ರೈಲ್ವೆ ಹಳಿಯ ಮೇಲೆ 6 ಮೀಟರ್ ಉದ್ದದ ಕಬ್ಬಿಣದ ಕಂಬ ಇಟ್ಟಿದ್ದ ಮೂವರ ಬಂಧನ !
ಡೆಹ್ರಾಡೂನ್ – ಚಾಲಕನ (‘ಲೋಕೋ ಪೈಲಟ್’ನ) ಜಾಗರೂಕತೆಯಿಂದ ರೈಲ್ವೆಯ ದೊಡ್ಡ ಅಪಘಾತ ತಪ್ಪಿದೆ. ಉತ್ತರಾಖಂಡದ ಬಿಲಾಸ್‌ಪುರ ರಸ್ತೆ ಮತ್ತು ರುದ್ರಪುರ ನಗರದ ನಡುವೆ ಈ ಘಟನೆ ನಡೆದಿದೆ. ಸೆಪ್ಟೆಂಬರ್ 18ರ ರಾತ್ರಿ 10 ಗಂಟೆಗೆ ರೈಲು ಸಂಖ್ಯೆ 12091 ಬಿಲಾಸ್‌ಪುರದಿಂದ ರುದ್ರಪುರ ಕಡೆಗೆ ಹೋಗುತ್ತಿತ್ತು. ಈ ವೇಳೆ ರೈಲ್ವೇ ಹಳಿಯ ಮೇಲೆ ಏನೋ ಇಟ್ಟಿರುವುದು ಚಾಲಕನ ಕಣ್ಣಿಗೆ ಬಿದ್ದಿದೆ. ಚಾಲಕನು ತುರ್ತು ಬ್ರೇಕ್ ಒತ್ತಿ ರೈಲನ್ನು ನಿಲ್ಲಿಸಿದ್ದಾನೆ. ಆನಂತರ ಚಾಲಕನು ಘಟನೆಯ ಮಾಹಿತಿಯನ್ನು ರುದ್ರಪುರ ಸಿಟಿ ರೈಲ್ವೇ ಸ್ಟೇಷನ್ ಮಾಸ್ಟರ್‌ಗೆ ತಿಳಿಸಿದನು. ರೈಲ್ವೆ ಅಧಿಕಾರಿಗಳಿಗೆ ರೈಲ್ವೆ ಹಳಿಯ ಮೇಲೆ 6 ಮೀಟರ್ ಉದ್ದದ ಕಬ್ಬಿಣದ ಕಂಬ ಸಿಕ್ಕಿದೆ. ಅವರು ಅದನ್ನು ಪಕ್ಕಕ್ಕೆ ತೆಗೆದು ರೈಲ್ವೇ ಮಾರ್ಗವನ್ನು ಸುಗಮಗೊಳಿಸಿದರು.
ಉತ್ತರ ರೈಲ್ವೇ ವಿಭಾಗದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಅಪರಾಧ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಅವರು ರೈಲ್ವೇ ಅಪಘಾತ ಘಟಿಸುವಂತೆ ಏನಾದರೂ ಸಂಚು ರೂಪಿಸಿದ್ದರೇ ?, ಈ ಕುರಿತು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಸರಕಾರವೇ ಇದನ್ನು ಬುಡಸಮೇತ ಹುಡುಕಿ ತೆಗೆದು ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ! |