೧. ಕಾಂಗ್ರೆಸ್ಸಿನ ಹಿಂದೂದ್ವೇಷವನ್ನು ತಿಳಿಯಿರಿ !
ರಾಜ್ಯದ ಕಾಂಗ್ರೆಸ್ ಸರಕಾರವು ಮಂಗಳೂರಿನ ಶಾಲಾ ಮೈದಾನವನ್ನು ಶೈಕ್ಷಣೇತರ ಉದ್ದೇಶಗಳಿಗೆ ಬಳಸದಂತೆ ಆದೇಶಿಸಿದ ನಂತರ ಶಾಲಾ ಆಡಳಿತ ಮಂಡಳಿ ಗಣೇಶೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಗೆ ಶಾಲಾ ಮೈದಾನವನ್ನು ನೀಡಲು ನಿರಾಕರಿಸಿದೆ.
೨. ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !
ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿಯ ವಿಷಯದಲ್ಲಿ ಹಿಂಸಾಚಾರದ ಮೂಲಕ, ಹಿಂದೂಗಳ ಮನೆಗಳನ್ನು ಸುಡುವ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ. ಪ್ರತಿಭಟನಾಕಾರರು ‘ಯಾರ ಮಾವನ ಮನೆ ಭಾರತವಾಗಿದೆಯೋ ಅವರು ಬೇಗನೆ ಬಾಂಗ್ಲಾದೇಶವನ್ನು ತೊರೆಯಬೇಕು’ ಎಂದು ಹೇಳುತ್ತಿದ್ದರು.
೩. ಕಾಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗದಿರಲು ಕಾರಣವೇನು ಎಂದು ತಿಳಿಯಿರಿ !
ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಹಣ ಸಂಗ್ರಹಿಸುವುದು ಹಾಗೆಯೇ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಮೂಲಕ ಕಾಶ್ಮೀರದಲ್ಲಿ ಮಾದಕ ದ್ರವ್ಯಗಳನ್ನು ವಿತರಿಸುತ್ತಿದ್ದ ಇಮ್ತಿಯಾಜ್ ಲೋನ್, ಬಾಜಿಲ್ ಮಿರ್, ಮುಶ್ತಾಕ್ ಪೀರ ಮತ್ತು ಜೈದ್ ಶಾಹ ಎಂಬ ೪ ಸರಕಾರಿ ನೌಕರರನ್ನು ವಜಾಗೊಳಿಸಲಾಗಿದೆ.
೪. ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ !
ದೇವಸ್ಥಾನ ನಡೆಸುವುದು ಸರಕಾರದ ಕೆಲಸವಲ್ಲ. ಸರಕಾರ ನಿರ್ವಹಣೆಯನ್ನು ಮಾತ್ರ ನೋಡಬಹುದು. ಆದ್ದರಿಂದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನವನ್ನು ಸರಕಾರದ ವಶದಿಂದ ಮುಕ್ತಗೊಳಿಸಬೇಕು ಎಂದು ಭಾಜಪ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಯುಕ್ತಿವಾದ ಮಾಡಿದರು.
೫. ಹಿಂದೂದ್ವೇಷಿ ಕಾನ್ವೆಂಟ್ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !
ಗುನಾ (ಮಧ್ಯಪ್ರದೇಶ) ಜಿಲ್ಲೆಯ ‘ವಂದನಾ ಕಾನ್ವೆಂಟ್ ಸ್ಕೂಲ್’ನಲ್ಲಿ, ವಿದ್ಯಾರ್ಥಿಗಳ ಸ್ನೇಹಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕವನ್ನು ಪಠಿಸಿದಾಗ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕ್ಯಾಥರೀನ್ ಇವರು ಇದಕ್ಕೆ ವಿರೋಧ ಪಡಿಸಿದರು.
೬. ಮತಾಂಧ ಮುಸಲ್ಮಾನರ ಧೂರ್ತತತೆಯನ್ನು ತಿಳಿಯಿರಿ !
ಸ್ಥಳಾವಕಾಶವಿಲ್ಲದ ಕಾರಣ ಯಾರಾದರೂ ಮಸೀದಿಯ ಹೊರಗೆ ೧೦ ನಿಮಿಷಗಳ ಕಾಲ ನಮಾಜು ಪಠಣ ಮಾಡಿದರೆ, ನಿಮಗೆ ಸಮಸ್ಯೆ ಆಗುತ್ತದೆ; ಆದರೆ ಕಾವಡ ಯಾತ್ರೆಯ ಸಂದರ್ಭದಲ್ಲಿ ಒಂದು ತಿಂಗಳ ಕಾಲ ರಸ್ತೆಗಳನ್ನು ಮುಚ್ಚಲಾಗುತ್ತದೆ. ಇದರಿಂದ ನಿಮಗೆ ತೊಂದರೆಯಾಗುವುದಿಲ್ಲವೇ ? ಎಂದು ಮೌಲಾನಾ ತೌಕೀರ್ ರಜಾ ಆಕ್ರೋಶಕಾರಿ ಹೇಳಿಕೆ ನೀಡಿದ್ದಾರೆ.