ ೨-೩ ಸಂಚಿಕೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಮತ್ತು ಅವುಗಳನ್ನು ತೋರಿಸಿ, ಅದರ ಓದುಗರಾಗುವಂತೆ ಅವರನ್ನು ಪ್ರೋತ್ಸಾಹಿಸಬೇಕು.

೨. ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಭಾಗವಹಿಸಲು ಆಸಕ್ತಿಯಿರುವವರ ಮಾಹಿತಿಯನ್ನು ತಿಳಿಸಿರಿ : ಸಾಧಕರು ಸಹ ಪ್ರಯಾಣಿಕರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಾಧನೆ, ರಾಷ್ಟ್ರ ಮತ್ತು ಧರ್ಮಗಳ ಕಾರ್ಯದ ವಿಷಯ ತಿಳಿಸ ಬೇಕು. ಅವರು ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಭಾಗವಹಿಸಲು ಸಿದ್ಧರಿದ್ದರೆ ಅಥವಾ ಪತ್ರಿಕೆಯ ಚಂದಾದಾರರಾಗಲು ಆಸಕ್ತಿ ಹೊಂದಿದ್ದರೆ, ಅದರ ಮಾಹಿತಿಯನ್ನು ಸಂಬಂಧಿಸಿದ ಜವಾಬ್ದಾರ ಸಾಧಕರಿಗೆ ತಿಳಿಸಬೇಕು.

೩. ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಪ್ರವಾಸದ ಸಮಯದಲ್ಲಿ ಗ್ರಂಥ ಮತ್ತು ಕಿರುಗ್ರಂಥಗಳ ಪ್ರಸಾರ ಮಾಡಿದ ಬಳಿಕ ಅವರಿಗೆ ಉತ್ಸಾಹಭರಿತ ಪ್ರತಿಕ್ರಿಯೆ ದೊರೆಯುವುದು’ : ಕೆಲವು ಸಾಧಕರು ಮತ್ತು ಧರ್ಮಪ್ರೇಮಿಗಳು ಪ್ರವಾಸ ಮಾಡುವಾಗ ತಮ್ಮೊಂದಿಗೆ ಸನಾತನದ ಕೆಲವು ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ಇಟ್ಟುಕೊಂಡಿದ್ದರು. ಅವರು ಮುಂದೆ ಬರುವ ಹಬ್ಬಗಳನ್ನು ಅನುಸರಿಸಿ ಸಹ ಪ್ರಯಾಣಿಕರಿಗೆ ಗ್ರಂಥಗಳನ್ನು ತೋರಿಸಿದರು ಮತ್ತು ಅದರಲ್ಲಿನ ಮಾಹಿತಿಗಳನ್ನು ತಿಳಿಸಿ ಅವುಗಳನ್ನು ಪ್ರಸಾರ ಮಾಡಿದರು. ಸಹಪ್ರಯಾಣಿಕರಿಂದ ಅದಕ್ಕೆ ಉತ್ಸಾಹಭರಿತ ಪ್ರತಿಕ್ರಿಯೆ ದೊರೆಯಿತು.’

(೧೧.೮.೨೦೨೪)