೧. ವಕ್ಫ್ ಬೋರ್ಡ್ ರದ್ದುಗೊಳಿಸಿ !
ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆಯನ್ನು ಕೇಂದ್ರ ಸರಕಾರವು ಆಗಸ್ಟ್ ೫ ರಂದು ಸಂಸತ್ತಿನಲ್ಲಿ ಮಂಡಿಸಿದೆ. ವಕ್ಫ್ ಮಂಡಳಿಗಿರುವ ಮಿತಿಮೀರಿದ ಅಧಿಕಾರಕ್ಕೆ ಕಡಿವಾಣ ಹಾಕಲು ಸರಕಾರ ಸಿದ್ಧತೆ ನಡೆಸಿದೆ.
೨. ಭಾರತದಲ್ಲಿ ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಎಂಬುದನ್ನು ತಿಳಿಯಿರಿ !
ಉತ್ತರಪ್ರದೇಶದ ಮವಾನಾದ ಕಿಲಾ ಬಸ್ ನಿಲ್ದಾಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ರೋಹಿತ್ (೨೨ ವರ್ಷ) ಎಂಬ ಯುವಕನನ್ನು ನಾಲ್ವರು ಮತಾಂಧ ಮುಸಲ್ಮಾನ ಯುವಕರು ಚಿಕ್ಕ ವಿವಾದಕ್ಕೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.
೩. ಬಾಂಗ್ಲಾದೇಶದ ಹಿಂದೂಗಳನ್ನು ಮಾತ್ರವಲ್ಲ, ಭಾರತದ ಹಿಂದೂಗಳನ್ನೂ ಯಾರು ಉಳಿಸುತ್ತಾರೆ ?
ಬಾಂಗ್ಲಾದೇಶದಲ್ಲಿ ಆಗಸ್ಟ್ ೪ ರಿಂದ ಪುನಃ ಆರಂಭಗೊಂಡ ಹಿಂಸಾಚಾರದಲ್ಲಿ ೪ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅನೇಕ ಹಿಂದೂಗಳ ಮೇಲೆ ದಾಳಿ ಮಾಡಲಾಯಿತು ಇದರಲ್ಲಿ ಇಬ್ಬರು ಹಿಂದೂ ನಗರಸೇವಕರು ಸಾವನ್ನಪ್ಪಿದರು.
೪. ಎಲ್ಲ ಮುಸಲ್ಮಾನ ನಾಯಕರೂ ಹೀಗೇಕೆ ಮಾತನಾಡುವುದಿಲ್ಲ?
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ, ದೇವಾಲಯಗಳನ್ನು ನಾಶಪಡಿಸಲಾಗುತ್ತಿದೆ, ಅವರು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದ್ದಾರೆ ಎಂದು ‘ಉತ್ತರಪ್ರದೇಶ ಮುಸ್ಲಿಂ ಪರ್ಸನಲ್ ಲಾ ಬೋರ್ಡ’ ಅಧ್ಯಕ್ಷ ಹಫೀಜ್ ಅಝ್ಹರಿ ಹೇಳಿದ್ದಾರೆ.
೫. ವೈಚಾರಿಕವಾಗಿ ಸುನ್ನತ್ ಆಗಿರುವ ಕಾಂಗ್ರೆಸ್ಸನ್ನು ಅರಿತುಕೊಳ್ಳಿ !
ಲೋಕಸಭೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇವರು, ‘ವಿಪಕ್ಷ ನಾಯಕ (ರಾಹುಲ್ ಗಾಂಧಿ) ಗಾಜಾ ಬಗ್ಗೆ ಜೋರಾಗಿ ಮಾತನಾಡುತ್ತಾರೆ; ಆದರೆ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಏನೂ ಮಾತನಾಡುತ್ತಿಲ್ಲ’, ಎಂದು ಹೇಳುತ್ತಾ ರಾಹುಲ್ ಗಾಂಧಿ ಇವರನ್ನು ಟೀಕಿಸಿದರು.
೬. ಭಾರತದ ಹಾಲಿ-ಮಾಜಿ ಜನ್ಮಹಿಂದೂ ಕ್ರಿಕೆಟಿಗರು ಏಕೆ ಮೌನವಿದ್ದಾರೆ ?
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗೆ ಸಂಬಂಧಿಸಿದಂತೆ ‘ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವ ಹಕ್ಕು ಸಂಘಟನೆಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಮೌನವು ಲಜ್ಜಾಸ್ಪದವಾದ ಸಂಗತಿಯಾಗಿದೆ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಹಿಂದೂ ಆಗಿರುವ ಡ್ಯಾನಿಶ್ ಕನೇರಿಯಾ ಪೋಸ್ಟ್ ಮಾಡಿದ್ದಾರೆ.
೭. ಇದನ್ನು ಭಾರತದಾದ್ಯಂತ ಏಕೆ ಮಾಡಲಾಗುತ್ತಿಲ್ಲ ?
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸರಕಾರಿ ಭೂಮಿ ಒತ್ತುವರಿಮುಕ್ತಗೊಳಿಸುವ ಅಭಿಯಾನದ ಮೂಲಕ ಕಳೆದ ೭ ವರ್ಷಗಳಲ್ಲಿ ೬೭ ಸಾವಿರ ಎಕರೆ ಭೂಮಿಯನ್ನು ತೆರವುಗೊಳಿಸಿದ್ದು, ಅಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಕೃತ್ಯಗಳೂ ನಿಂತಿವೆ.