ದೇಶ ವಿರೋಧಿ ಘೋಷಣೆ ಕೂಗಿದ್ದ ೬ ಮುಸಲ್ಮಾನರಿಗೆ ೫ ವರ್ಷ ಜೈಲು ಶಿಕ್ಷೆ

ಚಿತ್ತೋಡಗಡ (ರಾಜಸ್ಥಾನ) – ದೇಶ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ಚಿತ್ತೊಡಗಡ್ ಜಿಲ್ಲಾ ಹೆಚ್ಚುವರಿ ಮುಖ್ಯ ನ್ಯಾಯದಂಡಾಧಿಕಾರಿಗಳಿಂದ ಆರು ಜನರಿಗೆ ೫ ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಬಬಲು ಶೋಯೆಬ್ , ಹೈದರ್ ಖಾನ್, ಶೌಕತ್ ಖಾನ್ , ಆಬಿದ ಹುಸೈನ್, ಆರಿಫ್ ಅನ್ಸಾರಿ ಮತ್ತು ಮೋಯೀನುದ್ದೀನ್ ತಪ್ಪಿತಸ್ಥರ ಹೆಸರುಗಳಾಗಿವೆ. ಇವರಿಗೆ ತಲಾ ಒಂದು ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ದಂಡ ಭರಿಸದಿದ್ದರೆ ತಲಾ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುವುದು.

೨೦೦೯ ರಂದು ನಗರದಲ್ಲಿನ ಉರುಸ್ ದ (ಮುಸಲ್ಮಾನ ಧರ್ಮ ಗುರುವಿನ ಪುಣ್ಯತಿಥಿಯ ಪ್ರಯುಕ್ತ ಆಯೋಜಿಸಲಾಗುವ ಉತ್ಸವ) ಮೆರವಣಿಗೆಯಲ್ಲಿ ಈ ಆರೋಪಿಗಳು ‘ಹಿಂದುಸ್ತಾನ್ ಮುರ್ದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ನೀಡಿ ಧಾರ್ಮಿಕ ಸೌಹಾರ್ದತೆ ಹದಗೆಡೆಸುವ ಪ್ರಯತ್ನ ಮಾಡಿದ್ದರು.

ಧಾರ್ಮಿಕ ಸೌಹಾರ್ದತೆ ಹದಗೆಡಿಸುವ ಜನರಿಗೆ ಕಾನೂನಿನ ಅಂಕುಶ ಹಾಕುವುದು ಅಗತ್ಯವಾಗಿದೆ. ಆದ ಕಾರಣ ಸಮಾಜ ವಿರೋಧಿ ಘಟಕಗಳಿಂದ ಹರಡಿರುವ ವೈಮನಸ್ಸಿಗೆ ಕಡಿವಾಣ ಹಾಕಲಾಗುವುದು ಮತ್ತು ಇದರಿಂದ ಸಾಮಾನ್ಯ ಜನರಿಗೂ ಯೋಗ್ಯ ಸಂದೇಶ ದೊರೆಯುವುದು ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕೀಯ ನಿಲುವು

ಇಂತಹವರು ಶಿಕ್ಷೆ ಅನುಭವಿಸಿದ ನಂತರ ಅವರನ್ನು ಪಾಕಿಸ್ತಾನಕ್ಕೆ ಕಳಿಸುವ ಆದೇಶ ಕೂಡ ನೀಡಬೇಕೆಂದು, ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ !